ಬೆಂಗಳೂರು, ಸೆಪ್ಟೆಂಬರ್ 5: ಬೆಂಗಳೂರಿನ ಮುಂಚೂಣಿಯಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆಯಾದ ಸ್ಪೆಷಲಿಸ್ಟ್ ಹಾಸ್ಪಿಟಲ್’ ಇನ್ನು ಮುಂದೆ
ಟ್ರೈಲೈಫ್ ಹಾಸ್ಪಿಟಲ್’ ಎಂಬ ಹೆಸರು ಹೊಂದಿರಲಿದೆ. ಜನರಿಗೆ ಉನ್ನತ ಗುಣಮಟ್ಟದ ಆರೋಗ್ಯ ಸೇವಾ ಸೌಲಭ್ಯಗಳು ಮತ್ತುಸೇವೆಗಳನ್ನು ಒಂದು ದಶಕದ ಅವಧಿಯಲ್ಲಿ ಪೂರೈಸಿದ ನಂತರ ಈರೀಬ್ರಾಂಡಿAಗ್ ಕಾರ್ಯಕ್ರಮವನ್ನು ಆಸ್ಪತ್ರೆ ಕೈಗೊಂಡಿದೆ.
ಜವಾಬ್ಧಾರಿಯುತ ಯೋಗಕ್ಷೇಮ’ ಎಂಬ ಘೋಷವಾಕ್ಯದೊಂದಿಗೆನೂತನ ಬ್ರಾಂಡ್ ಸ್ಥಾನವನ್ನು ಆಸ್ಪತ್ರೆ ಪರಿಚಯಿಸಿದೆ. ತಮ್ಮ ರೋಗಿಗಳುಮತ್ತು ಸಮುದಾಯಗಳಿಗೆ ಆರೋಗ್ಯದ ನೈಜ ಪಾಲುದಾರರಾಗಿರಲುಮುಂದಾಗಿದೆ. ಟ್ರೈಲೈಫ್ ಬ್ಯಾನರ್ ಅಡಿಯಲ್ಲಿ ಆಸ್ಪತ್ರೆ ಸಂಪೂರ್ಣಶ್ರೇಣಿಯ ಆರೋಗ್ಯ ಸೇವೆಗಳನ್ನು ಪೂರೈಸುವುದನ್ನುಮುಂದುವರಿಸಲಿದೆ. ಜೊತೆಗೆ ರೋಗಿಯ ಆರೈಕೆ ಮತ್ತು ವೈದ್ಯಕೀಯನವೀನತೆಯ ಮಾನದಂಡಗಳನ್ನು ಪುನರ್‌ನಿರೂಪಿಸಲು ಸಂಸ್ಥೆಶ್ರಮಿಸಲಿದೆ.
ಟ್ರೈಲೈಫ್ ಹಾಸ್ಪಿಟಲ್ ಹಿಂದಿನ ರೀತಿಯಂತೆಯೇ ಅದೇಸಮರ್ಪಣಾ ಮನೋಭಾವದ ವೈದ್ಯಕೀಯ ಸಂಸ್ಥೆಯಾಗಿರಲಿದ್ದು, ಅಸಾಧಾರಣ ಆರೈಕೆ, ಸೌಲಭ್ಯಗಳು ಮತ್ತು ಸೇವೆಗಳನ್ನುಸಾದರಪಡಿಸಲಿದೆ. ಅದೇ ಪರಿಣತ ಆರೋಗ್ಯ ಸೇವಾ ವೃತ್ತಿಪರರ ತಂಡಈ ಕೆಲಸ ಮುಂದುವರಿಸಲಿದ್ದು, ಆರೋಗ್ಯ ಸೇವೆಗಳ ಗುಣಮಟ್ಟವನ್ನುಇನ್ನು ಅತ್ಯುತ್ತಮ ಹಾಗೂ ಉನ್ನತ ಎತ್ತರಕ್ಕೊಯ್ಯುವಲ್ಲಿ ಇವರು ಗಮನಕೇಂದ್ರೀಕರಿಸಿದ್ದಾರೆ. ನೂತನ ಬ್ರಾಂಡ್ ಹೆಸರನ್ನು ಖ್ಯಾತ ಭಾರತೀಯನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ಶ್ರೀ
ಕಿಚ್ಚ’ ಸುದೀಪ್ ಮತ್ತುಇತರೆ ಹಲವು ಗಣ್ಯರಾದ ಸಂಸತ್ ಸದಸ್ಯ ಶ್ರೀ ಪಿ.ಸಿ. ಮೋಹನ್, ಶಾಸಕರಾದ ಶ್ರೀ ಜಿ.ಟಿ. ದೇವೇಗೌಡ, ಆಸ್ಪತ್ರೆಯ ಸಹಸ್ಥಾಪಕರು ಮತ್ತುಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್, ಶ್ರೀ ರಾಮಚಂದ್ರ ಗೌಡ, ಡಾ. ಪ್ರಶಾಂತ್ ಆರ್ ಮತ್ತು ಡಾ. ಶಫೀಕ್ ಎ.ಎಂ. ಮುಂತಾದ ಗಣ್ಯರುಅನಾವರಣಗೊಳಿಸಿದರು.
ಬೆಂಗಳೂರು ಮತ್ತು 2ನೇ ಹಂತದನಗರಗಳಲ್ಲಿ 5 ನೂತನ ಆಸ್ಪತ್ರೆಗಳನ್ನು ಸ್ಥಾಪಿಸಲು 1500 ಕೋಟಿರೂ.ಗಳ ಹೂಡಿಕೆ ಮಾಡುವ ಯೋಜನೆಯನ್ನು ಆಸ್ಪತ್ರೆ ಆಡಳಿತಹೊಂದಿರುತ್ತದೆ. ಇದರಿಂದ ಮುಂದಿನ 3ರಿಂದ 5 ವರ್ಷಗಳಲ್ಲಿ 10,000ಆರೋಗ್ಯ ಸೇವಾ ವೃತ್ತಿಪರರಿಗೆ ಉದ್ಯೋಗಾವಕಾಶಪೂರೈಸಲಾಗುವುದು. ಟ್ರೈಲೈಫ್ ಹಾಸ್ಪಿಟಲ್‌ನ ನೂತನ ವೆಬ್ತಾಣವನ್ನು ಶ್ರೀ ಜಿ.ಟಿ. ದೇವೇಗೌಡ ಅವರು ಬಿಡುಗಡೆ ಮಾಡಿದರು.