ಬೆಂಗಳೂರು, ನವೆಂಬರ್ 12: ವಿಶ್ವ ಮಟ್ಟದ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಬದ್ಧತೆಯನ್ನು ಮತ್ತೊಮ್ಮೆದೃಢಪಡಿಸುತ್ತಾ, ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆ 140 ಕ್ಕೂ ಹೆಚ್ಚು ಇನ್‌ಟ್ರಾ ಆಪರೇಟಿವ್ ಎಲೆಕ್ಟ್ರಾನ್ ರೇಡಿಯೇಷನ್ ಥೆರಪಿ(IOeRT) ವಿಧಾನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಕಳೆದ ವರ್ಷ, ಆಸ್ಟರ್ವೈಟ್‌ಫೀಲ್ಡ್ ಈ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಭಾರತದಲ್ಲಿ ಈ ಕ್ರಾಂತಿಕಾರಿ ಕ್ಯಾನ್ಸರ್ ಚಿಕಿತ್ಸೆ ನೀಡಿದ ಮೊದಲಆಸ್ಪತ್ರೆಯಾಗಿದೆ.
ಇದು ಇಂದಿಗೂ ಭಾರತದಲ್ಲಿ IOeRT ಸೇವೆ ನೀಡುತ್ತಿರುವ ಏಕೈಕ ಆಸ್ಪತ್ರೆಯಾಗಿದ್ದು, ನಿಖರತೆಯನ್ನುಹೆಚ್ಚಿಸುವ, ಆರೋಗ್ಯಕರ ಅಂಗಾಂಶಗಳನ್ನು ರಕ್ಷಿಸುವ ಮತ್ತು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯ ಅವಧಿಯನ್ನು ಕಡಿಮೆಮಾಡುವ ಹೆಚ್ಚು ಮುಂದುವರಿದ ಇಂಟ್ರಾಆಪರೇಟಿವ್ ರೇಡಿಯೇಷನ್ ವಿಧಾನವಾಗಿದೆ.IOeRT ಎನ್ನುವುದು ಹೊಸ ರೀತಿಯ ರೇಡಿಯೋಥೆರಪಿ ಆಗಿದ್ದು, ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೇರವಾಗಿ ಗಡ್ಡೆಇರುವ ಸ್ಥಳಕ್ಕೆ ವಿಕಿರಣವನ್ನು ಕೇಂದ್ರೀಕರಿಸಲಾಗುತ್ತದೆ. ಇದು ಶಸ್ತ್ರಚಿಕಿತ್ಸೆಯ ನಂತರದ ಹೆಚ್ಚಿನ ರೇಡಿಯೇಷನ್ ಸೆಶನ್‌ಗಳಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸುತ್ತಲಿನ ಆರೋಗ್ಯಕರ ಅಂಗಾಂಶಗಳನ್ನು ಅನಗತ್ಯ ಒಡ್ಡಿಕೊಳ್ಳುವಿಕೆಯಿಂದರಕ್ಷಿಸುತ್ತದೆ. ಗಡ್ಡೆ ತೆಗೆದ ತಕ್ಷಣ ಉಳಿದಿರಬಹುದಾದ ಸೂಕ್ಷ್ಮ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸುವುದರಿಂದ, ಈ ಚಿಕಿತ್ಸೆಯಶಸ್ವಿ ಚಿಕಿತ್ಸೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ರೋಗಿಯ ಚೇತರಿಕೆಯ ವೇಗ ಮತ್ತು ಚೇತರಿಕೆಯ ಸಮಯವನ್ನುಉತ್ತಮಗೊಳಿಸುತ್ತದೆ.
ಈ ಸಾಧನೆಯ ಕುರಿತು ಮಾತನಾಡಿದ ಆಸ್ಟರ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಗ್ಲೋಬಲ್ಡೈರೆಕ್ಟರ್, ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಮತ್ತು ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿ ಮತ್ತು ರೊಬೊಟಿಕ್ಸರ್ಜರಿ ವಿಭಾಗದ ಪ್ರಮುಖ ಸಲಹೆಗಾರ ಮತ್ತು ಎಚ್‌ಐಪಿಇಸಿ ಮತ್ತು ಪಿಐಪಿಎಸಿ ನಲ್ಲಿ ಸೂಪರ್-ಸ್ಪೆಷಲಿಸ್ಟ್ ಆಗಿರುವ ಡಾ.ಸೋಮಶೇಖರ್, “IOeRT ತಂತ್ರಜ್ಞಾನದಿಂದ ನಾವು ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ನಿಖರತೆಯನ್ನು ತರಲು ಸಾಧ್ಯವಾಗಿದೆ.ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೇಡಿಯೇಷನ್ ನೀಡುವುದರಿಂದ, ಗಡ್ಡೆಯ ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿನಿಯಂತ್ರಿಸಲು ಮತ್ತು ಆರೋಗ್ಯಕರ ಅಂಗಾಂಶಗಳನ್ನು ರಕ್ಷಿಸಲು ಸಹಾಯವಾಗುತ್ತದೆ. 140ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನುಯಶಸ್ವಿಯಾಗಿ ಪೂರ್ಣಗೊಳಿಸಿರುವುದು ನಮ್ಮ ರೋಗಿ ಕೇಂದ್ರಿತ ಹೊಸ ಆವಿಷ್ಕಾರಗಳ ಬಗ್ಗೆ ಬದ್ಧತೆ ಹಾಗೂ ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಳ್ಳುವ ನಮ್ಮ ಪ್ರಯತ್ನದ ಸಾಕ್ಷಿ,” ಎಂದು ಹೇಳಿದರು.
