ಬೆಂಗಳೂರು, ನವಂಬರ್ 28: ಅತ್ಯಾಧುನಿಕ 3D ಅನಿಮೇಶನ್,VFX ತರಬೇತಿ, ಗೇಮಿಂಗ್ ಮತ್ತು ಮಲ್ಟೀಮೀಡಿಯಾದ ಪ್ರೀಮಿಯರ್ ಮತ್ತು ಅಗ್ರಮಾನ್ಯ ಸಂಸ್ಥೆಯಾದ ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಕ್ರಿಯೇಟಿವಿಟಿ (Maya Academy of Advanced Creativity (MAAC)), ಬೆಂಗಳೂರಿನ ಕೋರಮಂಗಲದಲ್ಲಿ ತನ್ನ ಸ್ವಂತ ಕೇಂದ್ರದ ಉದ್ಘಾಟನೆಯನ್ನು ಹೆಮ್ಮೆಯಿಂದ ಘೋಷಿಸುವ ಮೂಲಕ AVGC(ಅನಿಮೇಶನ್,VFX, ಗೇಮಿಂಗ್ ಮತ್ತು ಕಾಮಿಕ್ಸ್) ಉದ್ದಿಮೆಯಲ್ಲಿ ಅಗ್ರಮಾನ್ಯ ತರಬೇತಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಈ ಅತ್ಯಾಧುನಿಕ ನವೀಕೃತ ಪ್ರದೇಶವು, ನಗರದಲ್ಲಿ MAAC ದ ಅಸ್ತಿತ್ವವನ್ನು ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳು ಕಲಿತು ಬೆಳೆಯುವ ಒಂದು ಪ್ರೇರಣಾತ್ಮಕ ಪರಿಸರವನ್ನು ಒದಗಿಸಲಿದೆ.
ಈ ಹೊಸ ಕೇಂದ್ರದ ಉದ್ಘಾಟನೆಯು, ಸೃಜನಶೀಲ ಅತ್ಯುತ್ಕೃಷ್ಟತೆಯನ್ನು ಪೋಷಿಸಬೇಕೆನ್ನುವ MAAC ದ ನಿಬದ್ಧತೆಯನ್ನು ಎತ್ತಿತೋರಿಸುತ್ತದೆ. ಪ್ರತಿಭೆಯನ್ನು ಅವಕಾಶದೊಡನೆ ಸಂಪರ್ಕಗೊಳಿಸುವ ಮೂಲಕ ಸಂಸ್ಥೆಯು, ಸೃಜನಶೀಲ ಉದ್ದಿಮೆಯ ಸದಾ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಒದಗಿಸಲು ಶ್ರಮಿಸಲಿದೆ.
ಕೋರಮಂಗಲದ ಹೊಸ ಕೇಂದ್ರದ ಬಗ್ಗೆ ಮಾತನಾಡುತ್ತಾ, ಆಪ್ಟೆಕ್ ಲಿಮಿಟೆಡ್(Aptech Limited)ದ ಚೀಫ್ ಬಿಜಿನೆಸ್ ಆಫಿಸರ್(ಗ್ಲೋಬಲ್ ರೀಟೇಲ್ ಬಿಜಿನೆಸ್) ಶ್ರೀ ಸಂದೀಪ್ ವೆಲಿಂಗ್(SandipWeling), “ಅನಿಮೇಶನ್, VFX, ಮತ್ತು ಗೇಮಿಂಗ್ಗೆ ಚುರುಕಾದ ಕೇಂದ್ರವಾಗಿರುವ ಬೆಂಗಳೂರು, ಈಗ ನಮ್ಮ ನವೀಕೃತ ಕೇಂದ್ರವನ್ನು ಹೊಂದಿ, ಇಂತಹ ಸೃಜನಶೀಲ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಕೃಷ್ಟತೆ ಸಾಧಿಸುವುದಕ್ಕಾಗಿ ಅವರಿಗೆ ಅತ್ಯುತ್ತಮ ಸಾಧನಗಳು ಹಾಗೂ ಸಂಪನ್ಮೂಲಗಳನ್ನು ಒದಗಿಸಬೇಕೆನ್ನುವ MAAC ದ ಬದ್ಧತೆಯನ್ನು ಪ್ರತಿಫಲಿಸುತ್ತದೆ. ಅತ್ಯಾಧುನಿಕ ಮೂಲ ಸೌಕರ್ಯ ಹಾಗೂ ತಲ್ಲೀನ ಕಲಿಕಾ ಪರಿಸರವನ್ನು ಹೊಂದಿರುವ ಈ ಕೇಂದ್ರವು, ಶಿಕ್ಷಣಕ್ಕೆ ಒಂದು ಪ್ರದೇಶವಾಗ್ಇ ಮಾತ್ರವಲ್ಲದೆ, ಆವಿಷ್ಕಾರಕ, ವಿನೂತನ ವೃತ್ತಿಗಳಿಗೆ ಲಾಂಚ್ಪ್ಯಾಡ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಉದ್ಯಮ ಅಭಿವೃದ್ಧಿಯ ವಿಷಯ ಬಂದಾಗ, ಎಲ್ಲರಿಗಿಂತ ನವೀಕೃತ ಹಾಗೂ ಮುನ್ನೆಲೆಯಲ್ಲಿರಬೇಕೆಂಬ ನಮ್ಮ ಬದ್ಧತೆಗೆ ಅನುಗುಣವಾಗಿದೆ ಈ ಹೊಸ ಕೇಂದ್ರ. ನಮ್ಮ ಪೂರ್ವವಿದ್ಯಾರ್ಥಿಗಳ(ಆಲಮ್ನಿ) ಯಶೋಗಾಥೆಗಳು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಾತ್ರ ವಹಿಸುತ್ತಿರುವುದನ್ನು ಗಮನಿಸಿದಾಗ, ನಮ್ಮ ವಿದ್ಯಾರ್ಥಿಗಳನ್ನು ಬಲಪಡಿಸಿ, ಅವರು ವಾಸ್ತವ-ಜಗತ್ತಿನ ಸವಾಲುಗಳನ್ನು ಎದುರಿಸುತ್ತಿರುವಂತೆಯೇ ಅವರ ನಿಜವಾದ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಶಕ್ತಿ ಒದಗಿಸುವ MAAC ಮತ್ತು ಆಪ್ಟೆಕ್ದ ಬದ್ಧತೆಯನ್ನು ಇದು ಎತ್ತಿ ಹಿಡಿಯುತ್ತದೆ.” ಎಂದು ಹೇಳಿದರು.
3,000 ಚದರಡಿ ಪ್ರದೇಶದಲ್ಲಿ ಹರಡಿರುವ ಈ ಕೇಂದ್ರವು, ಸರಿಸುಮಾರು 50 ವಿದ್ಯಾರ್ಥಿಗಳ ಸೀಟಿಂಗ್ ಸಾಮರ್ಥ್ಯವಿರುವ ಮೂರು ವಿಶಾಲ ತರಗತಿಗಳ ಜೊತೆಗೆ, ಒಮ್ಮೆಗೇ 24 ಕಲಿಕಾ ಅಭ್ಯರ್ಥಿಗಳನ್ನು ಇರಿಸಬಲ್ಲ ಅತ್ಯಾಧುನಿಕ ಪ್ರಯೋಗಾಲಯವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮೂಲಸೌಕರ್ಯದೊಡನೆ ಸಜ್ಜುಗೊಂಡಿರುವ ಈ ಘಟಕವು, ವಿದ್ಯಾರ್ಥಿಗಳು, ಅನಿಮೇಶನ್, VFX, ಗೇಮಿಂಗ್ ಹಾಗೂ ಇತರ ಬಹುಮಾಧ್ಯಮ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸೃಜನಶೀಲ ರೀತಿಯಲ್ಲಿ ತೊಡಗಿಸಿಕೊಳ್ಳುವಂತಹ ನಿಖರ ವಾತಾವರಣವನ್ನು ಸೃಷ್ಟಿಸುತ್ತದೆ.
ಕೋರಮಂಗದಲದ ಕೇಂದ್ರದಲ್ಲಿ ಪ್ರವೇಶ ದಾಖಲಾತಿಗಳು ಈಗ ತೆರೆದಿದ್ದು, ಮಹತ್ವಾಕಾಂಕ್ಷೆಯುಳ್ಳ ವಿದ್ಯಾರ್ಥಿಗಳು, ಅನಿಮೇಶನ್, VFX, ಹಾಗೂ ಮಾಧ್ಯಮಗಳಲ್ಲಿ ಉಜ್ವಲ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವೆಡೆ ತಮ್ಮ ಪಯಣವನ್ನು ಪ್ರಾರಂಭಿಸಬಹುದು.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://www.maacindia.com/
ಕೇಂದ್ರದ ವಿಳಾಸ: 1ನೆ ಮಹಡಿ, 627 – 628, 5ನೆ ಕ್ರಾಸ್, 15ನೆ ಮುಖ್ಯರಸ್ತೆ, 80 ಅಡಿ ರಸ್ತೆ, 4ನೆ ಬ್ಲಾಕ್, ಕೋರಮಂಗಲ, ಬೆಂಗಳೂರು – 560034, ಕರ್ನಾಟಕ, ಬೆಂಗಳೂರು
MAAC ಕುರಿತು: MAAC, ಅತ್ಯಾಧುನಿಕ 3Dಅನಿಮೇಶನ್ ಮತ್ತು ವಿಶುವಲ್ ಎಫೆಕ್ಟ್ಸ್ನಲ್ಲಿ ಭಾರತದ ಪ್ರೀಮಿಯರ್ ರಬೇತಿ ಸಂಸ್ಥೆಯಾಗಿದೆ. 2001ರಲ್ಲಿ ಸ್ಥಾಪನೆಗೊಂಡ ಹಾಗು ಆಪ್ಟೆಕ್ ಲಿ.,ದ