Home Bengaluru ಎಂಎಸ್‌ಎಂಇ ವಲಯಕ್ಕೆ ಟೋನ್ ಟ್ಯಾಗ್‌ ನಿಂದ ಧ್ವನಿ ಆಧಾರಿತ ಬಿಸಿನೆಸ್ ಅಸಿಸ್ಟೆಂಟ್ಇ- ಕೋಶ ಲೋಕಾರ್ಪಣೆ: ಬ್ಯಾಂಕಿಂಗ್...

ಎಂಎಸ್‌ಎಂಇ ವಲಯಕ್ಕೆ ಟೋನ್ ಟ್ಯಾಗ್‌ ನಿಂದ ಧ್ವನಿ ಆಧಾರಿತ ಬಿಸಿನೆಸ್ ಅಸಿಸ್ಟೆಂಟ್ಇ- ಕೋಶ ಲೋಕಾರ್ಪಣೆ: ಬ್ಯಾಂಕಿಂಗ್ ಸೇವೆ ಇನ್ನು ಮಳಿಗೆಗಳಲ್ಲೇ ಲಭ್ಯ

0

ಬೆಂಗಳೂರು, ಜುಲೈ 2: ಭಾರತದ ಪ್ರಮುಖ ಡೀಪ್- ಟೆಕ್ ಪ್ಲಾಟ್‌ ಫಾರ್ಮ್ ಆದ ಟೋನ್ ಟ್ಯಾಗ್ ಸಂಸ್ಥೆಯು ವ್ಯಾಪಾರಿಗಳಿಗಾಗಿ ಧ್ವನಿ ಆಧಾರಿತ ಬಿಸಿನೆಸ್ ಅಸಿಸ್ಟೆಂಟ್ ಆದ ಇ-ಕೋಶ ಅನ್ನು ಇಂದು ಬಿಡುಗಡೆ ಮಾಡಿದೆ. ಯಾವುದೇ ಹೊಸ ಮೂಲಸೌಕರ್ಯ ಹೂಡಿಕೆಯ ಅಗತ್ಯವಿಲ್ಲದೇ, ವ್ಯಾಪಾರಿಗಳ ಕೌಂಟರ್‌ ನಲ್ಲೇ ನೇರವಾಗಿ ಸಂಪೂರ್ಣ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಇದು ಬ್ಯಾಂಕುಗಳಿಗೆ ಅನುವು ಮಾಡಿಕೊಡುತ್ತದೆ.

ಪಾವತಿ ಸ್ವೀಕೃತಿಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಟೋನ್ ಟ್ಯಾಗ್‌ ನ ಉದ್ದೇಶದ ಭಾಗವಾಗಿರುವ ಇ-ಕೋಶ ಸಾಧನವು, ಎಡ್ಜ್ ಎಐ ಮತ್ತು ಕಾಂಟೆಕ್ಸ್ಚುಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ನೆರವು ಹೊಂದಿದೆ. ಇದು ಪ್ರತಿಯೊಂದು ವ್ಯಾಪಾರ ಕೌಂಟರ್ ಅನ್ನು ಬುದ್ಧಿವಂತ ಹಾಗೂ ಪೂರ್ಣ ಪ್ರಮಾಣದ ಬ್ಯಾಂಕಿಂಗ್ ಕೇಂದ್ರವನ್ನಾಗಿ ಪರಿವರ್ತಿಸುತ್ತದೆ. ಮೂಲಭೂತವಾಗಿ, ಸಾಂಪ್ರದಾಯಿಕ ಪಾವತಿ ಸ್ವೀಕೃತಿ ಸಾಧನಗಳನ್ನು (ಸ್ವೈಪಿಂಗ್ ಮಷಿನ್ ಇತ್ಯಾದಿ) ಇದು ಸ್ಮಾರ್ಟ್ ಬ್ಯಾಂಕಿಂಗ್ ಟಚ್‌ ಪಾಯಿಂಟ್‌ ಗಳಾಗಿ ಮರುರೂಪಿಸುತ್ತದೆ. ಇದರಿಂದಾಗಿ ಬ್ಯಾಂಕುಗಳು ವ್ಯಾಪಾರ ನಡೆಯುವ ಸ್ಥಳದಲ್ಲೇ ನೇರವಾಗಿ ವ್ಯಾಪಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ 8 ಕೋಟಿಗೂ ಹೆಚ್ಚು ಎಂಎಸ್‌ಎಂಇ ಉದ್ಯಮಗಳಿದ್ದು, ಬ್ಯಾಂಕುಗಳಿಗೆ ತಮ್ಮ ವ್ಯಾಪಾರಿ ಸೇವೆಗಳನ್ನು ಬೆಳೆಸಲು ಮತ್ತು ದೈನಂದಿನ ಬ್ಯಾಂಕಿಂಗ್ ಸಂವಹನವನ್ನು ಬಲಪಡಿಸಲು ಇದು ಒಂದು ಉತ್ತಮ ಅವಕಾಶವಾಗಿದೆ. ಇ-ಕೋಶ ಸಾಧನವು ಪಾವತಿ ಸ್ವೀಕರಿಸುವ ಸ್ಥಳವನ್ನೇ ದೈನಂದಿನ ಬ್ಯಾಂಕಿಂಗ್ ಸಂವಹನ ಚಾನಲ್ ಆಗಿ ಪರಿವರ್ತಿಸುವ ಮೂಲಕ ಈ ಅಗತ್ಯವನ್ನು ಪೂರೈಸುತ್ತದೆ. ಇದು ಬ್ಯಾಂಕುಗಳಿಗೆ ಒಂದೇ ಸಾಧನದ ಮೂಲಕ ವ್ಯಾಪಾರಿಗಳಿಗೆ ಸೇವೆ ನೀಡಲು, ಅವರೊಂದಿಗೆ ಒಡನಾಟ ಹೊಂದಲು ಮತ್ತು ಇತರ ಬ್ಯಾಂಕಿಂಗ್ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ವ್ಯಾಪಾರಿಗಳೊಂದಿಗೆ ಇಂತಹ ನೇರ ಸಂವಹನದ ವ್ಯವಸ್ಥೆಯನ್ನು ರೂಪಿಸುವ ಮೂಲಕ, ಇ-ಕೋಶವು ಹೊರಗಿನ ಥರ್ಡ್-ಪಾರ್ಟಿ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಬ್ಯಾಂಕುಗಳು ವ್ಯಾಪಾರಿಗಳೊಂದಿಗಿನ ಸಂಬಂಧವನ್ನು ಸ್ವತಃ ತಾವೇ ಹೆಚ್ಚು ಬಲಪಡಿಸಿಕೊಳ್ಳಲು ನೆರವಾಗುತ್ತದೆ.

ಪಾವತಿಗಳು, ಬ್ಯಾಂಕಿಂಗ್ ಮತ್ತು ಎಐ ತಂತ್ರಜ್ಞಾನವನ್ನು ಒಂದೇ ಸಾಧನದಲ್ಲಿ ಒಟ್ಟುಗೂಡಿಸುವ ಇ-ಕೋಶ, ಯಾವುದೇ ಅಡೆತಡೆಯಿಲ್ಲದೆ ಪಾವತಿ ನಡೆಯುವ ಸ್ಥಳದಲ್ಲೇ ಸಂಪೂರ್ಣ ಬ್ಯಾಂಕಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ. ಇದು ಯುಪಿಐ, ಯುಪಿಐ 123ಪೇ ಮತ್ತು ಸಿಬಿಡಿಸಿ (ಡಿಜಿಟಲ್ ರೂಪಾಯಿ) ಪಾವತಿಗಳನ್ನು ಸ್ವೀಕರಿಸುವುದಲ್ಲದೆ, ವಿಸ್ತರಿತ ಬ್ಯಾಂಕಿಂಗ್ ಚಾನಲ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ವ್ಯಾಪಾರಿಗಳು ತಮ್ಮದೇ ಭಾಷೆಯ ಸಹಜ ಧ್ವನಿ ಸಂಭಾಷಣೆಯ ಮೂಲಕ ತಕ್ಷಣದ ಬೆಂಬಲ, ಅತ್ಯಗತ್ಯ ಬ್ಯಾಂಕಿಂಗ್ ಸೇವೆಗಳು, ವೈಯಕ್ತೀಕರಿಸಿದ ಸಾಲಗಳು ಮತ್ತು ಕ್ರೆಡಿಟ್ ಸೌಲಭ್ಯಗಳು, ಸರ್ಕಾರಿ ಯೋಜನೆಗಳು ಹಾಗೂ ಸೌಲಭ್ಯಗಳು, ವಿವಿಧ ಬ್ರಾಂಡ್‌ ಗಳ ನೇರ ಸಂಪರ್ಕ ಮತ್ತು ವ್ಯವಹಾರದ ಪ್ರಮುಖ ಒಳನೋಟಗಳನ್ನು ಸುಲಭವಾಗಿ ಪಡೆಯಬಹುದು.

