27000 vehicles sold in May 2026 – New Xpress News https://newxpressnews.com The Latest News Mon, 01 Jun 2026 13:36:10 +0000 en-US hourly 1 https://wordpress.org/?v=7.0 https://newxpressnews.com/wp-content/uploads/2022/09/cropped-Siteicon-32x32.png 27000 vehicles sold in May 2026 – New Xpress News https://newxpressnews.com 32 32 ಮೇ ತಿಂಗಳಿನಲ್ಲಿ 27,586 ವಾಹನಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಕಾಲಿಕ ಗರಿಷ್ಠ ದಾಖಲೆ; ವಾರ್ಷಿಕ ಆಧಾರದ ಮೇಲೆ 23.6% ಪ್ರಗತಿ ದಾಖಲಿಸಿದ ಕಿಯಾ ಇಂಡಿಯಾ https://newxpressnews.com/%e0%b2%ae%e0%b3%87-%e0%b2%a4%e0%b2%bf%e0%b2%82%e0%b2%97%e0%b2%b3%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-27586-%e0%b2%b5%e0%b2%be%e0%b2%b9%e0%b2%a8%e0%b2%97%e0%b2%b3%e0%b2%a8%e0%b3%8d/ https://newxpressnews.com/%e0%b2%ae%e0%b3%87-%e0%b2%a4%e0%b2%bf%e0%b2%82%e0%b2%97%e0%b2%b3%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-27586-%e0%b2%b5%e0%b2%be%e0%b2%b9%e0%b2%a8%e0%b2%97%e0%b2%b3%e0%b2%a8%e0%b3%8d/#respond Mon, 01 Jun 2026 13:35:53 +0000 https://newxpressnews.com/?p=3148 ನವದೆಹಲಿ, ಜೂನ್ 1: ದೇಶದ ಪ್ರಮುಖ ಮಾಸ್-ಪ್ರೀಮಿಯಂ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಕಿಯಾ ಇಂಡಿಯಾ, ಮೇ 2025 ರಲ್ಲಿ ಮಾರಾಟವಾದ 22,315 ವಾಹನಗಳಿಗೆ ಹೋಲಿಸಿದರೆ ಈ ಬಾರಿ ಮೇ ತಿಂಗಳಿನಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 23.6 ರಷ್ಟು ಬೆಳವಣಿಗೆಯೊಂದಿಗೆ 27,586 ವಾಹನಗಳ ಹೋಲ್‌ಸೇಲ್ ಮಾರಾಟವನ್ನು ದಾಖಲಿಸಿದೆ. ಇದು ಕಂಪನಿಯು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಮೇ ತಿಂಗಳಿನಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ಮಾರಾಟವಾಗಿದೆ. ಈ ಬಲಿಷ್ಠ ಪ್ರದರ್ಶನವು ಕಿಯಾ ಸಂಸ್ಥೆಯ ಎಲ್ಲಾ ಮಾಡೆಲ್ ಕಾರುಗಳಿಗೆ ಗ್ರಾಹಕರಲ್ಲಿ ಇರುವ ನಿರಂತರ ಬೇಡಿಕೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಮುಂದುವರಿದ ವೇಗವನ್ನು ಪ್ರತಿಫಲಿಸುತ್ತದೆ.

2026 ರಲ್ಲಿ ತನ್ನ ಬಲಿಷ್ಠ ಬೆಳವಣಿಗೆಯ ಹಾದಿಯನ್ನು ಮುಂದುವರಿಸಿರುವ ಕಿಯಾ ಇಂಡಿಯಾ, ಪ್ರಸಕ್ತ ವರ್ಷದ ಇಂದಿನವರೆಗಿನ (YTD) ಒಟ್ಟು ಮಾರಾಟದಲ್ಲಿ 139,197 ವಾಹನಗಳನ್ನು ದಾಖಲಿಸಿದೆ. ಇದು 2025 ರ ಇದೇ ಅವಧಿಯಲ್ಲಿ ಮಾರಾಟವಾದ 121,514 ವಾಹನಗಳಿಗೆ ಹೋಲಿಸಿದರೆ ಶೇಕಡಾ 14.6ರಷ್ಟು ಪ್ರಗತಿಯನ್ನು ತೋರಿಸುತ್ತದೆ. ಪ್ರೀಮಿಯಂ, ತಂತ್ರಜ್ಞಾನ ಆಧಾರಿತ ಮತ್ತು ಭವಿಷ್ಯಕ್ಕೆ ಪೂರಕವಾದ ಚಲನಶೀಲ ಪರಿಹಾರಗಳನ್ನು ಒದಗಿಸುವಲ್ಲಿ ಕಿಯಾ ಸಂಸ್ಥೆಯು ನೀಡುತ್ತಿರುವ ಗಮನ ಹಾಗೂ ಕಂಪನಿಯ ವಿವಿಧ ಮಾಡೆಲ್‌ನ ಕಾರುಗಳಿಗೆ ಗ್ರಾಹಕರಲ್ಲಿ ಇರುವ ನಿರಂತರ ಬೇಡಿಕೆಯಿಂದಾಗಿ ಈ ಮಾರಾಟದ ವೇಗವು ಮುಂದುವರಿದಿದೆ.

