B.Y.Vijayendra – New Xpress News https://newxpressnews.com The Latest News Sat, 23 Mar 2024 08:58:40 +0000 en-US hourly 1 https://wordpress.org/?v=6.9.1 https://newxpressnews.com/wp-content/uploads/2022/09/cropped-Siteicon-32x32.png B.Y.Vijayendra – New Xpress News https://newxpressnews.com 32 32 ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನಷ್ಟು ಉತ್ತುಂಗಕ್ಕೆ ಏರಿದೆ: ಬಿ.ವೈ.ವಿಜಯೇಂದ್ರ https://newxpressnews.com/%e0%b2%a8%e0%b2%b0%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b3%8b%e0%b2%a6%e0%b2%bf%e0%b2%9c%e0%b3%80-%e0%b2%85%e0%b2%b5%e0%b2%b0-%e0%b2%9c%e0%b2%a8%e0%b2%aa%e0%b3%8d%e0%b2%b0/ https://newxpressnews.com/%e0%b2%a8%e0%b2%b0%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b3%8b%e0%b2%a6%e0%b2%bf%e0%b2%9c%e0%b3%80-%e0%b2%85%e0%b2%b5%e0%b2%b0-%e0%b2%9c%e0%b2%a8%e0%b2%aa%e0%b3%8d%e0%b2%b0/#respond Sat, 23 Mar 2024 08:58:38 +0000 https://newxpressnews.com/?p=1342 ಬೆಂಗಳೂರು, ಮಾರ್ಚ್ 23: ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.


ಹೋಟೆಲ್ “ಜಿ.ಎಂ. ರಿಜಾಯ್ಸ್” ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಮತ್ತೊಮ್ಮೆ ಮೋದಿ ಸರಕಾರ ಎಂಬುದು ಕೇವಲ ಬಿಜೆಪಿ ಕಾರ್ಯಕರ್ತರ ಆಶಯವಲ್ಲ; ಇದು ರಾಜ್ಯದ ಮತ್ತು ದೇಶದ ಜವಾಬ್ದಾರಿಯುತ ನಾಗರಿಕ ಮತದಾರರ ನಿರ್ಧಾರ. ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ಕಾರ್ಯವೈಖರಿ, ಆಡಳಿತ ವೈಖರಿ, ಕೇಂದ್ರದ ಮೋದಿಜೀ ನೇತೃತ್ವದ ಜನಪರ ಯೋಜನೆಗಳ ಪರಿಣಾಮವಾಗಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದು ವಿಶ್ಲೇಷಿಸಿದರು.


ಇದು ಮೊತ್ತಮೊದಲ ಬಾರಿಗೆ ಹೀಗಾಗಿದೆ. ದೇಶದ ಜನತೆ ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಮೋದಿಯವರ ಮತ್ತು ಬಿಜೆಪಿ ಕೇಂದ್ರ ಸರಕಾರದ ಯೋಜನೆಗಳು ಮನೆಮನೆಗೆ ತಲುಪಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿವರಿಸಿದರು. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಂಕಲ್ಪದೊಂದಿಗೆ ಕೇಂದ್ರದ ಮೋದಿಯವರ ನೇತೃತ್ವದ ಸರಕಾರ ಜನಪರ ಯೋಜನೆಗಳನ್ನು ನೀಡಿದೆ. ಹಾಗಾಗಿ ಮೋದಿ ಮತ್ತೊಮ್ಮೆ ಎಂಬ ಘೋಷಣೆ ದೇಶಾದ್ಯಂತ ಕೇಳಿಸುತ್ತಿದೆ ಎಂದು ತಿಳಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ ನಿಷ್ಕ್ರಿಯ..
ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಎಂಬುದನ್ನು ನಾವು ಮತ್ತೆ ಸಾಬೀತು ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ನಿಷ್ಕ್ರಿಯವಾಗಿದೆ. ಅದು ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ಎಚ್ಚತ್ತುಕೊಳ್ಳದೆ ಇರುವುದು ನಿಜಕ್ಕೂ ದುರಂತವೇ ಸರಿ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.