ಇ- ಕೋಶ ಸಾಧನದ ಮೂಲಕ, ವ್ಯಾಪಾರಿ ಕೌಂಟರ್‌ ನಲ್ಲಿ ನಡೆಯುವ ಪ್ರತಿಯೊಂದು ವಹಿವಾಟೂ ಕೇವಲ ಪಾವತಿ ಪ್ರಕ್ರಿಯೆಯಾಗಿ ಉಳಿಯುವುದಿಲ್ಲ. ಬದಲಿಗೆ ಅದು ಬ್ಯಾಂಕುಗಳು ವ್ಯಾಪಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಇದು ಪ್ರತಿ ಸಂವಹನವನ್ನೂ ಮಾಹಿತಿ ನೀಡಲು, ನೆರವಾಗಲು ಮತ್ತು ಸೂಕ್ತ ಹಣಕಾಸು ಉತ್ಪನ್ನಗಳನ್ನು ಒದಗಿಸಲು ನೆರವಾಗುವ ಕ್ಷಣವಾಗಿ ಪರಿವರ್ತಿಸುತ್ತದೆ. ವಾಸ್ತವವಾಗಿ ಹೇಳಬೇಕೆಂದರೆ, ಈ ಸಾಧನವು ವ್ಯಾಪಾರಿ ಕೌಂಟರ್‌ ನಲ್ಲಿ ಬ್ಯಾಂಕಿನ ವತಿಯಿಂದ ರಿಲೇಶನ್‌ ಶಿಪ್ ಮ್ಯಾನೇಜರ್ ತರಹವೇ ಕಾರ್ಯನಿರ್ವಹಿಸುತ್ತದೆ. ಇದು ನಿರಂತರ ಸಂವಹನದ ವ್ಯವಸ್ಥೆಯನ್ನು ರೂಪಿಸುವ ಮೂಲಕ, ವ್ಯಾಪಾರಿಗಳ ಆರ್ಥಿಕ ನಡವಳಿಕೆಯ ಬಗ್ಗೆ ಬ್ಯಾಂಕುಗಳು ಗಹನವಾದ ಒಳನೋಟವನ್ನು ಪಡೆಯಲು ಸಹಾಯ ಮಾಡುತ್ತದೆ. ಇದರಿಂದ ಬ್ಯಾಂಕುಗಳು ಸುರಕ್ಷಿತವಾಗಿ ಸಾಲದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವೇಗವಾಗಿ ಸಾಲ ಮಂಜೂರು ಮಾಡಲು ಸಾಧ್ಯವಾಗುತ್ತದೆ.

