Sri Sri Sri Siddheshwara Temple – New Xpress News https://newxpressnews.com The Latest News Tue, 27 Feb 2024 11:33:28 +0000 en-US hourly 1 https://wordpress.org/?v=6.7.2 https://newxpressnews.com/wp-content/uploads/2022/09/cropped-Siteicon-32x32.png Sri Sri Sri Siddheshwara Temple – New Xpress News https://newxpressnews.com 32 32 ಶ್ರೀ ಶ್ರೀ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಮಾರ್ಚ್ 8 ಶಿವರಾತ್ರಿ ಅಂದು ವಿಶೇಷ ಪೂಜೆ ಮತ್ತು ಸಿಡಿ ಬಿಡುಗಡೆ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b6%e0%b3%8d%e0%b2%b0%e0%b3%80-%e0%b2%b6%e0%b3%8d%e0%b2%b0%e0%b3%80-%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%87%e0%b2%b6%e0%b3%8d%e0%b2%b5/ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b6%e0%b3%8d%e0%b2%b0%e0%b3%80-%e0%b2%b6%e0%b3%8d%e0%b2%b0%e0%b3%80-%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%87%e0%b2%b6%e0%b3%8d%e0%b2%b5/#respond Tue, 27 Feb 2024 11:29:09 +0000 https://newxpressnews.com/?p=1298 ಬೆಂಗಳೂರು, ಫೆ. 27: ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕು 80 ಅಡಿ ಟಿವಿಎಸ್ ರಸ್ತೆಯಲ್ಲಿ ಇರುವ ಶ್ರೀ ಶ್ರೀ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಮಾರ್ಚ್ 8 ಶಿವರಾತ್ರಿ ಅಂದು ಸಂಜೆ 7 ರಿಂದ ವಿಶೇಷ ಪೂಜೆ ಮತ್ತು ಸಿಡಿ ಬಿಡುಗಡೆ ಆಗಲಿದೆ ಎಂದು ಆ ದೇವಸ್ಥಾನದ ಹಿರಿಯ ಟ್ರಸ್ಟಿ ಎಂ. ರಾಜಶೇಖರ್ ಹೇಳಿದರು

ಶ್ರೀ ಶ್ರೀ ಶ್ರೀ ಸಿದ್ದೇಶ್ವರ ದೇವಾಲಯವು ಮೇಲ್ಕಂಡ ವಿಳಾಸದಲ್ಲಿ ಸುಮಾರು ವರ್ಷಗಳಿಂದ ಭಕ್ತರಿಗೆ ಸದಾ ಆಶೀರ್ವಚನ ನೀಡುತ್ತಾ ಬಂದಿದ್ದು, ಸದರಿ ದೇವಾಲಯವನ್ನು ಕರ್ನಾಟಕದ ಚಿಕ್ಕಮಂಗಳೂರು ಜಿಲ್ಲೆಯ, ತರೀಕೆರೆ ತಾಲ್ಲೂಕಿನ, ಲಕ್ಕವಳ್ಳಿ ಗ್ರಾಮದ ವ್ಯವಸಾಯ ಕುಟುಂಬದಲ್ಲಿ ಜನಿಸಿದ ಶ್ರೀ ಎಂ. ರಾಜಶೇಖರ್ ಬಿ.ಕಾಂ ರವರು ದೇವಾಲಯದ ವ್ಯವಸ್ಥಾಪಕ ಟ್ರಸ್ಟಿಗಳಾಗಿದ್ದು, ಇವರು ವೃತ್ತಿಯಲ್ಲಿ ಆದಾಯ ತೆರಿಗೆ ಇಲಾಖೆಯ ನಿವೃತ್ತ ಶ್ರೀ ಎಂ. ರಾಜಶೇಖರ್ ರವರು ದೇವಾಲಯದ ವ್ಯವಸ್ಥಾಪಕ ಟ್ರಸ್ಟಿಗಳಾಗಿದ್ದು, ಇವರು ಅಪ್ಪಟ್ಟ ಶಿವನ ಭಕ್ತರಾಗಿರುತ್ತಾರೆ. ಇವರು ದೇವಾಲಯದ ಅಧ್ಯಕ್ಷರಾಗಿದ್ದು, ದೇವಾಲಯವನ್ನು ವಿಶಿಷ್ಟ ರೀತಿಯಲ್ಲಿ ಮುನ್ನಡೆಸಿಕೊಂಡು ಬರುತ್ತಿರುತ್ತಾರೆ.

ಸದರಿ ದೇವಾಲಯದ ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀ ಎಂ. ರಾಜಶೇಖರ್ ಮತ್ತು ಅಧ್ಯಕ್ಷರಾದ ಇವರ ಧರ್ಮಪತ್ನಿ ಶ್ರೀಮತಿ. ಎಸ್. ರಂಜನಿ ಅಮ್ಮಾಳ್ ರವರು ತಮಿಳುನಾಡಿನ ತಂಜಾವೂರು ಪ್ರದೇಶದಲ್ಲಿರುವ ಶ್ರೀ ಭ್ರುಹಾಧಿಶ್ವರ ದೇವಾಲಯದ ಪರಮ ಭಕ್ತರಾಗಿದ್ದು ಅಲ್ಲಿನ ದೇವಾಲಯದಲ್ಲಿ ನಡೆಯುವ ಪೂಜೆ ವಿಧಿ ವಿಧಾನಗಳಿಂದ ಸ್ಫೂರ್ತಿ ಪಡೆದು ಅಲ್ಲಿನ ದೇವಾಲಯದ ಮಾದರಿಯಲ್ಲಿಯೇ ಮೇಲ್ಕಂಡ ವಿಳಾಸದಲ್ಲಿ ದೇವಾಲಯವನ್ನು ನಿರ್ಮಿಸಿರುತ್ತಾರೆ.

