Marenahalli Dasara Festival – New Xpress News https://newxpressnews.com The Latest News Tue, 20 Oct 2026 11:43:30 +0000 en-US hourly 1 https://wordpress.org/?v=7.1.3 https://newxpressnews.com/wp-content/uploads/2022/09/cropped-Siteicon-32x32.png Marenahalli Dasara Festival – New Xpress News https://newxpressnews.com 32 32 ಮಾರೇನಹಳ್ಳಿ ದಸರಾ ಉತ್ಸವ: ಶ್ರೀ ಸಲ್ಲಾಪುರದಮ್ಮ ಮತ್ತು ರೇಣುಕಾ ಯಲ್ಲಮ್ಮ ದೇವಿಯರಿಗೆ ಬೆಂಗಳೂರು ಕರಗದ ವಿಶೇಷ ಅಲಂಕಾರ https://newxpressnews.com/%e0%b2%ae%e0%b2%be%e0%b2%b0%e0%b3%87%e0%b2%a8%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%a6%e0%b2%b8%e0%b2%b0%e0%b2%be-%e0%b2%89%e0%b2%a4%e0%b3%8d%e0%b2%b8%e0%b2%b5-%e0%b2%b6%e0%b3%8d/ https://newxpressnews.com/%e0%b2%ae%e0%b2%be%e0%b2%b0%e0%b3%87%e0%b2%a8%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%a6%e0%b2%b8%e0%b2%b0%e0%b2%be-%e0%b2%89%e0%b2%a4%e0%b3%8d%e0%b2%b8%e0%b2%b5-%e0%b2%b6%e0%b3%8d/#respond Tue, 20 Oct 2026 11:43:17 +0000 https://newxpressnews.com/?p=3402 ಬೆಂಗಳೂರು, ಅ. 20: ಮಾರೇನಹಳ್ಳಿಯಲ್ಲಿ ದಸರಾ ಉತ್ಸವದ ಅಂಗವಾಗಿ ಸೋಮವಾರ ಶ್ರೀ ದುರ್ಗಾಷ್ಟಮಿಯ ಪವಿತ್ರ ದಿನದಂದು ಶ್ರೀ ಸಲ್ಲಾಪುರದಮ್ಮ ಮತ್ತು ಯಲ್ಲಮ್ಮ ದೇವಿಯರಿಗೆ ಬೆಂಗಳೂರು ಕರಗದ ವಿಶೇಷ ಅಲಂಕಾರವನ್ನು ನೆರವೇರಿಸಲಾಯಿತು.

ಆನಂದ್ ಬಿ ಮಂಜುನಾಥ್ ಎಂ.ಮತ್ತು ಮಹದೇವ್ ಬಿ ಅವರ ನೇತೃತ್ವದಲ್ಲಿ ಕ್ಷತ್ರಿಯ ಸಮುದಾಯದ ಕುಟುಂಬದವರಿಗಾಗಿ ಈ ವಿಶೇಷ ಅಲಂಕಾರವನ್ನು ಮಾಡಲಾಗಿದ್ದು, ಧಾರ್ಮಿಕ ಸಂಭ್ರಮದೊಂದಿಗೆ ಉತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಜಯನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿ. ಕೆ. ರಾಮಮೂರ್ತಿ, ರಾಜ್ಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಜೆ. ಪಿ. ನಗರ ಮಾಜಿ ಬಿಬಿಎಂಪಿ ಸದಸ್ಯರಾದ ಎನ್. ಚಂದ್ರಶೇಖರ ರಾಜು, ಬಾಲಕೃಷ್ಣ ಹಾಗೂ ಮಾರೇನಹಳ್ಳಿ ದಕ್ಷಿಣ ವಾರ್ಡ್ 13ರ ಅಧ್ಯಕ್ಷರಾದ ಆನಂದ್ ಬಿ. ಅವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಂಗೀತ ಲಹರಿ ಕಾರ್ಯಕ್ರಮದ ಜೊತೆಗೆ ತೀರ್ಥಹಳ್ಳಿ ರಮೇಶ್ ಮತ್ತು ಕುಮಾರಿ ಶ್ರೇಯಾ ತೀರ್ಥಹಳ್ಳಿ ರಮೇಶ್ ಅವರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಭಕ್ತರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ದೇವಿಯರ ಆಶೀರ್ವಾದ ಪಡೆದರು.

ಇಂದಿನ ವಿಶೇಷ ಪೂಜೆಯಲ್ಲಿ ತಿಗಳ ಕ್ಷತ್ರಿಯ ಸಮುದಾಯದ ಕುಟುಂಬಸ್ಥರು, ಮಂಜುನಾಥ್ ಕಾಲೋನಿಯ ಸೇವಾಕರ್ತರು ಹಾಗೂ ಶ್ರೀ ಮಾರೇನಹಳ್ಳಿ ಸಲ್ಲಾಪುರದಮ್ಮ ದೇವಿ ಮತ್ತು ಸೀತಾರಾಮಾಂಜನೇಯ ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿ ಉತ್ಸವದ ಯಶಸ್ಸಿಗೆ ಸಹಕರಿಸಿದರು.

ಮಾರೇನಹಳ್ಳಿಯ ಧಾರ್ಮಿಕ ಪರಂಪರೆ, ಭಕ್ತಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿದ ದಸರಾ ಉತ್ಸವವು ಭಕ್ತಿಭಾವದಿಂದ ನೆರವೇರಿತು.

]]>
https://newxpressnews.com/%e0%b2%ae%e0%b2%be%e0%b2%b0%e0%b3%87%e0%b2%a8%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%a6%e0%b2%b8%e0%b2%b0%e0%b2%be-%e0%b2%89%e0%b2%a4%e0%b3%8d%e0%b2%b8%e0%b2%b5-%e0%b2%b6%e0%b3%8d/feed/ 0