ಬೆಂಗಳೂರು, ಮಾರ್ಚ್ 10: ವಿಶ್ವಗಾಣಿಗರ ಸಮುದಾಯ ಟ್ರಸ್ಟ್ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆ ಮತ್ತು ಇಲಾಖೆ ಕಾರ್ಯದರ್ಶಿಗಳ ಅನುಮೋದನೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಶ್ರೀ ಶ್ರೀ ಶ್ರೀ ಪೂರ್ಣಾನಂದಪುರಿ ಸ್ವಾಮಿಗಳು ಹೇಳಿದರು
ದಿ. 24/08/2023 ಇತಿಹಾಸದಲ್ಲಿ ಪ್ರಥಮ ಬಾರಿಗೆ ಇತರೆ ಸಮುದಾಯಗಳಿಗೆ ಇರುವಂತೆ ಗಾಣಿಗ ಜನಾಂಗಕ್ಕೆ. ಅಭಿವೃದ್ಧಿಗೆ ಮತ್ತು ಸಮುದಾಯದ ದಾರಿದೀಪವಾಗಿ ಗುರುಪೀಠ ಮತ್ತು ವಿದ್ಯಾಸಂಸ್ಥೆ ಸ್ಥಾಪಿಸಿರುವುದು ನಮ್ಮ ಜೀವಮಾನದ ಸ್ವಯಂ ಪ್ರೇರಣೆ ಹಂಬಲ
45 ವರ್ಷಗಳ ಸಾರ್ವಜನಿಕ ಜೀವನದಲ್ಲಿ ವಿವಿಧ ಮುಖ್ಯ ಆಡಳಿತಾತ್ಮಕ ಸಂಸ್ಥೆಗಳಲ್ಲಿ ಸೇವೆ ಮಾಡಿ ಯಾವುದೇ ಒಂದು ಅಪಾದನೆಯ ಮುಕ್ತವಾಗಿರುವುದು ನಮ್ಮ ಜೀವನದಲ್ಲಿ ತೃಪ್ತಿಯಿದೆ
ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ವಿದ್ಯೆ, ನೌಕರಿ, ಸ್ಥಳೀಯ ಸಂಸ್ಥೆಯಲ್ಲಿ ಮತ್ತು ಸಹಕಾರಿ ಇಲಾಖೆಯಲ್ಲಿ ಮೀಸಲಾತಿ ನೀಡುವಲ್ಲಿ ನಮ್ಮ ಪ್ರಮುಖ ಪಾತ್ರವಿದೆ.
ನನಗೆ ದೊರೆತ ಸ್ಥಾನಮಾನದಲ್ಲಿ ಸಮಾಜ ಚಿಂತಕರಾಗಿ ಕರ್ತವ್ಯ ನಿಷ್ಠೆ ಮತ್ತು ಪಾರದರ್ಶಕವಾಗಿ ಸೇವೆ ನಡೆಸಿದ್ದೇವೆ
. ಸನ್ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕೊಡುಗೆಯಿಂದ ನನ್ನ ಜೀವಮಾನದ ಸಂಕಲ್ಪದ ಅನುಷ್ಠಾನ ಮಾಡಲು ನಮ್ಮ ಮನವಿ ಮೇರೆಗೆ 2011-12 ರಲ್ಲಿ ಬೆಂಗಳೂರು ಉತ್ತರ ತಾಲೂಕಿನಲ್ಲಿ 8 ಎಕರೆ ಜಮೀನು ಐದು ಕೋಟಿ ಹಣ ಮಂಜೂರು ಮಾಡಿದರು
ಇದರ ಜೊತೆಗೆ ಸಮುದಾಯದಿಂದ ಮತ್ತು ನಮ್ಮ ಸ್ವಂತ ಮೂಲಗಳಿಂದ ಸಂಗ್ರಹದ ಮೊತ್ತದಿಂದ ಸಮುದಾಯ ಭವನ ಗುರುಪೀಠ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಿ 2016ರಲ್ಲಿ ಉದ್ಘಾಟನೆ ಮಾಡಲಾಯಿತು
ದೈವ ಪ್ರೇರಣೆಯಿಂದ ಗುರುಪೀಠ ಸ್ಥಾಪಿಸುವ ಮುಖ್ಯ ಉದ್ದೇಶದಿಂದ ಸಚಿವ ಸಂಪುಟ ಸ್ಥಾನಮಾನದ ಹುದ್ದೆಗೆ ರಾಜಿನಾಮೆ ನೀಡಿ ದಿನಾಂಕ:06/05/ 2022 ರಂದು ಗೃಹತಾಶ್ರಮ ತ್ಯಜಿಸಿ ಸನ್ಯಾಶಾಶ್ರಮ ಸ್ವೀಕಾರ ಮಾಡಿದ್ದೇವೆ
