Home Spiritual ಮಂತ್ರಾಲಯ ಪರಮ ಪೂಜ್ಯ ಶ್ರೀ108 ಶ್ರೀಸುಬುಧೇಂದ್ರತೀರ್ಥ ಶ್ರೀಗಳಿಂದ ಸಹಸ್ರಾರು ಶಿಷ್ಯ ಭಕ್ತರಿಗೆ ತಪ್ತ ಮುದ್ರಾಧಾರಣೆ”

ಮಂತ್ರಾಲಯ ಪರಮ ಪೂಜ್ಯ ಶ್ರೀ108 ಶ್ರೀಸುಬುಧೇಂದ್ರತೀರ್ಥ ಶ್ರೀಗಳಿಂದ ಸಹಸ್ರಾರು ಶಿಷ್ಯ ಭಕ್ತರಿಗೆ ತಪ್ತ ಮುದ್ರಾಧಾರಣೆ”

0

ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಷಾಢ ಶುದ್ಧ ಪ್ರಥಮ “ಏಕಾದಶಿ” ಪ್ರಯುಕ್ತ ಜಗದ್ಗುರು ಶ್ರೀಮನ್ ಮದ್ವಾಚಾರ್ಯಮೂಲ ಮಹಾಸಂಸ್ಥಾನದೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ 1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಶ್ರೀಮನ್ ಮೂಲರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ, ತದನಂತರ ಶ್ರೀ ಸುದರ್ಶನ ಹೋಮದೊಂದಿಗೆ ವಿಶೇಷವಾಗಿ ಶಯನಿ ಪ್ರಥಮ “ಏಕಾದಶಿ” ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮುಂಭಾಗದ ಬಂಗಾರದ ತೊಟ್ಟಿಲನಲ್ಲಿ ಶ್ರೀಮನ್ ಮೂಲ ರಾಮ ಚಂದ್ರ ದೇವರಿಗೆ ತೊಟ್ಟಿಲ ಸೇವೆಯನ್ನು ನೆರವೇರಿಸಿ ಮಹಾಮಂಗಳಾರತಿ ಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿ ತಾವು “ತಪ್ತ ಮುದ್ರಾ ಧಾರಣ”ವನ್ನು ಸ್ವೀಕರಿಸಿ,ತದನಂತರ ಶ್ರೀಮಠದ ಸಹಸ್ರಾರು ಶಿಷ್ಯರಿಗೆ ಮತ್ತು ಭಕ್ತರಿಗೆ ನಿರಂತರವಾಗಿ ತಪ್ತಮುದ್ರಾಧಾರಣವನ್ನು ನೆರೆವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರಿಂದ ಭಾಗವತ ಪ್ರವಚನ ಮಾಲಿಕೆಯ ಉಪನ್ಯಾಸವೂ ನೆರವೇರಿತು.

ಈ ತಪ್ತ ಮುದ್ರಾ ಧಾರಣೆ ಸ್ವೀಕರಿಸಲು ಸಹಸ್ರಾರು ಶಿಷ್ಯ ಭಕ್ತರಿಗೆ ಅಚ್ಚುಕಟ್ಟಾದ ಸರದಿ ಸಾಲಿನಲ್ಲಿ ಬರುವ ಹಾಗೆ ವಯೋವೃದ್ಧರಿಗೆ ಮತ್ತು ವಿಕಲಚೇತನರಿಗೆ ಪ್ರತ್ಯೇಕದ ವ್ಯವಸ್ಥೆಯನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗಿತ್ತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಶ್ರೀ ಮಠದ ಪ್ರಕಾರ ಪೂಜಾ ಮಂದಿರ ರಾಯರ ಹೊರಬಾಗಿಲಿನಿಂದ ಶಾಲಿನಿ ಆಟದ ಮೈದಾನದವರೆಗೆ ತಪ್ತ ಮುದ್ರಾಧಾರಣಗಾಗಿ ಸಹಸ್ರಾರು ಶಿಷ್ಯ- ಭಕ್ತ ಸಮೂಹವು ಎದ್ದು ಕಾಣುತ್ತಿತ್ತು ಬೆಳಗ್ಗೆ ಯಿಂದಲೇ ನಿರಂತರವಾಗಿ ರಾತ್ರಿ 10 ಗಂಟೆಯವರೆಗೆ ತಪ್ತ ಮುದ್ರಾ ಧಾರಣಾ ಕಾರ್ಯಕ್ರಮವೂ ಮುಂದುವರೆಯಿತು, ಶ್ರೀ ಮಠದ ಶಿಷ್ಯರು ಮತ್ತು ಭಕ್ತರು ಭಗವಂತನ ಚಿಹ್ನೆಗಳಾದ ಚಕ್ರ ಶಂಖವನ್ನು ಧರಿಸಿ ಕೊಂಡು ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು.

Previous articleಜುಲೈ 17 ರಂದು ಮಂತ್ರಾಲಯ ಶ್ರೀಗಳಿಂದ “ತಪ್ತ ಮುದ್ರಾ ಧಾರಣೆ”
Next article‘MinikkiMinikki’ from the highly awaited Chiyaan Vikram’s ‘Thangalaan’ Movie is Now Live on Junglee Music

LEAVE A REPLY

Please enter your comment!
Please enter your name here