Home Bengaluru ಡಿಜಿಟಲ್‌ ಇಂಡಿಯಾ ಅನ್ನು ಸಬಲೀಕರಣಗೊಳಿಸುವುದು: ಈ ಸ್ವಾತಂತ್ರ್ಯ ದಿನದಂದು ಸ್ಲೈಸ್ ತನ್ನ ಎರಡನೇ ಯುಪಿಐ ಚಾಲಿತ...

ಡಿಜಿಟಲ್‌ ಇಂಡಿಯಾ ಅನ್ನು ಸಬಲೀಕರಣಗೊಳಿಸುವುದು: ಈ ಸ್ವಾತಂತ್ರ್ಯ ದಿನದಂದು ಸ್ಲೈಸ್ ತನ್ನ ಎರಡನೇ ಯುಪಿಐ ಚಾಲಿತ ಬ್ಯಾಂಕ್‌ ಶಾಖೆಯನ್ನು ಪ್ರಾರಂಭಿಸುತ್ತಿದೆ

ಗುರುಗ್ರಾಮ್‌ ನಲ್ಲಿ ಯುಪಿಐ-ಮೊದಲು ಬ್ಯಾಂಕ್‌ ಶಾಖೆಯನ್ನು ಪ್ರಾರಂಭಿಸುವುದರೊಂದಿಗೆ ಸ್ಲೈಸ್ ಎಸ್‌ಎಫ್‌ಬಿಯು ಭೌತಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತಿದೆ

0

ಗುರಗಾಂವ್, ಆಗಸ್ಟ್‌ 18: ಭಾರತವು ತನ್ನ 79 ನೇ ಸ್ವಾತಂತ್ರ್ಯ ವರ್ಷಕ್ಕೆ ಕಾಲಿಡುತ್ತಿದ್ದಂತೆ, ನಿಜವಾದ ಸ್ವಾತಂತ್ರ್ಯದ ಕಡೆಗೆ ಪ್ರಯಾಣವು ಈ ಬಾರಿ ಆರ್ಥಿಕ ಸಬಲೀಕರಣದ ಮೂಲಕ ಮುಂದುವರಿಯುತ್ತದೆ. ಸ್ಲೈಸ್ ಗುರುಗ್ರಾಮದಲ್ಲಿ ತನ್ನ ಎರಡನೇ ಯುಪಿಐ-ಚಾಲಿತ ಬ್ಯಾಂಕ್‌ ಶಾಖೆಯನ್ನು ಪ್ರಾರಂಭಿಸಿದ್ದು, ಉತ್ತರ ಭಾರತಕ್ಕೆ ತನ್ನ ತಂತ್ರಜ್ಞಾನದಲ್ಲಿ-ಮುಂದುವರೆದ ಬ್ಯಾಂಕಿಂಗ್‌ ತತ್ವಶಾಸ್ತ್ರವನ್ನು ತಂದಿದೆ. ಈ ಲಾಂಚ್ ಇದೇ ವರ್ಷದ ಜೂನ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತದ ಮೊದಲ ಯುಪಿಐ-ಸಂಯೋಜಿತ ಭೌತಿಕ ಬ್ಯಾಂಕಿಂಗ್‌ ಅನುಭವದ ಪರಿವರ್ತನಾಶೀಲ ಚೊಚ್ಚಲ ಪ್ರವೇಶವನ್ನು ಅನುಸರಿಸುತ್ತದೆ.

ಗುರುಗ್ರಾಮದಲ್ಲಿರುವ ಹೊಸ ಶಾಖೆಯು, ತಂತ್ರಜ್ಞಾನದ ಮೂಲಕ ವಿತರಣಾ ವೆಚ್ಚವನ್ನು ಕಡಿಮೆ ಮಾಡುವುದರೊಂದಿಗೆ, ವೇಗ, ಪಾರದರ್ಶಕತೆ ಮತ್ತು ಗ್ರಾಹಕರ ಸಂತೋಷಕ್ಕೆ ಆದ್ಯತೆಯನ್ನು ನೀಡುವಂತಹ ಬ್ಯಾಂಕಿಂಗ್‌ ಅನುಭವವನ್ನು ನಿರ್ಮಿಸುವ ಸಲುವಾಗಿ ಸ್ಲೈಸ್ ಹೊಂದಿರುವ ದೃಷ್ಟಿಕೋನವನ್ನು ಮುಂದುವರೆಸಿದೆ.

