ಬೆಂಗಳೂರು, ಮಾರ್ಚ್ 29: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಪ್ರೈಡ್ ಹೊಸ ಡೈಮಂಡ್ ವೆಡ್ಡಿಂಗ್ ಸಂಗ್ರಹವನ್ನು ಅದ್ಧೂರಿಯಾಗಿ ಅನಾವರಣಗೊಳಿಸುವ ಮೂಲಕ ಸೊಬಗು ಮತ್ತು ಕಾಲಾತೀತ ಪ್ರೀತಿಯ ಭವ್ಯ ಸಂಭ್ರಮಾಚರಣೆಯನ್ನು ದಾಖಲಿಸಿದೆ. ಈ ವಿಶೇಷ ಅನಾವರಣ ಕಾರ್ಯಕ್ರಮವನ್ನು 28ನೇ ಮಾರ್ಚ್, 2025ರಂದು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಜೋಯಾಲುಕ್ಕಾಸ್ ಆಭರಣ ಮಳಿಗೆಯಲ್ಲಿ ನಟಿ ಮಾಳವಿಕಾ ಶರ್ಮ ಉದ್ಘಾಟಿಸಿದರು.
ಸಂಜೆ ಎಲ್ಲಾ ಗ್ರಾಹಕರನ್ನು ಆಕರ್ಷಿಸುವ ಬೆರಗುಗೊಳಿಸುವ ಪ್ರದರ್ಶನ ಮತ್ತು ಸೊಗಸಾದ ವಜ್ರಾಭರಣಗಳು ಜೀವಂತವಾಗಿತ್ತು. ‘ಪ್ರೈಡ್ ಡೈಮಂಡ್ ವೆಡ್ಡಿಂಗ್’ ಸಂಗ್ರಹವನ್ನು ಪ್ರತಿ ವಧುವಿನ ವಿಶೇಷ ದಿನದ ತೇಜಸ್ಸು ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸಲು ಸೂಕ್ಷ್ಮವಾಗಿ ರೂಪಿಸಲಾಗಿದೆ. ಹೊಳೆಯುವ ವಜ್ರದ ನೆಕ್ಸಸ್‌ಗಳಿಂದ ಸೊಗಸಾದ ಕಿವಿಯೋಲೆಗಳು, ಸಂಕೀರ್ಣವಾದ ಬಳೆಗಳು ಮತ್ತು ಸ್ಟೇಟ್‌ಮೆಂಟ್ ಸಾಲಿಟೇರ್ ಉಂಗುರಗಳವರೆಗೆ, ಸಂಗ್ರಹವು ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಗಳ ಪರಿಪಕ್ವ ಮಿಶ್ರಣವನ್ನು ನೀಡುತ್ತದೆ.
ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜೋಯ್ ಆಲುಕ್ಕಾಸ್,ನಮ್ಮ ಸೃಷ್ಟಿಗಳ ಮೂಲಕ ನಮ್ಮ ಅಮೂಲ್ಯ ಗ್ರಾಹಕರಿಗೆ ಸಂತಸ ತರುವುದು ಒಂದು ಸುಯೋಗ. ಪ್ರೈಡ್‌ನ ‘ಡೈಮಂಡ್ ವೆಡ್ಡಿಂಗ್’ ಸಂಗ್ರಹವು ಶಾಶ್ವತ ಪ್ರೀತಿ ಮತ್ತು ಅದ್ಭುತ ವೈವಾಹಿಕ ಪಯಣಕ್ಕೆ ಒಂದು ಗೌರವವಾಗಿದೆ. ಬೆಂಗಳೂರಿನಲ್ಲಿ ಈ ಸಂಗ್ರಹವನ್ನು ಪರಿಚಯಿಸಲು ನಾನು ರೋಮಾಂಚನಗೊಂಡಿದ್ದೇನೆ ಮತ್ತು ಈ ಸಂದರ್ಭವನ್ನು ತಮ್ಮ ಉಪಸ್ಥಿತಿಯೊಂದಿಗೆ ಅಲಂಕರಿಸಿ ವರ್ಣರಂಜಿತಗೊಳಿಸಿದ್ದಕ್ಕಾಗಿ ನಟಿ ಮಾಳವಿಕಾ ಶರ್ಮಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಅತಿಥಿಗಳು, ವ್ಯಕ್ತಿಗತಗೊಳಿಸಿದ ಸ್ಟೈಲಿಂಗ್ ಆವೃತ್ತಿ ಮತ್ತು ಜೋಯಾಲುಕ್ಕಾಸ್ ತಂಡದ ತಜ್ಞರ ಮಾರ್ಗದರ್ಶನದೊಂದಿಗೆ ಅದ್ಭುತವಾದ ವಜ್ರಾಭರಣಗಳ ಮೊದಲ ನೋಟದ ಆನಂದವನ್ನು ಅನುಭವಿಸಿದರು. ಸೊಬಗು ಮತ್ತು ಅತ್ಯಾಧುನಿಕತೆಯನ್ನು ಬಯಸುವ ವಧುಗಳಿಗಾಗಿ ವಿನ್ಯಾಸಗೊಳಿಸಲಾದ ಈ ಸಂಗ್ರಹವು ಈಗ ಜೋಯಾಲುಕ್ಕಾಸ್‌ನ ಎಲ್ಲ ಆಭರಣ ಮಳಿಗೆಗಳಲ್ಲಿ ಲಭ್ಯ.