Home Health ರಾಷ್ಟ್ರೀಯ ರಕ್ತನಾಳ ರೋಗ ಜಾಗೃತಿ ದಿನಃ ಆಸ್ಟರ್ ಸಿಎಂಐ ಆಸ್ಪತ್ರೆಯಿಂದ ಮಧುಮೇಹ ಪೀಡಿತ ಕಾಲು ನಿರ್ವಹಣೆಗೆ...

ರಾಷ್ಟ್ರೀಯ ರಕ್ತನಾಳ ರೋಗ ಜಾಗೃತಿ ದಿನಃ ಆಸ್ಟರ್ ಸಿಎಂಐ ಆಸ್ಪತ್ರೆಯಿಂದ ಮಧುಮೇಹ ಪೀಡಿತ ಕಾಲು ನಿರ್ವಹಣೆಗೆ ತಂತ್ರಜ್ಞಾನ ಚಾಲಿತ ಪರಿಹಾರಗಳು

ಅಂಗಚ್ಛೇದನ-ಮುಕ್ತ ಭವಿಷ್ಯದ ಕಡೆಗೆ ಒಂದು ಹೆಜ್ಜೆ

0

ಬೆಂಗಳೂರು, ಆಗಸ್ಟ್ 3: ರಾಷ್ಟ್ರೀಯ ರಕ್ತನಾಳ ರೋಗ ಜಾಗೃತಿ ದಿನದ ನೆನಪಿಗಾಗಿ, ಆಸ್ಟರ್ ಸಿಎಂಐ ಆಸ್ಪತ್ರೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮುಡಿಪಾಗಿಟ್ಟಿರುವ ಡಯಾಬಿಟಿಕ್ ಫೂಟ್‌ಕೇರ್‌ ಕ್ಲಿನಿಕ್ (ಡಿಎಫ್‌ಸಿ) ಅನ್ನು ಉದ್ಘಾಟಿಸಿದೆ. ಕೃತಕ ಬುದ್ಧಿಮತ್ತೆ ಮತ್ತು 3ಡಿ ಸಿಎಡಿ ಅನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಮಧುಮೇಹಕ್ಕೆ ತುತ್ತಾಗಿರುವ ಕಾಲಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ತಡೆಯಲು ಮತ್ತು ನಿರ್ವಹಿಸಲು ಕ್ಲಿನಿಕ್ ಸಮಗ್ರ ಸೇವೆಗಳನ್ನು ಒದಗಿಸುತ್ತದೆ. ಇದರಿಂದಾಗಿ ಅಂಗಚ್ಛೇದನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಮತ್ತು ರೋಗಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು.

ಮಧುಮೇಹ ಪ್ರಪಂಚದಾದ್ಯಂತ ಅಂಗಚ್ಛೇದನಕ್ಕೆ ಒಂದು ಪ್ರಮುಖ ಕಾರಣ. ಇದು ಸಾಮಾನ್ಯವಾಗಿ ಕಾಲು ಹುಣ್ಣುಗಳಿಂದ ಉಂಟಾಗುತ್ತದೆ. ಮಧುಮೇಹ ಪೀಡಿತ ಪಾದದ ಆರೈಕೆ ಮಾಡುವ ಸಾಂಪ್ರದಾಯಿಕ ವಿಧಾನಗಳಲ್ಲಿ ಹಲವಾರು ಇತಿಮಿತಿಗಳಿವೆ. ಇದರಿಂದ ಸಾಮಾನ್ಯವಾಗಿ ಅತ್ಯುತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಆಸ್ಟರ್ ಸಿಎಂಐ ಆಸ್ಪತ್ರೆಯ ಡಿಎಫ್‌ಸಿ ಸಮಗ್ರ ಮತ್ತು ರೋಗಿ-ಕೇಂದ್ರಿತ ಪರಿಹಾರವನ್ನು ನೀಡುವ ಮೂಲಕ ಈ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವ ಗುರಿ ಹೊಂದಿದೆ.

