Raghavendra Swamy Mutt – New Xpress News https://newxpressnews.com The Latest News Thu, 06 Mar 2025 16:33:31 +0000 en-US hourly 1 https://wordpress.org/?v=6.9.4 https://newxpressnews.com/wp-content/uploads/2022/09/cropped-Siteicon-32x32.png Raghavendra Swamy Mutt – New Xpress News https://newxpressnews.com 32 32 ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 430ನೇ ಜನ್ಮದಿನೋತ್ಸವ “ಲಕ್ಷ ಪುಷ್ಪಾರ್ಚನೆ” https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0%e0%b2%a4%e0%b3%80%e0%b2%b0%e0%b3%8d%e0%b2%a5-%e0%b2%97%e0%b3%81%e0%b2%b0%e0%b3%81/ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0%e0%b2%a4%e0%b3%80%e0%b2%b0%e0%b3%8d%e0%b2%a5-%e0%b2%97%e0%b3%81%e0%b2%b0%e0%b3%81/#respond Thu, 06 Mar 2025 16:33:30 +0000 https://newxpressnews.com/?p=2310 ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವದ (ಜನ್ಮದಿನೋತ್ಸವ) ಅಂಗವಾಗಿ ಶ್ರೀ ಗುರುರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ಮತ್ತು ವಿಶೇಷವಾಗಿ “ಲಕ್ಷ ಪುಷ್ಪಾರ್ಚನೆ”ಯನ್ನು ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ, ಮಠದ ಧರ್ಮಾಧಿಕಾರಿಗಳಾದ ಶ್ರೀ ಕೃಷ್ಣ ಗುಂಡಾಚಾರ್ಯರು ಮತ್ತು ಅರ್ಚಕರಾದ ರಾಮಚಂದ್ರಾಚಾರ್ಯ, ಕೃಷ್ಣಾಚಾರ್ಯ ವೃಂದದಿಂದ “ಪುಷ್ಪಾರ್ಚನೆ” ನೆರವೇರಿತು ಎಂದು ಶ್ರೀಮಠದ ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು.

ತದನಂತರ ಡಾ|| ವೆಂಕಟನರಸಿಂಹಾಚಾರ್ಯರಿಂದ “ಶ್ರೀ ರಾಘವೇಂದ್ರ ವಿಜಯ” ಪ್ರವಚನದ ಮಂಗಳ ಕಾರ್ಯಕ್ರಮದೊಂದಿಗೆ ಸ್ವರ್ಣ ಸಿಂಹಾಸನದಲ್ಲಿ ಶ್ರೀ ಪ್ರಹ್ಲಾದರಾಜರ ಮೂರ್ತಿಯನ್ನು ಇರಿಸಿ ಶ್ರೀಮಠದಿಂದ ಗುರು ಪಾದಪೂಜೆ, ಕನಕಾಭಿಷೇಕ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ನೆರವೇರಿತು. ಸೇವಾ ಕರ್ತೃಗಳಿಗೆ ಮತ್ತು ಭಕ್ತರಿಗೆ ಸಂಕಲ್ಪವನ್ನು ಮಾಡಿಸಿ ಶೇಷವಸ್ತ್ರ ಶ್ರೀ ಗುರು ರಾಯರ ಪಾದುಕೆ, ಫಲ ಮಂತ್ರಾಕ್ಷತೆ ಪ್ರಸಾದ ರೂಪವಾಗಿ ಕೊಡಲಾಯಿತು. ಇದೇ ಸಂದರ್ಭದಲ್ಲಿ ರಾಯರ ಸನ್ನಿಧಿಗೆ ಆಗಮಿಸಿದ ಸುಮಾರು 20,000ಕ್ಕೂ ಮಿಗಿಲಾಗಿ ಭಕ್ತರಿಗೆ ವಿಶೇಷವಾಗಿ ಅನ್ನಸಂತರ್ಪಣೆಯ ಪ್ರಸಾದ ಕಾರ್ಯಕ್ರಮವು ಸ್ವಯಂಸೇವಕರ ಮತ್ತು ಸಿಬ್ಬಂದಿಗಳ ಸಹಕಾರದಿಂದ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನೆರವೇರಿತು. ಸೇವಾ ಕರ್ತೃಗಳು, ಭಕ್ತರು, ಗಣ್ಯರು, ತೀರ್ಥ ಪ್ರಸಾದ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0%e0%b2%a4%e0%b3%80%e0%b2%b0%e0%b3%8d%e0%b2%a5-%e0%b2%97%e0%b3%81%e0%b2%b0%e0%b3%81/feed/ 0
ಮಂತ್ರಾಲಯ ಪರಮ ಪೂಜ್ಯ ಶ್ರೀ108 ಶ್ರೀಸುಬುಧೇಂದ್ರತೀರ್ಥ ಶ್ರೀಗಳಿಂದ ಸಹಸ್ರಾರು ಶಿಷ್ಯ ಭಕ್ತರಿಗೆ ತಪ್ತ ಮುದ್ರಾಧಾರಣೆ” https://newxpressnews.com/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%aa%e0%b2%b0%e0%b2%ae-%e0%b2%aa%e0%b3%82%e0%b2%9c%e0%b3%8d%e0%b2%af-%e0%b2%b6%e0%b3%8d%e0%b2%b0%e0%b3%80108-%e0%b2%b6/ https://newxpressnews.com/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%aa%e0%b2%b0%e0%b2%ae-%e0%b2%aa%e0%b3%82%e0%b2%9c%e0%b3%8d%e0%b2%af-%e0%b2%b6%e0%b3%8d%e0%b2%b0%e0%b3%80108-%e0%b2%b6/#respond Thu, 18 Jul 2024 05:28:09 +0000 https://newxpressnews.com/?p=1731 ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಷಾಢ ಶುದ್ಧ ಪ್ರಥಮ “ಏಕಾದಶಿ” ಪ್ರಯುಕ್ತ ಜಗದ್ಗುರು ಶ್ರೀಮನ್ ಮದ್ವಾಚಾರ್ಯಮೂಲ ಮಹಾಸಂಸ್ಥಾನದೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ 1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಶ್ರೀಮನ್ ಮೂಲರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ, ತದನಂತರ ಶ್ರೀ ಸುದರ್ಶನ ಹೋಮದೊಂದಿಗೆ ವಿಶೇಷವಾಗಿ ಶಯನಿ ಪ್ರಥಮ “ಏಕಾದಶಿ” ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮುಂಭಾಗದ ಬಂಗಾರದ ತೊಟ್ಟಿಲನಲ್ಲಿ ಶ್ರೀಮನ್ ಮೂಲ ರಾಮ ಚಂದ್ರ ದೇವರಿಗೆ ತೊಟ್ಟಿಲ ಸೇವೆಯನ್ನು ನೆರವೇರಿಸಿ ಮಹಾಮಂಗಳಾರತಿ ಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿ ತಾವು “ತಪ್ತ ಮುದ್ರಾ ಧಾರಣ”ವನ್ನು ಸ್ವೀಕರಿಸಿ,ತದನಂತರ ಶ್ರೀಮಠದ ಸಹಸ್ರಾರು ಶಿಷ್ಯರಿಗೆ ಮತ್ತು ಭಕ್ತರಿಗೆ ನಿರಂತರವಾಗಿ ತಪ್ತಮುದ್ರಾಧಾರಣವನ್ನು ನೆರೆವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರಿಂದ ಭಾಗವತ ಪ್ರವಚನ ಮಾಲಿಕೆಯ ಉಪನ್ಯಾಸವೂ ನೆರವೇರಿತು.

