underprivileged families in Karnataka – New Xpress News https://newxpressnews.com The Latest News Sat, 31 May 2025 12:05:55 +0000 en-US hourly 1 https://wordpress.org/?v=7.1.3 https://newxpressnews.com/wp-content/uploads/2022/09/cropped-Siteicon-32x32.png underprivileged families in Karnataka – New Xpress News https://newxpressnews.com 32 32 ಕರ್ನಾಟಕದಲ್ಲಿ ಜೋಯಾಲುಕ್ಕಾಸ್ ಫೌಂಡೇಶನ್‌ನ ೫೦ “ಜಾಯ್ ಹೋಮ್ಸ್” ಬಡ ಕುಟುಂಬಗಳಿಗೆ ಹಸ್ತಾಂತರ https://newxpressnews.com/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%9c%e0%b3%8b%e0%b2%af%e0%b2%be%e0%b2%b2%e0%b3%81%e0%b2%95%e0%b3%8d%e0%b2%95%e0%b2%be/ https://newxpressnews.com/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%9c%e0%b3%8b%e0%b2%af%e0%b2%be%e0%b2%b2%e0%b3%81%e0%b2%95%e0%b3%8d%e0%b2%95%e0%b2%be/#respond Sat, 31 May 2025 12:03:15 +0000 https://newxpressnews.com/?p=2474 ಕರ್ನಾಟಕ: ಬಡತನದ ಅಂಚಿನಲ್ಲಿರುವ ಸಮುದಾಯಗಳ ಜೀವನ ಪರಿಸ್ಥಿತಿಯನ್ನು ಸುಧಾರಿಸುವ ಒಂದು ಹೆಜ್ಜೆಯಾಗಿ ಜೋಯಾಲುಕ್ಕಾಸ್ ಫೌಂಡೇಶನ್ ಕರ್ನಾಟಕದಾದ್ಯಂತ ೫೦ ಹೊಸದಾಗಿ ನಿರ್ಮಿಸಲಾದ “ಜಾಯ್ ಹೋಮ್ಸ್ಗಳನ್ನು ಸೌಲಭ್ಯವಂಚಿತ ಕುಟುಂಬಗಳಿಗೆ ಹಸ್ತಾಂತರಿಸಿದೆ. ಫೌಂಡೇಶನ್‌ನ ಜಾಯ್ ಹೋಮ್ಸ್ ಯೋಜನೆಯ ಭಾಗವಾಗಿರುವ ಈ ಉಪಕ್ರಮವನ್ನು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕೀಲಿಕೈ ಹಸ್ತಾಂತರ ಸಮಾರಂಭದಲ್ಲಿ ಔಪಚಾರಿಕವಾಗಿ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕದ ಗೃಹಸಚಿವ ಡಾ. ಜಿ. ಪರಮೇಶ್ವರ್ ಭಾಗವಹಿಸಿದ್ದರು, ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಡಾ. ಜೋಯ್ ಆಲುಕ್ಕಾಸ್ ಅವರು ನೂತನ ಮನೆಯ ಮಾಲೀಕರಿಗೆ ಕೀಲಿಗಳನ್ನು ಹಸ್ತಾಂತರಿಸಿದರು. ಜಾಯ್ ಹೋಮ್ಸ್ ಉಪಕ್ರಮವು ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಪ್ರಯತ್ನಗಳ ಮೂಲಕ ಮೂಲಭೂತ ಮಾನವ ಅಗತ್ಯಗಳನ್ನು ಪೂರೈಸುವ ಪ್ರತಿಷ್ಠಾನದ ವಿಶಾಲ ಬದ್ಧತೆಯಲ್ಲಿ ಬೇರೂರಿದೆ. ೫೦೦ ಚದರ ಅಡಿ ಅಳತೆಯ ಮತ್ತು ೭.೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪ್ರತಿಯೊಂದು ಮನೆಗಳು, ಸಮಾಜದ ಬಡತನದ ಅಂಚಿನಲ್ಲಿರುವವರಿಗೆ ಆಶ್ರಯವನ್ನು ಮಾತ್ರವಲ್ಲದೆ, ಘನತೆ, ಸುರಕ್ಷತೆ ಮತ್ತು ಸ್ಥಿರತೆಯನ್ನು ನೀಡುವ ಗುರಿ ಹೊಂದಿವೆ.

ಯೋಜನೆಯ ಫಲಾನುಭವಿಗಳಲ್ಲಿ ಬಡತನ, ನೈಸರ್ಗಿಕ ವಿಕೋಪಗಳು, ದೀರ್ಘಕಾಲದ ಅನಾರೋಗ್ಯ (ಎಂಡೋಸಲ್ಫಾನ್ ಸಂತ್ರಸ್ತರು) ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಕುಟುಂಬಗಳು ಸೇರಿವೆ. ಕರ್ನಾಟಕದಲ್ಲಿ `ಜಾಯ್ ಹೋಮ್ಸ್ಉಪಕ್ರಮದಡಿಯಲ್ಲಿ ಒದಗಿಸಲಾದ ಒಟ್ಟು ಮನೆಗಳ ಸಂಖ್ಯೆ ಕೇರಳ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ಸೇರಿ ೪೧೪ಕ್ಕೆ ಏರಿದೆ. ಯೋಜನೆಯ ಮತ್ತಷ್ಟು ವಿಸ್ತರಣೆಯ ಕ್ರಮವಾಗಿ ಫೌಂಡೇಶನ್ ತೆಲಂಗಾಣದಲ್ಲಿ ೫೦ ಹೆಚ್ಚುವರಿ ಮನೆಗಳನ್ನು ನಿರ್ಮಿಸುವ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಇದು ದಕ್ಷಿಣ ಭಾರತದಾದ್ಯಂತ ತನ್ನ ವಸತಿ ಪ್ರಯತ್ನಗಳ ವ್ಯಾಪ್ತಿಯನ್ನು ವಿಸ್ತರಿಸಿದೆ.

