Home Temple ಶ್ರೀ ಗುರು ರಾಯರ 353 ನೇ ಆರಾಧನಾ ಸಪ್ತರಾತ್ರೋತ್ಸವ “ಸಮಾರೋಪ ಸಮಾರಂಭ” ಜಯನಗರದ ಶ್ರೀ ರಾಘವೇಂದ್ರ...

ಶ್ರೀ ಗುರು ರಾಯರ 353 ನೇ ಆರಾಧನಾ ಸಪ್ತರಾತ್ರೋತ್ಸವ “ಸಮಾರೋಪ ಸಮಾರಂಭ” ಜಯನಗರದ ಶ್ರೀ ರಾಘವೇಂದ್ರ ಮಠದಲ್ಲಿ

0

ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ಮತ್ತು ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 18 ಕಾಣಿಯೂರು ಮಠಾಧೀಶರ ಅಮೃತ ಹಸ್ತದಿಂದ ಉದ್ಘಾಟನೆ ಗೊಂಡ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತರಾತ್ರೋತ್ಸವವು ಆರಂಭಗೊಂಡಿತು.

ಈ ಆರಾಧನೆಯ ಎಲ್ಲಾ ದಿನಗಳಲ್ಲೂ ಬೆಳಗ್ಗೆ ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾಭಿಷೇಕ ದಿನಕ್ಕೊಂದು ಅಲಂಕಾರ ವಿಶೇಷ ಪೂಜಾ ಉತ್ಸವ,ರಾಯರ ಪಾದಪೂಜಾ, ಪ್ರವಚನ ಕೈಂಕರ್ಯಗಳು, ಮತ್ತು ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಸಹಸ್ರಾರು ಭಕ್ತರಿಗೆ ಅನ್ನದಾನಸೇವೆ, ಸಂಜೆಯ ಪೂಜಾ ಕಾರ್ಯಕ್ರಮಗಳು, ದಾಸವಾಣಿ, ಸ್ಯಾಕ್ಸೋಫೋನ್ ವಾದನ.ಆಗಸ್ಟ್ 24 ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನೃತ್ಯ ದಿಶಾ ಟ್ರಸ್ಟ್ ನ ಸುಮಾರು 60ಮಕ್ಕಳವಿದ್ಯಾರ್ಥಿ ಗಳಿಂದ”ಭರತನಾಟ್ಯ”ಪ್ರದರ್ಶನ ಜರುಗಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು.

ಈ ಆರಾಧನೆಯ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸೇವಾ ಕರ್ತೃಗಳಿಗೆ, ಸ್ವಯಂ ಸೇವಕರಿಗೆ ಹಾಗೂ ಶ್ರೀಮಠದ ಸಿಬ್ಬಂದಿಗಳಿಗೆ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಮಂತ್ರಾಲಯ ಶ್ರೀಪಾದರನ್ನು ಅಭಿಮಾನ ಪೂರ್ವಕವಾಗಿ ಅಭಿನಂದಿಸಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರ ಆಚಾರ್ಯರ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೊಂಡಾಡಿ ಸಂತೋಷವನ್ನು ವ್ಯಕ್ತಪಡಿಸಿದರು. ಈ ಸಪ್ತ ರಾತ್ರೋತ್ಸವದ ಸಂದರ್ಭದಲ್ಲಿ 62,000ಕ್ಕೂ ಮಿಗಿಲಾಗಿ ಭಕ್ತ ಜನರಿಗೆ ಅನ್ನಸಂಪರ್ಪಣೆಯೂ ಬೆಳಗ್ಗೆ 11-30 ರಿಂದ ರಾತ್ರಿ 10-30 ವರೆಗೂ ನಿರಂತರವಾಗಿ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ಗುರು ರಾಯರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.

Previous articleBIRLA FERTILITY & IVF FURTHER EXPANDS ITS NETWORK TO 50 CLINICS BY ACQUIRING BABYSCIENCE IVF
Next articleOpportunity to pursue lucrative apprenticeship in Germany opens for Indian students

LEAVE A REPLY

Please enter your comment!
Please enter your name here