ಮಾರಾಟದ ಸಾಧನೆಯ ಕುರಿತು ಮಾತನಾಡಿದ ಕಿಯಾ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಶ್ರೀ ಅತುಲ್ ಸೂದ್ ಅವರು, “ನಮ್ಮ ಸಾರ್ವಕಾಲಿಕ ಗರಿಷ್ಠ ಮೇ ತಿಂಗಳ ಮಾರಾಟದ ಪ್ರದರ್ಶನವು, ವಿವಿಧ ವಿಭಾಗಗಳಲ್ಲಿ ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ನಮ್ಮ ಕಾರುಗಳ ಶ್ರೇಣಿ ಹೊಂದಿಕೆಯಾಗಿರುವುದನ್ನು ಪ್ರತಿಬಿಂಬಿಸುತ್ತದೆ. ಹೊಸ ಸೆಲ್ಟೋಸ್ ಮತ್ತು ಸೋನೆಟ್ ಕಾರುಗಳಿಗೆ ಮುಂದುವರಿದಿರುವ ಭಾರಿ ಬೇಡಿಕೆ ಹಾಗೂ ಇದರೊಂದಿಗೆ ಕಾರನ್ಸ್ ಕ್ಲಾವಿಸ್, ಕ್ಲಾವಿಸ್ EV ಮತ್ತು MY26 ಸಿರೋಸ್ ಮಾಡೆಲ್‍ಗಳಿಗೆ ಸಿಗುತ್ತಿರುವ ಉತ್ತೇಜನಕಾರಿ ಪ್ರತಿಕ್ರಿಯೆಯು ನಮ್ಮ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಸಹಾಯ ಮಾಡಿದೆ. ಅದೇ ಸಮಯದಲ್ಲಿ, ಇತ್ತೀಚೆಗೆ ನಾವು ಆರಂಭಿಸಿರುವ ‘ಬ್ಯಾಟರಿ-ಆಸ್-ಎ-ಸರ್ವಿಸ್’ (BaaS) ಕಾರ್ಯಕ್ರಮದಂತಹ ಉಪಕ್ರಮಗಳು ಗ್ರಾಹಕರಿಗೆ ಇಲೆಕ್ಟ್ರಾನಿಕ್ ವಾಹನಗಳ ಬಳಕೆಯನ್ನು ಹೆಚ್ಚು ಸುಲಭ ಮತ್ತು ಪ್ರಾಯೋಗಿಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ದೇಶಾದ್ಯಂತ ನಮ್ಮ ಅಸ್ತಿತ್ವವನ್ನು ನಾವು ಮತ್ತಷ್ಟು ಬಲಪಡಿಸುತ್ತಿದ್ದಂತೆ, ಭಾರತೀಯ ಗ್ರಾಹಕರ ಬದಲಾಗುತ್ತಿರುವ ಅಗತ್ಯತೆಗಳಿಗೆ ಪೂರಕವಾದ ನವೀನ ಉತ್ಪನ್ನಗಳು, ಪ್ರೀಮಿಯಂ ಮಾಲೀಕತ್ವದ ಅನುಭವಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಒದಗಿಸುವುದರ ಕಡೆಗೆ ನಮ್ಮ ಗಮನ ಮುಂದುವರಿಯುತ್ತದೆ,” ಎಂದು ತಿಳಿಸಿದ್ದಾರೆ.

ಈ ತಿಂಗಳ ಬಲಿಷ್ಠ ಮಾರಾಟದ ಸಾಧನೆಯನ್ನು ಹೊಸ ಸೆಲ್ಟೋಸ್ ಮುನ್ನಡೆಸಿದೆ, ಇದು ಜನವರಿಯಲ್ಲಿ ಬಿಡುಗಡೆಯಾದಾಗಿನಿಂದ ಪ್ರತಿ ತಿಂಗಳು 10,000 ಕ್ಕೂ ಹೆಚ್ಚು ವಾಹನಗಳ ಮಾರಾಟದ ಮೈಲಿಗಲ್ಲನ್ನು ದಾಟುವ ಮೂಲಕ ತನ್ನ ಬಲಿಷ್ಠ ಬೆಳವಣಿಗೆಯ ವೇಗವನ್ನು ಮುಂದುವರಿಸಿದೆ. ಇದರ ಬೋಲ್ಡ್ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಮಾನದಂಡವನ್ನು ಸೃಷ್ಟಿಸಿರುವ 5-ಸ್ಟಾರ್ BNCAP ಸುರಕ್ಷತಾ ರೇಟಿಂಗ್ — ಇದು ಇಂದಿನವರೆಗೆ ಭಾರತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ICE ವಾಹನವಾಗಿದೆ — ಇವು ಒಂದು ಪ್ರೀಮಿಯಂ ಕೌಟುಂಬಿಕ SUV ಆಗಿ ಅದರ ಸ್ಥಾನವನ್ನು ಮತ್ತಷ್ಟು ಬಲಪಡಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‌ಗಳಲ್ಲಿ ವ್ಯಾಪಕವಾದ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳ ಮೂಲಕ ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವ ಸೌಕರ್ಯವನ್ನು ಹೊಂದಿರುವ ಸೋನೆಟ್ ಕಾರು, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ತನ್ನ ಬಲವಾದ ಕೊಡುಗೆಯನ್ನು ಮುಂದುವರಿಸಿದೆ. MY26 ಕಿಯಾ ಸಿರೋಸ್ ಕೂಡ ಗ್ರಾಹಕರಿಂದ ಉತ್ತೇಜನಕಾರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ, ವಿಶೇಷವಾಗಿ ಅದರ ನವೀಕರಿಸಿದ ವೇರಿಯೆಂಟ್ ತಂತ್ರಜ್ಞಾನ, ಆಟೋಮ್ಯಾಟಿಕ್ ಗೇರ್‌ನ ಸುಲಭ ಲಭ್ಯತೆ ಮತ್ತು ಒಟ್ಟಾರೆ ಅತ್ಯುತ್ತಮ ಮೌಲ್ಯದ ಕೊಡುಗೆಗಾಗಿ ಇದು ಹೆಚ್ಚು ಗಮನ ಸೆಳೆದಿದೆ.

