Cinema – New Xpress News https://newxpressnews.com The Latest News Thu, 06 Feb 2025 14:55:09 +0000 en-US hourly 1 https://wordpress.org/?v=6.7.1 https://newxpressnews.com/wp-content/uploads/2022/09/cropped-Siteicon-32x32.png Cinema – New Xpress News https://newxpressnews.com 32 32 ಸೈಕೋ ಜಯಂತ್ ರಾಣಿ ಅವತಾರ https://newxpressnews.com/%e0%b2%b8%e0%b3%88%e0%b2%95%e0%b3%8b-%e0%b2%9c%e0%b2%af%e0%b2%82%e0%b2%a4%e0%b3%8d-%e0%b2%b0%e0%b2%be%e0%b2%a3%e0%b2%bf-%e0%b2%85%e0%b2%b5%e0%b2%a4%e0%b2%be%e0%b2%b0/ https://newxpressnews.com/%e0%b2%b8%e0%b3%88%e0%b2%95%e0%b3%8b-%e0%b2%9c%e0%b2%af%e0%b2%82%e0%b2%a4%e0%b3%8d-%e0%b2%b0%e0%b2%be%e0%b2%a3%e0%b2%bf-%e0%b2%85%e0%b2%b5%e0%b2%a4%e0%b2%be%e0%b2%b0/#respond Thu, 06 Feb 2025 14:55:07 +0000 https://newxpressnews.com/?p=2261 ಬೆಂಗಳೂರು: ನಮ್ಮ ಲಕ್ಷ್ಮೀ ನಿವಾಸ ಸೈಕೋ ಜಯಂತ್ ಯಾರಿಗೆ ಗೊತ್ತಿಲ್ಲ ಹೇಳಿ…ಅವನದು ಇನ್ನೊಂದು ಕತೆ ಹೇಳ್ತೀನಿ ಕೇಳಿ..ಹೀರೋ ಆಗೋಕೆ ಸಿನಿಮಾ ಇಂಡಸ್ಟ್ರಿಗೆ ಬರ್ತಾನೆ..ಆದರೆ ಆ ದೇವರು ಇವನ ಹಣೆ‌ಬರಹನ ಢಿಪರೆಂಟ್ ಆಗಿ ಬರೆದಿರ್ತಾನೆ..ಹೀರೋ ಆಗೋಕೆ ಅಂತ ಬಂದವನು ಹೀರೋಯಿನ್ ಆಗಿ ಕ್ಲಿಕ್ ಆಗಿಬಿಡ್ತಾನೆ.

ಈ ಕತೆನೇ ಒಂತರಾ ಸೈಕ್ ಆಗಿದೆ ಅಲ್ವಾ ? ನಮ್‌ ಸೈಕೋ ಜಯಂತ್ ಅಲಿಯಾಸ್ ದೀಪಕ್ ಸುಬ್ರಹ್ಮಣ್ಯ ಇದರಲ್ಲಿ ಇನ್ನೂ ಯಾವ ಲೆವಲ್ಗೆ ಆಕ್ಟಿಂಗ್ ಮಾಡಿರಬಹುದು ಅಂತ ತಲೆ ಕೆಡಿಸ್ಕೋತಾ ಇದೀರಾ…ಇವನು ಹುಡುಗಿ ಅಂತಾ ಡ್ರಾಮ ಮಾಡಿ ಎಲ್ಲರನ್ನೂ ಹೆಂಗೆ ಯಾಮಾರಿಸಿದ ? ನಂಬರ್ ಓನ್ ಹೀರೋಯಿನ್ ಹೆಂಗೆ ಆಗಿಬಿಟ್ಟ ? ಇವನು ಹುಡುಗಿ ಅಂದ್ಕೊಂಡು ಲವ್ ಮಾಡಿ ಎಷ್ಟು ಜನ‌ ಮೆಂಟಲ್ ಆದ್ರು.. ? ನಂಗಂತೂ ತುಂಬಾ ಕ್ಯೂರಿಯಾಸಿಟಿ ಆಗ್ತಾ ಇದೆ..ಫೆಬ್ರವರಿ 7 ಕ್ಕೆ ಮಿಸ್ಟರ್ ರಾಣಿ ಅಂತ ಸಿನಿಮಾ ರಿಲೀಸ್ ಆಗ್ತಾ ಇದೆಯಂತೆ…ಅದನ್ನ‌ ನೋಡಿದ್ರೆ ಇದಕ್ಕೆಲ್ಲ ಉತ್ತರ ಸಿಗುತ್ತೆ.

ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾ ಮಾಡಿದಂತ ಡೈರೆಕ್ಟರ್ ಮಧುಚಂದ್ರ ಈ ಸಿನಿಮಾದ ನಿರ್ದೇಶಕ..ಈ ಸಿನಿಮಾ ಒಳಗೆ ಏನೋ ಹೊಸ ಹುಳನಾ ಗ್ಯಾರಂಟಿ ಬಿಟ್ಟಿರುತ್ತಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಮಂಜ ಈ ಸಿನಿಮಾದಲ್ಲಿ ಇನ್ನೂ ಜಾಸ್ತಿ ಮಜ ಕೊಡ್ತಾರೆ ಅಂತ ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ. ಈ ಸಿನಿಮಾದಲ್ಲಿ ರಾಣಿ ಹೀರೋಯಿನ್ ಆದ್ರೆ ಟ್ರೈಲರ್ ನಲ್ಲಿ ಇರೋ ಇನ್ನೊಬ್ಬಳು ಹೀರೋಯಿನ್ ಪಾರ್ವತಿ ನಾಯರ್ ಯಾವ ರೀತಿ ಟ್ವಿಸ್ಟ್ ಕೊಡ್ತಾರೆ ಅಂತ ನೋಡಬೇಕು.

ಬಾಹುಬಲಿ ಸಿನಿಮಾದ ಅಸಿಸ್ಟೆಂಟ್ ಕ್ಯಾಮೆರಾ ಮೆನ್ ಆಗಿದ್ದ ರವೀಂದ್ರನಾಥ ಈ ಸಿನಿಮಾದ ಕ್ಯಾಮೆರಾ ಮೆನ್ ಆಗಿದ್ದಾರೆ. ಸಿನಿಮಾ ಟ್ರೈಲರ್ ನಲ್ಲಿ ತೋರಿಸಿರುವ ಅನಿಮೇಷನ್‌ ಕ್ವಾಲಿಟಿ ಯಾವ ಬಾಲಿವುಡ್ ಲೆವೆಲ್ ಗೂ ಕಮ್ಮಿಯಿಲ್ಲ. ಒಬ್ಬ ಹುಡುಗನ್ನ ಹೀರೋಯಿನ್ ಅಂತ ನಂಬುವ ಹಾಗೆ ನೆಕ್ಟ್ಸ್ ಲೆವೆಲ್ಗೆ ಮೇಕಪ್ ಮಾಡಿರೋ ಚಂದನ ಅವರಿಗೆ ಹಾಟ್ಸಪ್. ಈಗಾಗಲೇ ಇವರ ಸಿನಿಮಾ ಟ್ರೈಲರ್ 35 ಲಕ್ಷ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಟಿಕೆಟ್ ಬರೀ 99 Rs…ಸಖತ್ ಮಜ ಇರುತ್ತೆ..ಬನ್ನಿ ಥಿಯೇಟರ್ ನಲ್ಲಿ ಸಿಗೋಣ…ಮಿಸ್ಟರ್ ರಾಣಿ..ಫೆಬ್ರವರಿ 7ಕ್ಕೆ.

]]>
https://newxpressnews.com/%e0%b2%b8%e0%b3%88%e0%b2%95%e0%b3%8b-%e0%b2%9c%e0%b2%af%e0%b2%82%e0%b2%a4%e0%b3%8d-%e0%b2%b0%e0%b2%be%e0%b2%a3%e0%b2%bf-%e0%b2%85%e0%b2%b5%e0%b2%a4%e0%b2%be%e0%b2%b0/feed/ 0