ಇಲ್ಲಿನ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಶೂನ್ಯ. ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಮಾಡುತ್ತಲೇ ಬಂದಿದೆ. ಇದಕ್ಕೆ ತಕ್ಕ ಉತ್ತರವನ್ನು ಕೊಡುವ ಸಂದರ್ಭ, ಕಾಲ ಕೂಡಿ ಬಂದಿದೆ ಎಂಬ ಭಾವನೆ ಪ್ರತಿಯೊಬ್ಬರದು. ಹಿಂದೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನೀಡಿದ ಕೊಡುಗೆಗಳು, ಕಾರ್ಯಕ್ರಮಗಳು, ಮಾನ್ಯ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ನೀಡಿದ ಜನಪರ ಯೋಜನೆಗಳನ್ನು ರಾಜ್ಯದ ಜನತೆ ಮರೆತಿಲ್ಲ. ಒಂದು ಕಡೆ ಕೇಂದ್ರದಲ್ಲಿ ನರೇಂದ್ರ ಮೋದಿಜೀ ಅವರು, ಅಯೋಧ್ಯೆಯ ಭವ್ಯ ರಾಮಮಂದಿರ ನಿರ್ಮಿಸಿದ್ದಾರೆ. ಇದು ದೀರ್ಘ ಕಾಲದ ಹೋರಾಟ ಮತ್ತು ಪ್ರತಿಯೊಬ್ಬ ಭಾರತೀಯರ ಕನಸು ನನಸಾದ ಕಾಲ ಎಂದು ವಿಶ್ಲೇಷಣೆ ಮಾಡಿದರು.


370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದು ಸೇರಿ ಅನೇಕ ಕಾರ್ಯಗಳು ನಡೆದಿವೆ. ಮೂಲಭೂತ ಸೌಕರ್ಯ ನೀಡಲು ಕೇಂದ್ರ ಸರಕಾರ ಶ್ರಮಿಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ದೇಶ ಮಾತ್ರವಲ್ಲದೆ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಮೋದಿ ಸರಕಾರ ಎಂಬ ಅಭಿಪ್ರಾಯ ಸರ್ವಸಾಮಾನ್ಯವಾಗಿದೆ. ಎಲ್ಲ ಕಡೆಗಳಲ್ಲಿ ಅದನ್ನು ಕೇಳುವಂತಾಗಿದೆ ಎಂದು ತಿಳಿಸಿದರು.
ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದಷ್ಟೇ ಪ್ರಾಮುಖ್ಯತೆಯನ್ನು ಅದು ಪಡೆದಿದೆ. ಮಾಧ್ಯಮ ರಂಗ ಪರಿವರ್ತನೆ ಆಗಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಶಕ್ತಿ ಕೊಟ್ಟಿದೆ. ಚುನಾವಣೆ ಬಂದಾಗ ಪತ್ರಿಕಾ ರಂಗಕ್ಕೆ ಇನ್ನೂ ಹೆಚ್ಚು ಪ್ರಾಮುಖ್ಯತೆ ಸಹಜವಾಗಿಯೇ ಇರುತ್ತದೆ ಎಂದು ನುಡಿದರು.


ಇಂಥ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಮೀಡಿಯ ಸೆಂಟರ್ ಉದ್ಘಾಟನೆ ಮಾಡಿದ್ದೇವೆ. ಮಾಧ್ಯಮಗಳು ನಿರಂತರವಾಗಿ ಸುದ್ದಿ ಪ್ರಸಾರ ಮಾಡಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಮಾಧ್ಯಮ ಕೇಂದ್ರದಲ್ಲಿ ವೈಫೈ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆ ಇರಲಿದೆ. ನಮ್ಮ ರಾಷ್ಟ್ರೀಯ ನಾಯಕರು ಯಾರೇ ಬಂದರೂ ಈ ಮಾಧ್ಯಮ ಕೇಂದ್ರಕ್ಕೆ ಭೇಟಿ ಕೊಡಲಿದ್ದಾರೆ. ಪತ್ರಿಕಾಗೋಷ್ಠಿಗಳನ್ನೂ ಇಲ್ಲಿಯೇ ಅಧಿಕೃತವಾಗಿ ನಡೆಸಲಾಗುವುದು ಎಂದು ವಿವರಿಸಿದರು.


ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೆ ಈ ಕೇಂದ್ರದಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯಲಿವೆ. ಈ ವ್ಯವಸ್ಥೆಯ ಸದುಪಯೋಗವನ್ನು ಪತ್ರಿಕಾ ಹಾಗೂ ಮಾಧ್ಯಮ ಸ್ನೇಹಿತರು ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಮುಖ್ಯಮಂತ್ರಿಗಳಿಗೆ ಜ್ಞಾನೋದಯ ಆಗಿದ್ದರೆ..
ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ‘ನದಿಗಳಲ್ಲಿ ನೀರಿಲ್ಲ; ಕುಡಿಯುವ ನೀರಿನ ಹಾಹಾಕಾರ ಇದೆ’ ಎಂದು ತಿಳಿಸಿದ್ದನ್ನು ಗಮನಿಸಿದ್ದೇನೆ. ಈ ಹಿಂದೆ ಯಾವತ್ತು ಕಾವೇರಿ ನೀರನ್ನು ತಮಿಳುನಾಡಿಗೆ ಯಥೇಚ್ಛವಾಗಿ ಹರಿಸುತ್ತಿದ್ದರೋ ಆಗಲೇ ಕಾಂಗ್ರೆಸ್ ಸರಕಾರ- ಮುಖ್ಯಮಂತ್ರಿಗಳಿಗೆ ಜ್ಞಾನೋದಯ ಆಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇಂದು ನೀರಿಗಾಗಿ ಹಾಹಾಕಾರ ಇರುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಾಜಿ ಶಾಸಕ ಎಸ್.ಎ. ರಾಮದಾಸ್, ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ್, ರಾಜ್ಯ ವಕ್ತಾರರಾದ ಅಶೋಕ್ ಗೌಡ, ಹೆಚ್.ಎನ್. ಚಂದ್ರಶೇಖರ್, ಸುರಭಿ ಹೋದಿಗೆರೆ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮತ್ತು ರಾಜ್ಯ ಮಾಧ್ಯಮ ಸಹ-ಸಂಚಾಲಕ ಪ್ರಶಾಂತ್ ಕೆಡೆಂಜಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

]]>
https://newxpressnews.com/%e0%b2%a8%e0%b2%b0%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b3%8b%e0%b2%a6%e0%b2%bf%e0%b2%9c%e0%b3%80-%e0%b2%85%e0%b2%b5%e0%b2%b0-%e0%b2%9c%e0%b2%a8%e0%b2%aa%e0%b3%8d%e0%b2%b0/feed/ 0
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಪರಿಶ್ರಮ ಮರೆಯಲು ಸಾಧ್ಯವೇ ಇಲ್ಲ : ಬಿ.ವೈ. ವಿಜಯೇಂದ್ರ https://newxpressnews.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%a6-%e0%b2%9a%e0%b3%81%e0%b2%95%e0%b3%8d%e0%b2%95/ https://newxpressnews.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%a6-%e0%b2%9a%e0%b3%81%e0%b2%95%e0%b3%8d%e0%b2%95/#respond Mon, 13 Nov 2023 05:04:50 +0000 https://newxpressnews.com/?p=876 ಬೆಂಗಳೂರು, ನ, 13: ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಅನಂತ್ ಕುಮಾರ್. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಲಾಲ್ ಬಾಗ್ ವೆಸ್ಟ್ಗೇಟ್ ನಿಂದ ಅದಮ್ಯಚೇತನದವರೆಗೆ ಆಯೋಜಿಸಿದ್ದ 4 ನೇ “ಅನಂತ ಸ್ಮೃತಿ” ನಡಿಗೆ ಮತ್ತು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ಪಕ್ಷದ ಸಂಘಟನೆ ಬಗ್ಗೆ ಸದಾ ಕಾಲ ಚರ್ಚಿಸುತ್ತಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಿಷ್ಠಗೊಳ್ಳಲು ಈ ಇಬ್ಬರೂ ನಾಯಕರ ಪರಿಶ್ರಮ ಅನನ್ಯ ಎಂದರು.

