Home Festival ಬೆಂಗಳೂರಿನ ಅರಮನೆಯಲ್ಲಿ ಮೂರು ದಿನಗಳ  ಆಭರಣ ವೈಭವ “ದಿ ಜ್ಯುವೆಲ್ಲರಿ ಶೋ” ಪ್ರಾರಂಭ:

ಬೆಂಗಳೂರಿನ ಅರಮನೆಯಲ್ಲಿ ಮೂರು ದಿನಗಳ  ಆಭರಣ ವೈಭವ “ದಿ ಜ್ಯುವೆಲ್ಲರಿ ಶೋ” ಪ್ರಾರಂಭ:

ವಿವಿಧ ರಾಜ್ಯಗಳ ಅತ್ಯಾಕರ್ಷಕ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಿತ್ರನಟಿ ನಿಶ್ಚಿಕಾ ಚಾಲನೆ. ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಭರಣ ಮೇಳ.

0

 ಬೆಂಗಳೂರು, ನ, 3; ನವೆಂಬರ್‌ ನ ಕನ್ನಡ ರಾಜ್ಯೋತ್ಸವ, ದೀಪಾವಳಿ, ವಿವಾಹ ಋತುವಿನ ವಿಶೇಷತೆಗಳನ್ನೊಳಗೊಂಡ ಆಭರಣ ವೈಭವ “ದಿ ಜುವೆಲ್ಲರಿ ಶೋ” ಪ್ರದರ್ಶನ ನವೆಂಬರ್ 3 ರಿಂದ 5 ರ ವರೆಗೆ ಬೆಂಗಳೂರು ಅರಮನೆ [ವಸಂತನಗರ] ಆವರಣದಲ್ಲಿ ನಡೆಯಲಿದ್ದು, ಚಿತ್ರನಟಿ ನಿಶ್ಚಿಕಾ ಚಾಲನೆ ನೀಡಿದರು.

 ದೇಶದ ವೈವಿಧ್ಯಮ ಆಭರಣ ತಯಾರಕರ ಆಕರ್ಷಕ ಅಂದ – ಚಂದದ ವಿನ್ಯಾಸಗಳು, ವಿಶೇಷತೆಗಳನ್ನೊಳಗೊಂಡ ಆಭರಣ ಮೇಳ ಇದಾಗಿದೆ. ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಇರಲಿದ್ದು, ಹಬ್ಬದ ಸಂಭ್ರಮವನ್ನು ಇದು ಇಮ್ಮಡಿಗೊಳಿಸಿದೆ. ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಕೈಗೆಟುವ ದರದಲ್ಲಿ ದೊರೆಯುತ್ತಿದ್ದು, ಆಭರಣ ಪ್ರಿಯರ ಸಂಭ್ರಮಾಚರಣೆಗೆ ವೇದಿಕೆ ಸಜ್ಜುಗೊಂಡಿದೆ. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಟಿ ನಿಶ್ಚಿಕಾ, “ಇಡೀ ರಾಜ್ಯ ಸುವರ್ಣ ಕರ್ನಾಟಕದ ಸಂಭ್ರದಲ್ಲಿ ಮುಳುಗಿರುವ ಸಂದರ್ಭದಲ್ಲಿ ಚಿನ್ನದ ನಾಡಿಗೆ ದೇಶದ ವಿವಿಧ ಭಾಗಗಳಿಂದ ಆಭರಣ ಪ್ರದರ್ಶನಕಾರರು ಆಗಮಿಸಿದ್ದು, ರಾಜ್ಯೋತ್ಸವಕ್ಕೆ ಮೆರಗು ಹೆಚ್ಚಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಕುಟುಂಬಕ್ಕೆ ಶುಭವಾಗಲಿದ್ದು, ಇಂತಹ ಸುಸಂದರ್ಭದಲ್ಲಿ ಚಿನ್ನವನ್ನು ಮನೆಗೆ ಕೊಂಡೋಯ್ಯಬೇಕು. ಚಿನ್ನ ಸಂಬಂಧಗಳನ್ನು ಆಪ್ತಗೊಳಿಸಲಿದ್ದು, ಕೌಟುಂಬಿಕ ವಾತಾವರಣಕ್ಕೆ ಮೆರಗು ತರಲಿದೆ ” ಎಂದರು.

