Home Bengaluru ಹವ್ಯಾಸಿರಂಗದ ಮುತ್ತು ರತ್ನಗಳು -೪೦ ಕನ್ನಡ ಕಲಾವಿದರು ರಂಗ ಸಂಕಥನಕೃತಿಯ ಲೋಕಾರ್ಪಣೆ ಹಾಗೂ ನಟರಂಗದ ಹಿರಿಯ...

ಹವ್ಯಾಸಿರಂಗದ ಮುತ್ತು ರತ್ನಗಳು -೪೦ ಕನ್ನಡ ಕಲಾವಿದರು ರಂಗ ಸಂಕಥನಕೃತಿಯ ಲೋಕಾರ್ಪಣೆ ಹಾಗೂ ನಟರಂಗದ ಹಿರಿಯ ನಟ ರಿಗೆ ಗೌರವಾರ್ಪಣೆ

0

ಬೆಂಗಳೂರು, ಅಕ್ಟೋಬರ್ 29: ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ ನ ಬಿಪಿ ವಾಡಿಯಾ ಹಾಲ್ ಇಂದು ಅಪರೂಪದ ಸಮಾರಂಭಕ್ಕೆ ಸಾಕ್ಷಿ ಯಾಯಿತು.
ನಟ, ನಿವೃತ್ತ ಬ್ಯಾಂಕರ್,ಶ್ರೀ ಎಸ್ ಧೀರೇಂದ್ರ ಅವರ ,ಅವರು ಒಡನಾಡಿದ “೪೦ ಹವ್ಯಾಸಿ ರಂಗಕರ್ಮಿಗಳ ಸಂಕಥನ” ನಾಡಿನ ಹಿರಿಯ ನಟ ‘ಪ್ರಣಯ ರಾಜ’ ಶ್ರೀನಾಥ್ ಅವರು ಲೋಕಾರ್ಪಣೆ ಮಾಡಿ, ಸಮಾರಂಭ ಅವರಿಗೆ ಮಧುರ ನೆನಪುಗಳನ್ನು ತಂದಿತು ಎಂದರು.

ಸಭೆಗೆ ಮುಖ್ಯ ಅತಿಥಿಗಳಾಗಿ, ನಾಟಕ,ಕಿರುತೆರೆ ಮತ್ತು ಚಲನಚಿತ್ರರಂಗದ ಹಿರಿಯ ನಟಿ ಶ್ರೀಮತಿ ಗಿರಿಜಾ ಲೋಕೇಶ್ ಅವರು ಆಗಮಿಸಿ, ತಮ್ಮ ಸಂತಸವನ್ನು,ಹಳೆಯ ಸಹರಂಗಕರ್ಮಿಗಳ ಒಡನಾಟದ ಸವಿ ನೆನಪುಗಳನ್ನು ಹಂಚಿಕೊಂಡರು. ಸಭೆಯಲ್ಲಿ ನಟರಂಗದ ಹಿರಿಯ ನಟರಾದ ಶ್ರೀ ಬಿ.ಆರ್.ಜಯರಾಂ, ಎಂ.ಪಿ.ವೆಂಕಟರಾವ್ ಮತ್ತು ಟಿ. ಎಸ್. ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.


ಸಮಾರಂಭದ ಭಾಗವಾಗಿ ನಟರಂಗದ ಹಲವು ಸದಸ್ಯರು,ಪ್ರಸ್ತುತ ಪಡಿಸಿದ ರಂಗಗೀತೆ ಗಳು, ಕನ್ನಡ ಹವ್ಯಾಸಿ ರಂಗಭೂಮಿಯ ಸುವರ್ಣಯುಗಕ್ಕೆ ಸಭಿಕರನ್ನು , ಕೊಂಡೊಯ್ದವು. ಕೃತಿರಚನೆಯ ಹಿನ್ನೆಲೆಯನ್ನು ಕೃತಿಕಾರ ಶ್ರೀ ಧೀರೇಂದ್ರ ವಿವರಿಸಿದರೆ, ಕೃತಿಯ ವಿಶಿಷ್ಟತೆಯ ಪರಿಚಯವನ್ನು ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ, ಶ್ರೀ ಜಿ.ಎನ್ ನರಸಿಂಹಮೂರ್ತಿ ಮಾಡಿಕೊಟ್ಟರು. ಕೃತಿಯನ್ನು ಪ್ರಕಟಿಸಿರುವ ಸ್ನೇಹಾ ಪ್ರಕಾಶನದ ಶ್ರೀ ಪರಶಿವಪ್ಪ, ಸಸಕಸ ಪ್ರತಿಷ್ಠಾನದ ಜೊತೆಗೆ ತಮ್ಮ ಸಂಸ್ಥೆಯ, ಉತ್ತಮ ಬಾಂಧವ್ಯ ಇದೇರೀತಿ ಮುಂದುವರೆಯಲಿದೆ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿ, ಕನ್ನಡವೇ ಸತ್ಯ ಪ್ರತಿಷ್ಠಾನ ದ ಅಧ್ಯಕ್ಷರಾದ ಶ್ರೀ ಬೆಂ. ಶ್ರೀ. ರವೀಂದ್ರ ವಹಿಸಿ ಸಮಾರಂಭ ಅತ್ಯಂತ ಯಶಸ್ವಿಯಾದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು. ಸಮಾರಂಭಕ್ಕೆ ಆಗಮಿಸಿದವರನ್ನು ಶ್ರೀ ಗುರುರಾಜ ಶಾಸ್ತ್ರಿ ಸ್ವಾಗತಿಸಿದರೆ, ಆಗಮಿಸಿ ಸಭೆಯ ಶೋಭೆಯನ್ನು ಹೆಚ್ಚಿಸಿದ ಎಲ್ಲರಿಗೆ, ವಂದನಾರ್ಪಣೆ ಯನ್ನು ಶ್ರೀ ರವಿಕುಸಬಿ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಶ್ರೀರಂಗರಾಜನ್ ನೆರವೇರಿಸಿದರು.

Previous articleಅನಂತ್ ಕುಮಾರ್ ಅವರ ಕರ್ತವ್ಯ ನಿಷ್ಟೇ, ತೇಜಸ್ವಿನಿ ಅನಂತ್ ಕುಮಾರ್ ಅವರ ನಿರಂತರತೆ ಅನನ್ಯ: ಎಸ್. ಸುರೇಶ್ ಕುಮಾರ್
Next articleಬೆಂಗಳೂರಿನ ಅರಮನೆ ಮೈದಾನದಲ್ಲಿ ನ ೩ ರಿಂದ ೫ ರವರೆಗೆ ಆಭರಣಗಳ ವೈಶಿಷ್ಟ್ಯ “ದಿ ಜ್ಯುವೆಲ್ಲರಿ ಶೋ” ಪ್ರಾರಂಭ: ರಾಜ್ಯೋತ್ಸವ, ದೀಪಾವಳಿ ವಿಶೇಷ

LEAVE A REPLY

Please enter your comment!
Please enter your name here