ತನ್ನ ಸೇವೆಗಳಾದ್ಯಂತ ಹೆಣೆಯಲಾದ ಸಂಪೂರ್ಣ ಯುಪಿಐ ಏಕೀಕರಣದೊಂದಿಗೆ, ಈ ಭೌತಿಕ ಶಾಖೆಯು ಗ್ರಾಹಕರಿಗೆ ಅರ್ಥಗರ್ಭಿತ ಮತ್ತು ತಡೆರಹಿತ ಬ್ಯಾಂಕಿಂಗ್ ಅನುಭವವನ್ನು ನೀಡುತ್ತದೆ. ಗ್ರಾಹಕರು ಒಳಗೆ ಬಂದಾಗ,‌ ನಿಮಿಷಗಳಲ್ಲಿ ಬ್ಯಾಂಕ್‌ ಖಾತೆಯನ್ನು ತೆರೆಯುವುದರಿಂದ ಹಿಡಿದು ಸ್ಲೈಸ್ನ ಯುಪಿಐ ಎಟಿಎಂ ಮೂಲಕ ಹಣವನ್ನು ಠೇವಣಿ ಮಾಡುವುದು ಅಥವಾ ಹಿಂಪಡೆಯುವುದು ಅಥವಾ ಸ್ವಯಂ-ಸೇವಾ ಡಿಜಿಟಲ್‌ ಕಿಯೋಸ್ಕ್‌ಗಳ ಮೂಲಕ ಸೇವೆಗಳನ್ನು ಪಡೆದುಕೊಳ್ಳುವುದು, ಇವೆಲ್ಲಾ ಬ್ಯಾಂಕಿಂಗ್‌ ಅನ್ನು ಯುಪಿಐ ಪಾವತಿ ಮಾಡಿದಷ್ಟೇ ಸುಲಭವೆಂದು ಭಾಸವಾಗುವುದನ್ನು ಅವರು ಕಂಡುಕೊಳ್ಳುತ್ತಾರೆ.

“ಈ ಲಾಂಚ್‌ ಡಿಜಿಟಲ್‌ ಸ್ಥಳೀಯ ಬ್ಯಾಂಕಿಂಗ್‌ ಮೂಲಸೌಕರ್ಯವನ್ನು ನಿರ್ಮಿಸುವ ಕಡೆಗೆ ಮತ್ತೊಂದು ಹೆಜ್ಜೆಯನ್ನು ಸೂಚಿಸುತ್ತದೆ,” ಎಂದು ಸ್ಲೈಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆಗಿರುವ ಸತೀಶ್‌ ಕುಮಾರ್‌ ಕಲ್ರಾ ಅವರು ಹೇಳಿದರು. “ಇದು ನಮ್ಮ ವಿಸ್ತರಣೆಗಾಗಿ ನೈಸರ್ಗಿಕವಾದ ಮುಂದಿನ ಹೆಜ್ಜೆಯಾಗಿದೆ. ಬ್ಯಾಂಕಿಂಗ್‌ ನಿಂದ ಘರ್ಷಣೆಯನ್ನು ತೆಗೆದುಹಾಕುವುದು ಮತ್ತು ಅಗತ್ಯ ಸೇವೆಗಳನ್ನು ಜನರಿಗೆ ಹತ್ತಿರ ತರುವ ಮೂಲಕ ನಾವು ತೆರೆಯುತ್ತಿರುವ ಪ್ರತಿಯೊಂದು ಶಾಖೆಯೊಂದಿಗೆ ಡಿಜಿಟಲ್‌ ಇಂಡಿಯಾದ ದೊಡ್ಡ ದೃಷ್ಟಿಕೋನವನ್ನು ಬೆಂಬಲಿಸುತ್ತಿದ್ದೇವೆ. ಬ್ಯಾಂಕಿಂಗ್‌ ಅನ್ನು ಸುಲಭ, ವೇಗ ಮತ್ತು ಎಲ್ಲರಿಗೂ ಹೆಚ್ಚು ಲಭ್ಯವಾಗುವಂತೆ ಮಾಡುವ ಸಲುವಾಗಿ ನಮ್ಮ ಯುಪಿಐ-ಮೊದಲು ವಿಧಾನವನ್ನು ವಿನ್ಯಾಸಗೊಳಿಸಲಾಗಿದೆ.”

