Home Politics ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಟರಾಜ್ ಡಿ.ಎನ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡಬೇಕೆಂದು ಕರ್ನಾಟಕ ರಾಜ್ಯ...

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಟರಾಜ್ ಡಿ.ಎನ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಣ ವೇದಿಕೆ ಒತ್ತಾಯ

0

ಬೆಂಗಳೂರು, ಫೆ. 27: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಟರಾಜ್ ಡಿ.ಎನ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಣ ವೇದಿಕೆ ಒತ್ತಾಯ ಮಾಡಿದೆ.

ಇದು ಕುರಿತು ವೇದಿಕೆಯ ಅಧ್ಯಕ್ಷ ಗಂಗಾಧರ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿದ್ದು,ಶ್ರೀ ನಟರಾಜ್ ಡಿ.ಎನ್ ರವರು ಚಾಮರಾಜನಗರ ಜಿಲ್ಲೆಯ ಸಂತೆಮಾರನಹಳ್ಳಿ ಹೋಬಳಿ, ದೇಶವಳ್ಳಿ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ 1974ರಲ್ಲಿ ಜನಿಸಿದ ಇವರು ಯಾವುದೇ ರಾಜಕೀಯ ಹಿನ್ನೆಲೆಯನ್ನು ಹೊಂದಿದವರಲ್ಲ. ಇವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ M.Sc,.M.Ed,.M.Phil,. ಉನ್ನತ ಪದವಿಗಳನ್ನು ಪಡೆದಿದ್ದು, ವಿದ್ಯಾರ್ಥಿ ಜೀವನದಿಂದಲೇ ಶಿಸ್ತು ಬದ್ಧ ಜೀವನವನ್ನು ಮೈಗೂಡಿಸಿಕೊಂಡು ಪ್ರಗತಿಪರ, ರೈತರ, ದಮನಿತರ ವಿದ್ಯಾರ್ಥಿಪರ ಹೋರಾಟಗಳನ್ನು ಮಾಡಿಕೊಂಡು ವಿದ್ಯಾರ್ಥಿ ನಾಯಕನಾಗಿ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿಕೊಂಡು ಬಂದಿರುತ್ತಾರೆ.

2004-05ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಬಿ.ಎಡ್ ಪದವೀಧರ ವೇದಿಕೆಯನ್ನು ಹುಟ್ಟು ಹಾಕುವ ಮೂಲಕ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹಲವಾರು ವಿದ್ಯಾರ್ಥಿ ಹೋರಾಟಗಳ ಮೂಲಕ ಸರ್ಕಾರದ ಗಮನವನ್ನು ಸೆಳೆಯುತ್ತಾ ಬಿ.ಎಡ್ ಪದವೀಧರ ಅಶೋತ್ತರಗಳಿಗೆ ಮತ್ತು ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಸರ್ಕಾರದ ಹಂತಗಳಲ್ಲಿ ಹಲವಾರು ನೇಮಕಾತಿ ವಿಷಯ ಕುರಿತಂತ ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ತನ್ನದೇ ಆದ ವೇದಿಕೆಯ ಹೋರಾಟಗಳನ್ನು ರೂಪಿಸುವ ಮೂಲಕ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಗಮನವನ್ನು ಸೆಳೆದು ಹಲವಾರು ನಿರುದ್ಯೋಗಿ ಬಿ.ಎಡ್ ಪದವೀಧರರಿಗೆ ಅನುಕೂಲವಾಗುವಂತೆ ವಿವಿಧ ಶಿಕ್ಷಣ ಇಲಾಖೆಗಳ ನೇಮಕಾತಿ ಅಧಿಸೂಚನೆಯನ್ನು ಹೊರ ಬೀಳುವಂತೆ ಮಾಡಿ ಉದ್ಯೋಗಗಳನ್ನು ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗಳನ್ನು ನೀಡಿದ್ದಾರೆ.