ಆ ಸಂದರ್ಭದಲ್ಲಿ ಸನ್ಮಾನ್ಯ ಬಿಎಸ್ ಯಡಿಯೂರಪ್ಪನವರಲ್ಲಿ ಸಂಸ್ಥೆಗೆ ಅವಶ್ಯಕತೆ ಇರುವ ಕಾಮಗಾರಿಗೆ ಕನಿಷ್ಠ ರೂ.3.50 ಕೋಟಿ ಅನುದಾನ ಕೊಡಿಸುವಂತೆ ಮನವಿ ಮಾಡಿದ್ದೆವು
ದಿ.24/08/2022 ಅಂದಿನ ಮುಖ್ಯಮಂತ್ರಿಗಳು ವಿಶ್ವಗಾಣಿಗರ ಸಮುದಾಯ ಚಾರಿಟೇಬಲ್ ಟ್ರಸ್ಟ್, ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಠದ ಸರ್ವಾಂಗೀಣ ಅಭಿವೃದ್ಧಿಗೆ ರೂ. 3.50 ಕೋಟಿ ಅನುದಾನ ಮಂಜೂರು ಮಾಡಲು ಆದೇಶಿಸಿದರು
ದಿ.07/05/2022 ಆರ್ಥಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹೆಚ್ಚುವರಿಯಾಗಿ ರೂ.3.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ (ಪತ್ರ ಲಗತ್ತಿಸಿದೆ )
ದಿ. 18/10/2022 ಅದರಂತೆ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ರೂ 3.50 ಕೋಟಿ ಅನುದಾನ ಮಂಜೂರು ಮಾಡಲು ಆದೇಶಿಸಿದೆ (ಪ. ಲ )
ದಿ. 02/12/2024 ಅದರಂತೆ ಬೆಂಗಳೂರು ನಗರ ನಿರ್ಮಿತಿ ಕೇಂದ್ರದೊಡನೆ ಕಾಮಗಾರಿ ಅನುಷ್ಠಾನ ಮಾಡಲು ಗುತ್ತಿಗೆ ಕರಾರು ಮಾಡಿ ಕೊಳ್ಳಲಾಗಿದೆ
ದಿ.12/01/2023 ಆರ್ಥಿಕ ಇಲಾಖೆ ರೂ.3.50 ಕೋಟಿ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ಅನುದಾನದಲ್ಲಿ ಪ್ರಸ್ತುತ ಮಾನ್ಯ ಮುಖ್ಯಮಂತ್ರಿಯವರು ಎರಡು ಕೋಟಿ ಬಿಡುಗಡೆ ಮಾಡಲು ಆದೇಶಿಸಿದು ಅದರಂತೆ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ (ಪ. ಲ)
ದಿ.18/01/2023 ಆರ್ಥಿಕ ಇಲಾಖೆಯ ಆದೇಶದಂತೆ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ. ಉಳಿಕೆ ರೂ. 1.50 ಕೋಟಿಯನ್ನು ರದ್ದು ಮಾಡಿರುವುದಿಲ್ಲ ( ಪ.ಲ )
