Sri Guru Rayar – New Xpress News https://newxpressnews.com The Latest News Wed, 21 Aug 2024 02:56:22 +0000 en-US hourly 1 https://wordpress.org/?v=7.1 https://newxpressnews.com/wp-content/uploads/2022/09/cropped-Siteicon-32x32.png Sri Guru Rayar – New Xpress News https://newxpressnews.com 32 32 ಶ್ರೀಗುರುರಾಯರು “ವಿಶ್ವವಂದ್ಯರು”- ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ https://newxpressnews.com/%e0%b2%b6%e0%b3%8d%e0%b2%b0%e0%b3%80%e0%b2%97%e0%b3%81%e0%b2%b0%e0%b3%81%e0%b2%b0%e0%b2%be%e0%b2%af%e0%b2%b0%e0%b3%81-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%b5%e0%b2%82%e0%b2%a6/ https://newxpressnews.com/%e0%b2%b6%e0%b3%8d%e0%b2%b0%e0%b3%80%e0%b2%97%e0%b3%81%e0%b2%b0%e0%b3%81%e0%b2%b0%e0%b2%be%e0%b2%af%e0%b2%b0%e0%b3%81-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%b5%e0%b2%82%e0%b2%a6/#respond Wed, 21 Aug 2024 02:56:20 +0000 https://newxpressnews.com/?p=1850 ಬೆಂಗಳೂರು: ಶ್ರೀಗುರುರಾಯರು “ವಿಶ್ವವಂದ್ಯರು” ಎಂದು ಖ್ಯಾತ ಹರಿದಾಸ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದರು. ಬಿ.ಕೆ.ಪ್ರಸನ್ನ ಸಂಪಾದಕತ್ವದ ಸ್ವದೇಶಿ ಉದ್ಯಮ ಪ್ರಕಟಿತ “ಶ್ರೀಗುರು ಸಾರ್ವಭೌಮ” ವಿಶೇಷ ಸಂಚಿಕೆಯನ್ನು ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. “ಎನಗೆ ಗೋವಿಂದ” ಹಾಡಿನ ಮೂಲಕ ಹರಿದಾಸ ಪ್ರಪಂಚಕ್ಕೆ ಸ್ಪೂರ್ತಿಯಾದವರು ರಾಘವೇಂದ್ರರು. ಜಾತಿ, ಮತ, ದೇಶ ಭಾಷೆ ಪಂಥಗಳ ಭೇದಭಾವವಿಲ್ಲದೆ ಎಲ್ಲಾ ಶ್ರದ್ಧಾವಂತರಿಗೂ ಸಂತೃಪ್ತಿ, ಮನಃಶಾಂತಿ ವರ ನೀಡಿ ಅನುಗ್ರಹಿಸುತ್ತಿದ್ದಾರೆ ಮಂತ್ರಾಲಯದ ಮಹಾಮಹಿಮರು. ನಾಸ್ತಿಕ ಯುಗದ ನಿಸತ್ವ ಚೇತನಗಳಲ್ಲಿ ದೈವಭಕ್ತಿ ಆತ್ಮವಿಶ್ವಾಸ ಹಾಗೂ ವಿಚಾರ ಶ್ರದ್ಧೆ ಗಳನ್ನು ಉದ್ದೀಪಿಸಿದ ಗುರುಗಳು ವಿಶ್ವ ವಂದ್ಯರು ಎಂದು ಹೇಳಿದರು.


ಪರಮಪೂಜ್ಯ ಡಾ.ಶ್ರೀಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅನುಗ್ರಹದೊಡನೆ ನಡೆದ ವಿಶೇಷ ಸಂಚಿಕೆ ಬಿಡುಗಡೆ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್ ಕೆ ವಾದೀಂದ್ರ ಆಚಾರ್ಯ, ನಂದ ಕಿಶೋರ್ ಆಚಾರ್, ಗುರು ವಿಜಯ ಪ್ರತಿಷ್ಠಾನದ ಆಚಾರ್ಯ ನಾಗರಾಜು ಹಾವೇರಿ, ಬಿ.ಕೆ.ಪ್ರಸನ್ನ, ಪರಿಮಳ ಪತ್ರಿಕೆಯ ಸಂಪಾದಕ ಜಿ.ಕೆ.ಆಚಾರ್ಯ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80%e0%b2%97%e0%b3%81%e0%b2%b0%e0%b3%81%e0%b2%b0%e0%b2%be%e0%b2%af%e0%b2%b0%e0%b3%81-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%b5%e0%b2%82%e0%b2%a6/feed/ 0
“ಅಧಿಕಮಾಸ ಪ್ರಯುಕ್ತ 108 ದಂಪತಿಗಳಿಂದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಪೂಜೆಶ್ರೀಗುರುರಾಯರ ಸನ್ನಿಧಿಯಲ್ಲಿ” https://newxpressnews.com/%e0%b2%85%e0%b2%a7%e0%b2%bf%e0%b2%95%e0%b2%ae%e0%b2%be%e0%b2%b8-%e0%b2%aa%e0%b3%8d%e0%b2%b0%e0%b2%af%e0%b3%81%e0%b2%95%e0%b3%8d%e0%b2%a4-108-%e0%b2%a6%e0%b2%82%e0%b2%aa%e0%b2%a4%e0%b2%bf%e0%b2%97/ https://newxpressnews.com/%e0%b2%85%e0%b2%a7%e0%b2%bf%e0%b2%95%e0%b2%ae%e0%b2%be%e0%b2%b8-%e0%b2%aa%e0%b3%8d%e0%b2%b0%e0%b2%af%e0%b3%81%e0%b2%95%e0%b3%8d%e0%b2%a4-108-%e0%b2%a6%e0%b2%82%e0%b2%aa%e0%b2%a4%e0%b2%bf%e0%b2%97/#respond Mon, 07 Aug 2023 14:37:03 +0000 https://newxpressnews.com/?p=250 ಬೆಂಗಳೂರು: ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಅಧಿಕ ಮಾಸದ ಪ್ರಯುಕ್ತ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ,ಕಡಪ ವಸುಧೆಂದ್ರ ಆಚಾರ್ಯರ ಪೌರೋಹಿತ್ಯದಲ್ಲಿ “ಶ್ರೀ ಶ್ರೀನಿವಾಸ ಕಲ್ಯಾಣ” ಮಹೋತ್ಸವದ ಕಾರ್ಯಕ್ರಮ ಪೂಜೆಯು ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು,.