ಮೇಲ್ಕಂಡ ವಿಳಾಸದಲ್ಲಿ ನಿರ್ಮಿಸಿರುವ ದೇವಾಲಯಕ್ಕೆ ಭಾರತ ಸರ್ಕಾರದ ಮಾಜಿ ಪ್ರಧಾನ ಮಂತ್ರಿಗಳು ಮತ್ತು ಶಿವನ ಪರಮ ಭಕ್ತರಾದ ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ರವರ ಕುಟುಂಬದ ಒಡೆತನದಲ್ಲಿದ್ದ ಸುಮಾರು ಆರೂವರೆ ಎಕರೆ ಜಮೀನನ್ನು ಖರೀದಿಸಿ ದೇವಾಲಯವನ್ನು ನಿರ್ಮಿಸಿರುತ್ತಾರೆ. ಮಾಜಿ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ರವರ ಕುಟುಂಬದಿಂದ ಪಡೆದ ಜಮೀನನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ದೇವಾಲಯದ ವ್ಯವಸ್ಥಾಪಕ ಟ್ರಸ್ಟಿಗಳಾದ

ಶ್ರೀ ಎಂ. ರಾಜಶೇಖರ್ ಮತ್ತು ಅಧ್ಯಕ್ಷರಾದ ಇವರ ಧರ್ಮಪತ್ನಿ ಶ್ರೀಮತಿ, ಎಸ್. ರಂಜನಿ ಅಮ್ಮಾಳ್ ರವರು ಸುಮಾರು 30 ಕೋಟಿ ವೆಚ್ಚದಲ್ಲಿ ಭಾರತದ ಸಂಸ್ಕೃತಿ ಮತ್ತು ಶಿಲ್ಪ ಕಲೆಯನ್ನು ಬಳಸಿಕೊಂಡು ಸುಂದರ ದೇವಾಲಯವನ್ನು ನಿರ್ಮಿಸಲು ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ಅದರ ಫಲವಾಗಿ ಇಂದು ದೇವಾಲಯವು
ನಿರ್ಮಾಣ ಹಂತಕ್ಕೆ ಬಂದು ತಲುಪಿದೆ. ಇದರ ಜೊತೆಗೆ 63 ಅಡಿ ಎತ್ತರದ ರಾಜಗೋಪುರ ನಿರ್ಮಾಣವು ಸಹ ಅಂತಿಮ ಹಂತದಲ್ಲಿದೆ.

ಹೆಸರು, ಪ್ರಸಿದ್ದಿಯನ್ನು ಪಡೆದಿರುವ ಸದರಿ ಮೇಲ್ಕಂಡ ದೇವಾಲಯಕ್ಕೆ ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸಿ ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸೋಮವಾರದಂದು ಸುಮಾರು ಭಕ್ತರು ಆಗಮಿಸುತ್ತಾರೆ. ಮತ್ತು ಶಿವರಾತ್ರಿಯಂದು ನಡೆಯುವ ವಿಶೇಷ ದರ್ಶನಕ್ಕಾಗಿ 50,000 ರಿಂದ 60,000 ಭಕ್ತರು ಆಗಮಿಸಿ ಇಲ್ಲಿನ ಭವ್ಯಾನುಭವವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ.

ಸದರಿ ದೇವಾಲಯದ ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀ ಎಂ. ರಾಜಶೇಖರ್ ದೇವಾಲಯಕ್ಕೆ ಬರುವ ಭಕ್ತರನ್ನು ಕಾಳಜಿಯಿಂದ ನೋಡಿಕೊಂಡು ತಮ್ಮ ಸ್ವಂತ ಹಣದಿಂದಲೇ ಪ್ರಸಾದವನ್ನು ವಿತರಿಸುತ್ತಿದ್ದಾರೆ. ಇವರ ವಿಶೇಷ ಕಾಳಜಿಗೆ ಮನಸೋತ ಭಕ್ತರು ಮನಃ ಪುನಃ ಕುಟುಂಬ ಸಮೇತ ದೇವಸ್ಥಾನಕ್ಕೆ ಬಂದು ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.

ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಯ ಕೃಪಾಶಿರ್ವಾದದಿಂದ ಮುಂದಿನ ದಿನಗಳಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳು ಮತ್ತು ಘನತೆವೆತ್ತ ರಾಷ್ಟ್ರಪತಿಗಳಿಂದ ದೇವಾಲಯದ ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀ ಎಂ. ರಾಜಶೇಖರ್ ಕುಂಭಾಭಿಷೇಕವನ್ನು ಮಾಡಿಸಲು ಯೋಜನೆ ನಡೆಸಿದ್ದಾರೆ. ಭಕ್ತರು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟು ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ.

ಶಿವರಾತ್ರಿ ನಿಮಿತ್ತ ಮಾ.8ರಂದು ಶ್ರೀ ಶ್ರೀ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಸಿದ್ದೇಶ್ವರ ಸ್ವಾಮಿಯ ಕುರಿತ ಭಕ್ತಿಗೀತೆಗಳನ್ನು ಒಳಗೊಂಡ ವಿಶೇಷ ಪೂಜೆ ಹಾಗೂ ಸಿಡಿ ಬಿಡುಗಡೆ ಮಾಡಲಾಗುವುದು. ಆದುದರಿಂದ ಭಕ್ತರು ಈ ವಿಶೇಷ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚಿತೇಶ್ವರನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಎಂದರು.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b6%e0%b3%8d%e0%b2%b0%e0%b3%80-%e0%b2%b6%e0%b3%8d%e0%b2%b0%e0%b3%80-%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%87%e0%b2%b6%e0%b3%8d%e0%b2%b5/feed/ 0