Adamya Chetana – New Xpress News https://newxpressnews.com The Latest News Mon, 13 Nov 2023 05:04:51 +0000 en-US hourly 1 https://wordpress.org/?v=6.9.4 https://newxpressnews.com/wp-content/uploads/2022/09/cropped-Siteicon-32x32.png Adamya Chetana – New Xpress News https://newxpressnews.com 32 32 ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಪರಿಶ್ರಮ ಮರೆಯಲು ಸಾಧ್ಯವೇ ಇಲ್ಲ : ಬಿ.ವೈ. ವಿಜಯೇಂದ್ರ https://newxpressnews.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%a6-%e0%b2%9a%e0%b3%81%e0%b2%95%e0%b3%8d%e0%b2%95/ https://newxpressnews.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%a6-%e0%b2%9a%e0%b3%81%e0%b2%95%e0%b3%8d%e0%b2%95/#respond Mon, 13 Nov 2023 05:04:50 +0000 https://newxpressnews.com/?p=876 ಬೆಂಗಳೂರು, ನ, 13: ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಅನಂತ್ ಕುಮಾರ್. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಲಾಲ್ ಬಾಗ್ ವೆಸ್ಟ್ಗೇಟ್ ನಿಂದ ಅದಮ್ಯಚೇತನದವರೆಗೆ ಆಯೋಜಿಸಿದ್ದ 4 ನೇ “ಅನಂತ ಸ್ಮೃತಿ” ನಡಿಗೆ ಮತ್ತು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ಪಕ್ಷದ ಸಂಘಟನೆ ಬಗ್ಗೆ ಸದಾ ಕಾಲ ಚರ್ಚಿಸುತ್ತಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಿಷ್ಠಗೊಳ್ಳಲು ಈ ಇಬ್ಬರೂ ನಾಯಕರ ಪರಿಶ್ರಮ ಅನನ್ಯ ಎಂದರು.

ಇವರ ನಡುವೆ ಅವಿನಾಭಾವ ಸಂಬಂಧವಿತ್ತು. ಬೆಂಗಳೂರಿನ ಶಾಂತಿನಗರ ನಿವಾಸದಲ್ಲಿ ಹಗಲಿರುಳು ಜನಪರ ವಿಚಾರಗಳ ಕುರಿತು ಚರ್ಚಿಸುತ್ತಿದ್ದರು. ಅನಂತ್ ಕುಮಾರ್ ಅವರು ಮನೆಗೆ ಬಂದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮ ಅಧಿಕೃತ ಪ್ರವಾಸ, ಕಾರ್ಯಕ್ರಮಗಳನ್ನು ಮರೆಯುತ್ತಿದ್ದರು. ಇಲ್ಲವೆ ಮುಂದೂಡುತ್ತಿದ್ದರು. ಇಬ್ಬರೂ ಹಗಲಿರುಳು ಪಕ್ಷದ ಬೆಳವಣಿಗೆಯನ್ನೇ ಧ್ಯಾನಿಸುತ್ತಿದ್ದರು. ಬಿಜೆಪಿಗೆ ರಾಜ್ಯದಲ್ಲಿ ಭದ್ರ ಬುನಾದಿ ದೊರೆಯಲು ಈ ನಾಯಕರೇ ಕಾರಣ ಎಂದರು.

ತೇಜಸ್ವಿ ಅನಂತ್ ಕುಮಾರ್ ಅವರ ಕ್ರಿಯಾಶೀಲತೆ ಮಾದರಿಯಾಗಿದ್ದು, ಅವರು ಎಂದೂ ಮನೆಯಲ್ಲಿ ಸುಮ್ಮನೆ ಕುಳಿತರವರೇ ಅಲ್ಲ. ಅನಂತ್ ಕುಮಾರ್ ಅವರ ತಾಯಿ ಹೆಸರಿನಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅದಮ್ಯ ಚೇತನ ಸಂಸ್ಥೆಯನ್ನು ಸ್ಥಾಪಿಸಿ, ಹಸಿದವರಿಗೆ ಅನ್ನದಾಸೋಹದ ಸೇವೆ ಮಾಡುತ್ತಿದ್ದಾರೆ. ರಾಜಕಾರಣಿಗಳು ಪ್ರತಿಯೊಂದು ಸೇವೆಯಲ್ಲಿ ರಾಜಕೀಯ ಲಾಭ ನೋಡುತ್ತಾರೆ. ಆದರೆ ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ, ತನ್ನ ಸೇವೆ ಮೂಲಕ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿ ಬೆಂಗಳೂರಿಗೆ ಹೊಸ ಸ್ವರೂಪ, ಅಭಿವೃದ್ಧಿಗೆ ಹೊಸ ಬೆಳಕು ನೀಡಿದ್ದರು. ಅನಂತ ಕುಮಾರ್ ಅವರ ನೇತೃತ್ವ, ಅವರ ಕತೃತ್ವವನ್ನು ಸ್ಮರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ರಾಜ್ಯ ಬಿಜೆಪಿಗೆ ಬಿ.ವೈ. ವಿಜಯೇಂದ್ರ ನೂತನ ಸಾರಥಿಯಾಗಿದ್ದು, ಹೊಸ ಗಾಳಿ ಬೀಸುವಂತಾಗಿದ್ದು, ಬದಲಾವಣೆಗೆ ಇದು ನಾಂದಿಯಾಗಲಿದ್ದು, ಪಕ್ಷಕ್ಕೆ ಶಕ್ತಿ ಬೇಕಾಗಿತ್ತು ಎಂದರು. ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಬಯಸದ ತೇಜಸ್ವಿನಿ ಅನಂತ್ ಕುಮಾರ್, ಈ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕೆ.ಸಿ. ರಾಮಮೂರ್ತಿ, ರವಿ ಸುಬ್ರಮಣ್ಯ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಪಿ.ವಿ. ಕೃಷ್ಣ ಭಟ್ ಮತ್ತಿರರರು ಉಪಸ್ಥಿತರಿದ್ದರು.

