Home Education ರೇವಾ ವಿಶ್ವವಿದ್ಯಾಲಯದಲ್ಲಿ 2024-25ನೇ ಸಾಲಿನ ತಾಂತ್ರಿಕೇತರ ಪ್ರೋಗ್ರಾಂ ವಿದ್ಯಾರ್ಥಿಗಳ ಹೊಸ ಬ್ಯಾಚ್ ಗೆ ಸ್ವಾಗತ

ರೇವಾ ವಿಶ್ವವಿದ್ಯಾಲಯದಲ್ಲಿ 2024-25ನೇ ಸಾಲಿನ ತಾಂತ್ರಿಕೇತರ ಪ್ರೋಗ್ರಾಂ ವಿದ್ಯಾರ್ಥಿಗಳ ಹೊಸ ಬ್ಯಾಚ್ ಗೆ ಸ್ವಾಗತ

0

ಬೆಂಗಳೂರು, ಜುಲೈ 24: ಉನ್ನತ ಶಿಕ್ಷಣ ನೀಡುವುದರಲ್ಲಿ ಮುಂಚೂಣಿಯಲ್ಲಿ ಇರುವ ರೇವಾ ವಿಶ್ವವಿದ್ಯಾಲಯದಲ್ಲಿ ಬುಧವಾರದಂದು 2024-2025ರ ಶೈಕ್ಷಣಿಕ ವರ್ಷದ ತಾಂತ್ರಿಕೇತರ ಪ್ರೋಗ್ರಾಮ್ ಗಳ ಹೊಸ ಬ್ಯಾಚ್ ಗಾಗಿ ಸಂಸ್ಥೆಯ ಬಗ್ಗೆ ಪರಿಚಯಾತ್ಮಕ ಹಾಗೂ ಸಂಕ್ಷಿಪ್ತವಾಗಿ ನಿಯಮಾವಳಿಗಳ ಬಗ್ಗೆ ತಿಳಿಸುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವು ರೇವಾ ವಿಶ್ವವಿದ್ಯಾಲಯದ ಸೌಗಂಧಿಕಾದಲ್ಲಿ ನಡೆಯಿತು. ಬೋಟ್ ಲೈಫ್ ಸ್ಟೈಲ್ (boAt Lifestyle) ಸಹ ಸಂಸ್ಥಾಪಕರಾದ ಅಮನ್ ಗುಪ್ತಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಂದಹಾಗೆ ಅಮನ್ ಗುಪ್ತಾ ಅವರು ತಮ್ಮಲ್ಲಿನ ವಿಶಿಷ್ಟವಾದ ಆಕರ್ಷಣೆ ಹಾಗೂ ಯುವಜನರಲ್ಲಿ ಚೈತನ್ಯ- ಸ್ಫೂರ್ತಿ ತುಂಬುವುದಕ್ಕೆ ಹೆಸರಾದವರು. ಉದ್ಘಾಟನೆಯ ನಂತರದಲ್ಲಿ ಅವರು ಉದ್ಯಮಶೀಲತೆ ಹಾಗೂ ನಾವೀನ್ಯತೆ ಬಗ್ಗೆ ತಮ್ಮ ಒಳನೋಟಗಳೊಂದಿಗೆ ಹೊಸ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ತಮ್ಮ ಕಾಲೇಜು ದಿನಗಳನ್ನು ನೆನೆಯುತ್ತಾ ಗುಪ್ತಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. “ಬಹಳಷ್ಟು ವಿದ್ಯಾರ್ಥಿಗಳನ್ನು ನೋಡಿದಾಗ, ನನಗೆ ಚೈತನ್ಯ ಬಂದಂತಾಗುತ್ತಿತ್ತು ಮತ್ತು ಸ್ಫೂರ್ತಿ ಪಡೆದಂತೆ ಆಗುತ್ತಿದ್ದೆ. ಅದನ್ನೇ ನಿಮಗೆ ಹೇಳಲು ನಾನು ಬಯಸುತ್ತೇನೆ – ಚೈತನ್ಯಯುತವಾಗಿರಿ ಮತ್ತು ನೀವು ಮಾಡುವ ಎಲ್ಲದರಲ್ಲೂ ಭಾವತೀವ್ರತೆಯಿಂದ ಮಾಡಿರಿ,” – ಹೀಗೆ ಅವರು ತಮ್ಮ ಪ್ರಯಾಣವನ್ನು