Actor Ravi Mohan – New Xpress News https://newxpressnews.com The Latest News Tue, 03 Jun 2025 04:57:59 +0000 en-US hourly 1 https://wordpress.org/?v=6.9.4 https://newxpressnews.com/wp-content/uploads/2022/09/cropped-Siteicon-32x32.png Actor Ravi Mohan – New Xpress News https://newxpressnews.com 32 32 ಗಲ್ಲಿಯಿಂದ ಸೂಪರ್ಸ್ಟಾರ್ ತನಕ; ಸದರನ್ ಸ್ಟ್ರೀಟ್ ಪ್ರೀಮಿಯರ್ ಕ್ರಿಕೆಟ್ ಲೀಗ್‌ಗೆ ಅದ್ಧೂರಿ ಚಾಲನೆ https://newxpressnews.com/%e0%b2%97%e0%b2%b2%e0%b3%8d%e0%b2%b2%e0%b2%bf%e0%b2%af%e0%b2%bf%e0%b2%82%e0%b2%a6-%e0%b2%b8%e0%b3%82%e0%b2%aa%e0%b2%b0%e0%b3%8d%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%a4%e0%b2%a8/ https://newxpressnews.com/%e0%b2%97%e0%b2%b2%e0%b3%8d%e0%b2%b2%e0%b2%bf%e0%b2%af%e0%b2%bf%e0%b2%82%e0%b2%a6-%e0%b2%b8%e0%b3%82%e0%b2%aa%e0%b2%b0%e0%b3%8d%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%a4%e0%b2%a8/#respond Tue, 03 Jun 2025 04:57:57 +0000 https://newxpressnews.com/?p=2483

ಬೆಂಗಳೂರು: ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡುವ ಉದ್ದೇಶದಿಂದ, ದಕ್ಷಿಣ ಭಾರತದ ಮೊದಲ T10 ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆದ ಸದರನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (SSPL) ಚೆನ್ನೈನಲ್ಲಿ ಶುಕ್ರವಾರ ರಾತ್ರಿ ಅದ್ಧೂರಿ ಸಮಾರಂಭದೊಂದಿಗೆ ಅಧಿಕೃತವಾಗಿ ಚಾಲನೆ ಪಡೆಯಿತು. ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಮತ್ತು ಗೋವಾದಾದ್ಯಂತ ಹರಡಿರುವ ಕಚ್ಚಾ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೇದಿಕೆ ಒದಗಿಸಲು ಉದ್ದೇಶಿಸಲಾಗಿದೆ.


3 ಕೋಟಿ ರೂಪಾಯಿಗಳ ಆಕರ್ಷಕ ಬಹುಮಾನದೊಂದಿಗೆ SSPL ಗಲ್ಲಿಯ ಹೀರೋಗಳನ್ನು ಕ್ರೀಡಾಂಗಣದ ಸೂಪರ್‌ಸ್ಟಾರ್‌ಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ, ಇದು ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಆಟದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅನಾವರಣ ಸಮಾರಂಭದಲ್ಲಿ ಲೀಗ್‌ನ ಅಧಿಕೃತ ಲೋಗೋ, ಸ್ಫೂರ್ತಿದಾಯಕ ಗೀತೆ ಮತ್ತು 5 ಅಡಿ ಎತ್ತರದ ಆಕರ್ಷಕ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು, ಇದು ಮುಂಬರುವ ರೋಮಾಂಚಕ ಋತುವಿಗೆ ಭರವಸೆಯ ಸ್ಪರ್ಶ ನೀಡಿತು.


ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿಯಂತಹ ಹಲವು ಭಾರತೀಯ ಕ್ರಿಕೆಟ್ ದಿಗ್ಗಜರ ಪಾಲಿಗೆ ಭದ್ರ ಬುನಾದಿ ಹಾಕಿಕೊಟ್ಟ ಟೆನಿಸ್ ಬಾಲ್ ಕ್ರಿಕೆಟ್‌ನ ಸ್ಥಳೀಯ ಸ್ವರೂಪವನ್ನು ಎಸ್ಎಸ್ಪಿಎಲ್ ಉತ್ತೇಜಿಸುತ್ತಿದೆ. ದಕ್ಷಿಣ ಭಾರತದ ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವನ್ನು ಒಳಗೊಂಡಿರುವ ಈ ಲೀಗ್, ಗಲ್ಲಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ರಚನಾತ್ಮಕ ವೇದಿಕೆಯ ಮೂಲಕ ಹೊರತರಲು ಉದ್ದೇಶಿಸಿದೆ. ಇದು ಅವರಿಗೆ ಕಣದಲ್ಲಿ ಮಿಂಚಲು ಅವಕಾಶ ನೀಡುವುದಲ್ಲದೆ, ಗಲ್ಲಿಗಳಿಂದ ರಾಷ್ಟ್ರೀಯ ಹಾಗೂ ಸಂಭಾವ್ಯವಾಗಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳಿಗೆ ಕಾಲಿಡಲು ದಾರಿ ಮಾಡಿಕೊಡಲಿದೆ.


ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಈ ಟೂರ್ನಮೆಂಟ್‌ಗಾಗಿ ಆಯ್ಕೆ ಪ್ರಕ್ರಿಯೆಯು ಅತ್ಯಂತ ಕಠಿಣವಾಗಿರಲಿದೆ. ಇದು ಮಹಾನಗರ ಮತ್ತು ಮಹಾನಗರೇತರ ನಗರಗಳಲ್ಲಿ ಮೂರು-ಹಂತದ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ. ಎಸ್ಎಸ್ಪಿಎಲ್ ಪಾರದರ್ಶಕತೆ ಮತ್ತು ನ್ಯಾಯಯುತ ಆಟಕ್ಕೆ ಆದ್ಯತೆ ನೀಡುತ್ತದೆ. ಈ ನಿಟ್ಟಿನಲ್ಲಿ, ಆಯ್ಕೆ ಮತ್ತು ಆಟದ ವಿಶ್ಲೇಷಣೆಗಾಗಿ ವೀಡಿಯೊ ರೆಕಾರ್ಡಿಂಗ್ ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ.


ತಂತ್ರಜ್ಞಾನವು ಎಸ್ಎಸ್ಎಲ್ಪಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಬ್ಯಾಟಿಂಗ್ ಮೌಲ್ಯಮಾಪನಕ್ಕಾಗಿ ಸಿಮ್ಯುಲೇಟೆಡ್ ಪರಿಸರಗಳು, ಮತ್ತು ಬೌಲಿಂಗ್ ಮೌಲ್ಯಮಾಪನಕ್ಕಾಗಿ ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳು ಹಾಗೂ ವೇಗ-ಮಾನಿಟರಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ.
ದಕ್ಷಿಣ ಭಾಗದಿಂದ 12 ತಂಡಗಳು ಮತ್ತು ಬಹು-ನಗರ ಆಯ್ಕೆ ಪ್ರಕ್ರಿಯೆಯ ಮೂಲಕ 500 ಆಟಗಾರರನ್ನು ಎಸ್ಎಸ್ಪಿಎಲ್ ಆಯ್ಕೆ ಮಾಡಲಿದೆ. ಈ ಲೀಗ್ ಪ್ರತಿಭೆ, ಧೈರ್ಯ ಮತ್ತು ಕ್ರಿಕೆಟ್ ಮೇಲಿನ ತೀವ್ರ ಉತ್ಸಾಹವನ್ನು ಪ್ರದರ್ಶಿಸುವ ಭರವಸೆಯನ್ನು ನೀಡುತ್ತದೆ. ಅಂತಿಮವಾಗಿ ಆಯ್ಕೆಯಾದ 300 ಆಟಗಾರರನ್ನು ಹರಾಜಿನ ಮೂಲಕ ಆಯ್ಕೆ ಮಾಡಲಾಗುತ್ತದೆ,


ಎಸ್ಎಸ್ಪಿಎಲ್ ಕೋರ್ ಕಮಿಟಿಯಲ್ಲಿ, ಅಧ್ಯಕ್ಷ ನವಾಬ್‌ಜಾದ ಮೊಹಮ್ಮದ್ ಆಸಿಫ್ ಅಲಿ (ಒಬ್ಬ ಉತ್ಸಾಹಿ ದಾನಿ ಮತ್ತು ಕ್ರಿಕೆಟ್ ಉತ್ಸಾಹಿ), ಸೆಲೆಬ್ರಿಟಿ ಪೋಷಕ ರವಿ ಮೋಹನ್ (ಯುವ ಜನರಿಗೆ ಸ್ಫೂರ್ತಿ ನೀಡುವ ಸ್ಟಾರ್ ಪವರ್) ಮತ್ತು ಸಿಇಒ & ಡೈರೆಕ್ಟರ್ ಎಲ್.ಟಿ. ಆನಂದ್ (ಲೀಗ್‌ನ ಕಾರ್ಯಾಚರಣೆ ಮತ್ತು ಆರ್ಥಿಕ ಸಮಗ್ರತೆಯನ್ನು ಖಾತರಿಪಡಿಸುವವರು) ಸೇರಿಕೊಂಡಿದ್ದಾರೆ. ಆನಂದ್ ಅವರು ಲೀಗ್ ಅನ್ನು ಸುಸ್ಥಿರತೆ ಮತ್ತು ಬೆಳವಣಿಗೆಯ ಕಡೆಗೆ ಮುಂದಡಿ ಇಟ್ಟಿದ್ದಾರೆ.


ಸದರನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಈ ಆಗಸ್ಟ್‌ನಲ್ಲಿ ತನ್ನ ಉದ್ಘಾಟನಾ ಋತುವಿಗೆ ಸಿದ್ಧವಾಗುತ್ತಿದ್ದು, ಸೂಕ್ತ ವೇದಿಕೆ ದೊರೆತರೆ ನೈಜ ಪ್ರತಿಭೆ ಅರಳಬಹುದು ಮತ್ತು ಗಲ್ಲಿಯ ಕ್ರಿಕೆಟ್‌ನಿಂದ ವೈಭವಕ್ಕೆ ತಲುಪುವ ಪಯಣವು ನಿಜವಾಗಿಯೂ ಸಾಧ್ಯವಾದ ಕನಸು ಎಂಬ ನಂಬಿಕೆಗೆ ಸಾಕ್ಷಿಯಾಗಿದೆ.

]]>
https://newxpressnews.com/%e0%b2%97%e0%b2%b2%e0%b3%8d%e0%b2%b2%e0%b2%bf%e0%b2%af%e0%b2%bf%e0%b2%82%e0%b2%a6-%e0%b2%b8%e0%b3%82%e0%b2%aa%e0%b2%b0%e0%b3%8d%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%a4%e0%b2%a8/feed/ 0