ರೋಗಿಗಳ ಪಾದಗಳನ್ನು ನಿಖರವಾಗಿ ಸ್ಕ್ಯಾನ್ ಮಾಡುವ ಮೂಲಕ ಮತ್ತು ಎಐ ಲೆಕ್ಕಪದ್ಧತಿಯಲ್ಲಿ ಮಾಹಿತಿಯನ್ನು ವಿಶ್ಲೇಷಿಸುವ ಮೂಲಕ, ಕ್ಲಿನಿಕ್, ಅಗತ್ಯಕ್ಕೆ ಅನುಸಾರವಾಗಿ ಪಾದರಕ್ಷೆಗಳನ್ನು ರಚಿಸುತ್ತದೆ. ಅದು ದುರ್ಬಲ ಪ್ರದೇಶಗಳಿಗೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ, ಹುಣ್ಣಾಗುವುದನ್ನು ತಡೆಯುತ್ತದೆ, ಮತ್ತು ಬೇಗ ಗುಣವಾಗಲು ಕಾರಣವಾಗುತ್ತದೆ. ಈ ನವೀನ ವಿಧಾನ ಅಂಗಚ್ಛೇದನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಮಧುಮೇಹ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

“ಭಾರತ ಮಧುಮೇಹವೆಂಬ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ. ಇದು ಅಪಾಯಕಾರಿ ಪ್ರಮಾಣದಲ್ಲಿ ಕಾಲಿನಲ್ಲಿ ಹುಣ್ಣುಗಳು ಮತ್ತು ಅಂಗಚ್ಛೇದನಗಳಿಗೆ ಕಾರಣವಾಗುತ್ತಿದೆ. ನಮ್ಮ ಹೊಸ ಡಯಾಬಿಟಿಕ್ ಫೂಟ್‌ಕೇರ್‌ ಕ್ಲಿನಿಕ್, ಡಯಾಬಿಟಿಕ್ ಪಾದದ ಹುಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸುಧಾರಿತ ತಂತ್ರಜ್ಞಾನವನ್ನು ತಜ್ಞರ ಮೇಲ್ವಿಚಾರಣೆಯೊಂದಿಗೆ ಬಳಸುವ ಮೂಲಕ, ನಾವು ಮಧುಮೇಹ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವ ಮೂಲಕ ಅಸಂಖ್ಯಾತ ಮಧುಮೇಹ ರೋಗಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ಮಧುಮೇಹ-ಸಂಬಂಧಿತ ಅಂಗಚ್ಛೇದನ- ಮುಕ್ತ ಭವಿಷ್ಯ ರೂಪಿಸುವುದು ನಮ್ಮ ಗುರಿಯಾಗಿದೆ, “ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ರಕ್ತನಾಳ ಮತ್ತು ಎಂಡೋವಾಸ್ಕುಲರ್ ಶಸ್ತ್ರಚಿಕಿತ್ಸೆಯ ಪ್ರಮುಖ ಸಲಹಾತಜ್ಞ ಡಾ. ಕೃಷ್ಣ ಚೈತನ್ಯ ಹೇಳಿದ್ದಾರೆ.

ಡಯಾಬಿಟಿಕ್ ಫೂಟ್‌ಕೇರ್‌ ಕ್ಲಿನಿಕ್ ಗಾಯದ ನಿರ್ವಹಣೆ, ರಕ್ತನಾಳದ ಮೌಲ್ಯಮಾಪನ ಮತ್ತು ರೋಗಿಗಳಿಗೆ ಶಿಕ್ಷಣ ಸೇರಿದಂತೆ ಸಮಗ್ರ ಮಧುಮೇಹ ಪೀಡಿತ ಪಾದದ ಆರೈಕೆ ಸೇವೆಗಳನ್ನೂ ನೀಡುತ್ತದೆ. ಮಧುಮೇಹ ಪೀಡಿತ ಪಾದ ರೋಗದ ವಿಭಿನ್ನ ಸ್ವರೂಪಗಳನ್ನು ಪರಿಹರಿಸುವ ಮೂಲಕ, ಕ್ಲಿನಿಕ್ ಜಟಿಲತೆಯನ್ನು ತಡೆಗಟ್ಟುವ ಮತ್ತು ರೋಗಿಯ ಸ್ಥಿತಿಯನ್ನು ಸುಧಾರಿಸುವ ಗುರಿ ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಟರ್ ಡಿಎಂ ಹೆಲ್ತ್‌ಕೇರ್‌ ಇಂಡಿಯಾದ ಸಿಇಒ ಡಾ. ನಿತೀಶ್ ಶೆಟ್ಟಿ, “ಡಯಾಬಿಟಿಕ್ ಫೂಟ್‌ಕೇರ್‌ ಕ್ಲಿನಿಕ್ ನಮಗೆ ಮಹತ್ವದ ಮೈಲಿಗಲ್ಲಾಗಿದೆ. ನಾವು ಮಧುಮೇಹ ಪೀಡಿತ ಕಾಲು ಸಮಸ್ಯೆಯ ನಿರ್ವಹಣೆಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತಿದ್ದೇವೆ, ಮತ್ತು ಭಾರತದಲ್ಲಿ ರೋಗದ ವ್ಯಾಪಕ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಷೇತ್ರದ ಮೇಲೆ ನಮ್ಮ ಕಾರ್ಯತಂತ್ರದಲ್ಲಿ ಹೆಚ್ಚಿನ ಗಮನಹರಿಸಿದ್ದೇವೆ. ಈ ಕ್ಲಿನಿಕ್ ಮಧುಮೇಹ ಪೀಡಿತ ಕಾಲುಗಳ ಆರೈಕೆಯಲ್ಲಿ, ನಮ್ಮ ಆರೋಗ್ಯ ರಕ್ಷಣೆಯ ಗುಣಮಟ್ಟ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ,”ಎಂದು ಹೇಳಿದರು.