ವಿವರಿಸುತ್ತಾ, 35 ವರ್ಷ ವಯಸ್ಸಿನವರೆಗೂ ತಮ್ಮ ವೃತ್ತಿಜೀವನದ ಹಾದಿಯಲ್ಲಿ ಅನಿಶ್ಚಿತತೆ ಇತ್ತು ಎಂಬುದನ್ನು ಒತ್ತಿ ಹೇಳಿದರು. “ನನ್ನ ಪದವಿಯನ್ನು ಪೂರ್ಣಗೊಳಿಸಿದೆ, ನಂತರ ಸಿಎ ಮಾಡಿದೆ, ಮತ್ತು ಮುಂದೇನು ಮಾಡಬೇಕು ಎಂಬ ಬಗ್ಗೆ ಯಾವ ಸೂಚನೆ ನನಗಿರಲಿಲ್ಲ. ನಾನು ಐದು ಸ್ಟಾರ್ಟ್‌ಅಪ್‌ಗಳನ್ನು ಶುರು ಮಾಡಿದೆ, ಆದರೆ ಅವುಗಳಲ್ಲಿ ಯಾವುದೂ ಯಶಸ್ವಿಯಾಗಲಿಲ್ಲ. ಈ ಎಲ್ಲ ವೈಫಲ್ಯಗಳ ನಂತರವೇ ಬೋಟ್ ಲೈಫ್‌ಸ್ಟೈಲ್ ಹುಟ್ಟಿತು”, ಎಂದು ಅವರು ಹೇಳಿದರು.ವೈಫಲ್ಯಗಳನ್ನು ಕಲಿಕೆಯ ಅನುಭವಗಳಾಗಿ ಸ್ವೀಕರಿಸುವ ಪ್ರಾಮುಖ್ಯವನ್ನು ಗುಪ್ತಾ ಅವರು ಎತ್ತಿ ತೋರಿಸಿದರು ಮತ್ತು ವಿಶ್ವವಿದ್ಯಾನಿಲಯದಲ್ಲಿ ಕಳೆಯುವ ವಿದ್ಯಾರ್ಥಿಗಳ ಸಮಯದಲ್ಲಿ ಅವರ ಭಾವತೀವ್ರತೆಯಿಂದ ಕಾಡುವ ಸಂಗತಿಗಳನ್ನು ಕಂಡುಕೊಳ್ಳುವುದನ್ನು ಮತ್ತು ಅವುಗಳನ್ನು ಅನುಸರಿಸುವುದಕ್ಕೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶ್ಯಾಮರಾಜು ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಮಗ್ರ ಶಿಕ್ಷಣಕ್ಕೆ ರೇವಾ ವಿಶ್ವವಿದ್ಯಾಲಯದ ಬದ್ಧತೆಯನ್ನು ಒತ್ತಿ ಹೇಳಿದರು. “ರೇವಾ ವಿಶ್ವವಿದ್ಯಾನಿಲಯದಲ್ಲಿ, ಸಾಂಪ್ರದಾಯಿಕ ಶೈಕ್ಷಣಿಕ ಮಿತಿಗಳನ್ನು ಮೀರಿದ ಸಮಗ್ರ ಕಲಿಕೆಯನ್ನು ನಾವು ನಂಬುತ್ತೇವೆ. ಇದು ಶೈಕ್ಷಣಿಕ ಜ್ಞಾನವನ್ನು ಮಾತ್ರವಲ್ಲದೆ ನಡವಳಿಕೆಯಲ್ಲಿ ಬೆಳವಣಿಗೆ ಮತ್ತು ಸ್ಫೂರ್ತಿಯನ್ನು ಒಳಗೊಂಡಿರುತ್ತದೆ. ನಾನು ಯಾವಾಗಲೂ ಹೇಳುವಂತೆ, ಈ ಶಿಕ್ಷಣ ದೇಗುಲದಿಂದ ಪದವಿ ಪಡೆಯುವ ವೇಳೆಗೆ ನೀವೆಲ್ಲರೂ ಉದ್ಯೋಗ ಒದಗಿಸುವವರು, ನಾಯಕರು ಮತ್ತು ಆದರ್ಶ ವ್ಯಕ್ತಿಗಳಾಗಬೇಕೆಂದು ನಾನು ಬಯಸುತ್ತೇನೆ. ನೀವೆಲ್ಲರೂ ಸವ್ಯಸಾಚಿಗಳಾಗಬೇಕು, ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಬೇಕು ಎಂಬುದಾಗಿ ನಾನು ಬಯಸುತ್ತೇನೆ,” ಎಂದು ಡಾ.ರಾಜು ಹೇಳಿದರು.