ಗುರುಗ್ರಾಮ್‌ ನ ಹೊಸ ಶಾಖೆಯಲ್ಲಿ, ಗ್ರಾಹಕರು ಸ್ವಯಂ-ಸೇವಾ ಡಿಜಿಟಲ್‌ ಕಿಯೋಸ್ಕ್‌ಗಳ ಮೂಲಕ ತಕ್ಷಣವೇ ಉಳಿತಾಯ ಖಾತೆಯನ್ನು ತೆರೆಯಬಹುದು, ಸ್ಥಿರ ಠೇವಣಿ ಮತ್ತು ಕ್ರೆಡಿಟ್‌ನಂತಹ ಬ್ಯಾಂಕಿಂಗ್‌ ಸೇವೆಗಳನ್ನು ಪಡೆದುಕೊಳ್ಳಬಹುದು ಮತ್ತು ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಅಥವಾ ಡೆಬಿಟ್‌ ಕಾರ್ಡ್‌ನ ಅಗತ್ಯವಿಲ್ಲದೆಯೇ ಹಣವನ್ನು ಠೇವಣಿ ಮಾಡಲು, ಹಿಂಪಡೆಯಲು ಅಥವಾ ವರ್ಗಾಯಿಸಲು ಸ್ಲೈಸ್ನ ಯುಪಿಐ ಎಟಿಎಂ ಅನ್ನು ಬಳಸಬಹುದು. ಕ್ಯೂಆರ್ ಕೋಡ್‌ ಅನ್ನು ಸ್ಕ್ಯಾನ್‌ ಮಾಡುವುದು ಮತ್ತು ಮೊತ್ತವನ್ನು ನಮೂದಿಸುವುದರ ಮೂಲಕ ಬಳಕೆದಾರರು ಸುಲಭವಾಗಿ ವಹಿವಾಟುಗಳನ್ನು ಪೂರ್ಣಗೊಳಿಸಬಹುದಾಗಿದ್ದು, ಯುಪಿಐನ ಅನುಕೂಲವನ್ನು ಸಾಂಪ್ರದಾಯಿಕವಾಗಿ ಸಂಕೀರ್ಣವಾಗಿರುವ ಬ್ಯಾಂಕಿಂಗ್‌ ಸೇವೆಗಳಿಗೂ ವಿಸ್ತರಿಸಬಹುದಾಗಿದೆ.

“ಸ್ಲೈಸ್ನಲ್ಲಿ, ನಿಮ್ಮ ಫೋನ್‌ನಲ್ಲಿ ಅಥವಾ ನಿಮ್ಮ ಹತ್ತಿರದ ಶಾಖೆಯಲ್ಲಿ ಬ್ಯಾಂಕಿಂಗ್‌ ಅನ್ನು ಸುಲಭವಾಗಿ ಸಿಗುವಂತೆ ಮಾಡಲು ನಾವು ಭವಿಷ್ಯವನ್ನು ರೂಪಿಸುತ್ತಿದ್ದೇವೆ,” ಎಂದು ಸ್ಲೈಸ್ ನ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜನ್‌ ಬಜಾಜ್‌ ಅವರು ಹೇಳಿದರು. “ಗುರುಗ್ರಾಮವು ನಗರ ಭಾರತದ ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಇದು ಯುವಾವಸ್ಥೆಯಲ್ಲಿದ್ದು, ಮಹತ್ವಾಕಾಂಕ್ಷೆಯ ಮತ್ತು ಡಿಜಿಟಲ್-ಮೊದಲು ಆಗಿದೆ. ಈ ಹೊಸ ಯುಪಿಐ-ಚಾಲಿತ ಶಾಖೆಯೊಂದಿಗೆ, ನಾವು ಸಾಂಪ್ರದಾಯಿಕವಾಗಿ ನಿಧಾನ ಮತ್ತು ಸಂಕೀರ್ಣವಾಗಿರುವ ಅನುಭವವನ್ನು ವೇಗವಾದ, ಅರ್ಥಗರ್ಭಿತ ಮತ್ತು ನೈಜ ಜೀವನಕ್ಕಾಗಿ ನಿರ್ಮಿಸಲಾಗಿರುವ ಅನುಭವವಾಗಿ ಪರಿವರ್ತಿಸುತ್ತಿದ್ದೇವೆ.”
ನಾರ್ತ್ ಈಸ್ಟ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನೊಂದಿಗೆ ವಿಲೀನಗೊಂಡ ನಂತರ, ಸ್ಲೈಸ್ ಈಗ ಪೂರ್ಣ-ಸ್ಟಾಕ್‌ ಬ್ಯಾಂಕ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತನ್ನದೇ ಆದ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಗಳು, ಪಾವತಿ ಮೂಲಸೌಕರ್ಯ ಮತ್ತು ಎಟಿಎಂ ನೆಟ್‌ವರ್ಕ್‌ ಗಳನ್ನು ತಳಮಟ್ಟದಿಂದಲೇ ನಿರ್ಮಿಸುತ್ತಿದೆ. ಈ ವಿಸ್ತರಣೆಯು ಭಾರತದ ನಗರ ಮತ್ತು ಅರೆ-ನಗರಗಳಲ್ಲಿ ಸಮಾನವಾಗಿ ಕಾರ್ಯ ನಿರ್ವಹಿಸುವಂತಹ ವಿತರಣೆಯನ್ನು ಹೊಂದಿರುವ, ತಂತ್ರಜ್ಞಾನವನ್ನು-ಸಕ್ರಿಯಗೊಳಿಸಿದ ಮತ್ತು ಯುಪಿಐ-ಸಂಯೋಜಿತ ಬ್ಯಾಂಕಿಂಗ್‌ ನೆಟ್‌ವರ್ಕ್‌ ಅನ್ನು ನಿರ್ಮಿಸುವ ನಿಟ್ಟಿನಲ್ಲಿ sಸ್ಲೈಸ್ನ ವಿಶಾಲ ಪ್ರಯತ್ನದ ಭಾಗವಾಗಿದೆ.