]]>
https://newxpressnews.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%a6-%e0%b2%9a%e0%b3%81%e0%b2%95%e0%b3%8d%e0%b2%95/feed/ 0
ಮಾಲೀನ್ಯ ಸಮಸ್ಯೆಗಳ ಬಗ್ಗೆ ನಗರದ ಜನತೆ ಎಚ್ಚೆತ್ತುಕೊಳ್ಳಲು ಇದು ಸಕಾಲ – ಡಾ. ತೇಜಸ್ವಿನಿ ಅನಂತ್ ಕುಮಾರ್ https://newxpressnews.com/%e0%b2%ae%e0%b2%be%e0%b2%b2%e0%b3%80%e0%b2%a8%e0%b3%8d%e0%b2%af-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%ac%e0%b2%97%e0%b3%8d%e0%b2%97%e0%b3%86-%e0%b2%a8/ https://newxpressnews.com/%e0%b2%ae%e0%b2%be%e0%b2%b2%e0%b3%80%e0%b2%a8%e0%b3%8d%e0%b2%af-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%ac%e0%b2%97%e0%b3%8d%e0%b2%97%e0%b3%86-%e0%b2%a8/#respond Fri, 11 Aug 2023 16:08:47 +0000 https://newxpressnews.com/?p=275 ಬೆಂಗಳೂರು, ಆ, 11: ಅರಣ್ಯ, ಹಸಿರು ಪ್ರದೇಶ ಕಡಿಮೆಯಾಗುತ್ತಿದ್ದು, ಮಾಲೀನ್ಯದಿಂದ ಕ್ಯಾನ್ಸರ್ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಗರ ಪ್ರದೇಶದ ಜನತೆ ಎಚ್ಚೆತ್ತುಕೊಂಡು ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.

ಎಚ್.ಎಸ್.ಆರ್ ಬಡಾವಣೆಯ ದಿ ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಸಂಪಾದಕತ್ವದ “ಚಿಣ್ಣರ ಚೇತನ” ಗೋಡೆ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೂಲಭೂತ ಗಂಭೀರ ಮಾಲೀನ್ಯ ಸಮಸ್ಯೆಗಳ ಬಗ್ಗೆ ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ವಿನಾಶದೆಡೆಗೆ ಸಾಗುತ್ತೇವೆ. ಸಮಸ್ಯೆಗಳನ್ನು ನಿವಾರಿಸಲು ಮುಂದಾಗದಿದ್ದರೆ ಮತ್ತೊಬ್ಬರಿಗೆ ಸಲಹೆ ನೀಡುವ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಜಲ, ವಾಯು, ಪರಿಸರ, ಆಹಾರ ಮಾಲೀನ್ಯದಂತಹ ಅಗಾಧ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತಿವೆ. ಮಾಲೀನ್ಯದಿಂದ ವಿಮುಖರಾಗಿ ಸುಸ್ಥಿರ ಪರಿಸರದತ್ತ ಸಾಗಲು ಇದು ಸಕಾಲ ಎಂದರು.

ಮಾಲೀನ್ಯ ಸಮಸ್ಯೆಗಳ ನಿವಾರಣೆ ಮತ್ತು ಪ್ರಕೃತಿ ಪ್ರೇಮ ಬೆಳೆಸಿಕೊಳ್ಳಲು “ಚಿಣ್ಣರ ಚೇತನ” ಗೋಡೆ ಪತ್ರಿಕೆ ಅತ್ಯಂತ ಉಪಯುಕ್ತವಾಗಿದೆ. ಪತ್ರಿಕೆಯ ಒಂದೊಂದು ಲೇಖನ ಸಂಗ್ರಹ ಯೋಗ್ಯ. ಅಷ್ಟೇ ಅಲ್ಲದೇ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿದೆ. ಪ್ರತಿ ತಿಂಗಳು ಹೊಸ ಹೊಸ ವಿಷಯಗಳು ಬೆಳಕಿಗೆ ತರುತ್ತಿದ್ದು, “ಇರುವೆ ಬದುಕಿದರೆ ಹೇಗೆ ಆನೆಗೆ ಆಹಾರ ದೊರೆಯುತ್ತದೆ” ಎಂಬ ಸಣ್ಣ ಸಂಗತಿಗಳಿಂದ ಹಿಡಿದು ಗಂಭೀರ ಸ್ವರೂಪದ ಸಮಸ್ಯೆಗಳವರೆಗೆ ಹತ್ತು ಹಲವು ಕೌತುಗಳನ್ನು ಪತ್ರಿಕೆ ಅನಾವರಣಗೊಳಿಸುತ್ತಿದೆ. ದಿ ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಯ ಜೊತೆ ಪರಿಸರಕ್ಕೆ ಸಂಬಂಧಿಸಿದಂತೆ ಹಲವು ರಚನಾತ್ಮಕ ಕಾರ್ಯಕ್ರಮಗಳ ಜಾರಿಗಾಗಿ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧ ಎಂದರು.

ತ್ಯಾಜ್ಯ ಸಮಸ್ಯೆಯಿಂದ ಮುಕ್ತರಾಗಬೇಕು. ಶೂನ್ಯ ತ್ಯಾಜ್ಯದತ್ತ ಗಮನ ಹರಿಸಬೇಕು. ಬೆಂಗಳೂರಿನಂತಹ ನಗರಕ್ಕೆ ಸೂಕ್ತ ಆಮ್ಲಜನಕ ಒದಗಿಸುವುದು ಅತ್ಯಂತ ಜರೂರಾಗಿದೆ. ಹೀಗೆ ಯಾವುದೇ ಆಂದೋಲನ, ಯಾವುದೇ ಸಂಘಟನೆಗಳಿಗೆ ಸ್ವಯಂ ಸೇವಕರು ಆಧಾರ ಸ್ತಂಭವಾಗಿದ್ದು, ಎಲ್ಲಾ ಪಾಲುದಾರರನ್ನೊಳಗೊಂಡು ಮುನ್ನಡೆದಾಗ ಯಶಸ್ಸು ಗಳಿಸಲು ಸಾಧ್ಯ ಎಂದು ಡಾ. ತೇಜಸ್ವಿನಿ ಅನಂತ್ ಕುಮಾರ್ ಹೇಳಿದರು.

ಬಿಬಿಎಂಪಿ ಮಾಜಿ ಸದಸ್ಯ ಗುರುಮೂರ್ತಿ ರೆಡ್ಡಿ, ಬಿಜೆಪಿ ಮಹಿಳಾ ಮೋರ್ಚಾ ಅದ್ಯಕ್ಷರಾದ ವಿಜಯ ಲಕ್ಷ್ಮಿ, ಎನ್.ಡಿ.ಆರ್.ಐ ಮಾಜಿ ನಿರ್ದೇಶಕ ಡಾ.ಕೆ.ಪಿ. ರಮೇಶ್, ದಿ ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಸ್.ಎನ್.ವಿ.ಎಲ್. ನರಸಿಂಹ ರಾಜು, ಆಕ್ಸ್ ಫರ್ಡ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಡಾ. ನಿಕಿತಾ ಆಲೂರ್, ಆಕ್ಸ್ ಫರ್ಡ್ ಕಾಲೇಜ್ ಆಫ್ ಸೈನ್ಸ್ ನ ಪ್ರಾಂಶುಪಾಲರಾದ ಡಾ. ಕಾವ್ಯಶ್ರೀ, ಆಕ್ಸ್ ಫರ್ಡ್ ಕಾಲೇಜ್ ಆಫ್ ಆರ್ಟ್ಸ್ ನ ಪ್ರಾಂಶುಪಾಲರಾದ ಗಾಯತ್ರಿ, ಆಕ್ಸ್ ಫರ್ಡ್ ಕಾಲೇಜ್ ಆಫ್ ಲಾ ಪ್ರಾಂಶುಪಾಲರಾದ ಡಾ. ಪ್ರಜ್ಞಾ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

]]>
https://newxpressnews.com/%e0%b2%ae%e0%b2%be%e0%b2%b2%e0%b3%80%e0%b2%a8%e0%b3%8d%e0%b2%af-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%ac%e0%b2%97%e0%b3%8d%e0%b2%97%e0%b3%86-%e0%b2%a8/feed/ 0