ಪ್ರೊ ಚಾನ್ಸಲರ್ ಉಮೇಶ್ ಎಸ್.ರಾಜು, ಉಪಕುಲಪತಿ(ಐ/ಸಿ) ಡಾ. ಎನ್. ರಮೇಶ್, ಪ್ರೊ ವೈಸ್ ಚಾನ್ಸಲರ್ ಡಾ. ಆರ್.ಸಿ. ಬಿರಾದಾರ್, ಪ್ರೊ ವೈಸ್ ಚಾನ್ಸೆಲರ್ ಡಾ. ಶುಭಾ ಎ., ಪ್ರೊ ವೈಸ್ ಚಾನ್ಸಲರ್ ಡಾ.ಸಂಜಯ್ ಚಿಟ್ನಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಘಾಟನೆಯ ನಂತರದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳಿಗೆ ಅಮನ್ ಗುಪ್ತಾ ಅವರೊಂದಿಗೆ ಮಾತುಕತೆಗೆ ಅವಕಾಶ ಇತ್ತು. ಬೋಟ್ ಲೈಫ್‌ಸ್ಟೈಲ್ ಅನ್ನು ಹೇಗೆ ಸ್ಥಾಪಿಸಿದರು ಮತ್ತು ಅದನ್ನು ಜಾಗತಿಕ ಬ್ರ್ಯಾಂಡ್ ಆಗಿ ಹೇಗೆ ಪರಿವರ್ತಿಸಿದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮನ್, ಗ್ಯಾಜೆಟ್‌ಗಳ ಬಗ್ಗೆ ತಮಗಿದ್ದ ಭಾವತೀವ್ರವಾದ ಪ್ರೀತಿ- ಉತ್ಸಾಹ ಮತ್ತು ಜಾಗತಿಕ ಮಾನದಂಡಗಳನ್ನು ಪೂರೈಸುವ ಭಾರತೀಯ ಬ್ರ್ಯಾಂಡ್ ಅನ್ನು ಸೃಷ್ಟಿಸುವ ಬಗ್ಗೆ ತಮಗಿದ್ದ ಬಯಕೆಯನ್ನು ಹಂಚಿಕೊಂಡರು. “ನಾನು ಮಾಡಿದ್ದೆಲ್ಲ ಇಷ್ಟೇ; ವಿಭಿನ್ನವಾಗಿ ಯೋಚಿಸಿದೆ, ಮತ್ತು ಬೋಟ್ ಹುಟ್ಟಿತು”, ಎಂದು ಅವರು ಹೇಳಿದರು. ಅಮನ್ ಅವರು ತಮ್ಮ ಬದುಕನ್ನು ರೇವಾ ವಿಶ್ವವಿದ್ಯಾಯದ ಜೊತೆಗೆ ಸಮೀಕರಿಸಿಕೊಂಡರು. ಶ್ಯಾಮರಾಜು ಅವರು ಸಮಾಜಕ್ಕೆ ಹಿಂತಿರುಗಿಸುವ ಬಗ್ಗೆ ಹೇಗೆ ವಿಭಿನ್ನವಾಗಿ ಆಲೋಚಿಸಿದರು ಎಂಬುದರ ಬಗ್ಗೆ ಗಮನವನ್ನು ಸೆಳೆದರು.

ಅಮನ್ ಅವರ ಕಂಪನಿಯು ಜಾಗತಿಕ ಬ್ರಾಂಡ್ ಆಗಿ ಹೊರಹೊಮ್ಮಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಗ್ರಾಹಕರೇ ದೇವರು ಎಂದು ನಾನು ನಂಬುತ್ತೇನೆ. ಅವರಿಗೆ ಬೇಕಾದುದನ್ನು ನೋಡಿ ಮತ್ತು ಅವರ ಅಗತ್ಯಗಳನ್ನು ತಪ್ಪದೆ ಅನುಸರಿಸಿ” ಎಂದು ಹೇಳಿದರು. ಆಲೋಚನೆಯನ್ನು ವಾಸ್ತವವಾಗಿ ಪರಿವರ್ತಿಸುವ ಬಗ್ಗೆ ಕೇಳಿದಾಗ, ಗುಪ್ತಾ ಅವರು ಕಾರ್ಯಗಳ ಅನುಷ್ಠಾನದ ಮಹತ್ವವನ್ನು ಒತ್ತಿ ಹೇಳಿದರು. “ಇದು ಯಾವಾಗಲೂ ಕೇವಲ ಆಲೋಚನೆ ಒಂದೇ ಮುಖ್ಯ ಅಲ್ಲ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಅದನ್ನು ಕಾರ್ಯಗತಗೊಳಿಸುವುದು ಮುಖ್ಯ. ನೀವು ಎಲ್ಲಿಂದಲಾದರೂ ಆಲೋಚನೆಯನ್ನು ತೆಗೆದುಕೊಂಡು ಅದನ್ನು ಸರಿಯಾದ ಬೆಲೆ, ಸರಿಯಾದ ಮಾರ್ಕೆಟಿಂಗ್ ಮತ್ತು ಸರಿಯಾದ ಸ್ಥಳದಲ್ಲಿ ಕಾರ್ಯಗತಗೊಳಿಸಿ,” ಅವರು ಸಲಹೆ ನೀಡಿದರು.

