Home Bengaluru ಇಂಡಿಯನ್ ಚಿಲ್ಡ್ರನ್ ಆಂಗ್ಲ ಶಾಲೆಯ ವಾರ್ಷಿಕ ಕ್ರೀಡಾ ದಿನವು ಸಂಭ್ರಮದಿಂದ ಆಚರಣೆ

ಇಂಡಿಯನ್ ಚಿಲ್ಡ್ರನ್ ಆಂಗ್ಲ ಶಾಲೆಯ ವಾರ್ಷಿಕ ಕ್ರೀಡಾ ದಿನವು ಸಂಭ್ರಮದಿಂದ ಆಚರಣೆ

0

ಬೆಂಗಳೂರು, ಜ. 4: ಬೆಂಗಳೂರು ಕೆ.ಜಿ.ಹಳ್ಳಿ ಕರುಮಾರಿಯಮ್ಮನಗರದ ಇಂಡಿಯನ್ ಚಿಲ್ಡ್ರನ್ಸ್ ಆಂಗ್ಲ ಶಾಲೆಯ ವಾರ್ಷಿಕ ಕ್ರೀಡಾ ದಿನಾಚರಣೆ ಶುಕ್ರವಾರ ಪೆರಿಯಾರ್ ನಗರ ಫುಟ್ಬಾಲ್ ಕ್ರೀಡಾಂಗಣದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.

ಇಂಡಿಯನ್ ಚಿಲ್ಡ್ರನ್ಸ್ ಆಂಗ್ಲ ಶಾಲೆಯ 2024-25 ಸಾಲಿನ ವಾರ್ಷಿಕ ಕ್ರೀಡೋತ್ಸವ ಬೆಂಗಳೂರಿನ ಪೆರಿಯಾರ್ ನಗರದ ಕಾಲ್ಚೆಂಡು ಮೈದಾನದಲ್ಲಿ ನಿನ್ನೇ ನಡೆಯಿತು. ಸದರಿ ಕ್ರೀಡಾ ಕೂಟವನ್ನು ದ್ವಾಜಾರೋಹಣ ಮಾಡಿ ಬೆಂಗಳೂರು ಪೊಲೀಸ್ ಇಲಾಖೆಯ ವಿವಿಐಪಿ ಭಧ್ರತಾ ತಂಡದ ಉಪ ಆಯುಕ್ತರಾದ ಸನ್ಮಾನ್ಯ ಶ್ರೀ. ಮಂಜುನಾಥ ಬಾಬು ರವರು ಉದ್ಘಾಟಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಇಂಟರ್ ನ್ಯಾಶನಲ್ ಫೋರಂ ಫಾರ್ ಆಂಟಿ ಕರಪ್ಶಿನ್ ನ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿಗಳಾದ ಶ್ರೀಮತಿ ಜೂಲಿ ಕೃಷ್ಟಿ, ಶ್ರೀ ಸಗಾಯ ರಾಜ್, ಶ್ರೀ ಕಾಂತಿಲಾಲ್ ಜೈನ್ ಮತ್ತು ಚೇರ್ಮ್ಯನ್ ತೌಶಿಫ್ ಷರೀಫ್, ಪುಲಿಕೇಶಿ ನಗರದ ಬ ಜ ಪಕ್ಷದ ಮುಖಂಡರು ಮುರಳಿ ಭೀಮ್ ಆರ್ಮಿಯ ರಾಜ್ಯಾಧ್ಯಕ್ಷರಾದ ಸುಂದರ್ ಆದಿಮೂಲಂ, ಕರ್ನಾಟಕ ರಕ್ಷಣಾ ಯುವ ಪಡೆಯ ರಾಜ್ಯಾಧ್ಯಕ್ಷರು ಲಯನ್ ಡಾಕ್ಟರ್ ಸತೀಶ್,

ಪ್ರಧಾನ ಕಾರ್ಯದರ್ಶಿ ಈಶ್ವರ್ ರಾವ್, ಉಪಾಧ್ಯಕ್ಷರುಗಳಾದ ಶ್ರೀ. ಸುಭಾಷ್,ಅಸ್ಗರ್, ಮಧರ್ ಥೆರೇಸಾ ಟ್ರಸ್ಟಿನ ಅಧ್ಯಕ್ಷರು ಅಭ್ರಹಾಂ ಚಿನ್ನಿ, ಮಾಜಿ ಭಾರತದ ಮತ್ತು ಈಸ್ಟ್ ಬೆಂಗಾಲ್ ಕ್ಲಬ್ ನ ಹೆಸರಾಂತ ಕಾಲ್ಚೆಂಡು ಆಟಗಾರ ಏ.ಸರವಣನ್, ಸಿಐಎಲ್ ಕಾಲ್ಚೆಂಡು ತಂಡದ ತರಬೇತಿಗಾರರಾದ ಇನಿಯನ್, ಡಿ ಎಸ್ ಎಸ್ ಸುಬ್ರಮಣಿ ಮತ್ತು ನಾಗು ಡಿ ಎಸ್ ಎಸ್ ಶ್ರೀಮತಿ ಕವಿತಾ ನಾಯ್ಡು ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಾಲೆಯ ಕಾರ್ಯದರ್ಶಿಗಳಾದ ಶ್ರೀ. ಕೆ. ವಿಜಯ ಕುಮಾರ್ ರವರು ಅಧ್ಯಕ್ಷತೆ ವಹಿಸಿ ಎಲ್ಲ ಮುಖ್ಯ ಅಥಿತಿಗಳನ್ನು ಸ್ವಾಗತಿಸಿ ಗೌರವಿಸಿದರು.


ಮುಖ್ಯೋಪಾಧ್ಯಾಯರಾದ ಶ್ರೀ. ಲೋಕೇಶ್ ಗೌಡರು ಕ್ರೀಡಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಮ್ಮ ನೇತೃತ್ವದಲ್ಲಿ ವ್ಯವಸ್ಥಿತವಾಗಿ ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಕೆ ಎಸ್ ಎಫ್ ಸಿ ಯ ನಿವೃತ್ತ ವ್ಯವಸ್ಥಾಪಕರು ಹಾಗೂ ಕೆ ಆರ್ ವೈ ಪಿ ಯ ಮುಖ್ಯ ಸಲಹೆಗಾರರಾದ ಶ್ರೀ. ಈ ತಿರುನಾವುಕ್ಕರಸು ರವರು ನಿರೂಪಣೆಯನ್ನು ಮಾಡಿ ಮುಖ್ಯ ಅತಿಥಿಗಳು ಹಾಗೂ ಅಥಿತಿಗಳನ್ನು ಸ್ವಾಗತಿಸಿ ಸನ್ಮಾನಿಸಲು ನೆರವಾಗಿದ್ದರು. ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪದಕಗಳು ಹಾಗೂ ಅಭಿನಂದನಾ ಪಾತ್ರಗಳನ್ನು ನೀಡಲಾಯ್ತು. ಸದರಿ ಕೂಟದಲ್ಲಿ ವಿದ್ಯಾರ್ಥಿಗಳ ಪೋಷಕರುಗಳೂ ಸಹಾ ಭಾಗವಹಿಸಿದರು. ಭಾಗವಹಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಯ್ತು

Previous articleಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಅನ್ನದಾನ ಸೇವೆ
Next articleBengaluru On Leave: The Biggest Discount Sale Festive Begins Across the Lulu Stores in Bengaluru

LEAVE A REPLY

Please enter your comment!
Please enter your name here