Home Education ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ...

ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಸ್ಟೀಸ್.ಎನ್.ಕುಮಾರ್‌ ಭಾಗಿ

0

ಬೆಂಗಳೂರು ಆಗಸ್ಟ್‌ 15: ಸ್ವಾತಂತ್ರ್ಯದ ಮಹತ್ವವನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು ಹಾಗೂ ಕರ್ತವ್ಯವನ್ನು ಪಾಲಿಸಿದವರಿಗಷ್ಟೇ ಹಕ್ಕನ್ನು ಪ್ರತಿಪಾದಿಸುವ ಅರ್ಹತೆ ಇರಬೇಕು ಎಂದು ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್.ಎನ್.ಕುಮಾರ್‌ರವರು ಅಭಿಪ್ರಾಯಪಟ್ಟರು. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ದೇಶದ ಚರಿತ್ರೆಯನ್ನು ತಿರುಚುವ ಕೆಲಸವನ್ನು ಮಾಡಬಾರದು ಎಂದು ತಿಳಿಸಿದ ಅವರು ನಮ್ಮನ್ನು ನಾವು ಸರಿ ದಾರಿಯಲ್ಲಿ ಮುನ್ನಡೆಸುಕೊಂಡು ಹೋಗಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಸಿ ಸಂಸ್ಥೆಯು ಭಾಗಿಯಾಗಿ ತನ್ನದೇ ವಿಶೇಷ ಕೊಡುಗೆಯನ್ನು ದೇಶಕ್ಕೆ ನೀಡಿದೆಯಲ್ಲದೆ, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ತುಂಬುವಂತೆ ಮಾಡಿದೆ ಎಂದು ಹೇಳಿದರು. ಎಚ್‌.ನರಸಿಂಹಯ್ಯನವರ ಒಡನಾಟವನ್ನು ಸ್ಮರಿಸಿ,ಅವರ ಸರಳತೆ ಹಾಗು ಶ್ರದ್ಧೆಯ ನಡೆಯಿಂದ ಅವರು ಪಡೆದ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟುಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಇ.ಎಸ್.ಸಂಸ್ಥೆಯ ಅಧ್ಯಕ್ಷರಾದ ಡಾ.ಎಚ್‌.ಎನ್.ಸುಬ್ರಮಣ್ಯರವರು ವಹಿಸಿ ಎಲ್ಲರಿಗೂ ಸ್ವಾಗತವನ್ನು ಕೋರಿದರು, ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ.ವೆಂಕಟಶಿವಾರೆಡ್ಡಿಯವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ನ್ಯಾಷನಲ್ ಇಂಗ್ಲೀಷ್ ಪ್ರೈಮರಿ ಶಾಲೆಯ ಛೇರನ್ ಡಾ.ರಾಜ್‌ ಕುಮಾರ್, ಸಂಸ್ಥೆಯ ಗೌರಿಂಗ್‌ ಸದಸ್ಯರಾದ ಸುಬ್ರಮಣ್ಯ ಜೋಯಿಸ್‌ರವರು ಹಾಗು ಶ್ರೀಮತಿ ಪಾವನರವರು,ಮತ್ತು ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Previous articleಹಿಮಾಲಯ ವೆಲ್ ನೆಸ್ ಕಂಪನಿಯು ಭಾರತೀಯ ಸೇನೆಯ ಸದ್ರನ್ ಕಮ್ಯಾಂಟ್ ಯೂನಿಟ್ ಜೊತೆ ಸಹಯೋಗದಲ್ಲಿ ಪುಣೆಯ ಮೊದಲ ತಿರಂಗಾ ಟನಲ್ ನಿರ್ಮಾಣ
Next articleINDIAN ARMY QUIZ 2023 – ‘BATTLE OF MINDS’ LAUNCHED TO COMMEMORATE 25th YEAR OF KARGIL VICTORY

LEAVE A REPLY

Please enter your comment!
Please enter your name here