ಬೆಂಗಳೂರು, ಮಾರ್ಚ್ 17: ಬೆಂಗಳೂರು ಜಿಲ್ಲಾ ರಜಪೂತ ಸಭಾ ಮಹಿಳಾ ವಿಭಾಗದಿಂದ ಭಾನುವಾರ (ಮಾರ್ಚ್ 15) ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನಿರ್ದೇಶಕಿ, ನಿರ್ಮಾಪಕಿ, ಚಲನಚಿತ್ರ ಮತ್ತು ದೂರದರ್ಶನ ನಟಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿಜಯಲಕ್ಷ್ಮಿ ಸಿಂಗ್ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದರು.
ಬೆಂಗಳೂರುನಗರದಲ್ಲಿರುವ ರಜಪುತ್ ಸಂಘದಲ್ಲಿ ಮಾರ್ಚ್ 15 ನೇ ತಾರೀಖು, ಮಹಿಳಾ ವಸಂತ ತಂಡ ವಿಭಾಗದ ವತಿಯಿಂದ ಪ್ರಮುಖ ಸಂಚಾಲಕ ಶೋಭಾ ಅವರ ನೇತೃತ್ವದಲ್ಲಿ, ದುರ್ಗಾ ಬಾಲಾಜಿಸಿಂಗ್, ಮಧುಮತಿಬಾಯ್, ಕೋಮಲ್, ಲಕ್ಷ್ಮಿ ಆರ್ ಸಿಂಗ್, ಆಶಾ, ರೇಕಾ ಅವರ ಒತ್ತಾಸೆಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಸಮಾರಂಭದಲ್ಲಿ ರಜಪೂತ್ ಸಂಘದ ಅಧ್ಯಕ್ಷ ಅಜಿತ್ಸಿಂಗ್, ಉಪನಾಯಕ ಟಿ.ಆರ್.ಬಾಲಾಜಿಸಿಂಗ್, ಪ್ರಧಾನ ಕಾರ್ಯದರ್ಶಿ ಮತ್ತು ವಕೀಲ ಆರ್. ಬಾಲಾಜಿ ಸಿಂಗ್, ಖಜಾಂಚಿ ದಿನೇಶ್ ಸಿಂಗ್ಸೇರಿದಂತೆ ಹಲವು ಸದಸ್ಯರು, ಕುಟುಂಬ, ಕುಟುಂಬಸ್ಥರು ಸಮಾರಂಭದಲ್ಲಿ ಕಾಣಿಸಿಕೊಂಡರು.

ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಿರ್ದೇಶಕಿ, ನಿರ್ಮಾಪಕಿ, ಚಲನಚಿತ್ರ ಮತ್ತು ಕಿರುತೆರೆ ನಟಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಲಕ್ಷ್ಮಿ ಸಿಂಗ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ರಾಜಪೂತ ಸಭಾದ ಅಭಿವೃದ್ಧಿಗೆ ಶ್ರಮಿಸಿದ ಮಹಿಳಾ ವಿಭಾಗದ ಹಿರಿಯ ಸದಸ್ಯೆ ದಿವಂಗತ ಬಿ.ಜಿ. ಲೀಲಾಧರ್ ಸಿಂಗ್ ಅವರ ಪತ್ನಿ ಶ್ರೀಮತಿ ಪ್ರಮೀಳಾ ಎಲ್ ಸಿಂಗ್ ಮತ್ತು ಹಿರಿಯ ಸದಸ್ಯೆ ದಿವಂಗತ ಆರ್. ಪ್ರಕಾಶ್ ಸಿಂಗ್ ಅವರ ಪತ್ನಿ ಮಂಜುಳಾ ಸಿಂಗ್ ಮತ್ತು ದಿವಂಗತ ಸರವಣ್ ಸಿಂಗ್ ಅವರ ಪತ್ನಿ ಶಿವರಾಣಿ ಬಾಯಿ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ದಿನದಂದು ಮೋಜಿನ ಚಟುವಟಿಕೆಗಳು ಮತ್ತು ಆಟಗಳನ್ನು ನಡೆಸಲಾಯಿತು. ಭಾಗವಹಿಸಿದವರಿಗೆ ಬಹುಮಾನಗಳನ್ನು ನೀಡಲಾಯಿತು. ರಜಪೂತ ಸಂಗಮ ಮಹಿಳಾ ವಿಭಾಗವು ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ನಡೆಸಲಾಯಿತು. ಮಧ್ಯಾಹ್ನದ ಉತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ರುಚಿಕರವಾದ ಆಹಾರವನ್ನು ಬಡಿಸಲಾಯಿತು.





























































