Home Bengaluru ದೇಶದ ಆರ್ಥಿಕ ಸಬಲೀಕರಣದಲ್ಲಿ ಮಹಿಳೆಯರ ಪಾತ್ರ ಅಪಾರ – ಅಚ್ಚುತ್ ಗೌಡಫಿಡಿಲಿಟಸ್ ಕಾರ್ಪ್ ವತಿಯಿಂದ ಸಂಭ್ರಮದ...

ದೇಶದ ಆರ್ಥಿಕ ಸಬಲೀಕರಣದಲ್ಲಿ ಮಹಿಳೆಯರ ಪಾತ್ರ ಅಪಾರ – ಅಚ್ಚುತ್ ಗೌಡಫಿಡಿಲಿಟಸ್ ಕಾರ್ಪ್ ವತಿಯಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ

0

ಬೆಂಗಳೂರು, ಮಾರ್ಚ್ 8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ಇಂದು ನಗರದ ಬನಶಂಕರಿಯ ಬ್ರಿಗೇಡ್ ಸಾಫ್ಟ್ ವೇರ್ ಪಾರ್ಕ್ ನಲ್ಲಿರುವ ಫಿಡಿಲಿಟಸ್ ಕಾರ್ಪ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಫಿಡಿಲಿಟಸ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅಚ್ಚುತ್ ಗೌಡ ಅವರು “ದೇಶದ ಆರ್ಥಿಕ ಸಬಲೀಕರಣದಲ್ಲಿ ಮಹಿಳೆಯರ ಪಾತ್ರ ಅಪಾರ. ಪ್ರಮುಖವಾಗಿ ಐಟಿ ರಂಗದಲ್ಲಿ ಮಹಿಳೆಯರ ಸಾಧನೆ ಗಣನೀಯವಾಗಿದೆ. ಪ್ರತಿಯೊಂದು ರಂಗದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವುದು ಆಯಾ ರಂಗದಲ್ಲಿರುವ ಪುರುಷರ ಆದ್ಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.

ವಿಶ್ವ ಮಹಿಳಾ ದಿನಾಚರಣೆಯನ್ನು ಕೇಕ್ ಕತ್ತರಿಸಿ ಸಿಹಿ ತಿಂಡಿಗಳನ್ನು ಹಂಚಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಲವಾರು ಉದ್ಯೋಗಿಗಳು ಭಾಗಿಯಾಗಿದ್ದು, ಮಹಿಳೆಯರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಲಾತು.

Previous articleಬೆಂಗಳೂರಿನಲ್ಲಿ ನೀರಿನ ಅದಾಲತ್
Next articleಲುಲು ವಾಕಥಾನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರು ಆಗಮಿಸುತ್ತಾರೆ

LEAVE A REPLY

Please enter your comment!
Please enter your name here