 ಪ್ರದರ್ಶನದಲ್ಲಿ ಅಭೂಷಣ್‌, ಅರ್ಜುನ್‌ ವಾರಾ, ಗಜರಾಜ್‌, ಖೀಯಾ, ಎಂ.ಪಿ. ಸ್ವರ್ಣಮಹಲ್‌, ನವ್‌ ರತನ್‌, ನೀಲ್‌ ಕಂಠ್‌, ನಿಖಾರ್‌, ನಿರ್ಮಲ್‌ ಜುವೆಲ್ಲರ್ಸ್‌, ಪಿಕೆಬಿ, ಪಿಎಂಜಿ, ಪ್ರಕಾಶ್‌ ಜುವೆಲ್ಲರ್ಸ್‌, ಶ್ರೀವಾರಿ, ಶ್ರೀ ಗಣೇಶ್‌ ಡೈಮಂಡ್ಸ್‌, ವಾರಶ್ರೀ, ಅಮ್ರಪಾಲಿ, ಅನನ್ಯಾ, ಜುವೆಲ್ಸ್‌ ಸನ್‌ ರೈಸ್‌ ಆಭರಣ್‌, ಆನಂದ್‌ ಜುವೆಲ್ಸ್‌, ಇವೋಲ್‌ ಜುವೆಲ್ಸ್‌, ಡೈಮ್ಸ್‌, ಡಿಆರ್‌ ಎನ್‌ ಜುವೆಲ್ಸ್‌, ಕಲಶ, ಜ್ಯುವೆಲ್ಸ್‌ ಪೊಲಿಯೋ, ಕರಿಶ್ಮಾ ಬೈ ರಶ್ಮಿ ಇಡಿಸಿ, ಮಹೇಂದ್ರ ಡೈಮಂಡ್ಸ್‌, ಎನ್.ಎಸ್.‌ ಜ್ಯುವೆಲ್ಸ್‌, ಪ್ರವೀಣ್‌ ಜ್ಯುವೆಲ್ಸ್‌, ಸಂಕೇಶ್‌ ಸುರನಾ, ಸೆಂಕೋ ಗೋಲ್ಡ್‌, ತತ್ವಮ್‌, ತ್ಯಾನಿ, ವಿಟ್ರಾಗ್‌ ಜ್ಯುವೆಲರ್ಸ್‌, ವಿವಾಂತ್‌, ವಂಡರ್‌ ಡೈಮಂಡ್ಸ್‌, ಮೈ ಸಿಲ್ವರ್‌, ರೂಪಂ ಸಿಲ್ವರ್‌, ಶಿವಾನಿ, ಡಿವೈನ್‌ ಜೆಮ್ಸ್‌, ಮದನ್‌ ಜೆಮ್ಸ್‌, ಸ್ಟೈಲ್‌ ಔರಾ, ಥಾರ್‌ ಆರ್ಟ್ಸ್‌ ಪಾಲ್ಗೊಂಡಿವೆ.

 ಹೊರ ರಾಜ್ಯದಿಂದ ಕೊಲ್ಕತ್ತಾದ ಅರ್‌ ಹಾಂ, ಬ್ಯೂಟಿಕ್‌ ಜೆಮ್ಸ್‌, ಜೈಪುರ್‌ ಎಂಪೋರಿಯಂ, ಕೆ.ಜಿ.ಎನ್.‌ ಸಿಲ್ವರ್‌ ಹೌಸ್‌, ಮಂಗಲ್‌ ಜೆಮ್ಸ್‌, ನಾಗೋರಿಸ್‌, ಸುನಿಲ್‌ ಜ್ಯುವೆಲ್ಸ್‌, ಎಂಬಿ ಬೀಡ್ಸ್‌ ರಾಯಲ್‌ ಜ್ಯುವೆಲ್ಸ್‌ ಬನೆತಿ ಎಕ್ಸ್‌ ಪೋರ್ಟ್ಸ್‌ [ಜೈಪುರ], ಶ್ರೀಹರಿ ಡಯಾಜೆಮ್‌ ಶಿಯಾನ್‌ ಆಭರಣ ಕಂಪೆನಿಗಳು ಭಾಗವಹಿಸಿವೆ.

Previous articlePantaloons unveils its first of kind shopping experience ‘Pantaloons OnLoop’ in India
Next articleಸುಮಾರು 10 ರಿಂದ 20 ವರ್ಷಗಳಿಂದ ಡೇರೆ, ಗುಡಾರ, ಟೆಂಟ್ ಹಾಕಿ ವಾಸಿಸುತ್ತಿರುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಅವರ ಹೆಸರಿಗೆ ನೀಡಬೇಕು

LEAVE A REPLY

Please enter your comment!
Please enter your name here