Home Sports ಶೀಘ್ರದಲ್ಲೇ ಬಾಕಿ ಬಿಲ್‌ಗಳಿಗೆ ಹಣ ಪಾವತಿ: ಕೆ.ಎಸ್.ಸಿ.ಎ

ಶೀಘ್ರದಲ್ಲೇ ಬಾಕಿ ಬಿಲ್‌ಗಳಿಗೆ ಹಣ ಪಾವತಿ: ಕೆ.ಎಸ್.ಸಿ.ಎ

ಗುತ್ತಿಗೆದಾರರಿಗೆ ಕೆಎಸ್‌ಸಿಎ ಭರವಸೆ

0

ಬೆಂಗಳೂರು: ಕ್ರಿಕೆಟ್ ಅಕಾಡೆಮಿ ನಿರ್ಮಾಣ ಮತ್ತು ಮೈದಾನಗಳ ಮೇಲ್ದರ್ಜೆ ನವೀಕರಣ, ಆಲೂರು ಸ್ಟೇಡಿಯಂನ ಸಭಾಂಗಣ, ಶೌಚಗೃಹ, ಕಿಚನ್ ನಿರ್ಮಾಣ ಸೇರಿ ಹಲವು ಕಾಮಗಾರಿಗಳ ಬಿಲ್‌ಗಳಿಗೆ ಬಾಕಿ ಹಣ ಪಾವತಿ ಮಾಡುವ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ( ಕೆಎಸ್‌ಸಿಎ) ಗುರುವಾರ, ಫಿಡಿಲಿಟಸ್ ಕಾರ್ಪ್ ಸಂಸ್ಸ್ಥೆ ಜೊತೆ ಸಭೆ ನಡೆಸಿ ಬಾಕಿ ಉಳಿದಿರುವ ಪಾವತಿ ಮೊತ್ತವನ್ನು ಅತೀ ಶೀಘ್ರದಲ್ಲಿ ಪಾವತಿ ಮಾಡುವುದಾಗಿ ಕೆ.ಎಸ್.ಸಿ.ಎ ಒಪ್ಪಿಕೊಂಡಿದೆ.

ಗುರುವಾರ (ಜುಲೈ 17) ಚಿನ್ನಸ್ವಾಮಿ ಮೈದಾನದಲ್ಲಿರುವ ಆಡಳಿತ ಮಂಡಳಿ ಕಚೇರಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ಎ. ರಘುರಾಮ್ ಭಟ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದೆ ಆಗಿರುವ ಕಾಮಗಾರಿಗಳು ಮತ್ತು ಬಾಕಿ ಉಳಿದಿರುವ ಬಿಲ್‌ಗಳ ಹಣ ಪಾವತಿ ಸೇರಿ ಇತ್ಯಾದಿ ವಿಷಯಗಳ ಬಗ್ಗೆ ನಮ್ಮ ಜೊತೆ ಚರ್ಚಿ ನಡೆಸಲಾಗಿದೆ. ಕೆಎಸ್‌ಸಿಎ ಕ್ರೀಡಾ ಕೇಂದ್ರ, ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ಮಹಿಳಾ ಮತ್ತು ಪುರುಷರ ಶೌಚಗೃಹ ನಿರ್ಮಾಣ ಮತ್ತು ಗೇಟ್ ಅಳವಡಿಕೆ ಸೇರಿ ವಿವಿಧ ಸಿವಿಲ್ ಕಾಮಗಾರಿಗಳನ್ನು ನಮ್ಮ ಸಂಸ್ಥೆ ಫಿಡಿಲಿಟಸ್ ಕಾರ್ಪ್ ಪ್ರಾಪರ್ಟಿ ಸರ್ವೀಸಸ್ ಪ್ರೈ. ಲಿ. ನಿರ್ವಹಿಸಿದ್ದರೂ ಹಲವು ವರ್ಷಗಳಿಂದ ಬಿಲ್ ಪಾವತಿಯಾಗಿರಲಿಲ್ಲ. ಮುಖ್ಯವಾಗಿ ಆಲೂರು ಸ್ಟೇಡಿಯಂ ನವೀಕರಣ ಕಾಮಗಾರಿಗಳ ಪಾವತಿಯ ಬಗ್ಗೆ ಕೆಎಸ್‌ಸಿಎಗೆ ಈ ಹಿಂದೆ ಪತ್ರ ಬರೆದಿದ್ದರೂ, ಯಾವುದೇ ರೀತಿಯಲ್ಲೂ ಕೆ.ಎಸ್.ಸಿ.ಎ ಸ್ಪಂದಿಸಿರಲಿಲ್ಲ ಎಂದು ಇಂದಿನ ಸಭೆಯಲ್ಲಿ ಕೆಎಸ್‌ಸಿಎ ಗಮನಕ್ಕೆ ತರಲಾಗಿತ್ತು. ಹೀಗಾಗಿ ಸಭೆಯ ಚರ್ಚೆಯ ಪರಿಣಾಮವಾಗಿ ಮುಂದಿನ ನಾಲ್ಕೈದು ದಿನಗಳಲ್ಲಿ ಬಾಕಿ ಬಿಲ್‌ಗಳಿಗೆ ಹಣ ಪಾವತಿಸಲಾಗುವುದು ಎಂದು ಕೆಎಸ್‌ಸಿಎ ಪದಾಧಿಕಾರಿಗಳು ಭರವಸೆ ನೀಡಿರುತ್ತಾರೆ.

ವಿವಿಧ ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸಿದ ಹಿನ್ನೆಲೆಯಲ್ಲಿ ಕೆಎಸ್‌ಸಿಎ ನಮಗೆ 1.90 ಕೋಟಿ ರೂ. ಹಣ ಪಾವತಿಯಾಗಬೇಕಿರುವ ವಿಷಯದಲ್ಲಿ ನಾವು ಫಿಡಿಲಿಟಸ್ ಕಾರ್ಪ್ ಪ್ರಾಪರ್ಟಿ ಸರ್ವೀಸಸ್ ಪ್ರೈ. ಲಿ. ಸಂಸ್ಥೆಯು ಹಲವು ಪ್ರಯತ್ನಗಳನ್ನು ನಡೆಸಿತ್ತು. ಕೊನೆಗೂ ಇಂದಿನ ಸಭೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ಎ.ರಘುರಾಮ್ ಭಟ್, ಹಂಗಾಮಿ ಕಾರ್ಯದರ್ಶಿ ಎಂ.ಎಸ್.ವಿನಯ್ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಕೆ.ಎಸ್.ಸಿ.ಎ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಅದೇ ರೀತಿ ಈ ಸಂದರ್ಭದಲ್ಲಿ ನಮ್ಮ ಜೊತೆ ಸಹಕರಿಸಿದ ಮಾನ್ಯ ಪ್ರತಿಯೊಂದು ಮಾಧ್ಯಮ ಸಂಸ್ಥೆಗಳಿಗೂ ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

NO COMMENTS