ಡಯಾಬಿಟಿಕ್ ಫೂಟ್‌ಕೇರ್‌ ಕ್ಲಿನಿಕ್, ಮಧುಮೇಹ ಪೀಡಿತ ಕಾಲುಗಳ ಸಮಸ್ಯೆಗೆ ಸಮಗ್ರ ತಾಂತ್ರಿಕ-ಪರಿಹಾರಕ್ಕಾಗಿ ಆಸ್ಟರ್ ಸಿಎಂಐ ಆಸ್ಪತ್ರೆಯ ಸಮರ್ಪಣಾಭಾವಕ್ಕೆ ಉದಾಹರಣೆಯಾಗಿದೆ. ಜೀವನವನ್ನೇ ಬದಲಾಯಿಸುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ, ಮತ್ತು ನಮ್ಮನ್ನು ದುರ್ಬಲಗೊಳಿಸುವ ಈ ಕಾಯಿಲೆಯೊಂದಿಗೆ ಬದುಕುವ ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ನಮ್ಮದು. ಮಧುಮೇಹ ನಮ್ಮ ಓಡಾಟ ಅಥವಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ರೋಗಿಗಳಿಗೆ ಸುರಕ್ಷಿತ ಮತ್ತು ಸುಖಕರ ಭವಿಷ್ಯವನ್ನು ಸೃಷ್ಟಿಸುವುದು ಇದರ ಉದ್ದೇಶ,”ಎಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಸಿಇಒ ಎಸ್ ರಮೇಶ್ ಕುಮಾರ್ ಹೇಳಿದರು.

ಆಸ್ಟರ್ ಸಿಎಮ್ಐ ಆಸ್ಪತ್ರೆ, ಆಧುನಿಕ ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ತನ್ನ ಬದ್ಧತೆಯನ್ನು ಮುಂದುವರೆಸಿದೆ. ಸಂಸ್ಥೆ ಕೃತಕ ಬುದ್ಧಿಮತ್ತೆ (ಎಐ) ಯಂತಹ ಅತ್ಯಾಧುನಿಕ ಸಾಧನಗಳನ್ನು, ಸಹಾನುಭೂತಿಯ ಆರೈಕೆಯೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಸಂಯೋಜಿಸುತ್ತದೆ. ನೈತಿಕತೆಯೊಂದಿಗೆ ವೈಯಕ್ತಿಕ ಪರಿಹಾರಗಳನ್ನು ಕಂಡುಕೊಂಡು ಭವಿಷ್ಯವನ್ನು ರೂಪಿಸಲಾಗುತ್ತಿದೆ. ಇದರ ಸಹಯೋಗಿ ಮನೋಭಾವ ಸ್ಪಷ್ಟವಾದೆ. ಪ್ರತಿ ಹೊಸತರಲ್ಲಿ ನಂಬಿಕೆ, ರೋಗಿಗಳಿಗೆ ಮೊದಲು ಸೇವೆ ಸಲ್ಲಿಸಲು ಸಾಧ್ಯವಾಗುವ ಪ್ರಗತಿಯಲ್ಲಿ ಭರವಸೆ ಮೂಡುತ್ತದೆ.

Previous articleApollo Cancer Centre Bengaluru launches South Asia’s first Cyberknife*S7™ FIM Robotic Radio Surgery System with an Academia
Next article‘ನಮ್ಮ ಹೋಮಿಯೋಪತಿ’ ಲೋಗೋವನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

LEAVE A REPLY

Please enter your comment!
Please enter your name here