Home Bengaluru ಬ್ಯಾಂಕನ್ನಡದ ಜೀವನದಿ: ಶ್ರೀ. ಪಾ.ರಾಜಾಗೋಪಾಲ ಆವರಿಗೆ ಸನ್ಮಾನ ಹಾಗೂ ಅಭಿನಂದನಾ ಗ್ರಂಥದ ಬಿಡುಗಡೆ

ಬ್ಯಾಂಕನ್ನಡದ ಜೀವನದಿ: ಶ್ರೀ. ಪಾ.ರಾಜಾಗೋಪಾಲ ಆವರಿಗೆ ಸನ್ಮಾನ ಹಾಗೂ ಅಭಿನಂದನಾ ಗ್ರಂಥದ ಬಿಡುಗಡೆ

0

ಬೆಂಗಳೂರು, ಮಾರ್ಚ್ ೨: ಸಮನ್ವಯ ಸಮಿತಿ (ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳು) ಹಾಗೂ ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ, ಸಮನ್ವಯ ಸಮಿತಿಯ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಶ್ರೀ ಪಾ ರಾಜಗೋಪಾಲ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ, ಪಾ ರಾಜಗೋಪಾಲ ಅವರು ಕನ್ನಡದಲ್ಲಿ ಬ್ಯಾಂಕಿಂಗ್ ನಡೆಸಲು ಅವರು ನೀಡಿರುವ ಕೊಡುಗೆಯನ್ನು ದಾಖಲಿಸುವ,ಅವರ ಸಹೋದ್ಯೋಗಿಗಳು ಬರೆದಿರುವ ” ಬ್ಯಾಂಕನ್ನಡದ ಜೀವನದಿ ಪಾರಾಜಗೋಪಾಲ” ಎಂಬ ಅಭಿನಂದನಾ ಗ್ರಂಥದ ಜೊತೆಗೆ ಅವರು ರಚಿಸಿರುವ ” “ಷೇರು ಪೇಟೆ ಪಾರಿಭಾಷಿಕ ಪದಕೋಶವನ್ನು” ಲೋಕಾರ್ಪಣೆ ಮಾಡಲಾಯಿತು.

ಅಭಿನಂದನಾ ಭಾಷಣವನ್ನು ನಾಡಿನ ಹಿರಿಯ‌ ಸಾಹಿತಿ ಡಾ. .ಪ್ರಧಾನ ಗುರುದತ್ತ ಅವರು ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಸಕಸ ಪ್ರತಿಷ್ಠಾನ ದ ಅಧ್ಯಕ್ಷ ಶ್ರೀ ಬೆಂ. ಶ್ರೀ. ರವೀಂದ್ರ ವಹಿಸಿ, ಕನ್ನಡದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್ ನಲ್ಲಿ ಕನ್ನಡವನ್ನು ತರಲು, ರಾಜಗೋಪಾಲರ ಮಾಡಿದ, ಕಾರ್ಯಗಳನ್ನು ವಿವರವಾಗಿ ಪರಿಚಯಿಸಿದರು.

ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ನಗೆ ಲೇಖಕ ಶ್ರೀ ಎಂ. ಎಸ್.ನರಸಿಂಹಮೂರ್ತಿಯವರು ಭಾಗವಹಿಸಿದ್ದರು. ಅವರಿಗೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದ ಸಂದರ್ಭದಲ್ಲಿ,ಸಸಕಸ ವೇದಿಕೆಯ ಸದಸ್ಯರು ಬರೆದ ನಗೆ ಲೇಖನಗಳ ಸಂಕಲನ “ನಗೆಹಾರ” ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರನ್ನೂ ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಸ್ಪಂದಿಸುತ್ತಾ ಪಾ . ರಾಜಗೋಪಾಲರು. ಬ್ಯಾಂಕಿಂಗ್ ನಿಘಂಟಿನ ಹೊಸ‌ ಆವೃತ್ತಿ ತರಲು ಕಾರ್ಯಪ್ರವೃತ್ತವಾಗಿರುವುದನ್ನು ತಿಳಿಸಿ,ಅದನ್ನು ಶೀಘ್ರವಾಗಿ ಲೋಕಾರ್ಪಣೆ ಮಾಡುವ ಭರವಸೆ ನೀಡಿದರು.

ಹೆಚ್ ಆರ್ ಕೆ ಪ್ರಸಾದ್ ಅವರು ನಾಡಗೀತೆ, ಹಾಡುವುದರ ಮೂಲಕ ಆರಂಭವಾದ ಕಾರ್ಯಕ್ರಮ. ಶ್ರೀ ಧೀರೇಂದ್ರ ಮತ್ತು ಶ್ರೀ ರಂಗರಾಜನ್ ಅವರು ಪಾ ರಾಜಗೋಪಾಲರ, ವೃತ್ತಿ ಜೀವನವನ್ನು ಪರಿಚಯಿಸುವ ನಾಟಕ ಪ್ರದರ್ಶನದ ಮೂಲಕ ಮುಂದುವರೆಯಿತು. ಶ್ರೀ ರವಿ ಕುಸುಬಿ ಅವರು ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು.

ಶ್ರೀಮತಿ ವಿಜಯಲಕ್ಷ್ಮಿ ಮತ್ತು ಅವರ ತಂಡದವರು ಈ ಸಮಾರಂಭಕ್ಕೆ ಬೆಂ ಶ್ರೀ ರವೀಂದ್ರ ರಚಿಸಿದ ಸ್ವಾಗತ ಗೀತೆಯನ್ನು ಹಾಡಿ, ಪಾರಾಗೋ ಅವರನ್ನು ವಿಶಿಷ್ಟವಾಗಿ ಸ್ವಾಗತಿಸಿದರು.
ಶ್ರೀ ರವೀಂದ್ರ ಬಾಳಿ ಹಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೆ ಹಾಗೂ, ಕಾರ್ಯಕ್ರಮ ಸುಗಮವಾಗಿ ನೆರವೇರಲು ಸಹಕರಿಸಿದ ಎಲ್ಲರಿಗೂ ವಂದನೆ ಸಲ್ಲಿಸಿದರು.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಭಾಂಗಣ ಸಂಪೂರ್ಣವಾಗಿ ತುಂಬಿದ್ದು ಸನ್ಮಾನಿತರಿಗೆ, ಹಾಗೂ ಯೋಜಕರಿಗೆ ಅಪಾರ ಸಂತಸ‌ ತಂದಿತು.

Previous articleCSR Collaboration Transforms Anekal Forest Range with 1,000 Saplings for a Greener Future

LEAVE A REPLY

Please enter your comment!
Please enter your name here