at Tirupathi – New Xpress News https://newxpressnews.com The Latest News Wed, 25 Jun 2025 10:55:53 +0000 en-US hourly 1 https://wordpress.org/?v=6.9.4 https://newxpressnews.com/wp-content/uploads/2022/09/cropped-Siteicon-32x32.png at Tirupathi – New Xpress News https://newxpressnews.com 32 32 ಉದ್ಯಮಿ ಸುನಿತಾ ತಿಮ್ಮೇಗೌಡ ಕುಟುಂಬದಿಂದ ತಿರುಪತಿಯಲ್ಲಿ ವಿಶೇಷ ದರ್ಶನ, ಆರತಿ https://newxpressnews.com/%e0%b2%89%e0%b2%a6%e0%b3%8d%e0%b2%af%e0%b2%ae%e0%b2%bf-%e0%b2%b8%e0%b3%81%e0%b2%a8%e0%b2%bf%e0%b2%a4%e0%b2%be-%e0%b2%a4%e0%b2%bf%e0%b2%ae%e0%b3%8d%e0%b2%ae%e0%b3%87%e0%b2%97%e0%b3%8c%e0%b2%a1/ https://newxpressnews.com/%e0%b2%89%e0%b2%a6%e0%b3%8d%e0%b2%af%e0%b2%ae%e0%b2%bf-%e0%b2%b8%e0%b3%81%e0%b2%a8%e0%b2%bf%e0%b2%a4%e0%b2%be-%e0%b2%a4%e0%b2%bf%e0%b2%ae%e0%b3%8d%e0%b2%ae%e0%b3%87%e0%b2%97%e0%b3%8c%e0%b2%a1/#respond Wed, 25 Jun 2025 10:55:52 +0000 https://newxpressnews.com/?p=2551 ಬೆಂಗಳೂರು: ವಿಶ್ವ ವಿಖ್ಯಾತ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ತಮ್ಮ ಅನುಪಮ ಧಾರ್ಮಿಕ ಸೇವೆಗಳ ಮೂಲಕ ಚಿರಪರಿಚಿತರಾಗಿರುವ ಕರ್ನಾಟಕದ ಉದ್ಯಮಿ ಸುನಿತಾ ತಿಮ್ಮೇಗೌಡ ಅವರು ಬುಧವಾರ (ಜೂನ್ 25ರಂದು) ಕುಟುಂಬ ಸಮೇತರಾಗಿ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ದರ್ಶನ ಪಡೆದರು.

ವೈಕುಂಠ ಏಕಾದಶಿ ಸಮಯದಲ್ಲಿ ತಿರುಪತಿ ದೇವಾಲಯಕ್ಕೆ ಅತ್ಯಾಕರ್ಷಕ ಹೂವಿನ ಅಲಂಕಾರ ಸೇವೆಯನ್ನು ನಡೆಸಿಕೊಡುವ ಮೂಲಕ ತಿಮ್ಮೇಗೌಡರ ಕುಟುಂಬವು ಪ್ರಸಿದ್ಧವಾಗಿದೆ. ವಿದೇಶಿ ಹೂವುಗಳನ್ನು ಬಳಸಿ ದೇವಾಲಯದ ಅಂದವನ್ನು ಹೆಚ್ಚಿಸುವ ಮೂಲಕ ಅವರು ತಿರುಪತಿ ದೇವಸ್ಥಾನದ ಭಕ್ತರಿಂದ ಮೆಚ್ಚುಗೆ ಗಳಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ, ಬುಧವಾರದ ಭೇಟಿಯ ವೇಳೆ ಅವರಿಗೆ ವಿಶೇಷ ಆರತಿಯನ್ನು ಮಾಡುವ ಗೌರವ ಅವಕಾಶ ಲಭಿಸಿತು.

ಸುನಿತಾ ತಿಮ್ಮೇಗೌಡ ಅವರೊಂದಿಗೆ ಅವರ ತಂದೆ, ಸುಧಾ ಕೋಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾಗಿರುವ ಎಂ. ತಿಮ್ಮೇಗೌಡ, ಸ್ವಾಗತ್ ಗೌಡ ಮತ್ತು ಪೋತರಾಜು ಅವರಿದ್ದರು. ಈ ಭೇಟಿಯ ಸಂದರ್ಭದಲ್ಲಿ, ಸುನಿತಾ ತಿಮ್ಮೇಗೌಡ ಅವರು ಮುಂದಿನ ವರ್ಷದ ವೈಕುಂಠ ಏಕಾದಶಿ ವೇಳೆಗೆ ದೇವರಿಗೆ ನವರತ್ನಗಳ ವಿಶೇಷ ಅಲಂಕಾರವನ್ನು ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದರು.

ತಿಮ್ಮೇಗೌಡ ಕುಟುಂಬವು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ತಿರುಪತಿ ತಿಮ್ಮಪ್ಪನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ.

]]>
https://newxpressnews.com/%e0%b2%89%e0%b2%a6%e0%b3%8d%e0%b2%af%e0%b2%ae%e0%b2%bf-%e0%b2%b8%e0%b3%81%e0%b2%a8%e0%b2%bf%e0%b2%a4%e0%b2%be-%e0%b2%a4%e0%b2%bf%e0%b2%ae%e0%b3%8d%e0%b2%ae%e0%b3%87%e0%b2%97%e0%b3%8c%e0%b2%a1/feed/ 0