ದಿ.10.06.2024 ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಟಿಪ್ಪಣಿಯಲ್ಲಿ ಮಂಜೂರಾಗಿದ್ದ ರೂ.3.50 ಕೋಟಿಯಲ್ಲಿ ರೂ.2.00 ಕೋಟಿ ಪೂರ್ಣ ಉಪಯೋಗವಾಗಿದ್ದು ಮುಕ್ತಾಯ ಹಂತದಲ್ಲಿರುವ ಕಾಮಗಾರಿ ಪೂರ್ಣಗೊಳಿಸಲು ಮಂಜೂರಾಗಿದ್ದ ಉಳಿಕೆ ರೂ.1.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಕೋರಿ ಮನವಿ ಮಾಡಿದ್ದೆವು. ಸನ್ಮಾನ್ಯ ಮುಖ್ಯಮಂತ್ರಿಗಳು ಅಗತ್ಯ ಕ್ರಮಕ್ಕಾಗಿ ಆರ್ಥಿಕ ಇಲಾಖೆಗೆ ಆದೇಶ ಮಾಡಿದ್ದಾರೆ (ಪ. ಲ)
ದಿ.18/06/2024 ಪತ್ರ ಸಂಖ್ಯೆ : CM/ 7949245 /2024 ಮುಖ್ಯಮಂತ್ರಿಗಳ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲು ಆರ್ಥಿಕ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಿಗೆ ಆದೇಶಿಸಿದೆ
ದಿ.19/08/2024 ಕಲ್ಯಾಣ ಇಲಾಖೆಯಿಂದ ವರದಿ ಪಡೆದ ನಂತರ ಆರ್ಥಿಕ ಇಲಾಖೆ ನಿರ್ಧಿಷ್ಟವಾಗಿ ರೂ.3.50 ಕೋಟಿ ಮಂಜೂರಾದ ಅನುದಾನದಲ್ಲಿ ಬಿಡುಗಡೆಗೆ ಬಾಕಿ ಇರುವ ರೂ. 1.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮುಖ್ಯಮಂತ್ರಿಗಳ ಅನುಮೋದನೆ ಮೇರೆಗೆ ಆದೇಶಿಸಿದೆ ( ಪ. ಲ )
ದಿ.21/08/2024 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರು ಆರ್ಥಿಕ ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ 2024-25 ನೇ ಸಾಲಿಗೆ ಒದಗಿಸಿರುವ ಅನುದಾನದಲ್ಲಿ ಆದೇಶ ಹೊರಡಿಸುವ ಬಗ್ಗೆ ಇಲಾಖೆಯ ಸಚಿವರ ಆದೇಶಕ್ಕಾಗಿ ಕಡತ ಮಂಡಿಸಲಾಗಿದೆ. ಆದರೆ ಈ ದಿನದವರೆಗೂ ಕಡತ ಸನ್ಮಾನ ಸಚಿವರ ಆದೇಶಕ್ಕಾಗಿ ಕಾಯುತ್ತಿದೆ. Ref.CN 1442007 (ಪ.ಲ)
ಮಾನ್ಯ ಶ್ರೀ ಶಿವರಾಜ್ ತಂಗಡಗಿ ಸಂಗಪ್ಪ ಸಚಿವರನ್ನು 23.08.2024 ರಿಂದ ಸುಮಾರು 15 ಬಾರಿ ಭೇಟಿ ಮಾಡಿ ಜನಾಂಗದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಆದೇಶದಂತೆ ಅನುದಾನ ಬಿಡುಗಡೆಗೆ ಕೈಮುಗಿದು ಕೋರಿದೆವು.ಆದರೆ ಮುಖ್ಯಮಂತ್ರಿಗಳ ಆರ್ಥಿಕ ಇಲಾಖೆಯ ಅವರದೇ ಇಲಾಖೆಯ ಕಾರ್ಯದರ್ಶಿ ಮತ್ತು 85 ವರ್ಷದ ನಮ್ಮ ಹಿರಿತನ ಸ್ಥಾನ ಮಾನ ಯಾವುದಕ್ಕೂ ಬೆಲೆ ಕೊಡದೆ ಅವರದೇ ಆದ ಕಾರಣಗಳನ್ನು ತಿಳಿಸಿದರು.
