15yrs Celebration – New Xpress News https://newxpressnews.com The Latest News Tue, 03 Jun 2025 04:59:45 +0000 en-US hourly 1 https://wordpress.org/?v=6.9.4 https://newxpressnews.com/wp-content/uploads/2022/09/cropped-Siteicon-32x32.png 15yrs Celebration – New Xpress News https://newxpressnews.com 32 32 ‘ಕಲಾಕೃತಿ 4.0: ಬೆಂಗಳೂರಿನ ಚೆನ್ನೈಸ್ ಅಮಿರ್ತಾ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ಗೆ 15 ವರ್ಷಗಳ ಸಂಭ್ರಮ https://newxpressnews.com/%e0%b2%95%e0%b2%b2%e0%b2%be%e0%b2%95%e0%b3%83%e0%b2%a4%e0%b2%bf-4-0-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%9a%e0%b3%86%e0%b2%a8%e0%b3%8d%e0%b2%a8/ https://newxpressnews.com/%e0%b2%95%e0%b2%b2%e0%b2%be%e0%b2%95%e0%b3%83%e0%b2%a4%e0%b2%bf-4-0-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%9a%e0%b3%86%e0%b2%a8%e0%b3%8d%e0%b2%a8/#respond Tue, 03 Jun 2025 04:40:04 +0000 https://newxpressnews.com/?p=2478 ಬೆಂಗಳೂರು, ಮೇ 31: ಬೆಂಗಳೂರಿನ ಚೆನ್ನೈಸ್ ಅಮಿರ್ತಾ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ (IIHM) ತನ್ನ 15 ವರ್ಷಗಳ ಆತಿಥ್ಯ ಶಿಕ್ಷಣದ ಶ್ರೇಷ್ಠತೆಯನ್ನು ಆಚರಿಸಲು ‘ಕಲಾಕೃತಿ 4.0’ ಎಂಬ ಭವ್ಯ ಕಾರ್ಯಕ್ರಮ ಆಯೋಜಿಸಿತ್ತು. ಖ್ಯಾತ ನಟ ವಸಿಷ್ಠ ನಿರಂಜನ್ ಸಿಂಹ ಅವರು ಈ ಕಾರ್ಯಕ್ರಮದ ಆಕರ್ಷಣೆಯಾಗಿದ್ದರೆ, ಸಂಸ್ಥೆಯ ಅಧ್ಯಕ್ಷ ಶ್ರೀ ಬೂಮೀ ನಾಥನ್ ಅವರ ನೇತೃತ್ವದಲ್ಲಿ ಚೆನ್ನೈಸ್ ಅಮಿರ್ತಾದ ಶ್ರೇಷ್ಠತೆಯ ಪಯಣವನ್ನು ಸಂಸ್ಕೃತಿ ಮತ್ತು ಪ್ರತಿಭೆಯ ಮೂಲಕ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿ ವಶಿಷ್ಠ ಸಿಂಹ ಅವರು ಸಂಸ್ಥೆಯ ಗಣ್ಯರೊಂದಿಗೆ ಸಾಂಪ್ರದಾಯಿಕ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಭಾರತೀಯ ಶಾಸ್ತ್ರೀಯ ನೃತ್ಯದಿಂದ ಹಿಡಿದು ಸಮಕಾಲೀನ ಮತ್ತು ಪಾಶ್ಚಿಮಾತ್ಯ ಶೈಲಿಗಳವರೆಗಿನ ಮನಮೋಹಕ ಪ್ರದರ್ಶನಗಳು ನಡೆದವು. ಈ ಸಾಂಸ್ಕೃತಿಕ ಪ್ರದರ್ಶನಗಳು ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ಎತ್ತಿ ತೋರಿಸಿತು.

ಸಂಸ್ಥೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸಾಧನೆಗಳನ್ನು ಗೌರವಿಸುವ ಭವ್ಯ ಸನ್ಮಾನ ಸಮಾರಂಭ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವರ ಶ್ರೇಷ್ಠ ಸಾಧನೆಗಳನ್ನು ಗುರುತಿಸಿ 10 ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ವಶಿಷ್ಠ ಸಿಂಹ ಅವರು ಮಾತನಾಡಿ, ವಿದ್ಯಾರ್ಥಿಗಳ ಅಸಾಧಾರಣ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಶ್ಲಾಘಿಸಿದರು. ಶೈಕ್ಷಣಿಕ ಪಠ್ಯಕ್ರಮವನ್ನು ಮೀರಿದ ಪ್ರತಿಭೆಯನ್ನು ಪೋಷಿಸುವಲ್ಲಿ ಸಂಸ್ಥೆಯ ಪಾತ್ರವನ್ನು ಅವರು ಕೊಂಡಾಡಿದರು. “ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾವಂತರು ಎಂಬುದು ಅಚ್ಚರಿಯ ಸಂಗತಿ ಎಂದು ಹೇಳಿದರು. ಚೆನ್ನೈಸ್ ಅಮಿರ್ತಾ ಪಠ್ಯೇತರ ವಿಚಾರಗಳಲ್ಲಲಿ ಪ್ರತಿಭೆಯನ್ನು ಪೋಷಿಸಲು ವೇದಿಕೆಯನ್ನು ಸೃಷ್ಟಿಸುತ್ತಿರುವುದು ಅದ್ಭುತ,” ಎಂದು ಹೇಳಿದರು.

ಕಲಾಕೃತಿ 4.0 ಕಾರ್ಯಕ್ರಮವು ವೈಯಕ್ತಿಕ ಸಾಧನೆಗಳನ್ನು ಆಚರಿಸುವುದರ ಜೊತೆಗೆ, ಸಂಸ್ಥೆಯ ಸಮಗ್ರ ಶಿಕ್ಷಣ ವಿಧಾನವನ್ನು ಪ್ರಸ್ತುತಪಡಿಸಿತು. ಈ ಸಮಗ್ರ ವಿಧಾನದಿಂದಾಗಿ ಬೆಂಗಳೂರು ಕ್ಯಾಂಪಸ್ 100% ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ದಾಖಲೆ ಹೊಂದಿದೆ. ಅಷ್ಟೇ ಅಲ್ಲದೆ, ಚೆನ್ನೈಸ್ ಅಮಿರ್ತಾ IIHM 2024ರ ಕಲಿನರಿ ಒಲಿಂಪಿಕ್ಸ್‌ನಲ್ಲಿ ಭಾರತೀಯ ಸಂಸ್ಥೆಗೆ ಮೊದಲ ಬಾರಿಗೆ ಚಿನ್ನದ ಪದಕವನ್ನು ಗೆದ್ದಿದೆ ಎಂಬುದು ಗಮನಾರ್ಹ.

2010ರಲ್ಲಿ ಸ್ಥಾಪನೆಯಾದಾಗಿನಿಂದ, ಚೆನ್ನೈಸ್ ಅಮಿರ್ತಾ IIHM 27,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ನಿಯೋಜಿಸಿದೆ, ಇದರಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಉದ್ಯಮ-ಕೇಂದ್ರಿತ ಆತಿಥ್ಯ ತರಬೇತಿಯಲ್ಲಿ ಸಂಸ್ಥೆಯು ಮುಂಚೂಣಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಆತಿಥ್ಯ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಈ ಸಂಸ್ಥೆಗೆ ದಿ ಟೈಮ್ಸ್ ಆಫ್ ಇಂಡಿಯಾದಿಂದ ಐದು ಬಾರಿ ಗೌರವ ಸಿಕ್ಕಿದೆ.
ನಿರ್ವಹಣಾ ಮಂಡಳಿಯು, ಡೀನ್ ಅಕಾಡೆಮಿಕ್ಸ್ ಶ್ರೀ ಸುರೇನ್, ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀಮತಿ ಬಾನುಮತಿ CAIIHM ಬೆಂಗಳೂರಿನ ಪ್ರಾಂಶುಪಾಲ ಶ್ರೀ ಸ್ವಾಮಿನಾಥನ್ ಹಾಗೂ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಉದ್ಯಮ ಪಾಲುದಾರರಿಗೆ ಇದೇ ವೇಳೆ ಕೃತಜ್ಞತೆ ಸಲ್ಲಿಸಲಾಯಿತು.

]]>
https://newxpressnews.com/%e0%b2%95%e0%b2%b2%e0%b2%be%e0%b2%95%e0%b3%83%e0%b2%a4%e0%b2%bf-4-0-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%9a%e0%b3%86%e0%b2%a8%e0%b3%8d%e0%b2%a8/feed/ 0