Home Special Story ಭಾರತದಾದ್ಯಂತ ದೈತ್ಯ ʼಸರ್ಚ್‌ʼ, ʼಅನ್‌ ಲಾಕ್‌ʼ, ಮತ್ತು ಡೌನ್‌ ಲೋಡ್‌ ಗುಂಡಿಗಳ ಅನ್ವೇಷಣೆಯ ಹಿಂದಿನ ರಹಸ್ಯ...

ಭಾರತದಾದ್ಯಂತ ದೈತ್ಯ ʼಸರ್ಚ್‌ʼ, ʼಅನ್‌ ಲಾಕ್‌ʼ, ಮತ್ತು ಡೌನ್‌ ಲೋಡ್‌ ಗುಂಡಿಗಳ ಅನ್ವೇಷಣೆಯ ಹಿಂದಿನ ರಹಸ್ಯ ಬಹಿರಂಗ

ಗ್ರಾಹಕ ತಂತ್ರಜ್ಞಾನ ಕಂಪೆನಿ ಗ್ಲಾನ್ಸ್‌ ನಿಂದ ರಹಸ್ಯವನ್ನು ಅನಾವರಣಗೊಳಿಸುವ ವಿಡಿಯೋ ಬಿಡುಗಡೆ: ಗ್ಲಾನ್ಸ್‌ ಸಂಸ್ಥೆ ಸ್ಮಾರ್ಟ್‌ ಲಾಕ್‌ ವ್ಯವಸ್ಥೆ ಹೊಂದಿದ್ದರೆ ಈ ಗುಂಡಿಗಳ ಅವಶ್ಯಕತೆ ಇಲ್ಲ ಎಂದ ಬಳಕೆದಾರರು

0

ಬೆಂಗಳೂರು; ದೇಶಾದ್ಯಂತ ತ್ಯಾಜ್ಯ ತೊಟ್ಟಿಗಳಲ್ಲಿ ʼಸರ್ಚ್‌ʼ, ʼಅನ್‌ ಲಾಕ್‌ʼ, ಮತ್ತು ಡೌನ್‌ ಲೋಡ್‌ ಗುಂಡಿಗಳ ಸುತ್ತಲಿನ ರಹಸ್ಯ ಆಳವಾಗುತ್ತಿದ್ದಂತೆ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನ ವೇದಿಕೆಯಾಗಿರುವ ಗ್ಲಾನ್ಸ್‌ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ವಿಡಿಯೋ ಅಂತಿಮವಾಗಿ ರಹಸ್ಯದ ಮುಚ್ಚಳವನ್ನು ತೆರೆದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ದೈತ್ಯ ಸಾಂಕೇತಿಕ ಬಟನ್‌ ಗಳನ್ನು ಜನ ಎಸೆಯುವ ಛಾಯಾಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು.

“ಇತ್ತೀಚಿನ ಟ್ರೆಂಡ್‌ ಗಳಿಂದ ಹಿಡಿದು ನಾವೀನ್ಯತೆಯ ಕ್ರೀಡೆಗಳ ವರೆಗೆ ೫೦೦ ಕ್ಕೂ ಹೆಚ್ಚು ಆಟಗಳನ್ನು ನಿಮ್ಮ ಗ್ಲ್ಯಾನ್ಸ್‌ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನಲ್ಲಿ ನೀವು ಇಷ್ಟಪಡುವ ಎಲ್ಲವನ್ನೂ ಪಡೆಯಬಹುದಾಗಿದೆ. ಇದಕ್ಕಾಗಿ ʼಅನ್‌ ಲಾಕ್‌ʼ, ʼಸರ್ಚ್‌ʼ ಅಥವಾ ಡೌನ್‌ ಲೋಡ್‌ ಮಾಡುವ ಅಗತ್ಯವಿಲ್ಲ. #ಜಸ್ಟ್‌ ಗ್ಲ್ಯಾನ್ಸ್‌ ಮಾಡಿದರೆ ಸಾಕು. ಇದು “ಸರಳವಾದ ರೀತಿಯ ಚತುರತೆಯಲ್ಲವೆ” ಎಂದು ಬೆಂಗಳೂರು ಮೂಲದ ಯೂನಿಕಾರ್ನ್ ನವೋದ್ಯಮ ಕಂಪನಿ ವಿಡಿಯೋ ಮೂಲಕ ಟ್ವಿಟರ್‌ ಪೋಸ್ಟ್‌ ನಲ್ಲಿ ಹೇಳಿದೆ.