ಸತ್ಯತೆಯನ್ನು ಅರಿಯಲು ಆರ್‌ಟಿಐ ನಲ್ಲಿ ಮಾಹಿತಿ ಪಡೆದಾಗ ಕೆಳಕಂಡ ಅಂಶಗಳು ಬೆಳಕಿಗೆ
ಬಂದಿದೆ
- ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ : ಆಇ 118 ವೆಚ್ಚ – 3/2024 ದಿನಾಂಕ 26/09/2024 ಸರ್ಕಾರ ಇಲಾಖೆಗೆ ಬಿಡುಗಡೆ ಮಾಡಿರುವ ಹಣ 100 ಕೋಟಿ
- ದಿನಾಂಕ: 26/09/2024 ಆರ್ಥಿಕ ಇಲಾಖೆ ಆದೇಶ ಮೇರೆಗೆ ಮತ್ತು ಸಚಿವರು ತಮ್ಮ ಟಿಪ್ಪಣಿಯಿಂದ
ದಿನಾಂಕ 27/09/2024 ರಂದು ಒಂದೇ ದಿನದ ಆದೇಶದಲ್ಲಿ 07.10+10.85= ಒಟ್ಟು 17.95 ಕೋಟಿ ಮತ್ತು
ದಿನಾಂಕ : 01/05/2024 ರಂದು ರೂ.20.15 ಕೋಟಿ, ಒಟ್ಟಾರೆ ರೂ. 38.10 ಕೋಟಿ ಅನುದಾನಕ್ಕೆ ಆದೇಶ ಮಾಡಿದ್ದಾರೆ. - ದಿನಾಂಕ : 23/07/2024 ರಿಂದ ದಿನಾಂಕ: 07/08/2024 ರವರೆಗೆ ಕಲ್ಯಾಣ ಇಲಾಖೆಯಿಂದ ವಿವಿಧ ಸಂಘ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರ ಆದೇಶ ಮಾಡಿರುವುದು. ಒಟ್ಟು ರೂ : 58.25 ಕೋಟಿ
- ದಿನಾಂಕ: 21/09/2024 ರಿಂದ ದಿನಾಂಕ 25/11/2024 ರವರೆಗೆ ವಿವಿಧ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲು ಇಲಾಖೆ ಸಚಿವರ ಟಿಪ್ಪಣಿ ಮೇರೆಗೆ ಆದೇಶ ಹೊರಡಿಸಿರುವ ಸರ್ಕಾರದ ಆದೇಶ . ಒಟ್ಟು – ರೂ.186.28 ಕೋಟಿ
- ಒಟ್ಟು ಕಲ್ಯಾಣ ಇಲಾಖೆ ಹಣ ಬಿಡುಗಡೆ ಮಾಡಲು ಹೊರಡಿಸಿರುವ ಸರ್ಕಾರದ ಆದೇಶ ರೂ.58.25 + ರೂ.186.28- 243.53 ಕೋಟಿ
- ಒಟ್ಟು ರೂ. 243.53 ಕೋಟಿ ಸರ್ಕಾರಿ ಆದೇಶದಲ್ಲಿನ ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನ 100 ಕೋಟಿ
- ಸನ್ಮಾನ್ಯ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಯ ಮತ್ತು ಕಲ್ಯಾಣ ಇಲಾಖೆಯ ಕಾನೂನು ಬದ್ಧ ಅನುಮೋದನೆಯನ್ನು ಕಡೆಗಣಿಸುವುದು ಸ್ಪಷ್ಟವಾಗಿದೆ. ಒಂದು ಸಮುದಾಯಕ್ಕೆ ಹಾಗೂ ಸರ್ವಸ್ವವನ್ನು ತ್ಯಾಗಿ ಮಾಡಿರುವ ಸ್ವಾಮಿಜಿಗೆ ಅಪಮಾನ ಮಾಡಿ ಅಭಿವೃದ್ಧಿಗೆ ಕಂಟಕವಾಗಿದೆ.