ಈ ನೂತನ ತಂತ್ರಜ್ಞಾನದ ಬಿಡುಗಡೆಯ ಕುರಿತು ಮಾತನಾಡಿದ ಟೋನ್ ಟ್ಯಾಗ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಎಒ ಕುಮಾರ್ ಅಭಿಷೇಕ್ ಅವರು, “ವ್ಯಾಪಾರಿ ಕೌಂಟರ್‌ ಗಳು ಯಾವಾಗಲೂ ಭಾರತದ ವಾಣಿಜ್ಯ ವ್ಯವಹಾರದ ಕೇಂದ್ರ ಬಿಂದುವಾಗಿವೆ. ಈಗ ಇ- ಕೋಶದ ಮೂಲಕ ನಾವು ಅದನ್ನು ವ್ಯಾಪಾರಿ ಬ್ಯಾಂಕಿಂಗ್‌ ನ ಕೇಂದ್ರವನ್ನಾಗಿ ಮರುರೂಪಿಸುತ್ತಿದ್ದೇವೆ. ಇದೇ ಮೊದಲ ಬಾರಿಗೆ, ವ್ಯಾಪಾರಿಗಳು ಪ್ರತಿದಿನ ವ್ಯವಹಾರ ನಡೆಸುವ ಸ್ಥಳದಲ್ಲೇ ಬ್ಯಾಂಕುಗಳು ತಮ್ಮದೇ ಆದ, ಸದಾ ಕಾರ್ಯನಿರ್ವಹಿಸುವ ಸಂವಹನ ಮಾಧ್ಯಮವನ್ನು ಹೊಂದುವುದು ಸಾಧ್ಯವಾಗಿದೆ. ಇದು ವ್ಯಾಪಾರಿಗಳು ತಮ್ಮದೇ ಸ್ವಂತ ಭಾಷೆಯಲ್ಲಿ ಸರಳ ಮತ್ತು ಸಹಜ ಸಂಭಾಷಣೆಯ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದು ಬ್ಯಾಂಕುಗಳು ವ್ಯಾಪಾರಿಗಳಿಗೆ ಸೇವೆ ಸಲ್ಲಿಸುವ, ಬೆಂಬಲ ನೀಡುವ ಮತ್ತು ಅವರೊಂದಿಗೆ ಬಾಂಧವ್ಯ ಬೆಳೆಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಜೊತೆಗೆ, ಇದು ಬ್ಯಾಂಕುಗಳಿಗೆ ವ್ಯಾಪಾರಿಗಳೊಂದಿಗೆ ಉತ್ತಮ ಒಡನಾಟ ಹೊಂದಲು, ಸೇವಾ ದಕ್ಷತೆಯನ್ನು ಸುಧಾರಿಸಲು ಮತ್ತು ಹೊಸ ಬೆಳವಣಿಗೆಯ ಅವಕಾಶಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ” ಎಂದಿದ್ದಾರೆ.