ಕಳೆದ ವಾರ ಜ್ಯೋತಿ ನಿವಾಸ್‌ ಕಾಲೇಜು, ಕಬ್ಬನ್‌ ಪಾರ್ಕ್‌, ಲಾಲ್‌ ಬಾಗ್‌ ಮತ್ತು ಚರ್ಚ್‌ ಸ್ಟ್ರೀಟ್‌ ನಂತಹ ಪ್ರಮುಖ ಸ್ಥಳಗಳು ಸೇರಿದಂತೆ ನಗದಾದ್ಯಂತ ವಿವಿಧೆಡೆ ಕಸದ ರಾಶಿಗಳಲ್ಲಿ ʼಸರ್ಚ್‌ʼ, ʼಅನ್‌ ಲಾಕ್‌ʼ ಮತ್ತು ʼಡೌನ್‌ʼ ಲೋಡ್‌ʼ ಎಂದು ಲೇಬಲ್‌ ಮಾಡಿದ ಗುಂಡಿಗಳು ಪತ್ತೆಯಾಗಿವೆ. ಅಚ್ಚರಿ ಎಂದರೆ ಈ ಗುಂಡಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ದೆಹಲಿ, ಇಂದೋರ್‌, ಚೆನ್ನೈ, ಪುಣೆ ಮತ್ತಿತರೆ ದೇಶಾದ್ಯಂತ ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಇಂತಹ ಬಟನ್ ಗಳು ಕಂಡು ಬಂದಿದ್ದವು. ಈ ಅನಿರೀಕ್ಷಿತ ಬಟನ್ ಗಳು ರಾಷ್ಟ್ರವ್ಯಾಪಿ ಕುತೂಹಲವನ್ನು ಹುಟ್ಟು ಹಾಕಿತ್ತು. ಜನ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಿತ್ತು.

ಸಂದೀಪ್‌ ಕಿಶೋರ್‌ ತಮ್ಮ ಟ್ವಿಟರ್‌ ನಲ್ಲಿ “ನನ್ನ ಸ್ನೇಹಿತ ಎರಡು ವರ್ಷಗಳ ಹಿಂದೆ ದೂರವಾಣಿಯನ್ನು ಉಡುಗೊರೆಯಾಗಿ ನೀಡಿದ್ದು, ಇದು ಗ್ಲ್ಯಾನ್ಸ್‌ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ಹೊಂದಿದೆ. ಇದರಲ್ಲಿ ಆಡಲು ಯಾವುದೆ ಡೌನ್‌ ಲೋಡ್‌ ಆಟಗಳಿಲ್ಲ. @ಗ್ಲಾನ್‌ ಸ್ಕ್ರೀನ್‌ ನಲ್ಲಿ ಕಳೆದ ವಾರ ಕಂಡು ಬಂದ ದೈತ್ಯ ಡೌನ್‌ ಲೋಡ್‌, ಸರ್ಚ್‌ ಮತ್ತು ಅನ್‌ ಲಾಕ್‌ ಬಟನ್‌ ಗಳ ಹಿಂದಿನ ರಹಸ್ಯವನ್ನು ಹುಡುಕಲು ಮುಂದಾದೆ” ಎಂದರು.

ಗ್ಲಾನ್ಸ್‌, ಬೆಂಗಳೂರು ಮೂಲದ ಯೂನಿಕಾರ್ನ್‌ [ನಮೋದ್ಯಮದ ಮೂಲಕ ಬೆಳೆದು ಬಂದ ಕಂಪೆನಿ ಇದೀಗ ೧ಶತಕೋಟಿ ಡಾಲರ್‌ ಮೌಲ್ಯ ಹೊಂದಿದೆ]. ಈ ತಂತ್ರಜ್ಞಾನ ಕಂಪೆನಿ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ಗೆ ಹೆಸರುವಾಸಿಯಾಗಿದೆ. ಇದು ದೇಶದ ಹೆಚ್ಚಿನ ಪ್ರಮುಖ ಆಂಡ್ರಾಯ್ಡ್‌ ಸ್ಮಾರ್ಟ್‌ ಪೋನ್‌ ಬ್ರ್ಯಾಂಡ್‌ ಗಳಲ್ಲಿ ಲಭ್ಯವಿದೆ. ದಕ್ಷಿಣ ಏಷ್ಯಾದಲ್ಲಿ ಗ್ಲಾನ್ಸ್‌ ಲಾಕ್‌ ಸ್ಕ್ರೀನ್‌ ಅನ್ನು ಸುಮಾರು 450 ದಶಲಕ್ಷ ಮಂದಿ ಬಳಸುತ್ತಿದ್ದಾರೆ. ಇದು ದೇಶದ ಹೆಚ್ಚಿನ ಪ್ರಮುಖ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌ ಬ್ರ್ಯಾಂಡ್‌ ಗಳಲ್ಲಿ ಲಭ್ಯವಿದೆ. ಸಾಧ್ಯವಿರುವ ಪ್ರತಿಯೊಂದು ಮೂಲದಿಂದ ಹರಿದು ಬರುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಗ್ರಾಹಕರು ಯಾವ ವಿಷಯವನ್ನು ಸೇರ್ಪಡೆಮಾಡಬೇಕು ಎಂಬುದನ್ನು ನಿರ್ಧರಿಸಲಾಗದೇ ದಣಿದಿದ್ದಾರೆ.