ರೇಡಿಯೇಷನ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಮತ್ತು ಲೀಡ್ ಕನ್ಸಲ್ಟೆಂಟ್ ಡಾ. ಎಂ. ಎಸ್. ಬೆಳ್ಳಿಯಪ್ಪ, “ಈ ಸಾಧನೆ ನಮ್ಮ ಬಹುಶಿಸ್ತೀಯ ತಜ್ಞರ ತಂಡದ ನೈಪುಣ್ಯತೆ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. IOeRT ಚಿಕಿತ್ಸೆ ಒಟ್ಟು ಚಿಕಿತ್ಸಾ ಅವಧಿಯನ್ನು ಕಡಿಮೆ ಮಾಡುತ್ತದೆ, ರೋಗಿಯ ಜೀವನಮಟ್ಟವನ್ನು ಉತ್ತಮಗೊಳಿಸುತ್ತದೆ, ಮತ್ತು ದೇಹದ ಬಾಹ್ಯ ರೂಪ ಹಾಗೂ ಕಾರ್ಯಕ್ಷಮತೆಯ ಫಲಿತಾಂಶಗಳನ್ನು ಹೆಚ್ಚಿಸುತ್ತದೆ. ಭಾರತದಲ್ಲಿ ಈ ತಂತ್ರಜ್ಞಾನವನ್ನು ಪ್ರಾರಂಭಿಸಿದ್ದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ಸಂಕೀರ್ಣ ಕ್ಯಾನ್ಸರ್‌ಗಳಿಂದ ಬಳಲುತ್ತಿರುವ ಇನ್ನಷ್ಟು ರೋಗಿಗಳಿಗೆ ಇದರ ಪ್ರಯೋಜನ ತಲುಪಿಸಲು ಮುಂದುವರೆಯುತ್ತೇವೆ,” ಎಂದು ಅಭಿಪ್ರಾಯಪಟ್ಟರು. ಈ ಮಹತ್ವದ ಸಾಧನೆ ಕರ್ನಾಟಕ ಕ್ಲಸ್ಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರಶಾಂತ್ ಎನ್ ಮತ್ತು ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರಿಕಾಂತ್ ಸುಬುಧಿ ಅವರ ಮಾರ್ಗದರ್ಶನ ಮತ್ತು ಸಹಕಾರದಿಂದ ಸಾಧ್ಯವಾಗಿದೆ.