ಈ ತಪ್ತ ಮುದ್ರಾ ಧಾರಣೆ ಸ್ವೀಕರಿಸಲು ಸಹಸ್ರಾರು ಶಿಷ್ಯ ಭಕ್ತರಿಗೆ ಅಚ್ಚುಕಟ್ಟಾದ ಸರದಿ ಸಾಲಿನಲ್ಲಿ ಬರುವ ಹಾಗೆ ವಯೋವೃದ್ಧರಿಗೆ ಮತ್ತು ವಿಕಲಚೇತನರಿಗೆ ಪ್ರತ್ಯೇಕದ ವ್ಯವಸ್ಥೆಯನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗಿತ್ತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಶ್ರೀ ಮಠದ ಪ್ರಕಾರ ಪೂಜಾ ಮಂದಿರ ರಾಯರ ಹೊರಬಾಗಿಲಿನಿಂದ ಶಾಲಿನಿ ಆಟದ ಮೈದಾನದವರೆಗೆ ತಪ್ತ ಮುದ್ರಾಧಾರಣಗಾಗಿ ಸಹಸ್ರಾರು ಶಿಷ್ಯ- ಭಕ್ತ ಸಮೂಹವು ಎದ್ದು ಕಾಣುತ್ತಿತ್ತು ಬೆಳಗ್ಗೆ ಯಿಂದಲೇ ನಿರಂತರವಾಗಿ ರಾತ್ರಿ 10 ಗಂಟೆಯವರೆಗೆ ತಪ್ತ ಮುದ್ರಾ ಧಾರಣಾ ಕಾರ್ಯಕ್ರಮವೂ ಮುಂದುವರೆಯಿತು, ಶ್ರೀ ಮಠದ ಶಿಷ್ಯರು ಮತ್ತು ಭಕ್ತರು ಭಗವಂತನ ಚಿಹ್ನೆಗಳಾದ ಚಕ್ರ ಶಂಖವನ್ನು ಧರಿಸಿ ಕೊಂಡು ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು.

]]>
https://newxpressnews.com/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%aa%e0%b2%b0%e0%b2%ae-%e0%b2%aa%e0%b3%82%e0%b2%9c%e0%b3%8d%e0%b2%af-%e0%b2%b6%e0%b3%8d%e0%b2%b0%e0%b3%80108-%e0%b2%b6/feed/ 0
“ಶ್ರೀ 1008 ಶ್ರೀ ವಿಜಯೀoದ್ರ ತೀರ್ಥ ಶ್ರೀ ಪಾದರ “ಆರಾಧನಾ” ಮಹೋತ್ಸವ ಶ್ರೀ ಗುರು ರಾಯರ ಸನ್ನಿಧಿಯಲ್ಲಿ” https://newxpressnews.com/%e0%b2%b6%e0%b3%8d%e0%b2%b0%e0%b3%80-1008-%e0%b2%b6%e0%b3%8d%e0%b2%b0%e0%b3%80-%e0%b2%b5%e0%b2%bf%e0%b2%9c%e0%b2%af%e0%b3%80o%e0%b2%a6%e0%b3%8d%e0%b2%b0-%e0%b2%a4%e0%b3%80%e0%b2%b0%e0%b3%8d%e0%b2%a5/ https://newxpressnews.com/%e0%b2%b6%e0%b3%8d%e0%b2%b0%e0%b3%80-1008-%e0%b2%b6%e0%b3%8d%e0%b2%b0%e0%b3%80-%e0%b2%b5%e0%b2%bf%e0%b2%9c%e0%b2%af%e0%b3%80o%e0%b2%a6%e0%b3%8d%e0%b2%b0-%e0%b2%a4%e0%b3%80%e0%b2%b0%e0%b3%8d%e0%b2%a5/#respond Thu, 04 Jul 2024 05:10:20 +0000 https://newxpressnews.com/?p=1702 ಬೆಂಗಳೂರು, ಜೂಲೈ 4: ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾಧೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ1008 ಶ್ರೀ ವಿಜಯೀoದ್ರತೀರ್ಥ ಶ್ರೀಪಾದರ “ಆರಾಧನಾ”ಮಹೋತ್ಸವವು ವಿಶೇಷ ಪಲ್ಲಕ್ಕಿ ಉತ್ಸವ, ಗಜವಾಹನೋತ್ಸವ, ರಥೋತ್ಸವದೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ಭಕ್ತಾದಿಗಳು ಪೂಜಾ ಸೇವೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80-1008-%e0%b2%b6%e0%b3%8d%e0%b2%b0%e0%b3%80-%e0%b2%b5%e0%b2%bf%e0%b2%9c%e0%b2%af%e0%b3%80o%e0%b2%a6%e0%b3%8d%e0%b2%b0-%e0%b2%a4%e0%b3%80%e0%b2%b0%e0%b3%8d%e0%b2%a5/feed/ 0
