ಬೆಂಗಳೂರು, ಮಾರ್ಚ್ 30: ಬೆಂಗಳೂರಿನ ಜೆ.ಪಿ. ನಗರದ ಮಾರೇನಹಳ್ಳಿಯಲ್ಲಿ ಮಾರ್ಚ್ 29, 2026ರಂದು ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಜಯನಗರದ ಶಾಸಕರಾದ ಶ್ರೀ ಸಿ.ಕೆ. ರಾಮಮೂರ್ತಿ ಹಾಗೂ ಅವರ ಧರ್ಮಪತ್ನಿ, ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ನಾಗರತ್ನಾ ರಾಮಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಕಾರ್ಯಕ್ರಮದ ಆಯೋಜಕರಾಗಿ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀ ಚಂದ್ರಶೇಖರ್ ರಾಜು, ವಾರ್ಡ್ ಅಧ್ಯಕ್ಷರಾದ ಶ್ರೀ ಆನಂದ್ ಬಿ ಹಾಗೂ ಮಹಿಳಾ ಸಂಘಟಕರಾದ ಶ್ರೀಮತಿ ನೇತ್ರಾವತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಡಾ. ದೀಪ ದೇವರಾಜ್ (MBBS, MD, FICC, FEM), ನೃತ್ಯ ಕ್ಷೇತ್ರದಲ್ಲಿ ರಾಷ್ಟ್ರಪತಿ ಪುರಸ್ಕೃತ ಮಂದಸ್ಮಿತಾ ಭಟ್, ಗಾಯನ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿನ್ನೆಲೆ ಗಾಯಕಿ ಚಂದ್ರಿಕಾ ಗುರುರಾಜ್, ಯೋಗ ಕ್ಷೇತ್ರದಲ್ಲಿ ಕೃಷ್ಣವೇಣಿ, ಸಂಗೀತ-ಗಮಕ ಕ್ಷೇತ್ರದಲ್ಲಿ ಕಮಲ ಶ್ರೀನಿವಾಸ್ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಶ್ರೀಮತಿ ನಾಗರತ್ನಾ ರಾಮಮೂರ್ತಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಶ್ರೀಮತಿ ರಾಧಾ ಕೇಶವ ಹೆಬ್ಬಾರ್ ನಿರೂಪಿಸಿದರು. ಶ್ರೀ ತೀರ್ಥಹಳ್ಳಿ ರಮೇಶ್ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ, ಗ್ರಾಮದ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಂದಸ್ಮಿತಾ ಭಟ್ ಅವರ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.































