ಈ ತಂತ್ರಜ್ಞಾನವನ್ನು ವಿಶೇಷವಾಗಿ ಆಕ್ಸಿಲರೇಟೆಡ್ ಪಾರ್ಶಿಯಲ್ ಬ್ರೆಸ್ಟ್ ಇರೇಡಿಯೇಷನ್ (APBI) ಮತ್ತು ಇನ್‌ಟ್ರಾ ಆಪರೇಟಿವ್ ಬೂಸ್ಟ್ ಥೆರಪಿ ಮೂಲಕ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ರೇಡಿಯೇಷನ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಮತ್ತು ಲೀಡ್ ಕನ್ಸಲ್ಟೆಂಟ್ ಡಾ. ಎಂ. ಎಸ್. ಬೆಳ್ಳಿಯಪ್ಪ, “ಈ ಸಾಧನೆ ನಮ್ಮ ಬಹುಶಿಸ್ತೀಯ ತಜ್ಞರ ತಂಡದ ನೈಪುಣ್ಯತೆ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. IOeRT ಚಿಕಿತ್ಸೆ ಒಟ್ಟು ಚಿಕಿತ್ಸಾ ಅವಧಿಯನ್ನು ಕಡಿಮೆ ಮಾಡುತ್ತದೆ, ರೋಗಿಯ ಜೀವನಮಟ್ಟವನ್ನು ಉತ್ತಮಗೊಳಿಸುತ್ತದೆ, ಮತ್ತು ದೇಹದ ಬಾಹ್ಯ ರೂಪ ಹಾಗೂ ಕಾರ್ಯಕ್ಷಮತೆಯ ಫಲಿತಾಂಶಗಳನ್ನು ಹೆಚ್ಚಿಸುತ್ತದೆ. ಭಾರತದಲ್ಲಿ ಈ ತಂತ್ರಜ್ಞಾನವನ್ನು ಪ್ರಾರಂಭಿಸಿದ್ದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ಸಂಕೀರ್ಣ ಕ್ಯಾನ್ಸರ್‌ಗಳಿಂದ ಬಳಲುತ್ತಿರುವ ಇನ್ನಷ್ಟು ರೋಗಿಗಳಿಗೆ ಇದರ ಪ್ರಯೋಜನ
ತಲುಪಿಸಲು ಮುಂದುವರೆಯುತ್ತೇವೆ,” ಎಂದು ಅಭಿಪ್ರಾಯಪಟ್ಟರು. ಈ ಮಹತ್ವದ ಸಾಧನೆ ಕರ್ನಾಟಕ ಕ್ಲಸ್ಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರಶಾಂತ್ ಎನ್ ಮತ್ತು ಆಸ್ಟರ್
ವೈಟ್‌ಫೀಲ್ಡ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರಿಕಾಂತ್ ಸುಬುಧಿ ಅವರ ಮಾರ್ಗದರ್ಶನ ಮತ್ತು ಸಹಕಾರದಿಂದ ಸಾಧ್ಯವಾಗಿದೆ.

ಈ ತಂತ್ರಜ್ಞಾನವನ್ನು ವಿಶೇಷವಾಗಿ ಆಕ್ಸಿಲರೇಟೆಡ್ ಪಾರ್ಶಿಯಲ್ ಬ್ರೆಸ್ಟ್ ಇರೇಡಿಯೇಷನ್ (APBI) ಮತ್ತು ಇನ್‌ಟ್ರಾ ಆಪರೇಟಿವ್ ಬೂಸ್ಟ್ ಥೆರಪಿ ಮೂಲಕ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಎಪಿಬಿಐ ಪ್ರಕರಣಗಳಲ್ಲಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಒಂದೇ ಬಾರಿ ವಿಕಿರಣವನ್ನು ನೀಡಲಾಗುತ್ತದೆ, ಇದರಿಂದ ಶಸ್ತ್ರಚಿಕಿತ್ಸೆಯ ನಂತರ ಅನೇಕ ರೇಡಿಯೇಷನ್ ಸೆಷನ್‌ಗಳ ಅಗತ್ಯವಿರುವುದಿಲ್ಲ. IOeRT ಇಲ್ಲದೆ ಇದ್ದರೆ, ರೋಗಿಗಳು ಸಾಮಾನ್ಯವಾಗಿ 15 ರಿಂದ 20 ರೇಡಿಯೇಷನ್ ಸೆಷನ್‌ಗಳು ಅಥವಾ ಆಸ್ಪತ್ರೆ ಭೇಟಿಗಳನ್ನು ಮಾಡಬೇಕಾಗುತ್ತದೆ. ಆದರೆ IOeRT ವಿಧಾನದಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವಿಕಿರಣವನ್ನು ನೀಡುವುದರಿಂದ ಚಿಕಿತ್ಸಾ ವೆಚ್ಚ ಸುಮಾರು ಶೇಕಡಾ 50% ರಷ್ಟು ಕಡಿಮೆಯಾಗುತ್ತದೆ, ಹಾಗೆಯೇ ಇದು ವೈದ್ಯಕೀಯವಾಗಿ ಪರಿಣಾಮಕಾರಿಯೂ ಆಗಿದೆ. ಬೂಸ್ಟ್ ಥೆರಪಿ ಪ್ರಕರಣಗಳಲ್ಲಿ, IOeRT ಚಿಕಿತ್ಸೆಯಿಂದ ಸುಮಾರು 25% ರಷ್ಟು ವೆಚ್ಚ ಕಡಿತ ಸಾಧಿಸಲಾಗಿದೆ. ಇದಲ್ಲದೆ, ಈ ವಿಧಾನವು ಉತ್ತಮ ದೇಹದ ಬಾಹ್ಯ ರೂಪ (ಕಾಸ್ಮೆಟಿಕ್ ಫಲಿತಾಂಶ) ನೀಡುತ್ತದೆ, ಚರ್ಮದ ಹಾನಿ ಬಹಳ ಕಡಿಮೆ ಇರುತ್ತದೆ ಮತ್ತು ಸೋಂಕಿನ ಪ್ರಮಾಣವೂ ಕಡಿಮೆಯಾಗುತ್ತದೆ. ಇದಲ್ಲದೆ, ಮಧುಮೇಹ ಅಥವಾ ಹಿಂದೆ ಕಿಮೋಥೆರಪಿ ಪಡೆದಿರುವಂತಹ ಹೆಚ್ಚಿನ ಅಪಾಯದ ರೋಗಿಗಳಲ್ಲಿಯೂ ಸಹ ಉತ್ತಮ ಫಲಿತಾಂಶಗಳು ಕಂಡುಬಂದಿವೆ.
ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಆಂಕಾಲಜಿ ತಂಡವು IOeRT ಚಿಕಿತ್ಸೆಯನ್ನು ಪಡೆದ 113 ಸ್ತನ ಕ್ಯಾನ್ಸರ್ ರೋಗಿಗಳ ಮೇಲೆ ನಡೆಸಿದ ಸಂಶೋಧನೆ ಬಹಳ ಉತ್ಸಾಹಭರಿತ ಫಲಿತಾಂಶಗಳನ್ನು ತೋರಿಸಿದೆ. ಈ ಅಧ್ಯಯನದಲ್ಲಿ ಗ್ರೇಡ್ 3 ಚರ್ಮದ ಹಾನಿಯ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಹಾಗೂ ಶಸ್ತ್ರಚಿಕಿತ್ಸೆಯ ನಂತರದ ಸಮಸ್ಯೆಗಳಾದ ಸೀರೋಮಾ ಮತ್ತು ಸೋಂಕು ಬಹಳಷ್ಟು ಕಡಿಮೆಯಾಗಿದ್ದವು. ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆ ಒಲಿಗೋರಿಕರೆಂಟ್ ಟ್ಯೂಮರ್‌ಗಳು ಮತ್ತು ರೆಟ್ರೋಪೆರಿಟೋನಿಯಲ್ ಸಾರ್ಕೋಮಾಸ್‌ಗಳಿಗೆ IOeRT ಬಳಸಿ ಮಾಡಿದ ಚಿಕಿತ್ಸೆ, ಈ ವಿಧಾನವು ಬಹುಮುಖವಾಗಿದ್ದು ವೈದ್ಯಕೀಯವಾಗಿ ಪರಿಣಾಮಕಾರಿ ಎಂಬುದನ್ನು ಮತ್ತಷ್ಟು ಸಾಬೀತುಪಡಿಸಿದೆ. ಈ ಸಂಶೋಧನೆಯ ಫಲಿತಾಂಶಗಳನ್ನು ವಿಶ್ವದ ಪ್ರಮುಖ ಕ್ಯಾನ್ಸರ್ ವೈದ್ಯಕೀಯ ವೇದಿಕೆಯೊಂದಾದ ಫೆಡರೇಶನ್ ಆಫ್ ಏಷಿಯನ್ ಆರ್ಗನೈಸೇಷನ್ಸ್ ಫಾರ್ ರೇಡಿಯೇಷನ್ ಆಂಕಾಲಜಿ (FARO) ನಲ್ಲಿ ಪ್ರಸ್ತುತಪಡಿಸಲಾಗಿದೆ.
GLOBOCAN ವರದಿ ಪ್ರಕಾರ, ಭಾರತದಲ್ಲಿ 2040ರೊಳಗೆ ಕ್ಯಾನ್ಸರ್ ಪ್ರಕರಣಗಳು ಸುಮಾರು ಶೇ 57.5 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, IOeRT ತಂತ್ರಜ್ಞಾನವು ದೇಶದ ಹೆಚ್ಚುತ್ತಿರುವ ಕ್ಯಾನ್ಸರ್ ಸಮಸ್ಯೆಗೆ ಪ್ರಮುಖ ಪರಿಹಾರವಾಗಿ ಹೊರಹೊಮ್ಮಿದೆ. ಈ ವಿಧಾನವು ವಿಶೇಷವಾಗಿ ಸ್ತನ ಕ್ಯಾನ್ಸರ್, ಗ್ಯಾಸ್ಟ್ರೋಇಂಟೆಸ್ಟೈನಲ್ ಕ್ಯಾನ್ಸರ್, ಮತ್ತು ಶ್ವಾಸಕೋಶ ಕ್ಯಾನ್ಸರ್‌ಗಳಂತಹ ಸಂಕೀರ್ಣ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ. ಇದರಲ್ಲಿ ನಿಖರತೆ ಮತ್ತು ಶೀಘ್ರ ಮಧ್ಯಸ್ಥಿಕೆ ಮುಖ್ಯ ಪಾತ್ರ ವಹಿಸುವುದರಿಂದ, ಯಶಸ್ವಿ ಚಿಕಿತ್ಸೆಗಾಗಿ ಇದು ಅತ್ಯಂತ ಉಪಯುಕ್ತವಾಗಿದೆ.
