ಬೆಂಗಳೂರು, ಜ, 31: 75ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಗರದಲ್ಲಿ ಅತ್ಯಂತ ಎತ್ತರವಾದ ಸುಮಾರು 215 ಅಡಿ ಎತ್ತರದ ಧ್ವಜ ಸ್ತಂಭವನ್ನು ವಿಜಯನಗರದ ಚಂದ್ರ ಲೇಔಟ್ ನಲ್ಲಿ ಅನಾವರಣ ಮಾಡಲಾಯಿತು. ಪ್ರತಿಷ್ಠಿತ ವಿಜಯನಗರದ ಚಂದ್ರ ಲೇಔಟ್ ನಲ್ಲಿ ಮತ್ತೊಂದು ಪ್ರಮುಖ ಲ್ಯಾಂಡ್ ಮಾರ್ಕ್ ಅಸ್ತಿತ್ವಕ್ಕೆ ಬಂದಿದೆ.
ಇಡೀ ಬೆಂಗಳೂರು ನಗರದಲ್ಲಿ ಅತ್ಯಂತ ಎತ್ತರವಾದ ಸುಮಾರು 215 ಅಡಿ ಎತ್ತರದ ಧ್ವಜ ಸ್ತಂಭವನ್ನು 75ನೇ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 26ರಂದು ಗಣರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ವಿಜಯನಗರದ ಶಾಸಕರಾದ ಎಂ ಕೃಷ್ಣಪ್ಪನವರು ಮತ್ತು ಗೋವಿಂದರಾಜ ನಗರದ ಶಾಸಕರಾದ ಪ್ರಿಯಕೃಷ್ಣ ರವರ ಸಮ್ಮುಖದಲ್ಲಿ ನಿವೃತ್ತ ಹೈ ಕೋರ್ಟ್ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಧ್ವಜಾರೋಹಣ ಮಾಡಿದರು.
ಇದೇ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಿಯಕೃಷ್ಣ ಅವರು ಗುತ್ತಿಗೆದಾರರ ಹಾಗೂ ಸ್ನೇಹಿತರ ಮತ್ತು ಸೂಕ್ತ ಸ್ಥಳ ಗುರುತಿಸಿದ ಶ್ರೀ ಪ್ರದೀಪ್ ಕೃಷ್ಣರವರ ಕಾರ್ಯವನ್ನು ಶ್ಲಾಘಿಸಿ, ನಮಗೆ ಆಧಾರ್ ಎನ್ನುವ ಗುರುತಿನ ಚೀಟಿ ಇದ್ದಂತೆ ದೇಶಕ್ಕೆ ತ್ರಿವರ್ಣ ಧ್ವಜ ಒಂದು ಹೆಗ್ಗುರುತು. ಧ್ವಜ ನಮ್ಮ ತಾಯಿ ಸಮಾನ ಅದನ್ನು ನಾವು ಗೌರವಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಜಯನಗರ ಕ್ಷೇತ್ರದ ಶಾಸಕರಾದ ಎಂ ಕೃಷ್ಣಪ್ಪ, ವಿಜಯನಗರ ಮತ್ತು ಗೋವಿಂದರಾಜ ನಗರದ ಮುಖಂಡರು ಮತ್ತು ಇತರೆ ಗಣ್ಯರು ಹಾಜರಿದ್ದರು.