ಈ ರೀತಿ ವಿದ್ಯಾರ್ಥಿ ದೆಸೆಯಿಂದಲೂ ನಾಯಕನಾಗಿ ಮತ್ತು ಕರ್ನಾಟಕ ರಾಜ್ಯ ಬಿ.ಎಡ್ ಪದವೀಧರ ವೇದಿಕೆಯ ಅಧ್ಯಕ್ಷರಾಗಿದ್ದ ಇವರನ್ನು ಗುರುತಿಸಿದ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ನಾಡಿನ ದೊರೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು 2006ರಲ್ಲಿ ಶ್ರೀ ನಟರಾಜ್ ಡಿ.ಎನ್ ರವರಿಗೆ ಬೆಂಗಳೂರು ಪದವೀಧರ ಕ್ಷೇತ್ರದ ಟಿಕೆಟ್ ನೀಡಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಇವರ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆದಿದ್ದಾರೆ. ಹೀಗೆ ಶ್ರೀ ನಟರಾಜ್ ಡಿ.ಎನ್ ರವರು ರಾಜಕೀಯ ಪ್ರವೇಶ ಪಡೆದ ದಿನದಿಂದಲೂ ಇಲ್ಲಿಯವರೆಗೂ ಬೆಂಬಲ ಮತ್ತು ಮಾರ್ಗದರ್ಶನವನ್ನು ಮಾಡುತ್ತಾ ಬಂದಿರುವ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿಯವರು ಮತ್ತು ಅಂಬೇಡ್ಕರ್ ವಾದಿಗಳಾದ ಶ್ರೀ ಎಚ್. ಸಿ ಮಾದೇವಪ್ಪನವರು. ಚಾಮರಾಜನಗರದ ಅಭಿವೃದ್ಧಿಯ ಹರಿಕಾರರಾದ ದಿವಂಗತ ಶ್ರೀ ಎಚ್ ಸಿ ಮಹದೇವ ಪ್ರಸಾದ್ ಮತ್ತು ದಿವಂಗತ ಶ್ರೀ ಧ್ರುವನಾರಾಯಣ್ ರವರ ಮಾರ್ಗದರ್ಶನದಲ್ಲಿ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಕ್ರಿಯ ರಾಜಕಾರಣದಲ್ಲಿ ಸುಮಾರು ಎರಡು ದಶಕಗಳ ಸುಧೀರ್ಘ ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಯಾವುದೇ ರಾಜಕೀಯ ಸ್ಥಾನಮಾನವಿಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಶಿಸ್ತು ಬದ್ಧ ಕಾರ್ಯಕರ್ತನಾಗಿ ರಾಜ್ಯಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುತ್ತಾರೆ

2009ರ ಬೈ ಎಲೆಕ್ಷನ್ 2013 ಮತ್ತು 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಹೋರಾಟ ನಡೆಸಿರುತ್ತಾರೆ. ಪಕ್ಷ ಟಿಕೆಟ್ ನೀಡದಿದ್ದಾಗ ಪಕ್ಷ ಟಿಕೆಟ್ ನೀಡಿದ ಅಭ್ಯರ್ಥಿಗಳ ಪರ ಅವರ ಗೆಲುವಿಗಾಗಿ ದುಡಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದ ಪ್ರಸ್ತುತ ಮಾನ್ಯ ಶಾಸಕರಾದ ಎಚ್.ಆರ್ ಕೃಷ್ಣಮೂರ್ತಿ ಅವರ ಗೆಲುವಿಗಾಗಿ ಮುಂಚೂಣಿಯಲ್ಲಿ ನಿಂತು ಗೆಲುವನ್ನು ತಂದು ಕೊಡುವುದರಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ.

ಈ ರೀತಿ ಸುಮಾರು 20 ವರ್ಷಗಳ ಸುದೀರ್ಘ ರಾಜಕೀಯ ಅನುಭವವುಳ್ಳ. ಒಬ್ಬ ನಿಷ್ಠಾವಂತ ಯುವ ಕಾಂಗ್ರೆಸ್ ನಾಯಕರಾದ ಶ್ರೀ ನಟರಾಜ್ ಡಿ.ಎನ್ ರವರಿಗೆ ಚಾಮರಾಜನಗರದ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಟಿಕೆಟ್ ನೀಡುವ ಮೂಲಕ ಒಬ್ಬ ಯುವ ದಲಿತ ಮುಖಂಡನನ್ನು ಕಾಂಗ್ರೆಸ್ ಲೋಕಸಭೆಗೆ ಕಳಿಸುವ ಮೂಲಕ ಮತ್ತೊಂದು ಇತಿಹಾಸಕ್ಕೆ ನಾಂದಿಯಾಗುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಣ ವೇದಿಕೆ ಇವರ ಶಿಕ್ಷಣ ಕ್ಷೇತ್ರ ಕಾಳಜಿ, ರೈತರ ಬಗ್ಗೆ ಹೊಂದಿರುವ ಕಾಳಜಿ, ಸಮಾಜದ ದೀನದಲಿತರ ಬಗ್ಗೆ ಇರುವ ಅಪಾರ ಕಾಳಜಿಯನ್ನು ಗುರುತಿಸಿ ಇಂತಹ ಯುವ ಶಕ್ತಿಯ ಬೆಳವಣಿಗೆಗೆ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಅನುವು ಮಾಡಿಕೊಡಬೇಕೆಂದು ಶಿಕ್ಷಣ ವೇದಿಕೆಯು ಈ ಪತ್ರಿಕಾ ಹೇಳಿಕೆಯ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಇವರ ಆದ್ಯತೆಗಳು:

ಶ್ರೀ ನಟರಾಜ್ ಡಿ. ಎನ್ ರವರು ಸ್ವತಹ ಚಾಮರಾಜನಗರ ಜಿಲ್ಲೆಯಾವರಾಗಿರುವುದರಿಂದ ಜಿಲ್ಲೆಯ ವಾಸ್ತವ ಚಿತ್ರಣವನ್ನು ಮತ್ತು ಜನರ ನಾಡಿಮಿಡಿತವನ್ನು ಅರಿತವರಾಗಿದ್ದು, ಈ ಜಿಲ್ಲೆ ಗಡಿನಾಡು ಜಿಲ್ಲೆಯಾಗಿರುವುದರಿಂದ ಇಲ್ಲಿನ ಭಾಷೆ ಮತ್ತು ಸಾಂಸ್ಕೃತಿಗೆ ಧಕ್ಕೆಯಾಗದ ರೀತಿ ಮತ್ತು ಗೂಳೆ ಹೋಗದ ರೀತಿ ಕ್ರಮವಹಿಸಿ, ಜಿಲ್ಲೆಯ ಎ.ಪಿ.ಎಂ.ಸಿ ಮಾರುಕಟ್ಟೆ ಅಭಿವೃದ್ಧಿಗೊಳಿಸುವುದು ಇವರ ಪ್ರಮುಖ ಆದ್ಯತೆಯಾಗಿದೆ. ಜೊತೆಗೆ ವ್ಯಾಪಾರ ವಹಿವಾಟಿನಲ್ಲಿ ಚಾಮರಾಜನಗರ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದ್ದು ಅಂತರ್ ರಾಜ್ಯಗಳ ಪ್ರಭಾವಕ್ಕೆ ಒಳಗಾಗಿ ವಲಸೆ ಹೋಗುವುದನ್ನು ತಪ್ಪಿಸಿ ಅವರ ಬದುಕಿಗಾಗಿ ಪರ್ಯಾಯ ಜೀವನ ಮಾರ್ಗೋಪಾಯಗಳನ್ನು ಕೊಂಡುಕೊಳ್ಳುವುದರ ಜೊತೆಗೆ ಈ ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ಕೊಟ್ಟಂತಹ 371J ವಿಧಿಯನ್ನು ನಮ್ಮ ಜಿಲ್ಲೆಗೆ ನೀಡುವಂತೆ ಮಾಡುವುದು ಇವರ ಮತ್ತೊಂದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.

ಹಾಗೆಯೇ ಶಿಕ್ಷಣ, ಉದ್ಯೋಗ, ರೈತರ ಪರ ಯೋಜನೆಗಳನ್ನು ಅನುಷ್ಠಾನ, ಮೂಲಭೂತ ಸೌಕರ್ಯಗಳು. ರಾಜ್ಯ ಮತ್ತು ರಾಷ್ಟ್ರದ ಹೆದ್ದಾರಿಗಳ ಉನ್ನತೀಕರಣ, ಜಾನಪದ ಕಲೆ, ಸಾಹಿತ್ಯ, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು. ಕೈಗಾರಿಕಾ ವಲಯಕ್ಕೆ ಉತ್ತೇಜನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕೃಷಿ ಆದ್ಯತೆ ಕಾವೇರಿ ನೀರಿನ ಸದ್ಬಳಕೆ ಹಾಗೂ ಪರಿಸರ ಸಂರಕ್ಷಣೆ ಮೂಲಕ ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವುದು ಇವರ ಪ್ರಮುಖ ಕನಸುಗಳಲ್ಲಿ ಒಂದಾಗಿದೆ.

Previous articleFortis Cunningham uses multidisciplinary surgical approach to treat rare dual cancers in 56-year-old woman Advanced technology using minimally invasive procedure reduced risks and led to faster recovery
Next articleಶ್ರೀ ಶ್ರೀ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಮಾರ್ಚ್ 8 ಶಿವರಾತ್ರಿ ಅಂದು ವಿಶೇಷ ಪೂಜೆ ಮತ್ತು ಸಿಡಿ ಬಿಡುಗಡೆ

LEAVE A REPLY

Please enter your comment!
Please enter your name here