ಬೆಂಗಳೂರು ಡಿ. 26: ಬೆಂಗಳೂರಿನ ಶ್ರೀ ಅಯ್ಯಪ್ಪ ಧರ್ಮ ಆಚಾರ ಸೇವಾಶ್ರಮ ಆಯೋಜಿಸಿದ್ದ ಲಲಿತಾ ವೈಭವ ಪೂಜಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಈರೋಡ್ ಅಮೃತವರ್ಷಿಣಿ ಪೀಠದಿಂದ ಶ್ರೀ ವೇದ ವಿಧ್ಯಾಂಬಾ ಮಹಾ ಸರಸ್ವತಿಯವರು ಪೂಜೆ ನೆರವೇರಿಸಿದರು.
ಬೆಳಿಗ್ಗೆ ದೀಪಪೂಜೆ ಮತ್ತು ಲಕ್ಷಾರ್ಚನೆ ನಂತರ ದೇವಿ ಲಲಿತಾ ತ್ರಿಪುರ ಸುಂದರಿಗೆ ಮಹಾಯಾಗ ನಡೆಯಿತು ಮತ್ತು ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ ಮಾಡಲಾಯಿತು. ಮಕ್ಕಳಿಲ್ಲದ ದಂಪತಿಗಳಿಗೆ ಬೆಣ್ಣೆ ಪ್ರಸಾದ ಮತ್ತು ಆಟಿಸಂ ಮಕ್ಕಳಿಗೆ ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಹಾಲಿನ ಪ್ರಸಾದವನ್ನು ನೀಡಲಾಯಿತು. ಎಲ್ಲಾ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಪೂಜೆಯಲ್ಲಿ ಶ್ರೀ ಅಯ್ಯಪ್ಪ ಧರ್ಮ ಆಚಾರ ಸೇವಾಶ್ರಮದ ಸಂಸ್ಥಾಪಕ ಶ್ರೀ ಚೇತನ್ ಮತ್ತು ಸಮಿತಿಯ ಸದಸ್ಯರಾದ ಲಕ್ಷ್ಮಣ್, ಸುಧಾಕರ್, ಬಾಲಾಜಿ, ಕೃಷ್ಣ ಮತ್ತು ರಾಮದಾಸ್, ಅಮೃತವರ್ಷಿಣಿ ಪೀಠದ ಶ್ರೀ ಮಾತಾ ವೇದ ವಿದ್ಯಾಂಬಾ ಮಹಾ ಸರಸ್ವತಿ ಉಪಸ್ಥಿತರಿದ್ದರು.