Home Health ಚಕ್ರಗಳ ಮೇಲೆ ಅಪೋಲೊ ಆಸ್ಪತ್ರೆ ಆರೋಗ್ಯ ತಪಾಸಣೆ ಪರಿಚಯ:ನಿಮ್ಮ ಮನೆ ಬಾಗಿಲಲ್ಲೇ ಕ್ರಾಂತಿಕಾರಿ ವಿಧಾನದಲ್ಲಿ ಆರೋಗ್ಯ...

ಚಕ್ರಗಳ ಮೇಲೆ ಅಪೋಲೊ ಆಸ್ಪತ್ರೆ ಆರೋಗ್ಯ ತಪಾಸಣೆ ಪರಿಚಯ:ನಿಮ್ಮ ಮನೆ ಬಾಗಿಲಲ್ಲೇ ಕ್ರಾಂತಿಕಾರಿ ವಿಧಾನದಲ್ಲಿ ಆರೋಗ್ಯ ರಕ್ಷಣೆ

0

ಬೆಂಗಳೂರು, ಜೂನ್ 15: ದೇಶದ ಮುಂಚೂಣಿಯಲ್ಲಿರುವ ಆರೋಗ್ಯ ಸೇವಾ ಸರಪಳಿಗಳಲ್ಲಿ ಒಂದಾದ ಅಪೋಲೊ ಆಸ್ಪತ್ರೆ ಸಮೂಹ ಕ್ರಾಂತಿಕಾರಿ ವಿಧಾನದಲ್ಲಿ ಆರೋಗ್ಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಸೇವೆಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಅಪೋಲೊ ಹೆಲ್ತ್ ಚೆಕ್ ಆನ್ ವೀಲ್ಸ್ ಅನ್ನು ಪ್ರಾರಂಭಿಸಿದೆ. ಸಂಚಾರಿ ಆರೋಗ್ಯ ಸುರಕ್ಷಾ ವೇದಿಕೆಯನ್ನು ಸಮಗ್ರ ಆರೋಗ್ಯ ತಪಾಸಣೆಗಳನ್ನು ನೇರವಾಗಿ ಕೆಲಸದ ಸ್ಥಳಗಳು, ಅವಕಾಶ ವಂಚಿತ ಸಮುದಾಯಗಳು, ಸಂಘಗಳು ಮತ್ತು ಹೆಚ್ಚಿನವುಗಳಿಗೆ ತಲುಪಿಸಲು ವಿನ್ಯಾಸಗೊಳಿಸಲಾಗಿದೆ.


ಜೂನ್ 15 ರಂದು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅಪೋಲೊ ಹೆಲ್ತ್ ಚೆಕ್ ಆನ್ ವೀಲ್ಸ್ ಕಾರ್ಯಕ್ರಮವನ್ನು ಹಲವು ಪ್ರಮುಖ ಗಣ್ಯರ ಸಮ್ಮುಖದಲ್ಲಿ ಪರಿಚಯಿಸಲಾಯಿತು. ಸಾಮಾನ್ಯ ನಾಗರಿಕರಿಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಸಾಂಕ್ರಾಮಿಕವಲ್ಲದ ರೋಗಗಳನ್ನು ಗುರುತಿಸುವುದು, ಚಿಕಿತ್ಸೆ ನೀಡುವುದು ಮತ್ತು ತಡೆಗಟ್ಟುವುದು ಈ ಉಪಕ್ರಮದ ಅಳವಡಿಕೆಯ ಪ್ರಾಥಮಿಕ ಗುರಿಯಾಗಿದೆ. ಇದು ಸಾರ್ವಜನಿಕರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸಮಸ್ಯೆಗಳ ಆರಂಭಿಕ ಪತ್ತೆ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗಾಗಿ ಅವಕಾಶ ಒದಗಿಸಿಕೊಡುವ ಗುರಿಯನ್ನು ಹೊಂದಿದೆ.

ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶ್ರೀ. ಡಿ ರಂದೀಪ್, ಐಎಎಸ್, ಜಂಟಿ ನಿರ್ದೇಶಕರು (ವೈದ್ಯಕೀಯ) ಎಚ್‍ಎಫ್‍ಡಬ್ಲ್ಯು ಡಾ ರಜನಿ ಮತ್ತು ಆರೋಗ್ಯ ಸೌಧದಲ್ಲಿ ಎಚ್&ಎಫ್‍ಡಬ್ಲ್ಯು ನ ಅಧಿಕಾರಿಗಳು, ಅಪೋಲೊ ಆಸ್ಪತ್ರೆಗಳ ಕರ್ನಾಟಕ ಮತ್ತು ಕೇಂದ್ರ ಪ್ರದೇಶ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮನೀಶ್ ಮಟ್ಟೂ, ಬೆಂಗಳೂರು ಅಪೋಲೊ ಆಸ್ಪತ್ರೆ ಕ್ಲಿನಿಕಲ್ ಅಡ್ಮಿನಿಸ್ಟ್ರೇಷನ್ ಜಂಟಿ ನಿರ್ದೇಶಕ ಡಾ ಪ್ರೀತಂ ಕೆ ಮತ್ತು ಉಪಾಧ್ಯಕ್ಷ ಮತ್ತು ಶೇμÁದ್ರಿಪುರಂನ ಅಪೋಲೊ ಹಾಸ್ಪಿಟಲ್ಸ್ ಘಟಕದ ಮುಖ್ಯಸ್ಥ ಶ್ರೀ ಉದಯ್ ದಾವ್ಡಾ ಸಮಾರಂಭದಲ್ಲಿ ಭಾಗವಹಿಸಿದ್ದರು.