IOeRT ಅನ್ನು ಮೊದಲು ಜಪಾನ್ ಮತ್ತು ಯೂರೋಪ್‌ನಲ್ಲಿ ಅಭಿವೃದ್ಧಿಪಡಿಸಲಾಯಿತು, ಮತ್ತು ಈಗ ಮೊಬೈಲ್ ಎಲೆಕ್ಟ್ರಾನ್ ಆಕ್ಸಿಲರೇಟರ್‌ಗಳ ಪ್ರಗತಿಯ ಮೂಲಕ ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಶಸ್ತ್ರಚಿಕಿತ್ಸೆಯೊಳಗಿನ (ಇನ್‌ಟ್ರಾ ಆಪರೇಟಿವ್) ಚಿಕಿತ್ಸಾ ವಿಧಾನವಾಗಿ ಬೆಳೆದಿದೆ. ಎಕ್ಸ್-ರೇಗಳ ಬದಲು ಎಲೆಕ್ಟ್ರಾನ್ ಕಿರಣಗಳನ್ನು ಬಳಸುವುದರಿಂದ, IOeRT ನಿಖರವಾದ ನಿಯಂತ್ರಣ ನೀಡುತ್ತದೆ ಮತ್ತು ಹೆಚ್ಚುವರಿ ಕಿರಣದ ಹೊರಸ್ರಾವ ಬಹುತೇಕ ಇರುವುದಿಲ್ಲ. ಇದರಿಂದ ಸುತ್ತಮುತ್ತಲಿನ ಅಂಗಗಳಿಗೆ ಹಾನಿಯಾಗುವ ಅಪಾಯ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಆಸ್ಟರ್ ಆಸ್ಪತ್ರೆಯ ವೈದ್ಯಕೀಯ ನೈಪುಣ್ಯ ಮತ್ತು ನಿರಂತರ ಸಂಶೋಧನೆಯ ಬೆಂಬಲದಿಂದ, ಈ ಆಸ್ಪತ್ರೆ IOeRT ಬಳಕೆಯನ್ನು ಮುಂದಿನ ದಿನಗಳಲ್ಲಿ ಪ್ಯಾಂಕ್ರಿಯಾಟಿಕ್, ಕೋಲೊರೆಕ್ಟಲ್ ಮತ್ತು ಸಾಫ್ಟ್ ಟಿಶ್ಯೂ ಸಾರ್ಕೋಮಾ ಪ್ರಕರಣಗಳಲ್ಲಿಯೂ ವಿಸ್ತರಿಸುವ ಯೋಜನೆ
ಹೊಂದಿದೆ. ಇದಲ್ಲದೆ, ದೀರ್ಘಾವಧಿ ಫಲಿತಾಂಶಗಳು ಮತ್ತು ಜೀವಿತಾವಧಿ ಪ್ರಮಾಣಗಳ ಕುರಿತು ಸಂಶೋಧನೆಗಳು ಮುಂದುವರಿದಿವೆ.
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ, ಶ್ವಾಸಕೋಶದ ಕ್ಯಾನ್ಸರ್ ಜಾಗೃತಿ ತಿಂಗಳು, ಮತ್ತು ವಿಶ್ವ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ದಿನ ಸೇರಿದಂತೆ ನವೆಂಬರ್ ತಿಂಗಳಲ್ಲಿ ನಡೆಯುವ ವಿವಿಧ ಕ್ಯಾನ್ಸರ್ ಜಾಗೃತಿ ದಿನಗಳ ಸಂದರ್ಭದಲ್ಲೇ ಈ ಸಾಧನೆ ನಡೆದಿದೆ. ಈ ಮೈಲಿಗಲ್ಲು ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಜೊತೆಗೆ, ಕ್ಯಾನ್ಸರ್ ಅನ್ನು ಬೇಗ ಪತ್ತೆಹಚ್ಚುವುದು ಮತ್ತು ಹೊಸ ತಂತ್ರಜ್ಞಾನಗಳ ಮೂಲಕ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೆಂಬುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹ
ಸಹಾಯವಾಗುತ್ತದೆ.





























































