Home Awards ‘ಜೈ ಜವಾನ್ ಜೈ ಕಿಸಾನ್’: ವಿಶ್ವ ವಿದ್ಯಾಪೀಠದಲ್ಲಿ ದೇಶಭಕ್ತಿ, ಕೃಷಿ ಸಂಸ್ಕೃತಿಯ ವೈಭವದ ಅನಾವರಣ

‘ಜೈ ಜವಾನ್ ಜೈ ಕಿಸಾನ್’: ವಿಶ್ವ ವಿದ್ಯಾಪೀಠದಲ್ಲಿ ದೇಶಭಕ್ತಿ, ಕೃಷಿ ಸಂಸ್ಕೃತಿಯ ವೈಭವದ ಅನಾವರಣ

0

ಬೆಂಗಳೂರು, ನವೆಂಬರ್ 25: ದೇಶದ ಗಡಿ ಕಾಯುವ ಯೋಧರು ಮತ್ತು ನಾಡಿಗೆ ಅನ್ನ ನೀಡುವ ರೈತರ ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ, ನಗರದ ಪ್ರತಿಷ್ಠಿತ ವಿಶ್ವ ವಿದ್ಯಾಪೀಠ ಸಮೂಹ ಸಂಸ್ಥೆಗಳು (VVPGS) ತನ್ನ ವಿಕ್ರಮಶಿಲಾ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ “ಜೈ ಜವಾನ್ ಜೈ ಕಿಸಾನ್” ಸಾಂಸ್ಕೃತಿಕ ಉತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು. ನವೆಂಬರ್ 27ರಿಂದ 29ರವರೆಗೆ ನಡೆದ ಈ ಕಾರ್ಯಕ್ರಮವು ಲಾಲ್ ಬಹದ್ದೂರ್ ಶಾಸ್ತ್ರಿಯವರ ಐತಿಹಾಸಿಕ ಘೋಷಣೆಯ ಆಶಯವನ್ನು ಇಂದಿನ ಯುವಜನತೆಯಲ್ಲಿ ಬಿತ್ತುವಲ್ಲಿ ಯಶಸ್ವಿಯಾಯಿತು.

ಗಣ್ಯರಿಗೆ ಸಾಂಪ್ರದಾಯಿಕ ಸ್ವಾಗತ

ನವೆಂಬರ್ 27ರಂದು ನಡೆದ ಅದ್ದೂರಿ ಉದ್ಘಾಟನಾ ಸಮಾರಂಭಕ್ಕೆ ನಾಡಿನ ಮತ್ತು ದೇಶದ ಗಣ್ಯರು ಸಾಕ್ಷಿಯಾದರು. ಸಿರಿಧಾನ್ಯಗಳ ಹರಿಕಾರ ಸಿರಿಧಾನ್ಯಗಳ ಹರಿಕಾರ ಎಂದೇ ಹೆಸರಾದ ಪದ್ಮಶ್ರೀ ಡಾ. ಖಾದರ್ ವಲಿ, ಕಾರ್ಗಿಲ್ ಯುದ್ಧದ ವೀರಯೋಧ ಹಾಗೂ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರೂ ಆದ ಗೌರವಾನ್ವಿತ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಅವರು, ಕರ್ನಲ್ ಜೈ ಶಂಕರ್ ಬಾಬು ಅವರು ಮತ್ತು ಶ್ರೀ ಸಿ. ಬಿ. ಮಹೇಶ್ವರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲಹಂಕದ ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 

ಶಾಲೆಯ ನಿರ್ದೇಶಕಿ ಶ್ರೀಮತಿ ಸುಶೀಲಾ ಸಂತೋಷ್  ಅವರು ಮತ್ತು ಶಾಲಾ ಮುಖ್ಯಸ್ಥರ ನೇತೃತ್ವದಲ್ಲಿ ಅತಿಥಿಗಳನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ಎತ್ತಿನ ಗಾಡಿಯಲ್ಲಿ ವೇದಿಕೆಗೆ ಕರೆತರುವ ಮೂಲಕ ಗ್ರಾಮೀಣ ಸೊಗಡಿನ ಅದ್ದೂರಿ ಸ್ವಾಗತ ಕೋರಲಾಯಿತು. 5 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದರು.

‘ವೀರ ಭೂಮಿ’ ಮತ್ತು ‘ಕೃಷಿ ಜ್ಞಾನ’ ಯಾತ್ರೆಯ ಅನುಭವ

ಈ ಬೃಹತ್ ಕಾರ್ಯಕ್ರಮದ ಯಶಸ್ಸಿಗಾಗಿ ಶಾಲಾ ಆಡಳಿತ ಮಂಡಳಿ, ಕಳೆದ ಆರು ತಿಂಗಳಿನಿಂದ ಸತತವಾಗಿ ಶ್ರಮಿಸಿದೆ.. ನಿರ್ದೇಶಕರಾದ ಶ್ರೀಮತಿ ಸುಶೀಲಾ ಸಂತೋಷ್ ಅವರ ನೇತೃತ್ವದಲ್ಲಿ ರೂಪಿಸಲಾದ ಈ ಯೋಜನೆಯು, ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೆ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುವ ಗುರಿ ಹೊಂದಿದೆ. 

