ಬೆಂಗಳೂರು, ಮಾರ್ಚ್ 24: ಲುಲು ಮಾಲ್ ಬೆಂಗಳೂರು, ಇ ಕ ಎಂಟರ್ಟೈನರ್ಸ್ ಮತ್ತು ಈಗಲ್ ಮೀಡಿಯಾ ಪ್ರೊಡಕ್ಷನ್ ಸಹಯೋಗದೊಂದಿಗೆ, ಕನ್ನಡ ಚಿತ್ರರಂಗದ ಹೆಚ್ಚು ನಿರೀಕ್ಷಿತ ಚಿತ್ರ “ಮನದ ಕಡಲು” ಟ್ರೇಲರ್ ಬಿಡುಗಡೆ ಸಮಾರಂಭವನ್ನು ನಡೆಸಿತು. ಮಾರ್ಚ್ 23, 2025 ರಂದು ಸಂಜೆ 6.15 ಗಂಟೆಗೆ ನಡೆದ ಈ ಕಾರ್ಯಕ್ರಮದಲ್ಲಿ 10,000+ ಪ್ರೇಕ್ಷಕರು ಭಾಗವಹಿಸಿ, ಬೆಂಗಳೂರಿನ ಇತಿಹಾಸದಲ್ಲೇ ಅತಿ ದೊಡ್ಡ ಸೆಲೆಬ್ರಿಟಿ ಈವೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಕೆಜಿಎಫ್ ಚಿತ್ರದಲ್ಲಿ “ರಾಕಿ ಭಾಯಿ” ಪಾತ್ರದಿಂದ ಪುಸಿದ್ದರಾದ ರಾಕಿಂಗ್ ಸ್ಟಾರ್ ಯಶ್ ಈ ಸಮಾರಂಭದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. 3 ವರ್ಷಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಯಶ್ ಅವರ ಉಪಸ್ಥಿತಿಯು ಪ್ರೇಕ್ಷಕರಲ್ಲಿ ಅತ್ಯಂತ ಉತ್ಸಾಹವನ್ನು ಉಂಟುಮಾಡಿತು. ಲುಲು ಮಾಲ ರಾಜಾಜಿನಗರ ಪ್ರಾಂಗಣವು ಯಶ್ ಅವರ ಅಭಿಮಾನಿಗಳಿಂದ ತುಂಬಿ ಹೋಯಿತು.

ಕಾರ್ಯಕ್ರಮದ ಮುಖ್ಯ ಅಂಶಗಳು:
10,000+ ಪ್ರೇಕ್ಷಕರು ಭಾಗವಹಿಸಿ, ಬೆಂಗಳೂರಿನ ಇತಿಹಾಸದಲ್ಲೇ ಅತಿ ದೊಡ್ಡ ಸೆಲೆಬ್ರಿಟಿ ಈವೆಂಟ್ ನಡೆಯಿತು.
“ಮನದ ಕಡಲು” ಟ್ರೇಲರ್ ಬಿಡುಗಡೆಗೆ ಪ್ರೇಕ್ಷಕರು ಉತ್ಸಾಹದಿಂದ ಸ್ವಾಗತಿಸಿದರು.
ಯಶ್ ಅವರ ಸಿನಿಮಾ ಪ್ರಯಾಣಕ್ಕೆ ಸ್ಪೆಷಲ್ ಟ್ರಿಬ್ಯೂಟ್ ನೀಡಲಾಯಿತು ಮತ್ತು ಅವರ ಮುಂದಿನ ಚಿತ್ರ “ಟಾಕ್ಸಿಕ್” (ಮಾರ್ಚ್ 20, 2026 ರಂದು ಬಿಡುಗಡೆ) ಬಗ್ಗೆ ಮಾಹಿತಿ ನೀಡಲಾಯಿತು.
ಲುಲು ಮಾಲ್ ಬೆಂಗಳೂರಿನ ರೀಜನಲ್ ಡೈರೆಕ್ಟರ್ ಶ್ರೀ ಶರೀಫ್ ಕೊಚುಮನ್ ಅವರು, “ಲುಲು ಮಾಲ್ ಬೆಂಗಳೂರು ನಗರದ ಮನರಂಜನೆ ಮತ್ತು ರಿಟೇಲ್ ಅನುಭವವನ್ನು ಪುನರ್ವ್ಯಾಖ್ಯಾನಿಸುತ್ತಿದೆ” ಎಂದು ಹೇಳಿದರು