೨೦೦೯ರಲ್ಲಿ ಪ್ರಾರಂಭವಾದಾಗಿನಿಂದ, ಜೋಯಾಲುಕ್ಕಾಸ್ ಫೌಂಡೇಶನ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಚಟುವಟಿಕೆಗಳನ್ನು ಆರೋಗ್ಯ, ಸಂರಕ್ಷಣೆ, ಶಿಕ್ಷಣ, ಹಿರಿಯರ ಆರೈಕೆ ಮತ್ತು ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಿದೆ. ಬಡ ಸಮುದಾಯಗಳಲ್ಲಿನ ವ್ಯವಸ್ಥಿತ ಅಂತರವನ್ನು ಪರಿಹರಿಸುವುದಕ್ಕೆ ಆದ್ಯತೆ ನೀಡಿದೆ. ಇದರ ಆರೋಗ್ಯ ಉಪಕ್ರಮಗಳಲ್ಲಿ ಕೇರಳದಲ್ಲಿ ಮಾಸಿಕ ೧,೦೦೦ಕ್ಕೂ ಹೆಚ್ಚು ಡಯಾಲಿಸಿಸ್ ಕಿಟ್‌ಗಳ ವಿತರಣೆ, ಡಯಾಲಿಸಿಸ್ ಯಂತ್ರಗಳ ಕೊಡುಗೆ, ಆಸ್ಪತ್ರೆ ವಾರ್ಡ್‌ಗಳ ನವೀಕರಣ ಮತ್ತು ಉಪಶಮನ ಆರೈಕೆ ಮತ್ತು ರಕ್ತದಾನ ಅಭಿಯಾನಗಳಿಗೆ ನಿರಂತರ ಸಹಕಾರ ಸೇರಿವೆ.

ಕೋವಿಡ್-೧೯ ಸಾಂಕ್ರಾಮಿಕ ಸಮಯದಲ್ಲಿ, ಫೌಂಡೇಶನ್ ತನ್ನ ಜಾಯ್ ಆಫ್ ಹೋಪ್” ಕಾರ್ಯಕ್ರಮದಡಿಯಲ್ಲಿ, ವಿದ್ಯಾರ್ಥಿವೇತನದ ಮೂಲಕ ಪೋಷಕರನ್ನು ಕಳೆದುಕೊಂಡ ೩೦೦ಕ್ಕೂ ಹೆಚ್ಚು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿತು. ಕೇರಳದ ತ್ರಿಶೂರ್‌ನಲ್ಲಿ, ಫೌಂಡೇಶನ್ ಡಯಾಲಿಸಿಸ್ ಕೇಂದ್ರ, ಉಪಶಮನ ಆರೈಕೆ ಘಟಕ ಮತ್ತು ಇತರ ವಿಶೇಷ ಸೇವೆಗಳನ್ನು ಒಳಗೊಂಡಿರುವ ಹಿರಿಯ ನಾಗರಿಕರ ಆರೈಕೆ ಸೌಲಭ್ಯವನ್ನು ಸಹ ನಿರ್ವಹಿಸುತ್ತಿದೆ.

ಹೆಚ್ಚುವರಿಯಾಗಿ, ಬ್ಯೂಟಿಷಿಯನ್ ಕೌಶಲ್ಯ ಮತ್ತು ಟೈಲರಿಂಗ್‌ನಲ್ಲಿ ವೃತ್ತಿಪರ ತರಬೇತಿಯ ಮೂಲಕ, ೨೦೦ಕ್ಕೂ ಹೆಚ್ಚು ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಾಧನಗಳನ್ನು ಪಡೆದಿದ್ದಾರೆ. ಜಾಯ್ ಹೋಮ್ಸ್ ಯೋಜನೆಯು ಸ್ಥಿರ ವಸತಿ, ಸಾಮಾಜಿಕ ಉನ್ನತಿಯತ್ತ ಒಂದು ಮೂಲಭೂತ ಹೆಜ್ಜೆ ಎಂಬ ಫೌಂಡೇಶನ್‌ನ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ. ಒಂದು ಪ್ರಮುಖ ಅಗತ್ಯವನ್ನು ಪರಿಹರಿಸುವ ಮೂಲಕ, ದುರ್ಬಲ
ಕುಟುಂಬಗಳು ತಮ್ಮ ಜೀವನವನ್ನು ಪುನರ್ನಿರ್ಮಿಸಲು, ಅವಕಾಶಗಳನ್ನು ಪಡೆಯಲು ಮತ್ತು ಉತ್ತಮ ಭವಿಷ್ಯವನ್ನು ಸುಭದ್ರಪಡಿಸಿಕೊಳ್ಳುವತ್ತ ಗಮನಹರಿಸಲು ಇದು ಅನುವು ಮಾಡಿಕೊಡುತ್ತದೆ.

]]>
https://newxpressnews.com/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%9c%e0%b3%8b%e0%b2%af%e0%b2%be%e0%b2%b2%e0%b3%81%e0%b2%95%e0%b3%8d%e0%b2%95%e0%b2%be/feed/ 0