ಕಳೆದ ಎರಡು ದಶಕಗಳಿಂದ ಭಾರತವು ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆಯಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‍ಸಿಡಿ) ದೊಡ್ಡ ಮಟ್ಟದ ಸವಾಲನ್ನು ಎದುರಿಸುತ್ತಿದೆ. ಅಪೋಲೊಸ್ ಹೆಲ್ತ್ ಆಫ್ ದಿ ನೇಷನ್ 2024 ರ ವರದಿಯ ಪ್ರಕಾರ, ಈ ಪರಿಸ್ಥಿತಿ ಆತಂಕಕಾರಿ ಅಂಕಿಅಂಶಗಳೊಂದಿಗೆ ಹೆಚ್ಚುತ್ತಿವೆ: 3 ಜನರಲ್ಲಿ 2 ಜನರು ಆರಂಭ ಪೂರ್ವ ಅಧಿಕ ರಕ್ತದೊತ್ತಡ, 3 ರಲ್ಲಿ 1 ಆರಂಭ ಪೂರ್ವ ಮಧುಮೇಹ ಮತ್ತು 10 ರಲ್ಲಿ 1 ಅನಿಯಂತ್ರಿತ ಮಧುಮೇಹ, ಹೆಚ್ಚುವರಿಯಾಗಿ, 4 ಜನರಲ್ಲಿ 3 ಜನರು ಅಧಿಕ ತೂಕ ಅಥವಾ ಬೊಜ್ಜು ಸಮಸ್ಯೆಯನ್ನು ಹೊಂದಿರುತ್ತಾರೆ. ಈ ಪರಿಸ್ಥಿತಿಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸುವಲ್ಲಿ ನಿಯಮಿತ ಮತ್ತು ಸಮಯೋಚಿತ ಆರೋಗ್ಯ ತಪಾಸಣೆ ಅತ್ಯಗತ್ಯವಾಗಿದೆ. ಅದನ್ನು ಮನೆಬಾಗಿಲಿಗೆ ತಲುಪಿಸಯವು ಯತ್ನಕ್ಕೆ ಅಪೋಲೊ ಆಸ್ಪತ್ರೆ ಮುಂದಾಗಿದೆ.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಅಪೋಲೊ ಆಸ್ಪತ್ರೆಗಳ ಪರಿವರ್ತಕ ಉಪಕ್ರಮವಾದ ಅಪೋಲೊ ಹೆಲ್ತ್ ಚೆಕ್ ಆನ್ ವೀಲ್ಸ್ ಅನ್ನು ಪ್ರಾರಂಭಿಸುವುದನ್ನು ನಾನು ಸಂತೋಷದಿಂದ ಸ್ವಾಗತಿಸುತ್ತೇನೆ. ಇದು ಸಕಾಲಕ್ಕೆ ತಡೆಗಟ್ಟಬಲ್ಲ ಆರೋಗ್ಯ ಸಮಸ್ಯೆಯ ಪರಿಹಾರವನ್ನು ನೇರವಾಗಿ ನಮ್ಮ ಮನೆ ಬಾಗಿಲಿಗೆ ತರುತ್ತದೆ. ನಾಗರಿಕರು ಇದರ ಹೆಚ್ಚಿನ ಲಾಭ ಪಡೆಯಬೇಕು. ಈ ಸಂಚಾರಿ ವೇದಿಕೆ ಸೂಕ್ತ ಪ್ರವೇಶ ಮತ್ತು ಅನುಕೂಲತೆಯನ್ನು ಸಾರಿ ಹೇಳುತ್ತಿದೆ. ಉತ್ತಮ ಸವಲತ್ತು ಒಳಗೊಂಡಿರುವ ಈ ವ್ಯವಸ್ಥೆ ಆರೋಗ್ಯ ರಕ್ಷಣೆಗಾಗಿ ನಮ್ಮ ಸರ್ಕಾರದ ದೃಷ್ಟಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಹೃದ್ರೋಗ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಗುರಿ ಹೊಂದಿ ರೂಪಿಸಿರುವ ಈ ಉಪಕ್ರಮವು ಪ್ರಮುಖ ಆರೋಗ್ಯ ಸವಾಲುಗಳನ್ನು ಎದುರಿಸಲು ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತದೆ.

ಇಲ್ಲಿ ನೀಡಲಾಗುವ ಸಮಗ್ರ ಸೇವೆಗಳು, ಸುಧಾರಿತ ತಂತ್ರಜ್ಞಾನ ಮತ್ತು ಪರಿಣಿತ ಆರೋಗ್ಯ ವೃತ್ತಿಪರರೊಂದಿಗೆ ಸೇರಿಕೊಂಡು, ಸಮಯೋಚಿತ ಸಮಸ್ಯೆಯ ಪತ್ತೆ ಮತ್ತು ಚಿಕಿತ್ಸೆಯನ್ನು ಖಚಿತಪಡಿಸುತ್ತದೆ. ಜನರಿಗೆ ತಮ್ಮ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅಧಿಕಾರವನ್ನು ನೀಡುತ್ತದೆ. ಸಾರ್ವಜನಿಕ ಆರೋಗ್ಯಕ್ಕಾಗಿ ಅಪೋಲೊ ಆಸ್ಪತ್ರೆಗಳು ತಮ್ಮ ಸಮರ್ಪಣೆಗಾಗಿ ಮತ್ತು ಈ ನಿರ್ಣಾಯಕ ಪ್ರಯತ್ನದಲ್ಲಿ ನಮ್ಮೊಂದಿಗೆ ಪಾಲುದಾರಿಕೆಗಾಗಿ ನಾನು ಶ್ಲಾಘಿಸುತ್ತೇನೆ. ಒಟ್ಟಾಗಿ, ನಮ್ಮ ರಾಜ್ಯ ಮತ್ತು ಅದರಾಚೆಗಿನ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುವಲ್ಲಿ ನಾವು ಗಮನಾರ್ಹ ದಾಪುಗಾಲುಗಳನ್ನು ಇಡುತ್ತೇವೆ ಎಂದು ಹೇಳಿದರು.


