ಬೆಂಗಳೂರು, ಫೆಬ್ರವರಿ ೧೭: ಜೋಯಾಲುಕ್ಕಾಸ್ ವಿಶ್ವದ ಅತ್ಯಂತ ಪ್ರೀತಿಪಾತ್ರ ಆಭರಣ ಮಳಿಗೆಯಾಗಿದ್ದು, ಅದು ತನ್ನ ಹೊಸದಾಗಿ ನವೀಕರಿಸಿದ ಶೋರೂಮ್‌ನ್ನು ಬೆಂಗಳೂರಿನ ಡಿಕೆನ್‌ಸನ್ ರಸ್ತೆಯಲ್ಲಿ ಪುನರಾರಂಭಿಸಿದೆ. ಫೆಬ್ರವರಿ 15ರಂದು ನಡೆದ ಕಾರ್ಯಕ್ರಮದಲ್ಲಿ ಗ್ರಾಹಕರು ಹಾಗೂ ಆಭರಣಪ್ರಿಯರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೇ, ನವೀಕರಿಸಲ್ಪಟ್ಟ ಶೋರೂಮ್‌ನಲ್ಲಿ ನವೀನ ಶೈಲಿಯ ಬ್ರ್ಯಾಂಡ್ ನ ಅತ್ಯುತ್ತಮ ಆಭರಣ ಸಂಗ್ರಹಗಳನ್ನು ನೋಡಿ ಅನುಭವಿಸಲು ಹಾಗೂ ಅನ್ವೇಷಿಸಲು ಆಭರಣಪ್ರಿಯರು ಸೇರಿದ್ದರು.
ಆಭರಣಪ್ರಿಯರಿಗೆ ಸಾಟಿಯಿಲ್ಲದ ಶಾಪಿಂಗ್ ಅನುಭವ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಡಿಕೆನ್‌ಸನ್ ರಸ್ತೆಯಲ್ಲಿನ ಜೋಯಾಲುಕ್ಕಾಸ್ ನ ಈ ಮಳಿಗೆಯ ಪುನರಾರಂಭವು ತನ್ನ ಬದ್ಧತೆಗೆ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ತನ್ನ ಆಧುನಿಕ ಅಲಂಕಾರ, ವಿಸ್ತಾರವಾದ ಒಳಾಂಗಣ ಮತ್ತು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ತಡೆರಹಿತ ಹಾಗೂ ಐಷಾರಾಮಿ ರೀಟೇಲ್ ಅನಭವ ಒದಗಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಪುನರಾರಂಭದ ಆಚರಣೆಯ ಭಾಗವಾಗಿ ಜೋಯಾಲುಕ್ಕಾಸ್ ಚಿನ್ನ, ವಜ್ರ, ಅನ್‌ಕಟ್ ವಜ್ರ, ಪ್ಲಾಟಿನಂ, ಅಮೂಲ್ಯ ರತ್ನ ಹಾಗೂ ಬೆಳ್ಳಿಯ ಆಭರಣಗಳ ತಯಾರಿಕಾ ದರದಲ್ಲಿ 50%ರಷ್ಟು ಕಡಿತದ ಸೀಮಿತ ಅವಧಿಯ ವಿಶೇಷ ಕೊಡುಗೆಯನ್ನು ಪರಿಚಯಿಸಿತು. ಈ ಕೊಡುಗೆಯನ್ನು ಆಭರಣ ಖರೀದಿದಾರರಿಗೆ ಹೆಚ್ಚಿನ ಉತ್ಸಾಹ ನೀಡಿದ್ದು, ಅವರು ಈ ಸದವಕಾಶದ ಸಂಪೂರ್ಣ ಪ್ರಯೋಜನವನ್ನು ಪಡೆದು ಅತ್ಯುತ್ತಮ ಮೌಲ್ಯದ ಸಂಕೀರ್ಣ ವಿನ್ಯಾಸದ ಆಭರಣಗಳನ್ನು ಖರೀದಿಸುವರು.
ನವೀಕರಿಸಲಾದ ಶೋರೂಮ್ ನ ಬಗ್ಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಜೋಯಾಲುಕ್ಕಾಸ್ ಗುಂಪಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಜಾಯ್ ಅಲುಕ್ಕಾಸ್ ಅವರು ಮಾತನಾಡುತ್ತಾ, ಡಿಕೆನ್‌ಸನ್ ರಸ್ತೆಗೆ ಜೋಯಾಲುಕ್ಕಾಸ್‌ನ ಶ್ರೇಷ್ಠತೆ ಹಾಗೂ ನಾವೀನ್ಯತೆಯ ಪರಂಪರೆಯನ್ನು ಮರಳಿ ತರಲು ನಾವು ತುಂಬಾ ಸಂತೋಷಪಡುತ್ತೇವೆ.
ಹಾಗೆಯೇ ನಮ್ಮ ಶೋ ರೂಮ್ ಗ್ರಾಹಕರಿಗೆ ಪ್ರೀಮಿಯಂ ಮತ್ತು ಎಂದು ಮರೆಯದಿರುವಂತಹ ಆಭರಣ ಖರೀದಿ ಅನುಭವ ಒದಗಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಗ್ರಾಹಕರ ವಿವೇಚನಾಶೀಲ ಅಭಿರುಚಿಗಳನ್ನು ಪೂರೈಸಲು ಸೂಕ್ತ ರೀತಿಯಲ್ಲಿ ಸೂಕ್ಷ್ಮವಾದ ಸಂಗ್ರಹಗಳಿಂದ ಹಿಡಿದು ಅಸಾಧಾರಣ ಗ್ರಾಹಕ ಸೇವೆಯವರೆಗೆ ಪ್ರತಿಯೊಂದು ವಿವರವನ್ನು ಸಮರ್ಥವಾಗಿ ವಿನ್ಯಸಿಸಲಾಗಿದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.