Nov. 3rd to 5th – New Xpress News https://newxpressnews.com The Latest News Mon, 30 Oct 2023 10:56:41 +0000 en-US hourly 1 https://wordpress.org/?v=6.7.2 https://newxpressnews.com/wp-content/uploads/2022/09/cropped-Siteicon-32x32.png Nov. 3rd to 5th – New Xpress News https://newxpressnews.com 32 32 ಬೆಂಗಳೂರಿನ ಅರಮನೆ ಮೈದಾನದಲ್ಲಿ ನ ೩ ರಿಂದ ೫ ರವರೆಗೆ ಆಭರಣಗಳ ವೈಶಿಷ್ಟ್ಯ “ದಿ ಜ್ಯುವೆಲ್ಲರಿ ಶೋ” ಪ್ರಾರಂಭ: ರಾಜ್ಯೋತ್ಸವ, ದೀಪಾವಳಿ ವಿಶೇಷ https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%85%e0%b2%b0%e0%b2%ae%e0%b2%a8%e0%b3%86-%e0%b2%ae%e0%b3%88%e0%b2%a6%e0%b2%be%e0%b2%a8%e0%b2%a6%e0%b2%b2%e0%b3%8d/ https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%85%e0%b2%b0%e0%b2%ae%e0%b2%a8%e0%b3%86-%e0%b2%ae%e0%b3%88%e0%b2%a6%e0%b2%be%e0%b2%a8%e0%b2%a6%e0%b2%b2%e0%b3%8d/#respond Mon, 30 Oct 2023 10:56:40 +0000 https://newxpressnews.com/?p=710 ಬೆಂಗಳೂರು, ಅಕ್ಟೋಬರ್ 30: ದೇಶದ ಆಭರಣ ವಲಯದ ವೈಶಿಷ್ಟ್ಯಗಳನ್ನೊಳಗೊಂಡ “ದಿ ಜುವೆಲ್ಲರಿ ಶೋ” ಆಭರಣ ಪ್ರದರ್ಶನ ನವೆಂಬರ್‌ ೩ ರಿಂದ ೫ ರ ವರೆಗೆ ಬೆಂಗಳೂರು ಅರಮನೆ [ವಸಂತನಗರ] ಮೈದಾನದ ಆವರಣದಲ್ಲಿ ನಡೆಯಲಿದೆ.

ನವೆಂಬರ್‌ ನ ಕನ್ನಡ ರಾಜ್ಯೋತ್ಸವ, ದೀಪಾವಳಿ, ವಿವಾಹ ಮತ್ತಿತರೆ ಹಬ್ಬಗಳಿಗಾಗಿ ವಿಶೇಷ ಪ್ರದರ್ಶನ ಇದಾಗಿದ್ದು, ದೇಶದ ೯೦ ಅಧಿಕ ಪ್ರಮುಖ ಆಭರಣ ತಯಾರಕರ ವಿನ್ಯಾಸ, ವಿಶೇಷತೆಗಳನ್ನು ಈ ಮೇಳ ಒಳಗೊಂಡಿದೆ.

ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಯಾರಿಸಿದ, ಅತ್ಯಾಧುನಿಕ ಕಸೂತಿಯನ್ನೊಳಗೊಂಡ ಪ್ರದರ್ಶನ ಇದಾಗಿದ್ದು, ಬೆಂಗಳೂರು ಸುತ್ತಮುತ್ತಲಿನ ಜನರಿಗೆ ಆಭರಣ ವೈಭವವನ್ನು ಕಣ್ತುಂಬಿಕೊಳ್ಳುವ, ಮನೆಗೆ ಕೊಂಡೊಯ್ಯುವ ಸದಾವಕಾಶ ಇದಾಗಿದೆ.

ಚಿತ್ರನಟಿ ನಿಶ್ಚಿಕಾ ಆಭರಣ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ ೧೦ ರಿಂದ ರಾತ್ರಿ ೯ ಗಂಟೆಗೆವರೆಗೆ ಪ್ರದರ್ಶನ ಇರಲಿದ್ದು, ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ದೊರೆಯಲಿವೆ. ಎಲ್ಲಾ ವರ್ಗದ ಜನರಿಗೆ ಕೈಗೆಟುವ ಆಭರಣಗಳ ಬಂಢಾರ ಇಲ್ಲಿದ್ದು, ಮೂರು ದಿನಗಳ ಮೇಳ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನಟಿ ನಿಶ್ಚಿಕಾ ಮಾತನಾಡಿ, “ಕನ್ನಡಿಗರ ಮನೆ ಗೆಲ್ಲಲು ನವೆಂಬರ್‌ ಮೊದಲ ವಾರದಲ್ಲಿ ನಡೆಯಲಿರುವ ವೈಶಿಷ್ಟ್ಯ ಪೂರ್ಣ ಆಭರಣ ಪ್ರದರ್ಶನ ಮಹಿಳೆಯರಿಗೆ ಅಚ್ಚುಮೆಚ್ಚಿನದ್ದಾಗಿದೆ. ಆಭರಣ ಮಹಿಳೆಯರ ಮನಮೋಹಕ ವಸ್ತುವಾಗಿದ್ದು, ಇದಕ್ಕೆ ಬೆಲೆ ಕಟ್ಟಲಾಗದು. ಪ್ರತಿಯೊಂದು ಆಭರಣವೂ ಗುಣಮಟ್ಟದಿಂದ ಕೂಡಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಅದು ಕುಟುಂಬದ ಬೆಳವಣಿಗೆಗೆ ಪೂರಕವಾಗಲಿದೆ. ಆಭರಣ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರತಿಯೊಬ್ಬರೂ ಸಂಭ್ರಮಿಸಬೇಕು” ಎಂದರು.