ಈ ಆರೋಗ್ಯ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ತಿಳಿಸುತ್ತಾ, ಅಪೆÇೀಲೋ ಆಸ್ಪತ್ರೆಗಳು ಅಪೋಲೊ ಹೆಲ್ತ್ ಚೆಕ್ ಆನ್ ವೀಲ್ಸ್ 2.0 ಅನ್ನು ಪರಿಚಯಿಸಲು ಹೆಮ್ಮೆಪಡುತ್ತವೆ. “ಅಪೋಲೊ ಹೆಲ್ತ್ ಚೆಕ್ ಆನ್ ವೀಲ್ಸ್‍ನ ಉದ್ದೇಶವು ದೈನಂದಿನ ಉತ್ಪಾದಕತೆ ಅಥವಾ ದಿನಚರಿಗಳಿಗೆ ಅಡ್ಡಿಯಾಗದಂತೆ ಆರೋಗ್ಯ ಮತ್ತು ಕ್ಷೇಮಕ್ಕೆ ಆದ್ಯತೆ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು. ಉನ್ನತ ದರ್ಜೆಯ ವೈದ್ಯಕೀಯ ಆರೈಕೆಯನ್ನು ನಿಮ್ಮ ಮನೆ ಬಾಗಿಲಿಗೆ ತರುವುದು. ನಿಮ್ಮ ಆರೋಗ್ಯದ ಮೇಲೆ ಹೂಡಿಕೆ ಮಾಡುವುದು ಎಂದಿಗೂ ಅನುಕೂಲಕರವಾಗಿಲ್ಲ” ಎಂದು ಅಪೋಲೊ ಆಸ್ಪತ್ರೆಗಳ ಕರ್ನಾಟಕ ಮತ್ತು ಕೇಂದ್ರ ಪ್ರದೇಶ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮನೀಶ್ ಮಟ್ಟೂ ಹೇಳಿದರು.


ಎಎಚ್‍ಸಿ ಆನ್ ವೀಲ್ಸ್ ಬಸ್ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ ಮತ್ತು ವ್ಯಾಪಕ ಶ್ರೇಣಿಯ ಆರೋಗ್ಯ ಪರೀಕ್ಷೆಗಳನ್ನು ನಡೆಸಲು ಸುಶಿಕ್ಷಿತ ಆರೋಗ್ಯ ವೃತ್ತಿಪರರಿಂದ ಸಿಬ್ಬಂದಿ ಹೊಂದಿದೆ. ಇಲ್ಲಿ ನೀಡಲಾಗುವ ಸೇವೆಗಳೆಂದರೆ ರಕ್ತ ಮತ್ತು ಮೂತ್ರ ಪರೀಕ್ಷೆಗಳು, ಮ್ಯಾಮೊಗ್ರಾಮ್‍ಗಳು, ಇಸಿಜಿ, ಎಕೋ, ಹೃದಯದ ಒತ್ತಡ ಪರೀಕ್ಷೆ, ಎಕ್ಸ್-ರೇ, ಅಲ್ಟ್ರಾಸೌಂಡ್, ಕಾಲ್ಪಸ್ಕೊಪಿ, ಕಣ್ಣು ಮತ್ತು ಕಿವಿ ಪರೀಕ್ಷೆಗಳು ಮತ್ತು ವೈದ್ಯರ ಸಮಾಲೋಚನೆಗಳು ಸೇರಿವೆ.

Previous articleNow, EV buses for employee transportationNVS Travel Solutions launches India’s first-ever private EV bus for employee transfers
Next articleJoyalukkas expands its presence in Kammanahalli, Bangalore with its 2nd Jewellery Showroom

LEAVE A REPLY

Please enter your comment!
Please enter your name here