ಬೆಂಗಳೂರು ಮಾರ್ಚ್ 6 : ತಿರುಪತಿ ಶ್ರೀ ಶಕ್ತಿ ಪೀಠಂ ನ ಮಾತಾಜಿ ಶ್ರೀ ಶ್ರೀ ಶ್ರೀ ರಮ್ಯಾನಂದ ಭಾರತಿ ಸ್ವಾಮಿನಿ ಅವರ ನೇತೃತ್ವದಲ್ಲಿ ಮಹಿಳಾ ದಿನಾಚರಣೆಯಂದು ಬೃಹತ್ ಲಲಿತ ಸಹಸ್ರನಾಯ ಪಾರಾಯಣ ಹಾಗೂ ಸುವಾಸಿನಿ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀನಿವಾಸ ಚಕ್ರವರ್ತಿ ಪೆರ್ಲಾ ತಿಳಿಸಿದ್ದಾರೆ.
ಇಂದು ನಗರದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಅವರು ಮಾತನಾಡಿದರು, ರಾಯಲಚೆರವು ತಿರುಪತಿಯಲ್ಲಿ ಸ್ಥಾಪಿತವಾಗಿರುವ ಶ್ರೀ ಶಕ್ತಿ ಪೀಠಂ ನ ಪೀಠಾಧ್ಯಕ್ಷರಾದ ಮಾತಾಜಿ ಶ್ರೀ ಶ್ರೀ ಶ್ರೀ ರಮ್ಯಾನಂದ ಭಾರತಿ ಸ್ವಾಮಿನಿ ಅವರು ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಮಾರ್ಚ್ 08 ಹಾಗೂ 09 ರಂದು ಧರ್ಮಪ್ರಚಾರ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಕಾಡುಗೋಡಿ ರಸ್ತೆ ವೈಟ್ಫೀಲ್ಡ್ನಲ್ಲಿರುವ ಮೈತ್ರಿ ಲೇಔಟ್ ಚೈತನ್ಯ ಭಾರತಿ ಸಭಾಂಗಣದಲ್ಲಿ ಮಾರ್ಚ್ 08, 2025 ರಂದು ಬೆಳಿಗ್ಗೆ ಲಲಿತ ಸಹಸ್ರನಾಯ ಪಾರಾಯಣ ಹಾಗೂ ಸುವಾಸಿನಿ ಪೂಜಾ ಕಾರ್ಯಕ್ರಮದಿಂದ ಪ್ರಾರಂಭವಾಗಲಿದೆ. ಸಂಜೆ 5 ರಿಂದ 8 ಗಂಟೆಯವರೆಗೆ ಚೈತನ್ಯ ಸಮರ್ಪನ್, ವೈಟ್ಫೀಲ್ಡ್ ಹೊಸಕೋಟೆ ರಸ್ತೆ, ಶಿವನಗರ, ವಾಸ್ತು ಭೂಮಿ ಕನ್ನಮಂಗಲದಲ್ಲಿ ಪರಮ ಪೂಜ್ಯ ಶ್ರೀ ಮಾತಾಜಿಯವರ ದರ್ಶನ ಮತ್ತು ಮಂತ್ರ ಉಪದೇಶ ಕಾರ್ಯಕ್ರಮ ನಡೆಯಲಿದೆ.
09 ನೇ ಮಾರ್ಚ್ ಭಾನುವಾರದಂದು ಚೈತನ್ಯ ಸಮರ್ಪನ್, ವೈಟ್ಫೀಲ್ಡ್ ಹೊಸಕೋಟೆ ರಸ್ತೆ, ಶಿವನಗರ, ವಾಸ್ತು ಭೂಮಿ ಕನ್ನಮಂಗಲದಲ್ಲಿ ಬೆಳಿಗ್ಗೆ 9 ಗಂಟೆಯಿಂದ 12 ರ ವರೆಗೆ ಪೂಜ್ಯ ಶ್ರೀ ಮಾತಾಜಿಗೆ ಪಾದಪೂಜೆ ನಡೆಯಲಿದೆ. ನಂತರ ಮಾತಾಜಿಯವರಿಂದ ಅನುಗ್ರಹ ಭಾಷಣ ಮತ್ತು ಅನ್ನಪ್ರಸಾದ ನಡೆಯಲಿದೆ. ಅಂದು ಸಂಜೆ 5 ರಿಂದ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾತಾಜಿಯವರ ದರ್ಶನ ಮತ್ತು ಮಂತ್ರ ಉಪದೇಶ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾತಾಜಿಯವರ ಆಶೀರ್ವಾದ ಪಡೆದುಕೊಳ್ಳುವಂತೆ ಇದೇ ಸಂಧರ್ಭದಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯ ಗೌರಿ ಸಿರೀಶ ಪೆರ್ಲಾ ಉಪಸ್ಥಿತರಿದ್ದರು.