Home Bengaluru ದಲಿತ ಸಂಘಟನೆಗಳ ಒಕ್ಕೂಟದ ಹಿರಿಯ ನಾಯಕರೊಬ್ಬರ ಹೆಸರನ್ನು ವಿಧಾನ ಪರಿಷತ್‌ಗೆಪರಿಗಣಿಸುವಂತೆ ಭೀಮ್ ಆರ್ಮಿ ಒತ್ತಾಯಿಸುತ್ತದೆ

ದಲಿತ ಸಂಘಟನೆಗಳ ಒಕ್ಕೂಟದ ಹಿರಿಯ ನಾಯಕರೊಬ್ಬರ ಹೆಸರನ್ನು ವಿಧಾನ ಪರಿಷತ್‌ಗೆಪರಿಗಣಿಸುವಂತೆ ಭೀಮ್ ಆರ್ಮಿ ಒತ್ತಾಯಿಸುತ್ತದೆ

0

ಬೆಂಗಳೂರು, ಆಗಸ್ಟ್ 5: ದಲಿತ ಸಂಘಟನೆಗಳ ಒಕ್ಕೂಟದ ಹಿರಿಯ ನಾಯಕರೊಬ್ಬರ ಹೆಸರನ್ನು ವಿಧಾನ ಪರಿಷತ್‌ಗೆ ಪರಿಗಣಿಸುವಂತೆ ಭೀಮ್ ಆರ್ಮಿ ರಾಜ್ಯ ಅಧ್ಯಕ್ಷ ರಾಜಕೋಪಾಲ್ ಟಿ.ಎಸ್ ತಿಳಿಸಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ದಲಿತ ಸಂಘಟನೆಗಳ ಒಕ್ಕೂಟಗಳು ಮತ್ತು ಸಂಘಟನೆಗಳ ನಾಯಕರುಗಳು ಶ್ರಮಿಸಿದ್ದಾರೆ. ಈ ಸಂಬಂಧ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಇವಾಗ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ದಲಿತ ಸಂಘಟನೆಗಳ ಒಕ್ಕೂಟದ ನಾಯಕರನ್ನು ವಿಧಾನ ಪರಿಷತ್ತು ಮತ್ತು ನಿಗಮ ಮಂಡಳಿಗಳನ್ನು ನೇಮಕ ಮಂಡಳಿಗಳನ್ನು ನೇಮಕ ಮಾಡುವಲ್ಲಿ ಕಡೆಗಣನೆ ಮಾಡುತ್ತಿದೆ. ವಿಧಾನ ಪರಷತ್ತಿಗೆ ದಲಿತ ವ್ಯಕ್ತಿಗೆ ನೇಮಕ ಮಾಡುವಾಗ ದಲಿತ ಸಂಘಟನೆಗಳ ಒಕ್ಕೂಟದ ಹಿರಿಯ ದಲಿತ ಹೋರಾಟಗಾರರನ್ನು ಶಿಫಾರಸ್ಸು ಪಟ್ಟಿಯಲ್ಲಿ ಹೆಸರು ಸೇರಿಸದೆ ದಲಿತ ಹೆಸರಿನ ಅಥವಾ ಎಸ್.ಸಿ. ಸಮುದಾಯದ ಕೇಂದ್ರ ಸರ್ಕಾರದ ಉನ್ನತ ನಿವೃತ್ತ ಹಿರಿಯ ಐಆರ್‌ಎಸ್‌ ಅಧಿಕಾರಿ ಸುಧಾಮ ದಾಸ ಅವರ ಹೆಸರನ್ನು ಶಿಫಾರಸ್ಸು ಮಾಡಿರುವುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬೆಂಬಲ ನೀಡಿದ ದಲಿತ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳಿಗೆ ಮತ್ತು ನಾಯಕರುಗಳಿಗೆ ತುಂಬ ಬೇಜಾರಿನ ಸಂಗತಿ.

