Home Temple ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ, ಅನ್ನದಾನ ಸೇವೆ ಹಾಗೂ ನರ್ತನ ಸೇವೆ

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ, ಅನ್ನದಾನ ಸೇವೆ ಹಾಗೂ ನರ್ತನ ಸೇವೆ

0

ಬೆಂಗಳೂರು, ಏಪ್ರಿಲ್ ೪: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 3, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ 5000 ಭಕ್ತಾದಿಗಳಿಗೆ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು.

ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನರ್ತನ ಕೀರ್ತನ ಸಂಸ್ಥೆಯ ಗುರು ವಿದುಷಿ ಶ್ರೀಮತಿ ಸೌಂದರ್ಯ ಶ್ರೀವತ್ಸ ಮತ್ತು ಅವರ ವಿದ್ಯಾರ್ಥಿಗಳಿಂದ ನರ್ತನ ಸೇವೆಗಳು ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ

Previous articleಜೋಯಾಲುಕ್ಕಾಸ್‌ನ ಜಯನಗರ ಮಳಿಗೆಯಲ್ಲಿ ಅತಿದೊಡ್ಡಆಭರಣ ಪ್ರದರ್ಶನ `ದಿ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

LEAVE A REPLY

Please enter your comment!
Please enter your name here