ಪ್ರಮುಖ ಆಭರಣ ಸಂಸ್ಥೆಗಳು: ಅಭೂಷಣ್‌, ಅರ್ಜುನ್‌ ವಾರಾ, ಗಜರಾಜ್‌, ಖೀಯಾ, ಎಂ.ಪಿ. ಸ್ವರ್ಣಮಹಲ್‌, ನವ್‌ ರತನ್‌, ನೀಲ್‌ ಕಂಠ್‌, ನಿಖಾರ್‌, ನಿರ್ಮಲ್‌ ಜುವೆಲ್ಲರ್ಸ್‌, ಪಿಕೆಬಿ, ಪಿಎಂಜಿ, ಪ್ರಕಾಶ್‌ ಜುವೆಲ್ಲರ್ಸ್‌, ಶ್ರೀವಾರಿ, ಶ್ರೀ ಗಣೇಶ್‌ ಡೈಮಂಡ್ಸ್‌, ವಾರಶ್ರೀ, ಅಮ್ರಪಾಲಿ, ಅನನ್ಯಾ, ಜುವೆಲ್ಸ್‌ ಸನ್‌ ರೈಸ್‌ ಆಭರಣ್‌, ಆನಂದ್‌ ಜುವೆಲ್ಸ್‌, ಇವೋಲ್‌ ಜುವೆಲ್ಸ್‌, ಡೈಮ್ಸ್‌, 

ಡಿಆರ್‌ ಎನ್‌ ಜುವೆಲ್ಸ್‌, ಕಲಶ, ಜ್ಯುವೆಲ್ಸ್‌ ಪೊಲಿಯೋ, ಕರಿಶ್ಮಾ ಬೈ ರಶ್ಮಿ ಇಡಿಸಿ, ಮಹೇಂದ್ರ ಡೈಮಂಡ್ಸ್‌, ಎನ್.ಎಸ್.‌ ಜ್ಯುವೆಲ್ಸ್‌, ಪ್ರವೀಣ್‌ ಜ್ಯುವೆಲ್ಸ್‌, ಸಂಕೇಶ್‌ ಸುರನಾ, ಸೆಂಕೋ ಗೋಲ್ಡ್‌, ತತ್ವಮ್‌, ತ್ಯಾನಿ, ವಿಟ್ರಾಗ್‌ ಜ್ಯುವೆಲರ್ಸ್‌, ವಿವಾಂತ್‌, ವಂಡರ್‌ ಡೈಮಂಡ್ಸ್‌, ಮೈ ಸಿಲ್ವರ್‌, ರೂಪಂ ಸಿಲ್ವರ್‌, ಶಿವಾನಿ, ಡಿವೈನ್‌ ಜೆಮ್ಸ್‌, ಮದನ್‌ ಜೆಮ್ಸ್‌, ಸ್ಟೈಲ್‌ ಔರಾ, ಥಾರ್‌ ಆರ್ಟ್ಸ್‌ ಪಾಲ್ಗೊಳ್ಳುತ್ತಿವೆ.

ಹೊರ ರಾಜ್ಯದಿಂದ ಕೊಲ್ಕತ್ತಾದ ಅರ್‌ ಹಾಂ, ಬ್ಯೂಟಿಕ್‌ ಜೆಮ್ಸ್‌, ಜೈಪುರ್‌ ಎಂಪೋರಿಯಂ, ಕೆ.ಜಿ.ಎನ್.‌ ಸಿಲ್ವರ್‌ ಹೌಸ್‌, ಮಂಗಲ್‌ ಜೆಮ್ಸ್‌, ನಾಗೋರಿಸ್‌, ಸುನಿಲ್‌ ಜ್ಯುವೆಲ್ಸ್‌, ಎಂಬಿ ಬೀಡ್ಸ್‌ ರಾಯಲ್‌ ಜ್ಯುವೆಲ್ಸ್‌ ಬನೆತಿ ಎಕ್ಸ್‌ ಪೋರ್ಟ್ಸ್‌ [ಜೈಪುರ], ಶ್ರೀಹರಿ ಡಯಾಜೆಮ್‌ ಶಿಯಾನ್‌ ಕಂಪೆನಿಗಳು ಭಾಗವಹಿಸುತ್ತಿವೆ.

]]>
https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%85%e0%b2%b0%e0%b2%ae%e0%b2%a8%e0%b3%86-%e0%b2%ae%e0%b3%88%e0%b2%a6%e0%b2%be%e0%b2%a8%e0%b2%a6%e0%b2%b2%e0%b3%8d/feed/ 0