ಈ ಪೂಜಾ ಕಾರ್ಯ ಕ್ರಮದಲ್ಲಿ 108 ದಂಪತಿಗಳು ಸಂಕಲ್ಪವನ್ನು ಮಾಡಿ ಪೂಜೆ ಯಲ್ಲಿ ಪಾಲ್ಗೊಂಡು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು,ಈಸಂದರ್ಭದಲ್ಲಿ ಸೇವಾಕರ್ತೃಗಳಿಗೆ ವಿಶೇಷವಾಗಿ ಶ್ರೀಮಠದಿಂದ ಶೇಷ ವಸ್ತ್ರ, ಶ್ರೀ ಪದ್ಮಾವತಿ ಶ್ರೀನಿವಾಸದೇವರ ಭಾವಚಿತ್ರ ಹಾಗೂ ಕಂಕಣದಾರ ಫಲಮಂತ್ರಾಕ್ಷತೆಯನ್ನು ಪ್ರಸಾದ ರೂಪವಾಗಿ ವಿತರಿಸಲಾಯಿತು, ನಂತರ ಅಧಿಕ ಮಾಸದ ಪ್ರಯುಕ್ತ 33 ದಂಪತಿಗಳಿಗೆ ಮಠದಿಂದ ಅಪೂಪ ದಾನವು ನೆರವೇರಿತು, ಈ ವಿಶೇಷವಾದ ಪೂಜಾ ಕಾರ್ಯಕ್ರಮದಲ್ಲಿ ಶ್ರೀಮಠದ ಸಿಬ್ಬಂದಿಗಳು ಹಾಗೂ ಭಕ್ತರು ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ತದ ನಂತರ ಭಕ್ತ ಜನರಿಗೆ”ಅನ್ನ ಸಂತರ್ಪಣೆ” ಕಾರ್ಯಕ್ರಮವು ನೆರವೇರಿತು.

ಇದೇ ಸಂದರ್ಭದಲ್ಲಿ ಈ ದಿನ. ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದ ಮತ್ತು ಅಪ್ಪಣೆಯ ಮೇರೆಗೆ, ಕಾಮಧೇನುಗಳಾದ ಭಾಷ್ಯದ ಅಂತರಂಗಕ್ಕೆ ದಾರಿ ತೋರಿದ- ಶ್ರೀಮನ್ಯಾಯಸುಧಾಕಾರರಾದ, ಟೀಕಾಕಾರರಾದ, ಶ್ರೀಮಜ್ಜಯತೀರ್ಥ ಗುರುವರ್ಯರ ಸ್ತೋತ್ರದ ಅಷ್ಟೋತ್ತರ ಶತ ಪಾರಾಯಣವನ್ನು , ಜಯನಗರದ 5ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ಉಪಸ್ಥಿತಿಯಲ್ಲಿ ಶ್ರೀ ಜಯತೀರ್ಥ ಸ್ತೋತ್ರ ಪಾರಾಯಣ ಸಂಘದಿಂದ ಪಾರಾಯಣವನ್ನು ನೆರವೇರಿಸಿ ಜಯಮುನಿಗಳ ಅನುಗ್ರಹಕ್ಕೆ ಪಾತ್ರರಾದರು, ಸಂಜೆ 6:00 ರಿಂದ ಶ್ರೀ ಹರಿ ಭಜನೆ ಶ್ರೀ ಅಲಕನಂದ ಭಜನಾ ಮಂಡಳಿಯಿಂದ ನೆರವೇರಲಿದೆ.

]]>
https://newxpressnews.com/%e0%b2%85%e0%b2%a7%e0%b2%bf%e0%b2%95%e0%b2%ae%e0%b2%be%e0%b2%b8-%e0%b2%aa%e0%b3%8d%e0%b2%b0%e0%b2%af%e0%b3%81%e0%b2%95%e0%b3%8d%e0%b2%a4-108-%e0%b2%a6%e0%b2%82%e0%b2%aa%e0%b2%a4%e0%b2%bf%e0%b2%97/feed/ 0