ಇವರ ನಡುವೆ ಅವಿನಾಭಾವ ಸಂಬಂಧವಿತ್ತು. ಬೆಂಗಳೂರಿನ ಶಾಂತಿನಗರ ನಿವಾಸದಲ್ಲಿ ಹಗಲಿರುಳು ಜನಪರ ವಿಚಾರಗಳ ಕುರಿತು ಚರ್ಚಿಸುತ್ತಿದ್ದರು. ಅನಂತ್ ಕುಮಾರ್ ಅವರು ಮನೆಗೆ ಬಂದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮ ಅಧಿಕೃತ ಪ್ರವಾಸ, ಕಾರ್ಯಕ್ರಮಗಳನ್ನು ಮರೆಯುತ್ತಿದ್ದರು. ಇಲ್ಲವೆ ಮುಂದೂಡುತ್ತಿದ್ದರು. ಇಬ್ಬರೂ ಹಗಲಿರುಳು ಪಕ್ಷದ ಬೆಳವಣಿಗೆಯನ್ನೇ ಧ್ಯಾನಿಸುತ್ತಿದ್ದರು. ಬಿಜೆಪಿಗೆ ರಾಜ್ಯದಲ್ಲಿ ಭದ್ರ ಬುನಾದಿ ದೊರೆಯಲು ಈ ನಾಯಕರೇ ಕಾರಣ ಎಂದರು.

ತೇಜಸ್ವಿ ಅನಂತ್ ಕುಮಾರ್ ಅವರ ಕ್ರಿಯಾಶೀಲತೆ ಮಾದರಿಯಾಗಿದ್ದು, ಅವರು ಎಂದೂ ಮನೆಯಲ್ಲಿ ಸುಮ್ಮನೆ ಕುಳಿತರವರೇ ಅಲ್ಲ. ಅನಂತ್ ಕುಮಾರ್ ಅವರ ತಾಯಿ ಹೆಸರಿನಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅದಮ್ಯ ಚೇತನ ಸಂಸ್ಥೆಯನ್ನು ಸ್ಥಾಪಿಸಿ, ಹಸಿದವರಿಗೆ ಅನ್ನದಾಸೋಹದ ಸೇವೆ ಮಾಡುತ್ತಿದ್ದಾರೆ. ರಾಜಕಾರಣಿಗಳು ಪ್ರತಿಯೊಂದು ಸೇವೆಯಲ್ಲಿ ರಾಜಕೀಯ ಲಾಭ ನೋಡುತ್ತಾರೆ. ಆದರೆ ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ, ತನ್ನ ಸೇವೆ ಮೂಲಕ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿ ಬೆಂಗಳೂರಿಗೆ ಹೊಸ ಸ್ವರೂಪ, ಅಭಿವೃದ್ಧಿಗೆ ಹೊಸ ಬೆಳಕು ನೀಡಿದ್ದರು. ಅನಂತ ಕುಮಾರ್ ಅವರ ನೇತೃತ್ವ, ಅವರ ಕತೃತ್ವವನ್ನು ಸ್ಮರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ರಾಜ್ಯ ಬಿಜೆಪಿಗೆ ಬಿ.ವೈ. ವಿಜಯೇಂದ್ರ ನೂತನ ಸಾರಥಿಯಾಗಿದ್ದು, ಹೊಸ ಗಾಳಿ ಬೀಸುವಂತಾಗಿದ್ದು, ಬದಲಾವಣೆಗೆ ಇದು ನಾಂದಿಯಾಗಲಿದ್ದು, ಪಕ್ಷಕ್ಕೆ ಶಕ್ತಿ ಬೇಕಾಗಿತ್ತು ಎಂದರು. ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಬಯಸದ ತೇಜಸ್ವಿನಿ ಅನಂತ್ ಕುಮಾರ್, ಈ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕೆ.ಸಿ. ರಾಮಮೂರ್ತಿ, ರವಿ ಸುಬ್ರಮಣ್ಯ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಪಿ.ವಿ. ಕೃಷ್ಣ ಭಟ್ ಮತ್ತಿರರರು ಉಪಸ್ಥಿತರಿದ್ದರು.

]]>
https://newxpressnews.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%a6-%e0%b2%9a%e0%b3%81%e0%b2%95%e0%b3%8d%e0%b2%95/feed/ 0