ಬೆಂಗಳೂರು: ಮಹಾಲಯ ಅಮವಾಸ್ಯೆಯಂದು, ನೀವು ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ ನಿಮ್ಮ ಪಿತೃಗಳನ್ನು ಪೂಜಿಸಬೇಕು ಎಂದು ರುದ್ರಾಕ್ಷ ಪ್ರತಿಷ್ಠಾನದ ಜೆ.ಪಿ. ಗುರೂಜಿ ಹೇಳುತ್ತಾರೆ.
ರುದ್ರಾಕ್ಷ ಫೌಂಡೇಶನ್ನ ಜೆಪಿ ಗುರೂಜಿಮಹಾಲಯ ಅಮಾವಾಸ್ಯೆಯೆಂದರೆ ಅದು ಪಿತೃ ಪಕ್ಷದ ಕೊನೆಯ ದಿನವಾಗಿರುತ್ತದೆ. ಈ ದಿನದಂದು ಕುಟುಂಬವನ್ನು ನೋಡಲು ಭೂಮಿಗೆ ಬಂದಿದ್ದ ಪಿತೃಗಳನ್ನು ಗೌರವಪೂರ್ವಕವಾಗಿ ಪರಲೋಕಕ್ಕೆ ಕಳುಹಿಸಲಾಗುತ್ತದೆ.
ಈ ದಿನ, ಪೂರ್ವಜರ ಹೆಸರಿನಲ್ಲಿ ಮರಗಳು ಮತ್ತು ಗಿಡಗಳನ್ನು ನೆಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಇದನ್ನು ಮಾಡುವುದರಿಂದ ಪಿತೃ ದೋಷದಿಂದ ಮುಕ್ತಿ ದೊರೆಯುತ್ತದೆ.ಗಿಡಗಳನ್ನು ನೆಡುವ ಮೂಲಕ ಪಿತೃಗಳ ಆತ್ಮಕ್ಕೆ ಶಾಂತಿ ನೀಡಬಹುದು. ದೇವತೆಗಳ ಜೊತೆಗೆ ಪೂರ್ವಜರು ಸಹ ಅರಳಿ ಮರದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಆದ್ದರಿಂದ ಅರಳಿ ಮರಕ್ಕೆ ನೀರನ್ನು ನೀಡುವುದು ಮತ್ತು ಸರ್ವಪಿತೃ ಅಮವಾಸ್ಯೆಯಂದು ದೀಪವನ್ನು ಬೆಳಗಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ಮರಗಳು ಮತ್ತು ಸಸ್ಯಗಳನ್ನು ನೆಡುವುದರಿಂದ ಪೂರ್ವಜರನ್ನು ಸಂತೋಷಪಡಿಸುವುದು ಮಾತ್ರವಲ್ಲದೆ ಮರಗಳು ಮತ್ತು ಸಸ್ಯಗಳ ಮೂಲಕ ಧನಾತ್ಮಕ ಶಕ್ತಿಯನ್ನು ಪಡೆಯಬಹುದು.
ಸರ್ವಪಿತೃ ಶ್ರಾದ್ಧ ಎಂದು ಕರೆಯಲ್ಪಡುವ ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯನ್ನು ಇದು ಪಿತೃ ಪಕ್ಷದ ಕೊನೆಯ ದಿನವಾಗಿದೆ. ಈ ದಿನ ಪಿತೃಗಳಿಗೆ ಎಲ್ಲರೂ ವಿದಾಯವನ್ನು ಸಲ್ಲಿಸುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ಪಿತೃ ಪಕ್ಷದ ಅವಧಿಯಲ್ಲಿ ಭೂಲೋಕಕ್ಕೆ ಬಂದ ಪೂರ್ವಜರು ಮಹಾಲಯ ಅಮಾವಾಸ್ಯೆಯಂದು ಪುನಃ ಪರಲೋಕಕ್ಕೆ ತೆರಳುತ್ತಾರೆ ಎನ್ನಲಾಗಿದೆ. ಪಿತೃಗಳನ್ನು ಪರಲೋಕಕ್ಕೆ ಗೌರವದಿಂದ ಕಳುಹಿಸಿಕೊಡಲು ನಾವು ಕೆಲವೊಂದು ನಿಯಮಗಳನ್ನು ಮತ್ತು ಸಂಪ್ರದಾಯಗಳನ್ನು ಪಾಲಿಸಬೇಕು. ಅವುಗಳು ಯಾವುವು ತಿಳಿದುಕೊಳ್ಳಿ.