ಇ-ಕೋಶ ಸಾಧನವು ಟೋನ್‌ ಟ್ಯಾಗ್‌ ನದೇ ಆದ ಸ್ಮಾಲ್ ಆಕ್ಷನ್ ಲ್ಯಾಂಗ್ವೇಜ್ ಮಾಡೆಲ್ (ಎಸ್ ಎ ಎಲ್ ಎಂ) ತಂತ್ರಜ್ಞಾನವನ್ನು ಒಳಗೊಂಡಿದೆ. ಇದರ ವಿಶೇಷತೆಯೆಂದರೆ, ಇದು ಇಂಟರ್ನೆಟ್ ಅಥವಾ ಕ್ಲೌಡ್ ವ್ಯವಸ್ಥೆಯನ್ನು ಅವಲಂಬಿಸದೇ, ಸಾಧನದಲ್ಲಿಯೇ ಸ್ಥಳೀಯವಾಗಿ ಎಐ ತಂತ್ರಜ್ಞಾನವನ್ನು ಚಲಾಯಿಸುತ್ತದೆ ಮತ್ತು ಯಾವುದೇ ಆ್ಯಪ್ ಡೌನ್‌ ಲೋಡ್ ಮಾಡುವ ಅಗತ್ಯವಿಲ್ಲದೇ ಎಲ್ಲಾ ಭಾರತೀಯ ಭಾಷೆಗಳಲ್ಲಿ ಸಹಜ ಸಂಭಾಷಣೆಗೆ ಅನುವು ಮಾಡಿಕೊಡುತ್ತದೆ. ಧ್ವನಿ ತರಂಗಗಳ (ಅನಾಲಾಗ್ ಮಾಧ್ಯಮ) ಮೂಲಕ ಸುರಕ್ಷಿತವಾಗಿ ಡೇಟಾವನ್ನು ರವಾನಿಸುವಲ್ಲಿ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಗಳಿಸಿದ ಅಪಾರ ಅನುಭವದ ಆಧಾರದ ಮೇಲೆ ಈ ಅನಾಲಾಗ್ ಎಡ್ಜ್- ಕಂಪ್ಯೂಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಾರಣದಿಂದಾಗಿ, ಅತ್ಯಂತ ಕಡಿಮೆ ಇಂಟರ್ನೆಟ್ ಸಂಪರ್ಕವಿರುವ ಗ್ರಾಮೀಣ ಪ್ರದೇಶಗಳಲ್ಲೂ ಇದು ಅತ್ಯಂತ ಸುರಕ್ಷಿತವಾಗಿ ಹಾಗೂ ಸಂಪೂರ್ಣ ಆಫ್‌ ಲೈನ್ ಆಗಿ ಧ್ವನಿ ಆಧಾರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಕ್ಲೌಡ್ ಆಧಾರಿತ ಡಿಜಿಟಲ್ ವ್ಯವಸ್ಥೆಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ವೆಚ್ಚ ಹಾಗೂ ಅತಿ ಕಡಿಮೆ ವಿದ್ಯುತ್ ಬಳಕೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ವ್ಯಾಪಾರಿ ಬ್ಯಾಂಕಿಂಗ್ ವಲಯದಲ್ಲಿ ದೊಡ್ಡ ಬದಲಾವಣೆ ತರಲಿದೆ. ಇದನ್ನು ಸುಲಭವಾಗಿ ನಕಲಿಸಲು ಸಾಧ್ಯವಿಲ್ಲ, ಏಕೆಂದರೆ ಇದನ್ನು ದೊಡ್ಡ ಪ್ರಮಾಣದ, ನೈಜ-ಪ್ರಪಂಚದ ನಿಯೋಜನೆಯ ಮೂಲಕ ರೂಪಿಸಲಾಗಿದೆ ಮತ್ತು ರಾತ್ರೋರಾತ್ರಿ ರೂಪಿಸಿದ್ದಲ್ಲ. ಎಡ್ಜ್-ಎಐ-ಆಧಾರಿತ ವ್ಯಾಪಾರಿ ಬ್ಯಾಂಕಿಂಗ್‌ ನ ಮುಂದಿನ ಹಂತವನ್ನು ಆರಂಭಿಸಲು ಇದು ಭದ್ರ ಬುನಾದಿಯಾಗಿದೆ.

ಬ್ಯಾಂಕುಗಳು ನೇರವಾಗಿ ವ್ಯಾಪಾರಿಗಳಿಗೆ ವಿತರಿಸುವ ಇ-ಕೋಶ ಬಳಸಲು ಯಾವುದೇ ಆ್ಯಪ್, ಡಿಜಿಟಲ್ ಸಾಕ್ಷರತೆ ಅಥವಾ ವ್ಯಾಪಾರಿಗಳ ನಡವಳಿಕೆಯಲ್ಲಿ ಬದಲಾವಣೆಯ ಅಗತ್ಯವಿಲ್ಲ. ಪ್ರಸ್ತುತ ಇರುವ ಬ್ಯಾಂಕಿಂಗ್ ಚಾನೆಲ್‌ ಗಳ ವಿಸ್ತರಣೆಯಾಗಿ ಕಾರ್ಯನಿರ್ವಹಿಸುವ ಈ ಸಾಧನವು, ದೈನಂದಿನ ಬ್ಯಾಂಕಿಂಗ್ ಸಂವಹನವನ್ನು ಹೆಚ್ಚು ಸರಳ ಮತ್ತು ವೇಗವಾಗಿಸುತ್ತದೆ, ತನ್ಮೂಲಕ ವ್ಯಾಪಾರಿಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ತಲುಪುವಂತೆ ಮಾಡುತ್ತದೆ.