ಗುರುಗ್ರಾಮ್‌ ನಲ್ಲಿರುವ ಸ್ಲೈಸ್ ಡಿಜಿಟಲ್‌ ಬ್ಯಾಂಕ್‌ ಶಾಖೆಯು ಈ ಸೇವೆಗಳನ್ನು ನೀಡುತ್ತದೆ:
ಎಲ್ಲಾ ಸೇವೆಗಳಲ್ಲಿ ಪೂರ್ಣ ಯುಪಿಐ ಏಕೀಕರಣ
ಸುಲಭ ನಗದು ಠೇವಣಿ ಮತ್ತು ಹಿಂಪಡೆಯುವಿಕೆಗಾಗಿ ಯುಪಿಐ-ಚಾಲಿತ ಎಟಿಎಂಗಳು
ಯಾವುದೇ ಕಾಗದಪತ್ರಗಳಿಲ್ಲದೆ ತ್ವರಿತವಾದ ಗ್ರಾಹಕರ ಆನ್‌ಬೋರ್ಡಿಂಗ್
ಬ್ಯಾಂಕ್‌ ಉತ್ಪನ್ನಗಳನ್ನು ಅನ್ವೇಷಿಸಲು ಮತ್ತು ಪಡೆದುಕೊಳ್ಳಲು ಸ್ವಯಂ-ಸೇವಾ ಕಿಯೋಸ್ಕ್‌ಗಳು
ಸ್ಲೈಸ್ ಎಸ್‌ಎಫ್‌ಬಿಯು ಶತಕೋಟಿ ಭಾರತೀಯರಿಗೆ ಸಾಲವನ್ನು ಸರಳಗೊಳಿಸುವ, ಉಳಿತಾಯ ಮತ್ತು ಖರ್ಚು ಮಾಡುವುದನ್ನು ಸುಲಭಗೊಳಿಸುವ ಮತ್ತು ದೇಶದ ಮೂಲೆ ಮೂಲೆಗೂ ಔಪಚಾರಿಕ ಹಣಕಾಸನ್ನು ತರುವಂತಹ ಬ್ಯಾಂಕ್‌ ಅನ್ನು ನಿರ್ಮಿಸುವತ್ತ ಗಮನ ಹರಿಸಿದೆ.

Previous articleKarnataka emerges as growth engine of aluminium extrusion industry
Next articleKarnataka Seeking Central Relief Measures as Trump’s Tariff Kicks In: Minister Ramalinga Reddy

LEAVE A REPLY

Please enter your comment!
Please enter your name here