” ಶ್ರೀ ಸುಬುಧೇಂದ್ರ ಶ್ರೀಗಳಿಂದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯ ಶಾಖೆಯ ಉದ್ಘಾಟನೆ” https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b8%e0%b3%81%e0%b2%ac%e0%b3%81%e0%b2%a7%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b6%e0%b3%8d%e0%b2%b0%e0%b3%80%e0%b2%97%e0%b2%b3%e0%b2%bf/ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b8%e0%b3%81%e0%b2%ac%e0%b3%81%e0%b2%a7%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b6%e0%b3%8d%e0%b2%b0%e0%b3%80%e0%b2%97%e0%b2%b3%e0%b2%bf/#respond Sat, 29 Jun 2024 14:26:24 +0000 https://newxpressnews.com/?p=1679 ಬೆಂಗಳೂರು, ಜೂನ್ 29: ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯದ ಶಾಖೆಯನ್ನು ಪರಮ ಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ “ಉದ್ಘಾಟಿಸಿ” ಶ್ರೀ ಮಠದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5.30 ರಿಂದ 6.30 ವರೆಗೆ ತ್ರಿಮತಸ್ಥ ವಿಪ್ರರಿಗೆ ಉಚಿತವಾಗಿ ಹೇಳಿಕೊಡಲು ಆದೇಶಿಸಿ ಅನುಗ್ರಹಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ಹಾಗೂ ಕಡಪ ಹನುಮೇಶ ಆಚಾರ್ ಮತ್ತು ಶ್ರೀ ನಂದಕಿಶೋರ ಆಚಾರ್ ಇದ್ದರು.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b8%e0%b3%81%e0%b2%ac%e0%b3%81%e0%b2%a7%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b6%e0%b3%8d%e0%b2%b0%e0%b3%80%e0%b2%97%e0%b2%b3%e0%b2%bf/feed/ 0
ಅಕ್ಷಯ ತೃತೀಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸಂಪೂರ್ಣ 12 ಕೆ.ಜಿ. ಶ್ರೀಗಂಧ ಲೇಪನ ಅಲಂಕಾರ https://newxpressnews.com/%e0%b2%85%e0%b2%95%e0%b3%8d%e0%b2%b7%e0%b2%af-%e0%b2%a4%e0%b3%83%e0%b2%a4%e0%b3%80%e0%b2%af-%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6/ https://newxpressnews.com/%e0%b2%85%e0%b2%95%e0%b3%8d%e0%b2%b7%e0%b2%af-%e0%b2%a4%e0%b3%83%e0%b2%a4%e0%b3%80%e0%b2%af-%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6/#respond Fri, 10 May 2024 14:06:29 +0000 https://newxpressnews.com/?p=1484 ಬೆಂಗಳೂರು: ಜಯನಗರದ 5ನೇ ಬಡಾವಣೆ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರ ಆಚಾರ್ಯರ ಮತ್ತು ಶ್ರೀ ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ರಾಯರ ಬೃಂದಾವನಕ್ಕೆ ಐದು ತರಹದ ಹಣ್ಣುಗಳಿಂದ ಹಾಗೂ ಗೋಡಂಬಿ ದ್ರಾಕ್ಷಿ ಮುಂತಾದ ಫಲಗಳಿಂದ ಫಲಪಂಚಾಮೃತ ಅಭಿಷೇಕವೂ ನೆರವೇರಿತು. ನಂತರ ಬಹಳ ಅಪರೂಪವಾದ ಅಲಂಕಾರ ವರ್ಷಕ್ಕೊಮ್ಮೆ ಆಚರಿಸುವಂತಹ “ಶ್ರೀ ಗಂಧ ಲೇಪನ”ದ ಅಲಂಕಾರವನ್ನು ರಾಯರ ಬೃಂದಾವನಕ್ಕೆ ಸಂಪೂರ್ಣವಾಗಿ 12 ಕೆ ಜಿ ಯಷ್ಟು ಶ್ರೀಗಂಧದಿಂದಲೇ 15 ದಿನಗಳ ಕಾಲ ಶ್ರೀಗಂಧದ ಚಂದನವನ್ನು ತೆಗೆದು ಅದರಿಂದ ಅಲಂಕಾರವನ್ನು ಅರ್ಚಕರು ನೆರವೇರಿಸಿದರು.

