76th Independence Day – New Xpress News https://newxpressnews.com The Latest News Tue, 15 Aug 2023 14:50:52 +0000 en-US hourly 1 https://wordpress.org/?v=7.0 https://newxpressnews.com/wp-content/uploads/2022/09/cropped-Siteicon-32x32.png 76th Independence Day – New Xpress News https://newxpressnews.com 32 32 ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಸ್ಟೀಸ್.ಎನ್.ಕುಮಾರ್‌ ಭಾಗಿ https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b7%e0%b2%a8%e0%b3%8d-%e0%b2%b8%e0%b3%8a%e0%b2%b8%e0%b3%88%e0%b2%9f%e0%b2%bf/ https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b7%e0%b2%a8%e0%b3%8d-%e0%b2%b8%e0%b3%8a%e0%b2%b8%e0%b3%88%e0%b2%9f%e0%b2%bf/#respond Tue, 15 Aug 2023 14:50:52 +0000 https://newxpressnews.com/?p=302 ಬೆಂಗಳೂರು ಆಗಸ್ಟ್‌ 15: ಸ್ವಾತಂತ್ರ್ಯದ ಮಹತ್ವವನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು ಹಾಗೂ ಕರ್ತವ್ಯವನ್ನು ಪಾಲಿಸಿದವರಿಗಷ್ಟೇ ಹಕ್ಕನ್ನು ಪ್ರತಿಪಾದಿಸುವ ಅರ್ಹತೆ ಇರಬೇಕು ಎಂದು ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್.ಎನ್.ಕುಮಾರ್‌ರವರು ಅಭಿಪ್ರಾಯಪಟ್ಟರು. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ದೇಶದ ಚರಿತ್ರೆಯನ್ನು ತಿರುಚುವ ಕೆಲಸವನ್ನು ಮಾಡಬಾರದು ಎಂದು ತಿಳಿಸಿದ ಅವರು ನಮ್ಮನ್ನು ನಾವು ಸರಿ ದಾರಿಯಲ್ಲಿ ಮುನ್ನಡೆಸುಕೊಂಡು ಹೋಗಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಸಿ ಸಂಸ್ಥೆಯು ಭಾಗಿಯಾಗಿ ತನ್ನದೇ ವಿಶೇಷ ಕೊಡುಗೆಯನ್ನು ದೇಶಕ್ಕೆ ನೀಡಿದೆಯಲ್ಲದೆ, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ತುಂಬುವಂತೆ ಮಾಡಿದೆ ಎಂದು ಹೇಳಿದರು. ಎಚ್‌.ನರಸಿಂಹಯ್ಯನವರ ಒಡನಾಟವನ್ನು ಸ್ಮರಿಸಿ,ಅವರ ಸರಳತೆ ಹಾಗು ಶ್ರದ್ಧೆಯ ನಡೆಯಿಂದ ಅವರು ಪಡೆದ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟುಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಇ.ಎಸ್.ಸಂಸ್ಥೆಯ ಅಧ್ಯಕ್ಷರಾದ ಡಾ.ಎಚ್‌.ಎನ್.ಸುಬ್ರಮಣ್ಯರವರು ವಹಿಸಿ ಎಲ್ಲರಿಗೂ ಸ್ವಾಗತವನ್ನು ಕೋರಿದರು, ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ.ವೆಂಕಟಶಿವಾರೆಡ್ಡಿಯವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ನ್ಯಾಷನಲ್ ಇಂಗ್ಲೀಷ್ ಪ್ರೈಮರಿ ಶಾಲೆಯ ಛೇರನ್ ಡಾ.ರಾಜ್‌ ಕುಮಾರ್, ಸಂಸ್ಥೆಯ ಗೌರಿಂಗ್‌ ಸದಸ್ಯರಾದ ಸುಬ್ರಮಣ್ಯ ಜೋಯಿಸ್‌ರವರು ಹಾಗು ಶ್ರೀಮತಿ ಪಾವನರವರು,ಮತ್ತು ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

]]>
https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b7%e0%b2%a8%e0%b3%8d-%e0%b2%b8%e0%b3%8a%e0%b2%b8%e0%b3%88%e0%b2%9f%e0%b2%bf/feed/ 0