ಲಿಂಕ್ಡ್‌ ಇನ್‌ ಪೋಸ್ಟ್‌ ನಲ್ಲಿ ಮುಖ್ಯ ಮಾರುಕಟ್ಟೆ ಅಧಿಕಾರಿ ಬಿಕಾಶ್‌ ಚೌಧರಿ “ ಅದಮ್ಯವಾಗಿರುವ ಮಾನವ ಚೈತನ್ಯ ಯಾವಾಗಲೂ ಹೆಚ್ಚಿನದನ್ನು ಮಾಡುವ ದಾಹ ಹೊಂದಿರುತ್ತವೆ. ನಮ್ಮ ಸ್ಮಾರ್ಟ್‌ ಫೋನ್‌ ಗಳು ಹೆಚ್ಚಿನ ಪ್ರಮಾಣದಲ್ಲಿ ಈ ಮಹಾಕಾವ್ಯದ ಅನ್ವೇಷಣೆಯಲ್ಲಿ ನಮಗೆ ಸಹಾಯ ಮಾಡಲು, ಕೆಲಸ ಮಾಡಿ ಹೊಸ ಆಲೋಚನೆಗಳನ್ನು ಹುಟ್ಟುಹಾಕಲು ನಮ್ಮ ಒಡನಾಡಿಯಾಗಲಿದೆ. ಆದರೆ ವೇಗವರ್ಧಿತ ಜಗತ್ತಿನಲ್ಲಿ ಮಾಹಿತಿ ಗೂಡು ನಮ್ಮತ್ತ ಧಾವಿಸುತ್ತಲೇ ಇರುತ್ತದೆ. ಮಾಹಿತಿಗಾಗಿ ಹುಡುವುದು, ಅಪ್ಲಿಕೇಶನ್‌ ಗಳನ್ನು ಡೌನ್‌ ಲೋಡ್‌ ಮಾಡುವುದು, ಅಪ್ಲಿಕೇಶನ್‌ ನಡುವೆ ಬದಲಾವಣೆ ಮಾಡುವುದರಿಂದ ನಾವು ಬರಿದಾಗುತ್ತೇವೆ. ಗ್ಲಾನ್‌ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನಲ್ಲಿ ನಾವು ಹುಡುಕುವ ಬದಲು ನಮಗೆ ಅದು ಸಿಗುತ್ತದೆ. ಹೀಗಾಗಿ ನಾವು ಮಾಹಿತಿಗಾಗಿ ಹುಡುಕಾಟ, ಡೌನ್‌ ಲೋಡ್ ಮಾಡಲು ಅಥವಾ ನಮ್ಮ ಸ್ಮಾರ್ಟ್‌ ಫೋನ್‌ ಅನ್ನು ಅನ್‌ ಲಾಕ್‌ ಮಾಡಲು ಸಮಯ ವ್ಯರ್ಥಮಾಡುವ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಒಂದು ನೋಟ ಅಷ್ಟೇ, ಇದು #ಸರಳವಾದ ಚತುರತೆ” ಎಂದಿದ್ದಾರೆ.

