ಬೆಂಗಳೂರು, ಫೆ. 20: ಸರ್ಕಾರಿ ನೌಕರರನ್ನು ಹಂತ ಹಂತವಾಗಿ ಖಾಯಂ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರಕ್ಕೆ ಎಲ್ಲಾ ಸರ್ಕಾರಿ ನೌಕರರ ಪರವಾಗಿ ನಾವು ಪ್ರಾಮಾಣಿಕವಾಗಿ ಕೃತಜ್ಞತೆ ಸಲ್ಲಿಸುತ್ತೇವೆ.
ನೇರಪಾವತಿಯಡಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ 24005 ಜನ ಪೌರಕಾರ್ಮಿಕರನ್ನು ಖಾಯಂ ಮಾಡಲು ಅನುಮೋದನೆ ನೀಡಿ ಉಳಿದಿರುವ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸುವುದಾಗಿ ಐತಿಹಾಸಿಕ ನಿರ್ಣಯ ಕೈಗೊಂಡ ರಾಜ್ಯ ಸರ್ಕಾರಕ್ಕೆ ಸಮಸ್ತ ಪೌರಕಾರ್ಮಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೇಲ್ಕಂಡ ಮಹಾಸಂಘದಿಂದ ಪೌರಕಾರ್ಮಿಕರ ಒಳಿತಿಗಾಗಿ, ಏಳಿಗೆಗಾಗಿ ಹಗಲಿರುಳು ರಾಜ್ಯಾಧ್ಯಕ್ಷರು ದುಡಿಯುತ್ತಿರುವುದು ಸರಿಯಷ್ಟೆ. ಹಾಗೆ ನಮ್ಮ ಪೌರಕಾರ್ಮಿಕರು ಗುತ್ತಿಗೆ ಪದ್ಧತಿಯಲ್ಲಿ ಜೀತದಾಳುಗಳಂತೆ ದುಡಿಯುತ್ತಿರುವುದನ್ನು ಕಂಡು ಮರುಗಿ ಜೀತಪದ್ಧತಿಯಿಂದ ಮುಕ್ತಿ ಕೊಡುವಂತೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿ ಕಾನೂನು ಹೋರಾಟದಲ್ಲಿ ಗೆದ್ದು, ರಾಜ್ಯಮಟ್ಟದಲ್ಲಿ ಕಾರ್ಮಿಕರನ್ನೆಲ್ಲಾ ಒಗ್ಗೂಡಿಸಿ ರಾಜ್ಯಾದ್ಯಂತ ಹೋರಾಟಗಳನ್ನು ಮಾಡಿದಾಗ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯ ರವರು ಗುತ್ತಿಗೆ ಪದ್ಧತಿಯನ್ನು ರದ್ದುಮಾಡಿ ರಾಜ್ಯಾದ್ಯಂತ ನೇರವೇತನ ಪದ್ಧತಿಯನ್ನು ಜಾರಿ ಮಾಡಿ ಪೌರಕಾರ್ಮಿಕರ ಮೊಗದಲ್ಲಿ ಸಂತಸ ತಂದಿರುತ್ತಾರೆ.
ಇದರಿಂದ ಸುಮಾರು 35 ಸಾವಿರ ಪೌರಕಾರ್ಮಿಕರಿಗೆ ಸೇವಾಭದ್ರತೆಯಿಂದ ಅನುಕೂಲವಾಗಿರುತ್ತದೆ. ನಮ್ಮ ಭಾರತದೇಶದಲ್ಲಿ ಯಾವುದೇ ರಾಜ್ಯದಲ್ಲಿಯೂ ಸಹ ಗುತ್ತಿಗೆ ಪದ್ಧತಿ ರದ್ದಾಗಿರುವುದಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಗುತ್ತಿಗೆ ಪದ್ಧತಿ ರದ್ದಾಗಿರುತ್ತದೆ.
ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಮಾಜದಲ್ಲಿ ಕಟ್ಟಕಡೆಯ ಕೆಲಸ ಮಾಡುವ ಎಲ್ಲಾ ಸ್ವಚ್ಛತಾ ಕೆಲಸ ಮಾಡುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಆಶ್ವಾಸನೆ ನೀಡಿದ್ದು, ಅದರಂತೆ ನಮ್ಮ ಮಹಾಸಂಘದ ಹೋರಾಟದ ಸಂದರ್ಭದಲ್ಲಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ ಸಿದ್ದರಾಮಯ್ಯ ರವರು ಖುದ್ದು ಬಂದು ನಮ್ಮ ಸರ್ಕಾರದ ಬಂದ ತಕ್ಷಣ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಹೇಳಿರುತ್ತಾರೆ.
ಅದರಂತೆ ಈಗ ಬಡ್ಡೆಟ್‌ನಲ್ಲಿ 24005 ಜನ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಅನುಮೋದಿಸಲಾಗಿದೆ ಎಂದು ಉಳಿಕೆ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸುವುದಾಗಿ ಘೋಷಿಸಿರುತ್ತಾರೆ. ಹಾಗೆ 592 ಒಳಚರಂಡಿ ಸಹಾಯಕ ಕಾರ್ಮಿಕರನ್ನು ಖಾಯಂ ಪ್ರಕ್ರಿಯೆಗೆ ಚಾಲನೆ ನೀಡಿರುತ್ತಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯ ರವರಿಗೆ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ಸಚಿವ ಸಂಪುಟಕ್ಕೆ ಸಮಸ್ತ ಪೌರಕಾರ್ಮಿಕರ ಪರವಾಗಿ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಹಾಗೆ ಹಿಂದಿನ ಸರ್ಕಾರದ ಆದೇಶದಂತೆ ಗುತ್ತಿಗೆ ಪದ್ಧತಿಯಲ್ಲಿ (ಜೀತಪದ್ಧತಿ) ಕೆಲಸ ನಿರ್ವಹಿಸುವ ಲಾರಿ, ಆಟೋ ವಾಹನ ಚಾಲಕರುಗಳು, ಹೆಲ್ಪರ್‌ಗಳು ಕೆ.ಎಂ.ಸಿ ಕಾಯ್ದೆಯ ಪ್ರಕಾರ ಪೌರಕಾರ್ಮಿಕರೆ ಆಗಿದ್ದು ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ನೇರವೇತನ ಪಾವತಿ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಈ ಕೂಡಲೇ ನೇರಪಾವತಿ ಅಡಿಯಲ್ಲಿ ಸೇರಿಸಲು ಈ ಮೂಲಕ ಸರ್ಕಾರವನ್ನು ಮತ್ತೊಮ್ಮೆ ಆಗ್ರಹಿಸುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮಹಾಸಂಘದ