ಬೆಂಗಳೂರು, ಆಗಸ್ಟ್ 15: ಮುಂಚೂಣಿಯ ವೆಲ್ ನೆಸ್ ಬ್ರಾಂಡ್ ಹಿಮಾಲಯ ವೆಲ್ ನೆಸ್ ಕಂಪನಿ ಆರೋಗ್ಯ ಮತ್ತು ಸ್ವಾಸ್ಥ್ಯ ಉತ್ತೇಜಿಸಲು ಬದ್ಧವಾಗಿದ್ದು ಭಾರತೀಯ ಸೇನೆಯ ಸದ್ರನ್ ಕಮ್ಯಾಂಡ್ ಮತ್ತು ಸೊಸೈಟಿ ಫಾರ್ ಎನ್ವಿರಾನ್ ಮೆಂಟ್ ಅಂಡ್ ಬಯೋಡೈವರ್ಸಿಟಿ ಕನ್ಸರ್ವೇಷನ್(ಎಸ್.ಇ.ಬಿ.ಸಿ.)ಯ ಪುಣೆಯ ವಿಶಿಷ್ಟ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಮಹತ್ವಾಕಾಂಕ್ಷೆಯ ಯೋಜನೆ ತಿರಂಗಾ ಟನಲ್ ನೊಂದಿಗೆ ಸಹಯೋಗ ಹೊಂದಿದೆ.
ಭಾರತೀಯ ಸೇನೆಯು ದೇಶ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ತನ್ನ ಬದ್ಧತೆಗೆ ಹೆಸರಾಗಿದ್ದು ಪುಣೆಯ ಕಂಟೋನ್ಮೆಂಟ್ ನ ಪಾರಿಸರಿಕ ಸಮತೋಲನ ಕಾಪಾಡುವ ಉಪಕ್ರಮವನ್ನು ಕೈಗೊಂಡಿದೆ. ಈ ಪ್ರದೇಶವು ಜೀವ ವೈವಿಧ್ಯದ ಪಶ್ಚಿಮ ಘಟ್ಟಗಳ ಹತ್ತಿರದಲ್ಲಿದ್ದು ಅಸಂಖ್ಯ ಪಾರಿಸರಿಕ ಸವಾಲುಗಳನ್ನು ಎದುರಿಸುತ್ತಿದೆ ಅದರಲ್ಲಿ ಮರಗಳ ಸಂಖ್ಯೆ ಇಳಿಕೆ ಮತ್ತು ಹೆಚ್ಚುತ್ತಿರುವ ಮಾಲಿನ್ಯದ ಸಮಸ್ಯೆಗಳೂ ಇವೆ. ಭಾರತೀಯ ಸೇನೆಯ ಸದ್ರನ್ ಕಮ್ಯಾಂಡ್, ಹಿಮಾಲಯ ವೆಲ್ ನೆಸ್ ಕಂಪನಿಯ ಸಹಯೋಗದಲ್ಲಿ ತಿರಂಗಾ ಟನಲ್ ಯೋಜನೆಯನ್ನು ರೂಪಿಸಿದ್ದು ನಿಸರ್ಗದ ಸಂಪನ್ಮೂಲಗಳನ್ನು ರಕ್ಷಿಸುವ ಮತ್ತು ಪಾರಿಸರಿಕ ಜವಾಬ್ದಾರಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಈ ತಿರಂಗಾ ಟನಲ್ ರಾಷ್ಟ್ರೀಯ ಒಗ್ಗಟ್ಉ ಮತ್ತು ಪಾರಿಸರಿಕ ಅರಿವಿನ ಸಂಕೇತವಾಗಿದ್ದು ಇದು ಪುಣೆಯ ಸದ್ರನ್ ಕಮ್ಯಾಂಡ್ ಕೇಂದ್ರ ಕಛೇರಿಯ ಪ್ರವೇಶದ್ವಾರದಲ್ಲಿದ್ದು ಭಾರತೀಯ ಸೇನೆಯ ಪ್ರತಿಷ್ಠಿತ ಸದ್ರನ್ ಕಮ್ಯಾಂಡ್ ಅನ್ನು ಗೌರವಿಸುತ್ತದೆ. ಈ ಟನಲ್ ಸುಸ್ಥಿರ ಅಭಿವೃದ್ಧಿ ಮತ್ತು ಪಾರಿಸರಿಕ ಸಂರಕ್ಷಣೆಗೆ ಅವರ ಬದ್ಧತೆಯನ್ನು ಮೈವೆತ್ತಿದೆ. ಈ ಕಮಾನು ಹನ್ನೆರಡು ವಿಶೇಷವಾಗಿ ವಿನ್ಯಾಸಗೊಳಿಸಿದ ಸುರಂಗಗಳನ್ನು ಹೊಂದಿದ್ದು ನಮ್ಮ ರಾಷ್ಟ್ರ ಧ್ವಜದ ಬಣ್ಣಗಳನ್ನು ಹೊಂದಿರುತ್ತವೆ. ಕೇಸರಿ ಮತ್ತು ಬಿಳಿ ಬೋಗನ್ ವಿಲ್ಲಾ ಧೈರ್ಯ ಮತ್ತು ನಿರ್ಮಲತೆಯನ್ನು ಸಂಕೇತಿಸುತ್ತದೆ ಮತ್ತು ಹಸಿರು ಮನಿ ಪ್ಲಾಂಟ್ ಗಳು ಸಂಪತ್ತನ್ನು ಬಿಂಬಿಸುತ್ತವೆ. ಹೂವಿನ ಅನುಸ್ಥಾಪನೆಗಳು ನಮ್ಮ ವೈವಿಧ್ಯಮಯ ದೇಶವನ್ನು ಒಟ್ಟಿಗೆ ಇರಿಸಿರುವ ಒಗ್ಗಟ್ಟು ಮತ್ತು ಸಾಮರಸ್ಯವನ್ನು ಬಿಂಬಿಸುತ್ತವೆ. 13 ಮೀಟರ್ ಗಳ ಅಗಲ ಮತ್ತು 4.5 ಮೀಟರ್ ಎತ್ತರವಿರುವ ಈ ತಿರಂಗಾ ಟನಲ್ ನಮ್ಮ ವೈಭವಯುತ ಗತಕಾಲವನ್ನು ಭರವಸೆಯ ಭವಿಷ್ಯದೊಂದಿಗೆ ಸಂಪರ್ಕಿಸುವ ಭವ್ಯ ಸ್ಮಾರಕವಾಗಿದೆ. ಫೀಲ್ಡ್ ಮಾರ್ಷನ್ ಮಾಣೆಕ್ ಶಾ ಅವರ ವಿಗ್ರಹದಿಂದ ಪ್ರಾರಂಭಿಸಿ ಈ ತಿರಂಗಾ ಟನಲ್ ನಮ್ಮನ್ನು ಕೇಂದ್ರ ಕಛೇರಿಯ ಪ್ರವೇಶದ್ವಾರಕ್ಕೆ ಕೊಂಡೊಯ್ಯುತ್ತದೆ.
ಸದ್ರನ್ ಕಮ್ಯಾಂಡ್ ನ ಎವಿಎಂ, ವೈಎಸ್ಎಂ, ಎಸ್ಎಂ, ವಿಎಸ್ಎಂ ಪುರಸ್ಕೃತ ಜನರಲ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಅಜಯ್ ಕುಮಾರ್ ಸಿಂಗ್ 77ನೇ ಸ್ವಾತಂತ್ರ್ಯೋತ್ಸವ ದಿನದಂದು ಈ ಉಪಕ್ರಮಕ್ಕೆ ಚಾಲನೆ ನೀಡಿ ಪರಿಸರ ರಕ್ಷಣೆಗೆ ಐತಿಹಾಸಿಕ ಹೆಜ್ಜೆ ಇರಿಸಿದ್ದೇ ಅಲ್ಲದೆ ದೇಶಕ್ಕೆ ಸೇವೆಗೆ ಮತ್ತು ಜೀವ ವೈವಿಧ್ಯತೆಗೆ ಭಾರತೀಯ ಸೇನೆಯ ಬದ್ಧತೆಯನ್ನು ಪ್ರದರ್ಶಿಸಿದರು.
ತಿರಂಗಾ ಟನಲ್ ನ ನಿರೀಕ್ಷಿತ ಫಲಿತಾಂಶಗಳು ಸುಧಾರಿತ ಜೀವ ವೈವಿಧ್ಯತೆಯ ಸಂರಕ್ಷಣೆ, ಪಾರಿಸರಿಕ ಸಂರಕ್ಷಣೆಯ ಕುರಿತು ಅರಿವು ಹೆಚ್ಚಿಸುವುದು ಮತ್ತು ಸೇನಾ ಭೂಮಿಗಳಲ್ಲಿ ಸುಸ್ಥಿರತೆಗೆ ಮಾನದಂಡ ರೂಪಿಸುವುದಾಗಿದೆ.
“ಈ ಐತಿಹಾಸಿಕ ಉಪಕ್ರಮದ ಭಾಗವಾಗಲು ನಾವು ಬಹಳ ಸಂತೋಷ ಹೊಂದಿದ್ದೇವೆ. ವೆಲ್ ನೆಸ್ ಕಂಪನಿಯಾಗಿ ನಾವು ಸದಾ ಪಾರಿಸರಿಕ ಜವಾಬ್ದಾರಿಗೆ ಆದ್ಯತೆ ನೀಡಿದ್ದೇವೆ ಮತ್ತು ನಮ್ಮ `ಕೇರ್ ಫಾರ್ ಅರ್ಥ್’ ಉಪಕ್ರಮದ ಮೂಲಕ ಸಮುದಾಯವನ್ನು ತಲುಪುತ್ತಿದ್ದೇವೆ. ಭಾರತೀಯ ಸೇನೆಯೊಂದಿಗೆ ನಮ್ಮ ಸಹಯೋಗವು ಪರಿಸರ ಸಂರಕ್ಷಣೆಗೆ ಹಾಗೂ ಸುಸ್ಥಿರ ರೂಢಿಗಳಿಗೆ ನಮ್ಮ ಹಂಚಿಕೊಂಡ ಬದ್ಧತೆಗೆ ಸಾಕ್ಷಿಯಾಗಿದೆ. ಭಾರತೀಯ ಸೇನೆಯೊಂದಿಗೆ ಕೈ ಜೋಡಿಸುವುದು ಹಸಿರು, ಆರೋಗ್ಯಕರ ಭವಿಷ್ಯದತ್ತ ನಮ್ಮ ಬದ್ಧತೆಯನ್ನು ಸದೃಢಗೊಳಿಸುವ ಮಹತ್ತರ ಕಾರ್ಯವಾಗಿದೆ. ಈ ಐತಿಹಾಸಿಕ ಜೀವ ವೈವಿಧ್ಯತೆಯ ಯೋಜನೆ ಮತ್ತು ತಿರಂಗಾ ಟನಲ್ ನಿರ್ಮಾಣಕ್ಕೆ ಬೆಂಬಲಿಸುವ ಮೂಲಕ ನಾವು ನಿಸರ್ಗದ ಸಮೃದ್ಧಿ ಕಾಪಾಡುವ ಮತ್ತು ಹಸಿರು ಉಪಕ್ರಮಗಳನ್ನು ಉತ್ತೇಜಿಸುವ ಅಗತ್ಯ ಕುರಿತು ಅರಿವನ್ನು ಹೆಚ್ಚಿಸಲು ಶಕ್ತರಾಗಿದ್ದೇವೆ” ಎಂದು ಹಿಮಾಲಯ ವೆಲ್ ನೆಸ್ ಕಂಪನಿಯ ಮಾನವ ಸಂಪನ್ಮೂಲಗಳ ನಿರ್ದೇಶಕ ಕೆ.ಜಿ. ಉಮೇಶ್ ಹೇಳಿದರು.
ಹಿಮಾಲಯ ವೆಲ್ ನೆಸ್ ಕಂಪನಿಯು ಅಂತಹ ಆವಿಷ್ಕಾರಕ ಪಾರಿಸರಿಕ ಉಪಕ್ರಮಗಳನ್ನು ಬೆಂಬಲಿಸಲು ಸದಾ ಸನ್ನದ್ಧವಾಗಿದೆ. ಕಂಪನಿಯು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಬದ್ಧವಾಗಿದೆ.