ಮಹಾಲಯ ಅಮಾವಾಸ್ಯೆಯ ಮಹತ್ವ:
ಧರ್ಮಗ್ರಂಥಗಳಲ್ಲಿ ಮಹಾಲಯ ಅಮಾವಾಸ್ಯೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಏಕೆಂದರೆ ಈ ದಿನದಂದು ಪೌರ್ಣಮಿ, ಅಮಾವಾಸ್ಯೆ ಮತ್ತು ಚತುರ್ದಶಿ ದಿನದಂದು ಶ್ರಾದ್ಧವನ್ನು ನಡೆಸಲಾಗುತ್ತದೆ. ಪಿತೃಗಳ ಮರಣಾ ದಿನಾಂಕವು ನೆನಪಿಲ್ಲದಿದ್ದಾಗ ಎಲ್ಲಾ ಪಿತೃಗಳಿಗೂ ನಾವು ಈ ದಿನ ಗೌರವವನ್ನು ಸಲ್ಲಿಸಬಹುದು. ದಾನ ಮಾಡಲು ಕೂಡ ಈ ದಿನ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪಿತೃಗಳು ಮಹಾಲಯ ಅಮಾವಾಸ್ಯೆಯಂದು ತಮ್ಮ ಕುಟುಂಬ ವರ್ಗದವರನ್ನು ಕೊನೆಯದಾಗಿ ಆಶೀರ್ವದಿಸಿ ಹೋಗುತ್ತಾರೆ. ನಾವು ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಗೌರವಯುತ ಪೂಜೆಯನ್ನು ಸಲ್ಲಿಸಿದ್ದೇ ಹೌದಾದರೆ ಪಿತೃ ಪಕ್ಷ ಮುಗಿದ ನಂತರ ಅಂದರೆ ಮಹಾಲಯ ಅಮಾವಾಸ್ಯೆಯ ನಂತರ ಕುಟುಂಬದಲ್ಲಿ ಬದಲಾವಣೆ ಕಂಡುಬರುತ್ತದೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ. ಮತ್ತು ವಾಸ್ತು ದೋಷವಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ.
ಪಿತೃ ವಿಸರ್ಜನಾ ವಿಧಾನ:
ಪಿತೃ ಅಮಾವಾಸ್ಯೆಯ ದಿನದಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಗಂಗಾ ಜಲದಲ್ಲಿ ಸ್ನಾನ ಮಾಡಿ ಅಥವಾ ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ. ನಂತರ ಶುದ್ಧವಾದ ಬಟ್ಟೆಯನ್ನು ಧರಿಸಿ. ಮನೆಯಲ್ಲಿ ಸಾತ್ವಿಕ ಆಹಾರವನ್ನು ತಯಾರಿಸಿ, ಕುಟುಂಬದ ಸದಸ್ಯರೆಲ್ಲರೂ ಸಾತ್ವಿಕ ಅಹಾರವನ್ನು ಸೇವಿಸಬೇಕು. ಸಂಜೆ ಸಮಯದಲ್ಲಿ ಮನೆಯ ಹೊರಗೆ ನಾಲ್ಕು ಮಣ್ಣಿನ ದೀಪವನ್ನು ಹಚ್ಚಬೇಕು. ಈ ಮಣ್ಣಿನ ದೀಪದಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ, ಹತ್ತಿಯಿಂದ ದೀಪದ ಬತ್ತಿಯನ್ನು ತಯಾರಿಸಿ ಅದನ್ನು ಮನೆಯ ಹೊರಗೆ ಹಚ್ಚಿಡಬೇಕು. ನಂತರ ಮನೆಯಲ್ಲಿ ಕುಳಿತು ಪಿತೃಗಳಿಗೆ ಪಿತೃ ಪಕ್ಷ ಮುಗಿದಿದೆ ಎಂದು ಪ್ರಾರ್ಥಿಸಬೇಕು.
ಕಾಗೆ ಮತ್ತು ಹಸುಗಳಿಗೆ ಆಹಾರವನ್ನು ನೀಡಿ:
ಪಿತೃ ಅಮಾವಾಸ್ಯೆ ದಿನದಂದು ಅಥವಾ ಮಹಾಲಯ ಅಮಾವಾಸ್ಯೆಯ ದಿನದಂದು ಆ ಮನೆಯ ಮಹಿಳೆಯು ಮುಂಜಾನೆ ಬೇಗ ಎದ್ದು ಆಹಾರವನ್ನು ತಯಾರಿಸುತ್ತಾಳೆ. ನಂತರ ಮನೆಗೆ ಬ್ರಾಹ್ಮಣರನ್ನು ಕರೆಸಿ ಪೂರ್ವಜರಿಗೆ ಅಂತಿಮ ನಮಸ್ಕಾರವನ್ನು ಸಲ್ಲಿಸುತ್ತಾರೆ. ಪೂಜೆ ಮುಗಿದ ನಂತರ ಬ್ರಾಹ್ಮಣರಿಗೆ ದಾನವನ್ನು ನೀಡಲಾಗುತ್ತದೆ. ಬ್ರಾಹ್ಮಣರಿಗೆ ದಾನವನ್ನು ನೀಡಿದ ಬಳಿಕ ಕಾಗೆಗಳಿಗೆ ಮತ್ತು ಹಸುಗಳಿಗೆ ನಿಮ್ಮ ಕೈಯಾರೆ ಆಹಾರವನ್ನು ನೀಡಿ. ಪಿತೃಗಳನ್ನು ಪ್ರಾರ್ಥಿಸಿ, ತಾವು ತಿಳಿದು ಅಥವಾ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಕ್ಷಮೆಯನ್ನಾಚಿಸಿ.





























































