Home Bengaluru ಇಸ್ಕಾನ್ ವೈಕುಂಠ ಗಿರಿಯಲ್ಲಿ 18 ಕೋಟಿಗೂ ಹೆಚ್ಚು ಪವಿತ್ರ ಹರಿನಾಮಜಪದ ಬಲದಿಂದ ವಿಶ್ವ ಶಾಂತಿಗೆ ಶ್ರದ್ಧಾಪೂರ್ವಕ...

ಇಸ್ಕಾನ್ ವೈಕುಂಠ ಗಿರಿಯಲ್ಲಿ 18 ಕೋಟಿಗೂ ಹೆಚ್ಚು ಪವಿತ್ರ ಹರಿನಾಮಜಪದ ಬಲದಿಂದ ವಿಶ್ವ ಶಾಂತಿಗೆ ಶ್ರದ್ಧಾಪೂರ್ವಕ ಅರ್ಪಣೆ

0

ಬೆಂಗಳೂರು, ಜೂನ್ 22: ಇಸ್ಕಾನ್ ವೈಕುಂಠ ಗಿರಿಯಲ್ಲಿ ನಡೆದ ಅಖಂಡ ಮಹಾ ಜಪ ಯಜ್ಞವು ಶ್ರದ್ಧಾಭಕ್ತಿಗಳಿಂದ ಯಶಸ್ವಿಯಾಗಿ ನೆರವೇರಿತು. ಭಾನುವಾರ, ಜೂನ್ 22, ಬೆಳಿಗ್ಗೆ 5:30 ಯಿಂದ ಪ್ರಾರಂಭವಾದ ಈ ಮಹಾಯಜ್ಞವು, ನೆರದಿದ್ದ ಭಕ್ತಸಮೂಹದಲ್ಲಿ ವಿಶೇಷ ಆಧ್ಯಾತ್ಮಿಕ ಚೈತನ್ಯ ತುಂಬಿತು.

ಪವಿತ್ರ ಏಕಾದಶಿಯ ತಿಥಿಯಂದು, 1008 ಭಕ್ತರು, ತಲಾ 108 ಮಾಲೆಗಳಷ್ಟು ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸಿದರು. ಇಸ್ಕಾನ್ ಬೆಂಗಳೂರಿನ ಭಕ್ತವೃಂದದ ಈ ಸಾಮೂಹಿಕ ಪ್ರಾರ್ಥನೆಯು 18 ಕೋಟಿಗೂ ಹೆಚ್ಚು ಪವಿತ್ರ ನಾಮಗಳ ಜಪಕ್ಕೆ ಕಾರಣವಾಯಿತು — ಇದು ಇಂದಿನ ವಿಶ್ವಯುದ್ಧದ ಪರಿಸ್ಥಿತಿಯಲ್ಲಿರುವ ಜಗತ್ತಿಗೆ ಶಾಂತಿ, ಸಾಮರಸ್ಯ ಮತ್ತು ಭಕ್ತಿಯ ಸಂದೇಶವನ್ನೇ ನೀಡಿದ ಮಹಾಯಜ್ಞವಾಯಿತು.

ಈ ಅಖಂಡ ಮಹಾ ಜಪಾಯಜ್ಞವು ಇಸ್ಕಾನ್ ಬೆಂಗಳೂರು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸರ ನೇತೃತ್ವದಲ್ಲಿ ನೆರವೇರಿತು. ಈ ಕಾರ್ಯಕ್ರಮವು ಹಲವು ಶತಮಾನಗಳಷ್ಟು ಹಳೆಯ ಮಂತ್ರ ಜಪದ ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿತ್ತು. ಇಸ್ಕಾನ್ ವೈಕುಂಠ ಗಿರಿಯ ಪ್ರಶಾಂತ ಪರಿಸರದಲ್ಲಿ, ಭಕ್ತರು ನಿರಂತರವಾಗಿ 12 ಗಂಟೆಗಳ ಕಾಲ ಹರೇ ಕೃಷ್ಣ ಮಂತ್ರಜಪದಲ್ಲಿ ನಿರತರಾಗಿದ್ದು, ಅಲ್ಲಿ ಆಧ್ಯಾತ್ಮಿಕ ಚೈತನ್ಯಯುತ ವಾತಾವರಣವು ಮೂಡಿತು.

“ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಆತ್ಮೋದ್ಧಾರಕ ಕಾರ್ಯಕ್ರಮ,” ಎಂದು ಶ್ರೀ ಮಧು ಪಂಡಿತ ದಾಸರು ಹೇಳಿದರು. “ವಿಶ್ವದೆಲ್ಲೆಡೆ ಸಂಘರ್ಷ ಮತ್ತು ಆತಂಕ ಹಾಗೂ ಆಶಂತೆಯ ವಾತಾವರಣ ನೆಲೆಸಿರುವ ಪರಿಸ್ಥಿತಿಯಲ್ಲಿ, ಈ ಅಖಂಡ ಜಪಯಜ್ಞವು ಶಾಂತಿ ಮತ್ತು ಏಕತೆಯ ಶಕ್ತಿಯ ಕಿರಣವಾಯಿತು.

ಇಸ್ಕಾನ್ ವೈಕುಂಠ ಗಿರಿಯಲ್ಲಿ ನೆರಡಿದ್ದ 1008 ಭಕ್ತರು ಏಕಾದಶಿಯ ಉಪವಾಸದೊಂದಿಗೆ, ಸಂಪೂರ್ಣ ಶ್ರದ್ಧಾನಿಷ್ಟೆಗಳೊಂದಿಗೆ ಹರೇ ಕೃಷ್ಣ ಮಂತ್ರಜಪವನ್ನು ನಡೆಸಿದರು. ಇದರಿಂದ ಭಕ್ತರೆಲ್ಲರ ವೈಯಕ್ತಿಕ ಶಾಂತಿ ಹಾಗೂ ವಿಶ್ವಶಾಂತಿ ಮತ್ತು ಹಿತಕ್ಕೆ ಮಾಡಿದ ಸಮಾರ್ಪನೆಯಾಯಿತು.

Previous articlePeople Should Maintain a Rich Heart: Swayam Prakash Sachidananda Saraswati
Next articleMATTER Launches Experience Hub in Bengaluru, Strengthens Presence in Karnataka

LEAVE A REPLY

Please enter your comment!
Please enter your name here