“ಅನೇಕ ಅಪ್ಲಿಕೇಶನ್‌ ಗಳನ್ನು ಹುಡುಕುವುದು, ಡೌನ್‌ ಲೋಡ್‌ ಮಾಡುವುದು, ಬದಲಾಯಿಸುವುದು, ಅಂತ್ಯವಿಲ್ಲದ ಫೀಡ್‌ ಗಳ ಮೂಲಕ ಮೂಲಕ ಸ್ಕ್ರೋಲಿಂಗ್‌ ಮಾಡುವುದರಿಂದ ಆಗಾಗ್ಗೆ ಮನಸ್ಸು ಅಯಾಸಗೊಳಿಸುತ್ತದೆ. ಗ್ರಾಹಕರು ಬರಿದಾಗುತ್ತಾರೆ” ಎಂದು ಲಿಂಕ್ಡ್‌ ಇನ್‌ ಪೋಸ್ಟ್‌ ನಲ್ಲಿ ಮುಖ್ಯ ಮಾರುಕಟ್ಟೆ ಅಧಿಕಾರಿ ಬಿಕಾಶ್‌ ಚೌಧರಿ ಹೇಳಿದ್ದಾರೆ. “ಗ್ಲಾನ್ಸ್‌ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನೊಂದಿಗೆ ಗ್ರಾಹಕರು ತಮ್ಮ ವೈವಿದ್ಯಮಯ ವಿಷಯದ ಅವಶ್ಯಕತೆಗಳಿಗಾಗಿ ಹೆಚ್ಚಿನ ಅಪ್ಲಿಕೇಶನ್‌ ಗಳನ್ನು ಹುಡುಕಲು ಮತ್ತು ಡೌನ್‌ ಲೋಡ್‌ ಮಾಡಲು ಹೆಚ್ಚಿನ ಸಮಯದ ಅಗತ್ಯವಿಲ್ಲ. ನಿಮಗೆ ಬೇಕಾದ ಎಲ್ಲವೂ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನಲ್ಲಿ ಲಭ್ಯವಿದೆ” ಎಂದು ತಿಳಿಸಿದ್ದಾರೆ.

ಗ್ಲಾನ್ಸ್‌ ಡೌನ್‌ ಲೋಡ್‌ ಮಾಡುವ ಅಪ್ಲಿಕೇಶನ್‌ ಅಲ್ಲ, ಆದರೆ ಪ್ರಮುಖ ಸ್ಮಾರ್ಟ್‌ ಫೋನ್‌ ಬ್ರ್ಯಾಂಡ್‌ ಗಳ ಆಪರೇಟಿಂಗ್‌ ಸಿಸ್ಟಮ್‌ [ಒಎಸ್]‌ ನಲ್ಲಿ ಪೂರ್ವ ಸಂಯೋಜಿತವಾಗಿರುವ ವೈಶಿಷ್ಟ್ಯವಾಗಿದೆ. ಇದು ಕನ್ನಡ, ಇಂಗ್ಲೀಷ್‌, ಹಿಂದಿ, ತೆಲಗು, ತಮಿಳು, ಮರಾಠಿ, ಬಂಗಾಳಿ ಸೇರಿ ಹಲವಾರು ಪ್ರಾದೇಶಿಕ ಭಾಷೆಗಳಲ್ಲಿ ಬಳಕೆದಾರರ ಆಸಕ್ತಿ, ಆದ್ಯತೆಗಳ ಆಧಾರದ ಮೇಲೆ ಜಗತ್ತಿಗೆ ಸೂಕ್ತ ವಿಷಯಗಳ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಒಪ್ಪಿಗೆಯೊಂದಿಗೆ ಮಾತ್ರ ಗ್ಲಾನ್ಸ್‌ ಅನ್ನು ಸಕ್ರಿಯಗೊಳಿಸಬಹುದಾಗಿದೆ.

ಬಳಕೆದಾರರು ತಮ್ಮ ಪೋನ್‌ ಗಳನ್ನು ಅನ್‌ ಲಾಕ್‌ ಮಾಡದೇ ಅಪ್‌ ಡೇಟ್‌ ಮಾಡಬಹುದು. ಟ್ರೇಂಡಿಂಗ್‌ ವಿಷಯಗಳನ್ನು ಅನ್ವೇಷಿಸಬಹುದು, 400 ಕ್ಕೂ ಹೆಚ್ಚು ಆಟಗಳನ್ನು ಆಡಬಹುದು. ಉತ್ಪನ್ನಗಳಿಗಾಗಿ ಶಾಂಪಿಂಗ್‌ ಮಾಡಬಹುದು. 500 ಕ್ಕೂ ಹೆಚ್ಚು ಲೈವ್‌ ಶೋಗಳನ್ನು ಟ್ಯೂನ್‌ ಮಾಡಬಹುದಾಗಿದೆ.

Previous articlePVR INOX LAUNCHES THE BIGGEST CINEMA IN SOUTH BENGALURU, FEATURING SOUTH INDIA’S FIRST ICE THEATRES
Next articleApollo leads India’s Solid Multi-Organ Transplantation with over 23000 transplants, establishes global leadership

LEAVE A REPLY

Please enter your comment!
Please enter your name here