“ವೀರ ಭೂಮಿ ಯಾತ್ರೆ”ಯ ಮೂಲಕ ವಿದ್ಯಾರ್ಥಿಗಳನ್ನು ಭಾರತದ ಪ್ರಮುಖ ಸೇನಾ ನೆಲೆಗಳಿಗೆ ಕರೆದೊಯ್ದು, ಸೇನೆಯ ಕಾರ್ಯವೈಖರಿಯನ್ನು ಪರಿಚಯಿಸಲಾಯಿತು. ಹಾಗೆಯೇ, “ಕೃಷಿ ಜ್ಞಾನ ಯಾತ್ರೆ”ಯ ಮೂಲಕ ಕೃಷಿ ಚಟುವಟಿಕೆಗಳ ನೇರ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸುಮಿತ್ ರಂಜನ್ ಬಸು ಅವರ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳಲ್ಲಿ ಸೈನಿಕರಿಗೆ ಗೌರವ, ಆಹಾರ ಭದ್ರತೆ, ಸುಸ್ಥಿರತೆ ಮತ್ತು ಸ್ವಾವಲಂಬನೆಯಂತಹ ನಾಲ್ಕು ಪ್ರಮುಖ ಮೌಲ್ಯಗಳನ್ನು ಬಿತ್ತಲಾಯಿತು. ಶಾಸ್ತ್ರಿಯವರು ಅಂದು ನೀಡಿದ ಕರೆಯಂತೆ, ದೇಶದ ರಕ್ಷಣೆ ಮತ್ತು ಕೃಷಿ ಉತ್ಪಾದನೆ ಎರಡೂ ದೇಶದ ಪ್ರಗತಿಗೆ ಅವಶ್ಯಕ ಎಂಬುದನ್ನು ಈ ಮೂಲಕ ಸಾರಲಾಯಿತು. 

ಕಣ್ಮನ ಸೆಳೆಯಲಿರುವ ಪ್ರದರ್ಶನ ಮತ್ತು ಸಾಂಸ್ಕೃತಿಕ ಸಂಜೆ

ಮೂರು ದಿನಗಳ ಈ ಹಬ್ಬದಲ್ಲಿ ಕೃಷಿ ಮತ್ತು ಸೇನೆಗೆ ಸಂಬಂಧಿಸಿದ ವಿಶೇಷ ವಸ್ತು ಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಿದ್ದವು . ಭತ್ತದ ಕೃಷಿ, ನೇಯ್ಗೆ, ಜೇನುಸಾಕಣೆಯಂತಹ ಸಾಂಪ್ರದಾಯಿಕ ಪದ್ಧತಿಗಳ ಜೊತೆಗೆ, ಇಂದಿನ ಆಧುನಿಕ ಕೃಷಿ ಪದ್ಧತಿಯಾದ ಹೈಡ್ರೋಪೋನಿಕ್ಸ್ ತಂತ್ರಜ್ಞಾನವನ್ನೂ ಪ್ರದರ್ಶಿಸುವ ಮಳಿಗೆಗಳು ಇಲ್ಲಿದ್ದವು. ಇದಲ್ಲದೆ, ಭಾರತೀಯ ಸೇನೆಯ ಶೌರ್ಯ ಮತ್ತು ತ್ಯಾಗವನ್ನು ಬಿಂಬಿಸುವ ಮಾದರಿಗಳು ಹಾಗೂ ಪೋಸ್ಟರ್‌ಗಳ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಉದ್ದೀಪನಗೊಳಿಸಿವರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ “ಜೈ ಕಿಸಾನ್” ಮತ್ತು “ಬಾರ್ಡರ್ ಟು ಬಾರ್ನ್ಸ್” (ಗಡಿಯಿಂದ ಗೋದಾಮಿನವರೆಗೆ) ಎಂಬ ವಿಷಯಾಧಾರಿತ ನಾಟಕಗಳು ಪ್ರದರ್ಶನಗೊಂಡವು. ಇವು ಕೃಷಿ ಬದುಕು ಮತ್ತು ಸೈನಿಕರ ಜೀವನದ ನೈಜ ಚಿತ್ರಣವನ್ನು ಕಟ್ಟಿಕೊಟ್ಟವು.

Previous articleAmishi Kaushik Inspires Students with Lessons on Empowerment and Career Growth at Lakmē Academy Powered by Aptech
Next articleAster DM Healthcare unveils Aster Global Institute for Advanced Epilepsy Care

LEAVE A REPLY

Please enter your comment!
Please enter your name here