ಬೋಟ್ ಎಂಬ ಬ್ರಾಂಡ್ ಹೆಸರನ್ನು ಏಕೆ ಆರಿಸಿದಿರಿ ಎಂದು ಪ್ರೊ ಚಾನ್ಸೆಲರ್ ಉಮೇಶ್ ಎಸ್.ರಾಜು ಅವರು ಕೇಳಿದರು. ಅದನ್ನು ವಿವರಿಸಿದ ಗುಪ್ತಾ, “ಇಂಗ್ಲಿಷ್ ಓದುವ ಪ್ರತಿಯೊಬ್ಬರಿಗೂ ಇದು ಎ ಫಾರ್ ಆಪಲ್ ಮತ್ತು ಬಿ ಫಾರ್ ಬೋಟ್. ಮೊದಲನೆಯದನ್ನು (ಆಪಲ್) ಈಗಾಗಲೇ ತೆಗೆದುಕೊಂಡಿದ್ದರಿಂದ ನಾನು ಮುಂದಿನದನ್ನು ಆರಿಸಿಕೊಂಡೆ,” ಆದರೆ ಮಾತು ಮುಂದುವರಿಸಿ, “ತಮಾಷೆಗೆ ಹೇಳಿದೆ. ಆದರೆ ನಮ್ಮ ಅಡಿಬರಹವು ‘ಪ್ಲಗ್ ಇನ್ ನಿರ್ವಾಣ’ ಎಂದು ಹೇಳುತ್ತದೆ. ಇದರರ್ಥ ನಮ್ಮ ಬೋಟ್ ಹೆಡ್‌ಫೋನ್‌ಗಳನ್ನು ಧರಿಸಿದಾಗ, ನೀವು ನಿಮ್ಮದೇ ವಲಯಕ್ಕೆ ಪ್ಲಗ್ ಮಾಡುತ್ತೀರಿ ಅಥವಾ ನಿಮ್ಮ ಸಂತೋಷಕ್ಕೆ ಪ್ಲಗ್ ಮಾಡುತ್ತೀರಿ, ಅದು ನಮ್ಮ ಉದ್ದೇಶ,” ಎಂದು ಹೇಳಿದರು.

ವಿಶ್ವವಿದ್ಯಾನಿಲಯ ಜೀವನದಲ್ಲಿ ಸುಗಮ ಪರಿವರ್ತನೆಗೆ ಅನುಕೂಲವಾಗುವಂತೆ ಈ ವರ್ಷದ ಪರಿಚಯಾತ್ಮಕ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ, ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್ ಗಳು, ಕ್ಯಾಂಪಸ್ ಸಂಪನ್ಮೂಲಗಳು ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಅವಕಾಶಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ರೇವಾ ವಿಶ್ವವಿದ್ಯಾನಿಲಯವು ಪ್ರತಿಭೆಗಳ ಪೋಷಣೆ ಮತ್ತು ಆವಿಷ್ಕಾರವನ್ನು ಬೆಳೆಸುವುದನ್ನು ಮುಂದುವರಿಸುತ್ತಿರುವುದರಿಂದ, ಹೊಸ ಬ್ಯಾಚ್ ಅವರ ಭವಿಷ್ಯದ ವೃತ್ತಿಜೀವನದಲ್ಲಿ ಯಶಸ್ಸಿಗೆ ಸಿದ್ಧಗೊಳಿಸುವ ಶ್ರೀಮಂತ ಶೈಕ್ಷಣಿಕ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ.

Previous articleSteadview Capital, ValueQuest, and Evolvence India Invest Rs 250 Crore in IPO-Bound Unimech Aerospace
Next articleಪ್ರವಾಸೋದ್ಯಮ ಗಮನಾರ್ಹ ಪ್ರಗತಿ, ಪುದುಚೇರಿಗೆ ಪ್ರವಾಸಿಗರನ್ನು ಸೆಳೆಯಲು ರೋಡ್‌ಶೋ

LEAVE A REPLY

Please enter your comment!
Please enter your name here