- ದಿನಾಂಕ : 28/08/2024 ರಂದು ಬೆಂಗಳೂರು ನಿರ್ಮಿತಿ ಕೇಂದ್ರದವರು ಸಲ್ಲಿಸಿರುವ ಕಾಮಗಾರಿ ಬಿಲ್‌ನ್ನು ಇಲಾಖೆಗೆ 18/09/2024 ರಂದು ಕಲ್ಯಾಣ ಇಲಾಖೆಗೆ ಸಲ್ಲಿಸಿದೆ. ಇದುವರೆವಿಗೆ ಅನುದಾನ ಬಿಡುಗಡೆಯಾಗಿಲ್ಲ. (ಪ.ಲ)
- ಬೇರೆ ಸಂಸ್ಥೆಗಳಿಗೆ ಕಾಮಾಗಾರಿಗೆ ಮುಂಗಡ ಅನುದಾನ ಬಿಡುಗಡೆ ಮಾಡಿ ಪೂರ್ಣವಾಗಿರುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡದಿರುವುದು, ಪಾರದರ್ಶಕವೇ ಮತ್ತು ಬ್ರಹ್ಮಚಾರ ರಹಿತ ಆಡಳಿತವೇ ಮಂತ್ರಿಗಳೇ ಹೇಳಬೇಕು.
- ಸನ್ಮಾನ್ಯ ಮುಖ್ಯಮಂತ್ರಿಯವರು ದಿನಾಂಕ : 04/03/2025 ರಂದು ಲಂಚ ಕೊಡುವುದು ಮತ್ತು ಲಂಚ ಪಡೆಯುವುದು ಅಪರಾದ ಎಂದಿದ್ದಾರೆ.
12 . ಈ ಮೇಲಿನ ವ್ಯವಹಾರವನ್ನು ನೋಡಿದ್ದಾಗ ಮಂತ್ರಿಯವರ ಮನಸ್ಥಿತಿ, ದುರುದ್ದೇಶ ಅಲ್ಲದೇ ಬೇರೆ ಏನಿದೇ.
- ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಇಲಾಖೆಯ ಸಚಿವರಿಗೆ ದಿ.20/01/2025 ರಂದು ಸಂಪೂಣ ವಿವರಗಳೊಂದಿಗೆ ಸರ್ಕಾರಕ್ಕೆ ಮತ್ತು ಅವರ ಪಕ್ಷಕ್ಕೆ ಮುಜುಗರ ತಪ್ಪಿಸಲು ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ ಆದರೂ ಪ್ರಯೋಜನವಾಗಿಲ್ಲ.
- ಸನ್ಮಾನ್ಯ ಸಚಿವರ ಕಾನೂನು ಬಾಹಿರ ವರ್ತನೆಯಿಂದ 85ರ ಇಳಿ ವಯಸ್ಸಿನವರಾದ ನಾವು ಪೂರ್ಣವಾಗಿ ನೊಂದು. ಮಾನಸಿಕವಾಗಿ ಜಿಗುಪ್ಪೆಯಾಗಿದೆ. ಇದರಿಂದ ತನ್ನ ಪ್ರಾಣಕ್ಕೆ ಅಘಾತವಾದರೆ ನೇರವಾಗಿ ಇಲಾಖೆಯ ಸಚಿವರು ಮತ್ತು ಸರ್ಕಾರ ನೇರ ಹೊಣೆಯಾಗುತ್ತಾರೆ
- ಸನ್ಮಾನ್ಯ ಮುಖ್ಯಮಂತ್ರಿಯವರು ಈ ಬಗ್ಗೆ ಗಮನ ಹರಿಸಿ ತಮ್ಮ ಆದೇಶದಂತೆ ರೂ.1.50 ಕೊ” ಅನುದಾನವನ್ನು ಪೂರ್ಣವಾಗಿ ಬಿಡುಗಡೆ ಮಾಡಲು ವಿನಂತಿಸುತ್ತೇವೆ.
- ಸನ್ಮಾನ್ಯ ಶಿವರಾಜ್ ತಂಗಡಗಿ ಕಲ್ಯಾಣ ಇಲಾಖೆ ಸಚಿವರು ದುರುದ್ದೇಶದಿಂದ ತಾರತಮ್ಮ ಮಾಡಿ ಯಾವುದೇ ಪಾರದರ್ಶಕವಿಲ್ಲದೆ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದರು.