ಬೆಂಗಳೂರು: ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕ ರಾದ ಆರ್, ಕೆ ವಾದಿಂದ್ರ ಆಚಾರ್ಯರ ಹಾಗೂ ಜಿ, ಕೆ ಆಚಾರ್ಯರ ನೇತೃತ್ವದಲ್ಲಿ ರಾಯರ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಸ್ವಯಂಸೇವಕರ ಸಭೆಯನ್ನು ಏರ್ಪಡಿಸಲಾಗಿತ್ತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು , ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ , ವಾದಿಂದ್ರಾಚಾರ್ಯರು ಮಾತನಾಡುತ್ತಾ ಭಕ್ತರ ಸಹಕಾರದೊಂದಿಗೆ ಪ್ರತಿ ವರ್ಷವೂ ಶ್ರೀಮಠದ ಅಭಿವೃದ್ದಿ ಕಾರ್ಯಕ್ರಮಗಳು ನೆರವೇರುತ್ತಿವೆ ಈ ವರ್ಷವೂ ಸಹ ವಿಶೇಷವಾಗಿ ರಾಯರ ಪ್ರಕಾರದ ಮೇಲ್ಚಾವಣಿಯಲ್ಲಿ ನವರಂಗದ ಕಲಾಕೃತಿಯ ನಿರ್ಮಾಣವೂ ಪ್ರಾರಂಭ ಗೊಂಡಿದೆ.
ಆದ್ದರಿಂದ ಭಕ್ತರು ಈ ಸೇವೆಯಲ್ಲಿ ಭಾಗವಹಿಸಿ ಗುರು ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಎಂದು ತಿಳಿಸುತ್ತಾ, ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ”ಸಪ್ತರಾತ್ರೋತ್ಸವದ”ಮಾಹಿತಿಯನ್ನು ನೀಡಿದರು, 29-8-2023 ರಿಂದ 4-9-2023 ವರೆಗೆವಿಶೇಷಕಾರ್ಯಕ್ರಮಗಳು ನೆರವೇರುತ್ತವೆ, 29 ನೇ ತಾರೀಕು ಸಂಜೆ 6:30ಕ್ಕೆ ಸೋಸಲೆ ವ್ಯಾಸ ರಾಜ ಮಠದ ಪರಮ ಪೂಜ್ಯ ಶ್ರೀ108 ಶ್ರೀ ವಿದ್ಯಾಶ್ರೀಷ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ರಾಯರ ಆರಾಧನಾ “ಉದ್ಘಾಟನೆ” ಕಾರ್ಯಕ್ರಮವೂ ನೆರವೇರಲಿದೆ, ಪ್ರತಿ ದಿನವೂ ವಿಶೇಷವಾಗೀ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ, ನೂತನ ವಸ್ತ್ರ ಸಮರ್ಪಣೆ, ಹೂವಿನ ಅಲಂಕಾರ, ಗಜ ವಾಹನೋತ್ಸವ, ರಥೋತ್ಸವ, ಪಲ್ಲಕ್ಕಿಉತ್ಸವ, ರತ್ನ ಕವಚ, ದೀಪೋತ್ಸವ, ಸ್ವರ್ಣಸಿಂಹಾಸ ನೋತ್ಸವ, ಕನಕಾಭಿಷೇಕ, ಭಕ್ತರಿಗೆ ಅನ್ನ ಸಂತರ್ಪಣೆ, ಶ್ರೀ ಹರಿ ಭಜನೆ ಹಾಗೂ ಪ್ರವಚನ, ದಾಸವಾಣಿ, ಭರತನಾಟ್ಯ, ಕಾರ್ಯಕ್ರಮಗಳು ಜರಗುಲಿವೆ.

29ನೇ ತಾರೀಕು ಬೆಳಗ್ಗೆ 6 ಕ್ಕೆ ಋಗ್ವೇದ ನಿತ್ಯ ನೂತನ ಉಪಾಕರ್ಮ, ಸಂಜೆ 5-30 ಕ್ಕೆ ಚಂದ್ರಿಕಾ ಭಜನಾ ಮಂಡಳಿ ಮತ್ತು ಶ್ರೀಶ ಭಜನಾ ಮಂಡಳಿಯಿಂದ ಶ್ರೀಹರಿಭಜನೆ, ಸಂಜೆ 6-30 ಕ್ಕೆ ಆರಾಧನಾ ಮಹೋತ್ಸವದ”ಉದ್ಘಾಟನೆ” ಧ್ವಜಾರೋಹಣ, ಗೋ ಪೂಜೆ, ಧನ ಧಾನ್ಯ ಪೂಜೆ,ಲಕ್ಷ್ಮೀಪೂಜೆ, ಸ್ವಸ್ತಿವಾಚನ ಮಂಗಳಾರತಿ,
30 ನೇ ತಾರೀಕು ಬೆಳಗ್ಗೆ 6 ಕ್ಕೆ ಯಜುರ್ವೇದ ನಿತ್ಯ ನೂತನ ಉಪಾಕರ್ಮ, ಬೆಳಗ್ಗೆ 9: ಕ್ಕೆ ಪೌರ್ಣಮಿ ಪ್ರಯುಕ್ತ ಶ್ರೀ ಮಠದಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಸಂಜೆ 7:00ಕ್ಕೆ “ಭರತನಾಟ್ಯ” ನೃತ್ಯಾoಜಲಿ ಕಲಾನಿಕೇತನ ಪವಮಾನಪುರ(ಅನಂತ ನಾಗರಾಜ್ ಶ್ರೀಮತಿ ಚೈತ್ರ ಇವರ ನಿರ್ದೇಶನದಲ್ಲಿ,)
31-8-2023 ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಬೆಳಗ್ಗೆ 7 ಕ್ಕೆ ಬೃಂದಾವನಕ್ಕೆ ವಿಶೇಷ ಅಭಿಷೇಕ 7.30 ರಿಂದ ಪಾದಪೂಜೆ,11ಕ್ಕೆಕನಕಾಭಿಷೇಕ 12 ಕ್ಕೆ ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನ ಸಂತರ್ಪಣೆ, ಸಂಜೆ 5:30 ರಿಂದ 6-30 ವರೆಗೆ ರಾಯರ ಜೀವನ ಚರಿತ್ರೆ “ಪ್ರವಚನ” ಉತ್ಸವಗಳು ನಡೆಯಲಿದೆ, ಸಂಜೆ 7:00ಕ್ಕೆ ವಿದುಷಿ ಶ್ರೀಮತಿ ಸಂಗೀತ ಕಟ್ಟಿ ವೃಂದದವರಿಂದ “ದಾಸವಾಣಿ” ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.
1-9-2023 ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ವಿಶೇಷ ಅಭಿಷೇಕ ಉತ್ಸವ ಅನ್ನಸಂಪರ್ಪಣೆ ನಡೆಯಲಿದೆ, ಸಂಜೆ 7.30 ಕ್ಕೆ “ದಾಸ ಲಹರಿ” ಶ್ರೀ ವರಧೇಂದ್ರ ಗಂಗಾ ಖೇಡ್ ರಾಯಚೂರು ವೃಂದದವರು ನಡೆಸಿಕೊಡಲಿದ್ದಾರೆ.
2-9-2023 ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ವಿಶೇಷ ಅಭಿಷೇಕ, ವಿಶೇಷ “ಮಹಾ ರಥೋತ್ಸವ” ಈ ದಿನ ಬೆಳಗ್ಗೆ 9 ಗಂಟೆಗೆ ಜಯನಗರದ ರಾಜಭೀದಿಯಲ್ಲಿ “ಮಹಾ ರಥೋತ್ಸವ”ವು ನೆರವೇರಲಿದೆ ನಂತರ ಭಕ್ತರಿಗೆ ಅನ್ನಸಂತರ್ಪಣೆ, ಈ ದಿನ ಸಂಜೆ 7:00 ಕ್ಕೆ”ಸ್ಯಾಕ್ಸೋ ಫೋನ್ ವಾದನ” ಕುಮಾರಿ – ದಿವ್ಯಶ್ರೀ ರಂಗನಾಥ್ ವೃಂದದವರು ನಡೆಸಿಕೊಡಲಿದ್ದಾರೆ.
3-9-2023 ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ವಿಶೇಷ ಪೂಜೆಗಳು ನೆರವೇರಲಿದೆ, ಈ ದಿನ ಸಂಜೆ 7:00ಕ್ಕೆ ‘ದಾಸ ಝೇಂಕಾರ” ವಿದ್ವಾನ್- ಶೇಷಗಿರಿದಾಸ್ ರಾಯಚೂರು ವೃಂದದವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

4-9-2023 ರಂದು ಸರ್ವ ಸಮರ್ಪಣೋತ್ಸವ – ಬೆಳಗ್ಗೆ 10 ಗಂಟೆಗೆ ಸೋಸಲೆ ವ್ಯಾಸರಾಜ ಮಠಾಧೀಶರಾದ ಪರಮ ಪೂಜ್ಯ ಶ್ರೀ 108 ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ನೆರವೇರಲಿದೆ, ಈ ದಿನ ಸಂಜೆ 6-30 ಕ್ಕೆ “ದಾಸ ತರಂಗಿಣಿ” -ಶ್ರೀ ರಾಜೇಶ್ ಕುಲಕರ್ಣಿ ಬಳ್ಳಾರಿ ಇವರ ವೃಂದದವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 29- 8-2023 ರಿಂದ 4-9-2023 ವರೆಗೆ ಪ್ರತಿ ದಿನ ಸಂಜೆ ವಿದ್ವಾನ್ ಶ್ರೀ ಜಗನ್ನಾಥಾಚಾರ್ಯ ರಾಯಚೂರು ಇವರಿಂದ ಪ್ರವಚನವು ನಡೆಯಲಿದೆ, ಎಂದು ತಿಳಿಸಿದರು, ಈ ಮಹೋತ್ಸವದಲ್ಲಿ ಭಕ್ತರು ಭಾಗವಹಿಸಿ ತನು-ಮನ- ದನ- ಗಳಿಂದ ಸೇವೆ ಸಲ್ಲಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗ ಬೇಕೆಂದು ತಿಳಿಸಿದರು, (ವಿಶೇಷ ಸೇವೆ ಸಲ್ಲಿಸಿದ ದಾನಿಗಳಿಗೆ ಮಂತ್ರಾಲಯ ಯಾತ್ರೆಯನ್ನು ಮಾಡಿಸಲಾಗುವುದು) ತಮ್ಮೆಲ್ಲರ ಹಾಗೂ ಭಕ್ತರ ಸಹಕಾರದೊಂದಿಗೆ ಪೂಜಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ , ಈ ಸಂದರ್ಭದಲ್ಲಿ ಧರ್ಮಾಧಿಕಾರಿಗಳಾದ ಜಿ,ಕೆ ಆಚಾರ್ಯರು, ಹಾಗೂ ಸ್ವಯಂ ಸೇವಕರು , ಸೇವಾ ಕರ್ತೃಗಳು, ಭಕ್ತರು ಶ್ರೀಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಶೇಷ ಸೂಚನೆ ಶ್ರೀಮಠದ ಸೇವೆಯಲ್ಲಿ ಭಾಗವಹಿಸುವಂತಹ ಭಕ್ತರು ಆನ್ಲೈನ್ ಈ ಫೋನ್ 9449133929 ನಂಬರ್ ಮುಖಾಂತರ ಸೇವೆ ಸಲ್ಲಿಸಬಹುದು,ಹೆಚ್ಚಿನ ಮಾಹಿತಿಗಾಗಿ-9945429129-08022443962-9449133929- 8660349906.