ಕಿಯಾ ಇಂಡಿಯಾದ ಕೌಟುಂಬಿಕ ವಾಹನಗಳ ಶ್ರೇಣಿಯನ್ನು ಮತ್ತಷ್ಟು ಬಲಪಡಿಸುತ್ತಾ, ಸುಧಾರಿತ ವೈಶಿಷ್ಟ್ಯಗಳು ಮತ್ತು ವೈವಿಧ್ಯಮಯ ಆಸನಗಳ ವಿನ್ಯಾಸದೊಂದಿಗೆ ಪ್ರಾಯೋಗಿಕ ವಾಹನದ ಸೌಕರ್ಯವನ್ನು ಹುಡುಕುತ್ತಿರುವ ಗ್ರಾಹಕರಲ್ಲಿ ಕಾರನ್ಸ್ ಕ್ಲಾವಿಸ್ ಮತ್ತು ಕ್ಲಾವಿಸ್ EV ನಿರಂತರವಾಗಿ ಜನಪ್ರಿಯತೆ ಗಳಿಸುತ್ತಿವೆ. ಕಿಯಾ ಇಂಡಿಯಾದ ‘ಬ್ಯಾಟರಿ-ಆಸ್-ಎ-ಸರ್ವಿಸ್’ (BaaS) ಕಾರ್ಯಕ್ರಮದ ಪರಿಚಯವು, ಇಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಇರುವ ಆರಂಭಿಕ ಆರ್ಥಿಕ ಅಡಚಣೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುವ ಮೂಲಕ ಕಂಪನಿಯ EV ಕಾರ್ಯತಂತ್ರಕ್ಕೆ ಮತ್ತಷ್ಟು ಪೂರಕವಾಗಿದೆ.

402 ನಗರಗಳಲ್ಲಿ ಹರಡಿರುವ 891 ಸಂಪರ್ಕ ಕೇಂದ್ರಗಳನ್ನು ಒಳಗೊಂಡಿರುವ ಕಿಯಾ ಇಂಡಿಯಾದ ಬಲಿಷ್ಠ ರಾಷ್ಟ್ರವ್ಯಾಪಿ ಜಾಲವು, ನಗರ ಮತ್ತು ಉದಯೋನ್ಮುಖ ಮಾರುಕಟ್ಟೆಗಳೆರಡರಲ್ಲೂ ಗ್ರಾಹಕರು ಅದರ ಮಾರಾಟ, ಸೇವೆ ಮತ್ತು ಮಾಲೀಕತ್ವದ ಬೆಂಬಲವನ್ನು ಸುಲಭವಾಗಿ ಪಡೆಯುವಂತೆ ಮಾಡುತ್ತದೆ. ಇದು 130 ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ಕಾರುಗಳ ಮಳಿಗೆಗಳಿಂದ ಮತ್ತಷ್ಟು ಬಲಗೊಂಡಿದ್ದು, ಗ್ರಾಹಕರಿಗೆ ತಕ್ಷಣದ ಪಾವತಿಗಳು, ಸುಲಭವಾದ ಕಾರು ವಿನಿಮಯ ಮತ್ತು ಜಂಜಾಟರಹಿತ ಮಾಲೀಕತ್ವದ ಅನುಭವವನ್ನು ನೀಡುತ್ತದೆ.

]]>
https://newxpressnews.com/%e0%b2%ae%e0%b3%87-%e0%b2%a4%e0%b2%bf%e0%b2%82%e0%b2%97%e0%b2%b3%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-27586-%e0%b2%b5%e0%b2%be%e0%b2%b9%e0%b2%a8%e0%b2%97%e0%b2%b3%e0%b2%a8%e0%b3%8d/feed/ 0