ಶ್ರೀಗಂಧದಿಂದ ಕಂಗೊಳಿಸುವ ಶ್ರೀ ಗುರುರಾಯರ ಬೃಂದಾವನವನ್ನು ದರ್ಶಿಸಲು ಸಾವಿರಾರು ಭಕ್ತರು ಸನ್ನಿಧಾನಕ್ಕೆ ಆಗಮಿಸಿ, ಶ್ರೀಗಂಧ ಲೇಪನದ ಸೇವೆಯಲ್ಲಿ ಭಾಗವಹಿಸಿ, ಸಂಕಲ್ಪಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠದ 41ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ವಾನ್ ಸುರೇಶ ಆಚಾರ್ ಇವರಿಂದ ಪ್ರವಚನದ ಕಾರ್ಯಕ್ರಮ ಸಹಿತ ವಿಶೇಷ ಉತ್ಸವದೊಂದಿಗೆ ಸಕಲ ಭಕ್ತರಿಗೂ ಪ್ರಸಾದವು ವಿತರಣೆಯಾಯಿತು. ಶ್ರೀ ಗಂಧದ ಸೇವೆ ಸಲ್ಲಿಸಿದ ಸೇವಾ ಕರ್ತೃಗಳಿಗೆ ಶನಿವಾರದಿಂದ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಅಲಂಕರಿಸಿದ ಶ್ರೀ ಗಂಧದ ಪ್ರಸಾದವನ್ನು ಸೇವಾರ್ಥದಾರಿಗೆ ಕೊಡಲಾಗುವುದು

]]>
https://newxpressnews.com/%e0%b2%85%e0%b2%95%e0%b3%8d%e0%b2%b7%e0%b2%af-%e0%b2%a4%e0%b3%83%e0%b2%a4%e0%b3%80%e0%b2%af-%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6/feed/ 0
ಲೋಕಕಲ್ಯಾಣಕ್ಕಾಗಿ ಭಕ್ತರಿಗಾಗಿ ಪ್ರಾರ್ಥಿಸಿ ಅನುಗ್ರಹಿಸಿದ ಮಂತ್ರಾಲಯದ ಶ್ರೀಗಳು “ https://newxpressnews.com/%e0%b2%b2%e0%b3%8b%e0%b2%95%e0%b2%95%e0%b2%b2%e0%b3%8d%e0%b2%af%e0%b2%be%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%ad%e0%b2%95%e0%b3%8d%e0%b2%a4%e0%b2%b0%e0%b2%bf%e0%b2%97/ https://newxpressnews.com/%e0%b2%b2%e0%b3%8b%e0%b2%95%e0%b2%95%e0%b2%b2%e0%b3%8d%e0%b2%af%e0%b2%be%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%ad%e0%b2%95%e0%b3%8d%e0%b2%a4%e0%b2%b0%e0%b2%bf%e0%b2%97/#respond Fri, 02 Feb 2024 07:34:24 +0000 https://newxpressnews.com/?p=1199 ಬೆಂಗಳೂರು ಫೆಬ್ರವರಿ 2: ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಬೆಳಗ್ಗೆ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಸಂಜೆ “ಲೋಕ-ಕಲ್ಯಾಣಕ್ಕಾಗಿ” ಗುರುವಾರದ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಿ ತಮ್ಮ ಅಮೃತ ಹಸ್ತದಿಂದ ಸಾವಿರಾರು ಭಕ್ತ ಜನರಿಗೆ “ಫಲಮಂತ್ರಾಕ್ಷತೆ” ಯನ್ನು ಕೊಟ್ಟು ಭಕ್ತಾದಿಗಳಿಗೆ ಅನುಗ್ರಹಿಸಿ ಆಶೀರ್ವದಿಸಿದರು, ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದಂಪತಿ ಮತ್ತು ಡಾಕ್ಟರ್ ನಟರಾಜ ಶೆಟ್ಟಿ ದಂಪತಿ ಇವರು ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು

]]>
https://newxpressnews.com/%e0%b2%b2%e0%b3%8b%e0%b2%95%e0%b2%95%e0%b2%b2%e0%b3%8d%e0%b2%af%e0%b2%be%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%ad%e0%b2%95%e0%b3%8d%e0%b2%a4%e0%b2%b0%e0%b2%bf%e0%b2%97/feed/ 0