ಇ-ಕೋಶವನ್ನು ಅಳವಡಿಸಿಕೊಳ್ಳುವ ಬ್ಯಾಂಕುಗಳು ವ್ಯಾಪಾರಿಗಳಿಗೆ ಸೇವೆ ಒದಗಿಸುವ ವೆಚ್ಚವನ್ನು ಶೇಕಡಾ 60 ರಷ್ಟು ಕಡಿತಗೊಳಿಸಬಹುದು. ನಿರಂತರ ದೈನಂದಿನ ಸಂವಹನದ ಮೂಲಕ ವ್ಯಾಪಾರಿಗಳ ನಿಕಟತೆಯನ್ನು ಹೆಚ್ಚಿಸಬಹುದು, ಸಾಲ ಮಂಜೂರಾತಿಯನ್ನು ಚುರುಕುಗೊಳಿಸಬಹುದು, ಪ್ರತಿ ವ್ಯಾಪಾರಿಯ ಕ್ರಾಸ್-ಸೆಲ್ ಪ್ರಮಾಣವನ್ನು ದುಪ್ಪಟ್ಟು ಮಾಡಬಹುದು ಮತ್ತು ವ್ಯಾಪಾರಿಗಳು ಬ್ಯಾಂಕ್ ತೊರೆಯುವ ಪ್ರಮಾಣವನ್ನು ಶೇ. 15-20 ರಿಂದ ಶೇ. 6-9ಕ್ಕೆ ಇಳಿಸಬಹುದು. ವ್ಯಾಪಾರಿಗಳನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಮಾಣವನ್ನು ಉತ್ತಮಪಡಿಸುವ ಮೂಲಕ ಮತ್ತು ಅವರು ಬ್ಯಾಂಕ್ ತೊರೆಯುವುದನ್ನು ತಡೆಯುವ ಮೂಲಕ, ಬ್ಯಾಂಕುಗಳು ವ್ಯಾಪಾರಿಗಳನ್ನು ಮರು-ಪಡೆಯುವ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ದೀರ್ಘಕಾಲದ ವ್ಯಾಪಾರಿ ಸಂಬಂಧಗಳನ್ನು ಬಲಪಡಿಸಲು ಇ-ಕೋಶ ನೆರವಾಗುತ್ತದೆ.

ಬ್ಯಾಂಕುಗಳು ವ್ಯಾಪಾರಿಗಳೊಂದಿಗೆ ಆಳವಾದ ಒಡನಾಟವನ್ನು ಹೊಂದಲು ಮತ್ತು ಪ್ರಗತಿಯ ಹೊಸ ಅವಕಾಶಗಳನ್ನು ಮುಕ್ತಗೊಳಿಸಲು ಬಯಸುತ್ತಿರುವ ಈ ಸಮಯದಲ್ಲಿ, ಇ-ಕೋಶವು ವ್ಯಾಪಾರಿ ಕೌಂಟರ್‌ ಗಳಲ್ಲಿ ಸುಲಭವಾಗಿ ವಿಸ್ತರಿಸಬಹುದಾದ ಮತ್ತು ಸದಾ ಕಾರ್ಯನಿರ್ವಹಿಸುವ ಚಾನಲ್ ಅನ್ನು ಸೃಷ್ಟಿಸುತ್ತದೆ. ಇದು ಪಾವತಿಗಳು, ಬ್ಯಾಂಕಿಂಗ್ ಮತ್ತು ಎಐ ತಂತ್ರಜ್ಞಾನಗಳನ್ನು ಒಟ್ಟುಗೂಡಿಸಿ ವ್ಯಾಪಾರಿ ಬ್ಯಾಂಕಿಂಗ್‌ ನ ಮುಂದಿನ ಹಂತಕ್ಕೆ ಶಕ್ತಿ ತುಂಬಲಿದೆ

Previous articleA literary and cultural festival celebrating 250 months of Sahitya Dasoha
Next articleSanthana Fertility to expand its network across Bengaluru with ₹50 crore investment