ಆದುದರಿಂದ ಈ ಕೂಡಲೇ ನಿವೃತ್ತ ಐಆರ್‌ಎಸ್‌ ವ್ಯಕ್ತಿಯ ಹೆಸರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡುವ ಪಟ್ಟಿಯಿಂದ ಕೈ ಬಿಟ್ಟು, ದಲಿತ ಸಂಘಟನೆಗಳ ಒಕ್ಕೂಟದ ಯಾವುದೇ ಹಿರಿಯ ನಾಯಕರ ಹೆಸರನ್ನು ಪಟ್ಟಿಗೆ ಸೇರಿಸಬೇಕು ಎಂದು ಭೀಮ್ ಆರ್ಮಿ ಸಂಘಟನೆ ಒತ್ತಾಯ ಮಾಡುತ್ತದೆ.

ಎಸ್‌ಸಿಎಸ್‌ಪಿ/ಟಿಎಸ್‌ ಪಿ ಹಣವನ್ನು 7(ಡಿ) ಮೂಲಕ ಇನ್ನಿತರ ಅಥವಾ ದಲಿತೇತರ ಕಾರ್ಯಗಳಿಗೆ ಉಪಯೋಗಿಸುವುದನ್ನು ನಿಷೇಧ ಮಾಡಿರುವುದು ಭೀಮ್ ಆರ್ಮಿ ಸಂಘಟನೆ ಸ್ವಾಗತ ಕೋರುತ್ತದೆ.
ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಎಲ್ಲಿಯ ಎಸ್‌ಸಿಎಸ್‌ಸಿ 1 ಟಿಎಸ್‌) ಹಣವನ್ನು ಎಸ್‌ಸಿ / ಎಸ್‌ಟಿ ಜನರಿಗೆ 5 ಗ್ಯಾರಂಟಿಗಳು ಜಾರಿಗೆ ಮಾಡಲು ಉಪಯೋಗಿಸುತ್ತೇವೆ ಎಂದು ಹೇಳಿಲ್ಲ. ಆದರೆ ಇವಾಗ ಏಕಾಏಕಿ ಎಸ್‌ಎಸ್ಸಿ/ಎಸ್‌ ಹಣ 11,144 ಕೋಟಿ ರಣಗಳು ಬಳಕೆ ಮಾಡಲು ತೀರ್ಮಾನ ಕೈಗೊಂಡಿರುವುದು ವಿಷಾದ

ಸರ್ಕಾರ ಈ ಹಣವನ್ನು ಎಸ್‌ಎಸ್‌ಎಟಿಎಸ್‌ಪಿ ಖಾತೆಗೆ 1,144 ಕೋಟಿ ರೂ.ಗಳನ್ನು ಹಿಂದಿರುಗಿಸಬೇಕು ಮತ್ತು ಸರ್ಕಾರ ಯೋಜನೆ ಪಡಿಸಿರುವ ಬಡೈಟ್ 3.27 ಸಾವಿರ ಕೋಟಿ ಹಣದ ಅಥವಾ 5 ಗ್ಯಾರಂಟಿಗಳನ್ನು ಜಾರಿಗೆ ತರಲು ಹೆಚ್ಚುವರಿಯಾಗಿ 50 ಸಾವಿರ ಕೋಟಿ ರೂ.ಗಳಲ್ಲಿಯೇ ಬಳಕ ಮಾಡಬೇಕೆಂದು ಭೀಮ್ ಆರ್ಮಿ ಸಂಘಟನೆ ಒತ್ತಾಯ ಮಾಡುತ್ತದೆ.

ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಪಾಲಿಕೆಯ ಕಲುಷಿತ ನೀರನ್ನು ಸೇವಿಸಿ ಎಸ್‌ಸಿ ಕಾಲೋನಿಯಲ್ಲಿ ಮೃತಪಟ್ಟ 5 ಜನರ ಕುಟುಂಬಗಳಿಗೆ ತಲಾ 25 ಲಕ್ಷ ಹಾಗೂ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ 150 ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಕೊಡಬೇಕು ಮತ್ತು ಈ ಅಹಿತಕರ ಘಟನೆಗೆ ಕಾರಣಕರ್ತರಾದವರ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಭೀಮ್ ಆರ್ಮಿ ಸಂಘಟನೆ ಒತ್ತಾಯಿಸುತ್ತದೆ.

Previous articleAlleviating Separation Anxiety and Fussy Eating: Comprehensive Solutions for Pet Parents
Next articleGPBL Season 2 Launched in Grand Style; Team Owners Demonstrate Commitment to Players by Forfeiting Part of Prize Money

LEAVE A REPLY

Please enter your comment!
Please enter your name here